ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೀನಹುದೋ ಘನ ಮಹಿಮ ಮುನಿಜನರೊಡಿಯ ಪೂರ್ಣ ದೀನದಯಾಳು ನೀನೆ ಹರಿಯೆ 1 ಪತಿತಪಾವನನೆಂದು ಶ್ರುತಿ ಸಾರುವರು ಕೇಳಿ ಅತಿ ಹರುಷದಲಿ ಬಂದೆನೊ ಹರಿಯೆ 2 ಮತಿ ಹೀನನವಗುಣವ ಕ್ಷಿತಿಯೊಳು ನೀ ನೋಡದೆ ಪಥವಗೊಳಿಸುವದು ಎನಗೆ ಹರಿಯೆ 3 ಮರೆಯ ಹೊಕ್ಕಿಹೆ ನಿಮ್ಮ ಚರಣಕಮಲಕೆ ಪೂರ್ಣ ಕರುಣದ ಅಭಯ ತೋರೊ ಎನಗೆ ಹರಿಯೆ 4 ಅರಿಯೆ ನಾ ನಿಮ್ಮ ವಿನಾ ಬ್ಯಾರೆ ಇನ್ನೊಂದು ಪಥ ಶಿರವ ನಮಿಸಿಹೆನೊ ನಿಮಗೆ ಹರಿಯೆ 5 ಶರಣಾಗತರ ಹೊರೆವ ಬಿರದು ನಿಮ್ಮದು ಪೂರ್ಣ ಸಾರುವದು ತಿಳಿದುಕೊಳ್ಳೊ ಹರಿಯೆ 6 ಬಿಡಲರಿಯೆ ನಾ ನಿಮ್ಮ ಪಿಡಿದು ಶ್ರೀಪಾದವನು ನೋಡಿ ದಯಮಾಡೊ ಎನಗೆ ಹರಿಯೆ 7 ಬ್ಯಾರೆ ಗತಿ ಕಾಣೆ ನಿಮ್ಮ ಚರಣಕಮಲದಾಣೆ ಸಿರಿ ಸಕಲಪದವು ನೀನೆ ಹರಿಯೆ 8 ಭಿನ್ನವಿಲ್ಲದೆ ನೋಡಿ ಚೆನ್ನಾಗಿ ಮಹಿಪತಿಯ ಧನ್ಯಗೈಸೊ ಪ್ರಾಣವ ಹರಿಯೆ 9
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ವಾಯುದೇವರು ಆನಂದ ಸಾಧನ ತಿಳಿ ಕಂಡ್ಯಾ ಮನವೆ ಪ ಶಕುತಿಯು ಇದ್ದಷ್ಟು ತಿಳಿದು ಮತವು ಬಲು ಯುಕುತಿಯಿಂದಲಿ ನೀ ಒಲಿಸು ಕಂಡ್ಯ ಭಕುತಿಯು ಗುರುಗಳ ಪದದಲಿ ಮಾಡಲು ಮುಕುತಿಯು ಕರವಶವಾಗುವದೊ ಸಿದ್ಧ 1 ತಿಳಿಯದಿದ್ದರೆ ನೀನು ತಿಳಿದವರ ಬಳಿಯಲ್ಲಿ ಮಿಳಿತನಾಗಿ ಪೋಗಿ ತಿಳಿದುಕೊಳ್ಳೊ ಖಳಜನ ಸಹವಾಸ ಕುಮತಗಳಭ್ಯಾಸ ಒಳಿತಲ್ಲವೊ ನಿನಗೆಂದಿಗನ್ನ 2 ಪ್ರವಚನ ಮಾಡುವ ಬುಧಜನ ಪೇಳುವ ಸುವಚನ ಕೇಳಿ ನೀ ಬದುಕು ಕಂಡ್ಯಾ ಭವ ಛಳಿ ಬಾಧಿಗೆ ಪ್ರವಚನ ಬಾಹೋದೆಂದಿಗನ್ನ3 ಇದ್ದವರಿಗೆ ಕೊಟ್ಟು ಅವರ ಹಿಂದೆ ಇಷ್ಟು ಮೆದ್ದರೆ ಕೋಟಿ ಭೋಜನದ ಪುಣ್ಯ ಗೆದ್ದರು ಇವರನ್ನ ನಂಬಿದ ಜನರು ಬಿದ್ದರು ದೂಷಕ ಜನ ತಮದಿ 4 ಕಾಸುವೀಸಕೆ ನೀನು ಮೋಸಗೊಳಲು ಬ್ಯಾಡ ತಾಸು ಘಳಿಗೆ ನೆಚ್ಚಲು ಬೇಡ ಏಸೇಸು ಸುಕೃತದಿ ದೊರಕಿತು ಈ ಮತ ವಾಸುದೇವವಿಠಲನ್ನ ಪಾಡೊ 5
--------------
ವ್ಯಾಸತತ್ವಜ್ಞದಾಸರು