ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಚೋದ್ಯ ಚೋದ್ಯ ಹರಿ ನಿನ್ನ ಆಟ ಸುಲಭವಲ್ಲಾರಿಗೆ ತಿಳಿಯದೀ ಮಾಟ ಪ ಉಣಿಸುವವರೊಳು ನೀನೆ ಉಣುತಿರುವವರಲಿ ನೀನೆ ಉಣಿಸುಣಿಸಿ ಅಣಕಿಸುವ ಬಿನುಗರಲಿ ನೀನೆ ಮಣಿಯುವವರೊಳು ನೀನೆ ಮಣಿಸಿಕೊಂಬರಲಿ ನೀನೆ ಕ್ಷಣಕ್ಷಣಕೆ ಬದಲ್ವಾಗ ಬಣ್ಣಕಗರಲಿ ನೀನೆ 1 ಹೊಡೆಯುವವರಲಿ ನೀನೆ ಹೊಡೆಸುವವರಲ್ಲಿ ನೀನೆ ಹೊಡೆಸಿಕೊಳ್ವರಲಿ ನೀನೆ ಬಿಡಿಸುವವರಲಿ ನೀನೆ ದುಡಿಯುವವರಲಿ ನೀನೆ ದುಡಿಸಿ ಕೊಂಬರಲಿ ನೀನೆ ಬಡವರಲಿ ನೀನೆ ಬಲ್ಲಿದರೊಳ್ನೀನೆ 2 ಕೊಟ್ಟೊಡೆಯರಲಿ ನೀನೆ ಬಿಟ್ಟೋಡ್ವರಲಿ ನೀನೆ ಕೊಟ್ವೊವಚನತಪ್ಪುವ ಭ್ರಷ್ಟರಲಿ ನೀನೆ ಶಿಷ್ಟನಿಷ್ಟರಲಿ ನೀನೆ ಬಿಟ್ಟಾಡ್ವರಲಿ ನೀನೆ ಇಟ್ಟಿಟ್ಟು ಹಂಗಿಸುವ ದುಷ್ಟರಲಿ ನೀನೆ 3 ಪಾಪಿಷ್ಟರಲಿ ನೀನೆ ಕೋಪಿಷ್ಟರಲಿ ನೀನೆ ಶಾಪಿಸುವರಲಿ ನೀನೆ ಶಾಪಕೊಂಬರಲಿ ನೀನೆ ತಾಪತ್ರದಲಿ ನೀನೆ ಭೂಪತಿಗಳೊಳು ನೀನೆ ಅಪಾರ ಸೃಷ್ಟಿ ಸರ್ವವ್ಯಾಪಕನು ನೀನೆ 4 ಇನ್ನರಿದು ನೋಡಲು ಅನ್ಯವೊಂದಿಲ್ಲವು ನಿನ್ನಪ್ರಭೆಯೆ ಸಕಲ ಜಗವನ್ನು ಬೆಳಗುವುದು ನಿನ್ನ ರೂಪವೆ ಜಗ ಎನ್ನಯ್ಯ ಶ್ರೀರಾಮ ಭಿನ್ನಬೇದ ಬಿಡಿಸೆನ್ನ ಧನ್ಯನೆನಿಸಯ್ಯ 5
--------------
ರಾಮದಾಸರು
ಮಾನವ ಗುರುಚರಣ ಸರೋಜವ ಪ ಶೇರಿದ ಶರಣರ ಘೋರ ಪಾತಕವೆಂಬೊ ವಾರಿದ ಗಣಕೆ ಸಮೀರ ಜಗನ್ನಾಥ ಸೂರಿವರ್ಯ ದಾಸಾರ್ಯರಂಘ್ರಿಯನುಅ.ಪ ತಾರತಮ್ಯವ ತಿಳಿಯದೀ ಕಲಿಯುಗದಿ ಮುಕ್ತಿ ದಾರಿಗಾಣದೆ ಭವದಿ ಬಿದ್ದ ಸಜ್ಜನೋ- ದ್ದಾರ ಮಾಡಲು ದಯದಿ ಬ್ಯಾಗವಾಟದಿ ನಾರ ಸಿಂಹಾಖ್ಯ ವಿಪ್ರಾಗಾರದೊಳುದ್ಭವಿಸಿ ಚಾರು ಸಾರವಧರೆಯೊಳು ಬೀರಿದಂಥವರ 1 ಮೇದಿನಿಯೊಳು ಚರಿಸಿ ವ್ಯಾಕ್ಯಾರ್ಥದಿ ಬಹುದು- ರ್ವಾದಿಗಳನೆ ಜಯಿಸಿ ಎನಿಸಿದರು ಪೂರ್ಣ ಭೋಧ ಮತಾಬ್ಧಿಗೆ ಶಶಿ ನೃಪಮಾನ್ಯರೆನಿಸಿ ಶ್ರೀದ ಪ್ರಹ್ಲಾದಾನುಜ ಸಲ್ಹಾದರೆ ಇವರೆಂದು ಪಾದ ಪಂಕಜಾ ರಾಧಕರಿಗೆಸುರ ಪಾದಪರೆನಿಪರ 2 ಕ್ಷೋಣಿ ವಿಬುಧ ಗಣದಿ ಸೇವೆಯಕೊಳುತ ಮಾನವಿಯೆಂಬೊ ಕ್ಷೇತ್ರದಿ ಮಂದಿರ ಮಧ್ಯ ಸ್ಥಾಣುವಿನೊಳು ಮುದದಿ ಕಾರ್ಪರವೆಂಬೊ ಕಾನನದಲಿ ಕೃಷ್ಣಾವೇಣಿ ಕೂಲದಿ ಮೆರೆವ ಶ್ರೀನಿಧಿ ನರ ಪಂಚಾನನಂಘ್ರಿಯುಗ ಧ್ಯಾನದಿ ಕುಳಿತ ಮಹಾನುಭಾವರನು 3
--------------
ಕಾರ್ಪರ ನರಹರಿದಾಸರು
ಶ್ರೀ ಗುರುಕರುಣವು ಸೋಜಿಗವು ಕೌತುಕವು ಧ್ರುವ ಗುರುಹಸ್ತ ಪರುಷಸದೃಶ ನಿದರುಶÀದೋರುತಿಹ್ಯ ಅಗಣಿತ ತೇಜೋಮಯ ಪ್ರಕಾಶ ಇದು ಅನಿಮಿಷ ನೇತ್ರಲಿ ನೋಡುವದು ನೋಡುವದು ಘನ ಮಹಿಮೆಯೊಳು ಬೆರದಾಡುವದು ಬೆರದಾಡುವದು ತನ್ನೊಳು ತಾ ನಲಿದಾಡುವದು ನಲಿದಾಡುವದು ಅನುಭವ ಸುಖ ಸೂರ್ಯಾಡಿ ಸದ್ಗತಿ ಮುಕ್ತಿಯನೆ ಪಡೆವದು ಶ್ರೀಗುರುದಾಸರು 1 ಗುರುವುಪದೇಶ ಜ್ಞಾನಪ್ರಕಾಶ ಅತಿಸಂತೋಷ ಛೇದಿಸುವುದು ಭವಪಾಶ ಇದು ನಿದ್ರಸ್ಯ ಕರ್ನಲಿ ಕೇಳ್ವದು ನಿದ್ರಸ್ಯ ಕರ್ನಲಿ ಕೇಳ್ವದು ಲಯ ಲೀಲೆಯೊಳು ಆಲಿಸುವದು ಆಲಿಸುವದು ಪರಿಪರಿ ಶ್ರುತಿಗ್ಹೇಳೆನಿಸುವದು ಹೇಳೆನಿಸುವದು ಪತಿತಜೀವನ ಪಾವನಗೈಸುವದು ಸದ್ಗುರು ಮಹಿಮೆಯ ತಿಳಿಯದು ತಿಳಿಯದೀ ಶ್ರೀಗುರು ದಾಸರು 2 ಗುರು ನಿಜಬೋಧ ಬಲು ಅಗಾಧ ಪರಮ ಆಹ್ಲಾದ ತಿಳಿದವ ಜನ್ಮಕ ವಿರಹಿತವಾದ ಇದು ಅತಿಸೂಕ್ಷ್ಮಗತಿ ಭೇದಿಸುವದು ಭೇದಿಸುವದು ಗುರುಪಾದವೆಗತಿ ನಿಶ್ಚೈಸುವದು ನಿಶ್ಚೈಸುವದು ಸಮ್ಯಕಙÁ್ಞನವು ಸಾಧಿಸಿ ಆತ್ಮದಿ ಜೀವನ್ಮುಕ್ತನಾಗುವದು ಸದ್ಗುರು ಪಾದವು ಸಾಧಿಸಿ ಸಾಧಿಸಿ ಶ್ರೀಗುರುದಾಸರು 3 ಗುರುಕೃಪೆಜ್ಞಾನನ ಅಳಿವುದಙÁ್ಞನ ತಿಳಿವದು ಯಾತನ ಕಳೆವದು ಜನ್ಮ ಜರಾಮರಣ ಇದು ಪೂರ್ವ ಕಲ್ಪನೆಯು ಕಲ್ಪನೆಯು ಆತ್ಮಙÁ್ಞನದ ವರ್ತನೆಯು ವರ್ತನೆಯು ಸಾಯಸವಳಿದು ಯತ್ನವು ಪ್ರಯತ್ನವು ಶ್ರೀಗುರು ಭಕ್ತಿಯು ಮಾಡಿರಯ್ಯ ಮಾಡಿರಯ್ಯ ಸದ್ಗುರುದಾಸರು4 ಗುರುಙÁ್ಞನ ದೀಕ್ಷಾ ಕರುಣಾ ಕಟಾಕ್ಷ ಸದ್ಗತಿಮೋಕ್ಷ ತೋರುತಿಹ್ಯ ಗುರುತಾನೆ ಪ್ರತ್ಯಕ್ಷ ಇದು ಭಾಸ್ಕರ ಗುರು ಕೃಪಾದೃಷ್ಟಿಯು ಅಮೃತದ ದೃಷ್ಟಿಯು ಜೀವನ ಸಂತುಷ್ಟಿಯು ಮುರಿಯಿತು ಮಹಿಪತಿ ಹುಟ್ಟುವ ಹೊಂದುವ ಬಟ್ಟೆಯು ತ್ರಾಹಿ ತ್ರಾಹಿ ಗುರುನಾಥ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು