ಒಟ್ಟು 8 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರು ಹಿರಿಯರ ಸೇವಿಸಿಹರಿಯ ಮನದೊಳಗಿರಿಸಿಪರಗತಿಯ ಬೇಗ ಸಾಧಿಸಿಕೊಳ್ಳಿರೊ ಪ ಲೆಕ್ಕವಿಲ್ಲದ ದೇಹವೆಂಬ ಸೆರೆಮನೆಯೊಳಗೆಸಿಕ್ಕಿ ಬಹುಕಾಲ ಬಳಲದೆರಕ್ಕಸಾರಿಯ ಭಕ್ತರೊಳು ಸೇರಿ ನೀವು ಸೆರೆಯಿಕ್ಕದಂಥವನ ಮೊರೆ ಹೋಗಿರೊ 1 ಕಂಬಳಿಯ ಬುತ್ತಿಯಂತೀ ದೇಹದೊಳಗೆಲ್ಲತುಂಬಿರುವ ಸುಖವೆಲ್ಲ ದುಃಖಭರಿತಅಂಬುಜಾಕ್ಷನ ದಿವ್ಯ ಮಂಗಳ ಕಥಾಮೃತವನುಂಬ ಭ್ರಮರಕೆ ಸರಿಗಾಣೆನೊ 2 ಮಕ್ಕಳುಗಳಳುವಾಗ ಮಡದಿಯರು ಜರಿವಾಗಬಿಕ್ಕುಗಳು ಬಂದು ಬೈವಾಗಇಕ್ಕಿ ಪೊರೆವುದಕೆ ಗತಿಯಿಲ್ಲದಾ ದರಿದ್ರರಿಗೆಸೌಖ್ಯವೆತ್ತಣದೊ ಮನುಜರಿಗೆ 3 ತಾಯ ಮಾರಿ ತೊತ್ತನು ಕೊಂಬ ಪಾಮರರಂತೆಹೇಯ ಕುಜನರಾ ಚರಣಕೆರಗಿಮಾಯಾಪತಿಯಂಘ್ರಿಗಳ ನೆನೆಯಲೊಲ್ಲದ ನರನಆಯುಷ್ಯ ಬರಿದೆ ಹೋಯಿತಲ್ಲ 4 ಅಯಿವರಿತ್ತೊಡವೆಯ ಅವರವರೊಯ್ಯುವರು ಮ-ತ್ತಯಿವರೆಂಬುವರು ತೊಲಗುವರುಮೈಯ ನೆತ್ತರು ಕೂಡ ಹರಿದು ಹೋಹುದು ನಿಮ್ಮಕೈಯ ಪಿಡಿದೆತ್ತುವರ ನಾನು ಕಾಣೆ 5 ಬಲಗುಂದಿ ನೆಲ ಹಿಡಿಯೆ ರೋಗರುಜಿನಗಳೆಂಬಕಾಲನ ಭಟರು ಬಂದು ಕವಿದುಸಾಲಾಗಿ ನಿಂತಾಗ ಮುಖ ಗಂಟಲೊಳಗಣನಾಲಗೆಯ ನಾದ ಎಲ್ಲಿಹುದೊ 6 ಆಗಲೇ ಹರಿನಾಮ ನಾದದಿಂದೆಚ್ಚತ್ತುನಾಗಶಯನನ ಪುರದ ಪಥವಆಗಮಜ್ಞರ ಕೇಳಿ ತಿಳಿದುಕೊಳ್ಳಿರೊ ನಿಮಗೆಈ ಗಾಳಿ ದೀಪ ಸ್ಥಿರವಲ್ಲ 7 ಜರೆಯೆಂದು ಕಡೆಯಲ್ಲಿ ಗೊರಗೊರನೆ ಉಸಿರಾಡೆಶರೀರದ ಸಂಬಂಧಗಳಕಟಾತರುಣಿಯರ ಮ್ಯಾಲಾಸೆ ತಮ್ಮ ಹಿತವನರಿಯದೆಬರಿದೆ ಭವದಲ್ಲಿ ಬಳಲುವಿರಿ 8 ಸರಕು ಇಲ್ಲಮಾಧವನ ಪೂಜೆ ಒಮ್ಮೆಯೂ ಮಾಡಿಲ್ಲ ಹರಿಪಾದ ತೀರ್ಥದಾ ವ್ರತಗಳಿಲ್ಲ 9 ಊಧ್ರ್ವಪುಂಡ್ರಗಳಿಲ್ಲ ಹರಿಯ ಲಾಂಛನವಿಲ್ಲಪದ್ಮ ತುಳಸಿಯಾ ಸರಗಳಿಲ್ಲಸದ್ಧರ್ಮ ಪಥವೆತ್ತ ವಿಷಯಾಂಧ ಕೂಪದೊಳುಬಿದ್ದು ಪೊರಳುವ ಮರುಳಿದೆತ್ತ 10 ಏಕಾದಶಿಯ ಮಾಡಿ ಯತಿಗಳೊಡನೆ ಆಡಿಪೋಕ ವೃತ್ತಿಗಳನೀಡಾಡಿಶ್ರೀಕಾಂತನನು ಬೇಡಿ ಸುಕೃತಿಗಳನೆ ಕೂಡಿಆ ಕೃಷ್ಣನಂಘ್ರಿಗಳ ಪಾಡಿ11 ಸಕ್ತಿಯಿಂ ಹರಿಯ ಪೊಗಳಿ ಅಡಿಯಲುರುಳಿ ಶುಷ್ಕಭುಕ್ತಿಗಳ ಮೇಲುಗುಳಿ ದೂರ ನಿಲ್ಲಿಭಕ್ತಿ ಜ್ಞಾನಗಳಿರಲಿ ಮತ್ರ್ಯ ಪಥದಿಂ ಮರಳಿಮುಕ್ತಿ ಮಾರ್ಗದಲಿನ್ನು ತೆರಳಿ 12 ಕೊಳ್ಳೆನಾಯಕ ಬಂದು ಕೋಟೆ ಕೆಡಹುವ ಮುನ್ನಕಳ್ಳರೈವರ ಕಾರಣದಿಂದಉಳ್ಳ ಪುಣ್ಯಾರ್ಥಗಳು ಕೊಳ್ಳೆ ಹೋಗದ ಮುನ್ನಫುಲ್ಲನಾಭನ ಅಡಿಗೆ ಮೊರೆ ಹೋಗಿರೊ13 ಪಾದ ಸೇರಿರೋ 14 ಒಂಬತ್ತು ರಂಧ್ರಗಳ ತನುವೆಂಬ ಮನೆಯಲ್ಲಿತುಂಬಿರುವ ವಾಯು ಸ್ಥಿರವಲ್ಲನಂಬಿದರ ಪೊರೆವ ನೆಲೆಯಾದಿಕೇಶವನ ಪಾದಾಂಬುಜವನು ಸೇರಿ ಬದುಕಿರೊ 15
--------------
ಕನಕದಾಸ
ಗುರುತ ಕೇಳುವ ಬನ್ನಿ ಗುರುವಿನ ಕೈಯ ಅರವ್ಹಿಸಿ ಕೊಡುವ ಸದ್ಗುರು ನಮ್ಮಯ್ಯ ದ್ರುವ ಕೇಳದೆ ಹೇಳುವ ಕೇಳದ ಮಾತು ತಿಳಿದುಕೊಳ್ಳಿರೊ ನಿಜ ಗೂಢವರಿತು 1 ತಿಳಿದೇನಂದರ ತಿಳಿಯದು ಯೋಗ ಹೂಳೆಯುತಲ್ಯದ ಮನದೊಳು ಅತಿಬ್ಯಾಗ 2 ಗುರ್ತು ಹೇಳಿದ ಮಹಿಪತಿ ಗುರುಮೂರ್ತಿ ಆರ್ಥಿಯಾಗದ ಯೋಗದ ಮನಮೂರ್ತಿ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ತಿರುಪೆಗಾರರಯ್ಯಾ ನಾವು ತಿಳಿದುಕೊಳ್ಳಿರೀ ಜೀಯಾ ನೀವು ಪ ತಿರುಪೆಗಾರರನು ತಿರಸ್ಕರಿಸದಿರಿ ತಿರುಪಿಲ್ಲದಿದ್ದರೆ ತೀರಹುದು ಅ.ಪ ತಿರುಪಿಲ್ಲವೇ ಧಗಡಿ ತಿರುಪು ವಡವೆಗಳು | ತಿರುಪುಹೂಜಿಗಳು ತಿರುಪು ಭರಣಿಗಳು | ತಿರುಪು ರಕ್ಷಣಿಯು 1 ವಾಲೆ ಏನಾಯಿತು ಅರಿತು ನೋಡದೇ ಮೂರ್ಖರಾಗದಿರೀ 2 ಗೊಣಗಬೇಡಿರಿ ನೀವೂ ಹಣವು ನಿಮಗು ನಮಗುಂಟು ವಿಚಾರಿಸೆ ಹಣವಿಲ್ಲದ ನರ ಹೆಣಕಿಂತ ಕಡಿಮೆ 3 ರಾಶಿಯೊಳೊಂದು ಹಿಡಿ | ತೆಗೆಯಲು ಹ್ರಾಸವೇನೋ ನೋಡಿ ಮೋಸವೆ ಬರುವುದು ಓಸುಜನರೇ ಕೇಳಿ 4 ನಿಮ್ಮ ದೊರೆಗಾಳು ನಮ್ಮ ಗುರುವಲ್ಲವೇ ನಿಮಗೆ ನಾವಾಳಾದರೂ ದಯೆಯಿಲ್ಲವೇ 5 ಧೀರನು ಬಹುಬಲ್ಲ ಭೋಗದಿಂದಲೆ ರೋಗ ಬರುವುದು ತ್ಯಾಗದಿಂದಲೆ ಯೋಗ ಒದಗುವುದು6 ಸತಿಗೆ ಒಡವೆಯಿಟ್ಟು | ಕಳೆಯಲು ಹಿತವೇ ನಿಮಗಷ್ಟು ಅತಿಶಯ ಭೋಗಗಳಪೇಕ್ಷಿಸುವಿರೈ 7 ಮರವೆಯೆ ಅತಿ ಕಷ್ಟ ಮರವೆಯೆ ದುಃಖವು ಮರವೆಯೆ ನರಕವು ಹರಿ ಕೃಪೆಪಡೆದು ಅರಿವು ಸಂಪಾದಿಸಿ 8 ತಿರುಕನು ಈಶ್ವರನೂ | ಇಂದ್ರಗಾಗಿ ತಿರುಪುಹಾಕಿರುವ ತ್ರಿಲೋಕಗಳಿಗೂ9
--------------
ಗುರುರಾಮವಿಠಲ
ತಿಳಿದುಕೊಳ್ಳಿ ಖೂನ ಬಲ್ತು ನಿಜ ಜ್ಞಾನ ಧ್ರುವ ಹಾದಿ ಅದೆ ಹಿಂದಗಾಧ ಅದೆ ಮುಂದೆ ಭೇದಿಸಿನ್ನು ತಿಳಿದುಕೊಳ್ಳಿ ಗುರುಕೃಪೆಯಿಂದ 1 ಲಬ್ಧ ಅದೆ ಹಿಂದೆ ಶಬ್ದ ಅದೆ ಮುಂದೆ ಲಬ್ಧವಾಗಿ ಕೇಳಿಕೊಳ್ಳಿ ಗುರುದಯದಿಂದ 2 ಅರ್ಥ ಅದೆ ಹಿಂದೆ ಸ್ವಾರ್ಥ ಅದೆ ಮುಂದೆ ಅರ್ತು ಇದೆ ಕೇಳಿಕೊಳ್ಳಿ ಗುರು ಜ್ಞಾನದಿಂದೆ 3 ಗುಂಭ ಅದ ಹಿಂದೆ ಡಂಭ ಅದೆ ಮುಂದೆ ಇಂಬು ಇದೇ ತಿಳಿದುಕೊಳ್ಳಿ ಗುರು ಜ್ಞಾನದಿಂದೆ 4 ನೋಟ ಅದೆ ಮುಂದೆ ಕೂಟ ಅದೆ ಹಿಂದೆ ನೀಟವಾಗಿ ಗುರುವಿಗೆ ಕೇಳಬೇಕು ಒಂದೆ 5 ಮನವು ಅದೆ ಮುಂದೆ ಘನವು ಅದೆ ಹಿಂದೆ ತನುವಿನೊಳು ಮಾಡಿಕೊಳ್ಳಿ ಖೂನ ನಿಜ ಒಂದೆ 6 ದೇಹ್ಯ ಅದೆ ಮುಂದೆ ಸೋಹ್ಯ ಅದೆ ಹಿಂದೆ ಸೋಹ್ಯ ದೋರಿಕೊಡುವ ಮಹಿಪತಿ ಗುರು ತಂದೆ7
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಬ್ರಹ್ಮತಾನೆ ನಿತ್ಯಾ ಬ್ರಹ್ಮತಾನೆಬ್ರಹ್ಮ ಪರಾತ್ಪರ ಬ್ರಹ್ಮ ತಾನೇ ಪ ಕಾಲು ಕಣ್ಣು ಕೈ ಬಾಯಿ ಕಿವಿ ಮೂಗು ತಾಳಿಕೊಂಡುಕಾಲವನಿಲ್ಲಿಯೆ ಕಳೆಯಲು ಬಂದ ಗುರುಮೂರ್ತಿಮೂಲಾಧಾರನೆಂದು ತಿಳಿದುಕೊಳ್ಳಿರಾ ಬ್ರಹ್ಮ ತಾನು 1 ಪುತ್ರ ಮಿತ್ರರರು ಕಳತ್ರರಾಗಿ ಬಂಧುವಾಗಿನಿತ್ಯದಾಟವ ಇಲ್ಲಿ ಕಳೆಯಲು ಬಂದ ಬ್ರಹ್ಮ ತಾನೇ2 ಆಪವಿರಲು ಚಂದ್ರನು ಬಂದ ತೆರನಂತೆಉಪಾಧಿಯಿಂದ ಚಿದಾನಂದ ಬಂದ ಬ್ರಹ್ಮತಾನೇಉಪಾಧಿಯಿಂದ ಚಿದಾನಂದ ಬಂದ ಗುರುಮೂರ್ತಿಉಪಾಧಿ ಹರನೆಂದು ತಿಳಿದುಕೊಳ್ಳಿ ಬ್ರಹ್ಮತಾನೆ3
--------------
ಚಿದಾನಂದ ಅವಧೂತರು