ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಲ್ಲರೂ ದಾಸರಹರೇ ಪ ಪುಲ್ಲನಾಭನ ದಯವಿಲ್ಲದೆ ಅ.ಪ. ಜ್ಞಾನವಿಲ್ಲ ಭಕುತಿಯಿಲ್ಲ ಧ್ಯಾನ ವೈರಾಗ್ಯ ಮೊದಲೆ ಇಲ್ಲ ಹೀನ ಕರ್ಮಗಳನು ಮಾಡಿ ಶ್ರೀನಿವಾಸನ ಮರೆತವರು 1 ಪರವಧುವಿನ ರೂಪ ಮನದಿ ಸ್ಮರಣೆ ಮಾಡುತ ಬಾಯಿಯೊಳು ಹರಿಯ ಧ್ಯಾನ ಮಾಡುತಿರುವ ಪರಮ ನೀಚರಾದ ಜನರು 2 ಪಟ್ಟೆನಾಮ ಹಚ್ಚಿ ಕಾವಿ ಬಟ್ಟೆಯನ್ನು ಹೊದ್ದುಕೊಂಡು ಅಟ್ಟಹಾಸ ತೋರಿಕೊಳುತ ಗುಟ್ಟು ತಿಳಿಯದಿರುವ ಜನರು 3 ದೊಡ್ಡ ತಂಬೂರಿಯ ಪಿಡಿದು ಅಡ್ಡ ಉದ್ದ ರಾಗ ಪಾಡಿ ದುಡ್ಡುಕಾಸಿಗಾಗಿ ಭ್ರಮಿಸಿ ಹೆಡ್ಡರಾಗಿ ತಿರುಗುವವರು 4 ನೋವು ಬಾರದಂತೆ ಸದಾ ಓವಿಕೊಂಡು ಬರುತಲಿರುವ ದೇವ ರಂಗೇಶವಿಠಲನ ಸೇವೆಯನ್ನು ಮಾಡದಿರುವ 5
--------------
ರಂಗೇಶವಿಠಲದಾಸರು
ಯಾಕೆ ಮನದಲಿ ಶೋಕಿಸುತ್ತಿರುವೆ ಜಗ ದೇಕನಾಥನು ಸಾಕುತಿರುವನು ನೀ ತಿಳಿಯದಿರುವೆ ಪ ಲೋಕನಾಥನ ವಿವೇಕದಿ ಸ್ತುತಿಸದೆ ವ್ಯಾಕುಲದಿಂ ಮನ ಕಳವಳಗೊಳುತಲಿ ಅ.ಪ ಸೃಷ್ಟಿಕರ್ತನು ರಕ್ಷಿಸುತ್ತಿರುವ ದುರಿತಂಗಳ ರಾಸಿಯ ಬೆಟ್ಟಗಳ ತರಿದೊಟ್ಟು ತಿರುವ ಅದು ತಿಳಿಯದು ನೀ ಬಲು ಕಷ್ಟಗಳ ಪಡುತಿರ್ಪ ವಿಷಯಗಳ ನೋಡುತ ನಗುತಿರುವ ಇಷ್ಟು ಈತನ ಪ್ರಭಾವವು ತಿಳಿಯದೆ ಲಕ್ಷ್ಮಿರಮಣ ರಕ್ಷಿಸೆನ್ನುತ ಸ್ಮರಿಸದೆ 1 ನಾನು ನನ್ನದು ಎಂಬ ಅಭಿಮಾನ ಅದು ಪೋಗುವ ತನಕ ಜ್ಞಾನ ಮಾರ್ಗಕೆ ಇಲ್ಲ ಸಾಧನ- ವೆಂದರಿಯುತ ಮನದಲಿ ಧ್ಯಾನಿಸುತ್ತಿರು ಶ್ರೀನಿಧಿ ಗುಣಗಳನು ಹೀಗಿರುವುದೆ ಪ್ರಧಾನ ಧ್ಯಾನ ಗಾನ ಮೌನಾದಿ ವ್ರತಗಳನು ಶ್ರೀನಿಧಿಗರ್ಪಿಸಿ ಮನ ಹರುಷಿಸದಲೆ2 ತಂದೆ ಶ್ರೀ ವೆಂಕಟೇಶ ವಿಠ್ಠಲನು ಹರಿಭಕುತರ ಮೊರೆಯನು ಛಂದದಿಂದಲಿ ಕೇಳಿ ಪೋಷಿಪನು ಮುಕುಂದನಲಿ ಭಕುತಿ ಎಂದೆಂದಿಗೂ ತಪ್ಪದೆ ಉದ್ಧರಿಸುವನು ನಿಜವೆಂದರಿ ಇದನು ಮುಂದೆ ಕಮಲನಾಭ ವಿಠ್ಠಲ ಭಕುತರ ಸಂದಣಿ ಪೊರೆದು ಸಂತೈಸುತಲಿರೆ ವೃಥ 3
--------------
ನಿಡಗುರುಕಿ ಜೀವೂಬಾಯಿ