ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಧರ್ಮದ ನೀತಿಯ ಅರಿತೇನು ಮರ್ಮದ ರೀತಿಯ ತಿಳಿದೇನು ಪ ಧರ್ಮಕರ್ಮಗಳು ಹರಿಗರ್ಪಣವೆಂದು ನಿರ್ಮಲಚಿತ್ತದಿ ಧ್ಯಾನಿಸದವನು ಅ.ಪ ಗಂಗಾಸ್ನಾನವ ಮಾಡಿದರೇನು ಅಂಗುಲಿಯೂರುವ ಯೋಗದೊಳೇನು ಪಂಗನಾಮ ಬೂದಿಯ ಬಳಿದೇನು ರಂಗನ ಸ್ಮರಿಸದ ಮನವಿದ್ದೇನು 1 ದೇಶ ದೇಶಂಗಳ ತಿರುಗಿದರೇನು ಆಶೆಯ ಬಿಡದ ಕಾಷಾಯದಿಂದೇನು ಕಾಶಿರಾಮೇಶ್ವರಕೋಡಿದರೇನು ಶ್ರೀಶನನಾಮವೇ ಗತಿಯೆನದವನು 2 ಚಿತ್ತದಿ [ನೆನೆದರೆ] ಹರಿ ಕಿರಿದೇ ಸತ್ತು ಹುಟ್ಟುವುದೇ ಜಗದೊಳು ಹಿರಿದೇ ಎತ್ತೆತ್ತಲು ಹರಿಯಿಹನೆನಬಾರದೇ ಕರ್ತಶ್ರೀ ಮಾಂಗಿರಿರಂಗನ ನೆನೆಯದೆ3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಸೊಡ್ಡುಡಂಬಕಅವನಿಭಾರಂಗೆ ಸೊಡ್ಡುಸೊಡ್ಡು ಭಕುತಿಹೀನ ಹೆಡ್ಡಂಗೆ ಸೊಡ್ಡು ಪ.ಶುದ್ಧ ಸಾತ್ವಿಕಗುರುಮಧ್ವಮತವ ಬಿಟ್ಟುಬದ್ದಡ್ಡ ದಾರಿಯವಿಡಿದಗೆ ಸೊಡ್ಡುಮದ್ಯಘಟಕೆ ಮನವಿಟ್ಟು ಪೀಯೂಷವನೊದ್ದು ಕಳೆದ ಹೊಲೆ ಮಾನಿಸಗೆ ಸೊಡ್ಡು 1ಜಗದೆರೆಯನ ಜಗದಾಕಾರ ಸಟೆಯೆಂದುಬಗುಳ್ವ ಬಾಯೊಳು ಹೊಡೆ ಮಗುಳೆ ಸೊಡ್ಡುಅಘಹರನಾಳಿಗಾಳಾಗಿ ದೊರೆಯೆ ತಾನೆಂಬಗೆ ನಗೆಗೇಡಿನಾ ಮಾತೆ ಸೊಡ್ಡು 2ಶ್ರುತಿಸ್ಮøತಿಗಳವಡದನಂತಗುಣಗೆ ದುರ್ಮತಿಯಲ್ಲಿ ನಿರ್ಗುಣೆಂದವಗೆ ಸೊಡ್ಡುರತಿಪತಿಪಿತನಲ್ಲದನ್ಯ ಸರ್ವೋತ್ತಮತ್ವಕೆ ನಿರಯದಂಧತಮದ ಸೊಡ್ಡು 3ಹರಿಗೆ ಮನುಭವವಿಧಿಯೆಂದೊಕ್ಕಣಿಪಗೆಚಿರಕ್ಲೇಶ ಭವಯಾತ್ರೆಲಂಜು ಸೊಡ್ಡುಒರೆದೊರೆದಖಿಳಾಗಮಾರ್ಥವ ತಿಳಿದೇನುಹರಿಯೊಪ್ಪದಾ ನರಖರನಿಗೆ ಸೊಡ್ಡು 4ಪರಮಭಾಗವತರಾಚರಣೆಗೆ ಅಸೂಯಕ್ಕವರಗ್ರಂಥಚೋರಗೆ ಶಿರದಿ ಸೊಡ್ಡುಸಿರಿಪತಿ ಪ್ರಸನ್ವೆಂಕಟೇಶನ ಭಟರ ಕಂಡ್ಹರುಷಲ್ಲದವಗೆ ಮೂಗಲಿ ಸುಣ್ಣ ಸೊಡ್ಡು 5
--------------
ಪ್ರಸನ್ನವೆಂಕಟದಾಸರು