ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬದುಕಿಸೀ ಪಶುಗಳನೂ ಭಗವಂತ ನೀನು ಪ ಕದಲಿಸೀರೋಗವ-ಕರುಣಿಗಳರಸನೆ ಅ.ಪ. ಗೋವುಗಳೆಲ್ಲಾ ಹೊಟ್ಟೆ-ನೊವಿನಿಂ ಕಂಗೆಟ್ಟು ಮೇವನುಬಿಟ್ಟ ವಿದಾವರೊಗವೋ ಕಾಣೆ 1 ಹೊಟ್ಟೆ ಕಳೆದು ಕಂಗೆಟ್ಟುಧಾತುಗಳೆಲ್ಲಾ ಕೆಟ್ಟು ಜೀವಂಗಳ ಬಿಟ್ಟುಬಿಡದಮುನ್ನ 2 ನಾಲಿಗೆ ನೀಡವು ಕಾಲು ಕೆಟ್ಟವು ಕಂ ಣಾಲಿ ಕೆಂಣಾಲಿ ಕೆಂಪಾದವು ಮೂಲವೆ ತಿಳಿಯದು3 ಗೋವುಗಳಿಗೆ ಭೂದೇವರುಗಳಿಗೆಲ್ಲ ದೇವ ನೀನಲ್ಲವೆ-ದೇವಕೀ ತನಯನೆ 4 ಸತ್ತವರಿಗೆ ಜೀವವಿತ್ತು ಬದುಕಿಸಿದೆ ಮೃತ್ಯುದೇವತೆ ನಿನ್ನ ತೊತ್ತಹಳಲ್ಲವೆ 5 ದಾಸನು ನಾನೆಂಬ ವಾಸಿಯುಳ್ಳರೆ ಬೇಗ ವಾಸಿಯ ಮಾಡಯ್ಯ ನೀ ಮೋಸವ ಮಾಡದೆ 6 ಇಷ್ಟದಿನೆನೆವರ ಕಷ್ಟವ ಕಳೆವ ಪುಲಿ ಬೆಟ್ಟದೊಳಿಹ ವರದ ವಿಠಲ ಕೃಷ್ಣನೀ 7
--------------
ಸರಗೂರು ವೆಂಕಟವರದಾರ್ಯರು
ಭಾವ ಭಕುತಿಗೆ ವಲಿವ ನೋಡಿರೋ| ದೇವ ದೇವ ಮುಕುಂದನು| ಆವನಾಗಲಿ ತನ್ನ ನಂಬಿದ| ಸೇವಕರನು ದ್ಬರಿಸಿ ಪೊರೆವನು ಪ ಆಚರಣೆ ನೋಡಿದನೆ ವ್ಯಾಧನ| ನೀಚನೆಂದನೆ ವಿದುರನ| ಯೋಚಿಸಿದನೇ ಧ್ರುವನ ವಯಸನು| ನಾಚಿದನೇ ಕುಬ್ಜೆಯನು ಕೂಡಲು1 ಏನು ವಿದ್ಯೆ ಗಜೇಂದ್ರದೋರಿದ| ಏನು ಕೊಟ್ಟ ಸುಧಾಮನು| ಏನು ಪೌರುಷ ಉಗ್ರಸೇನನ| ಏನುಣಿಸಿದಳು ಹರಿಗೆ ದ್ರೌಪದಿ2 ಆವಶೇವೆಯೋ ನರನ ಬಂಡಿಯ| ಬೋವತನವನು ಮಾಡಲು| ಭಾವಿಸಲು ಗುರುಮಹಿಪತಿ ಪ್ರಭು| ಕಾವಕರುಣಿಯೋ ಮಹಿಮೆ ತಿಳಿಯದು3
--------------
ಕಾಖಂಡಕಿ ಶ್ರೀ ಕೃಷ್ಣದಾಸರು