ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇನ್ನೆಲ್ಲಿ ಪರಮುಕ್ತಿ ಸಾಧನವು ನಿಮಗೆ ಭಿನ್ನ ಭೇದವಳಿಯದ ಕುನ್ನಿಮನುಜರಿಗೆ ಪ ಆಸೆಮೊದಲಳಿದಿಲ್ಲ ಮೋಸಕೃತಿನೀಗಿಲ್ಲ ಹೇಸಿ ಸಂಸಾರದ ವಾಸನ್ಹಿಂಗಿಲ್ಲ ದೋಷಕೊಂಡದಿ ನೂಕ್ವ ಕಾಸಿನಾಸ್ಹೋಗಿಲ್ಲ ದಾಸಜನ ವ್ಯಾಸಂಗ ಕನಸಿನೊಳಗಿಲ್ಲ 1 ಸತಿಮೋಹ ಕಡಿದಿಲ್ಲ ಸುತರಾಸೆ ಬಿಟ್ಟಿಲ್ಲ ಅತಿಭ್ರಮೆ ಸುಟ್ಟಿಲ್ಲ ಹಿತಚಿಂತನಿಲ್ಲ ಸ್ಮøತಿವಾಕ್ಯ ಅರಿತಿಲ್ಲ ಅತ್ಹಿತಪಥಗೊತ್ತಿಲ್ಲ ಗತಿಮೋಕ್ಷ ಕೊಡುವಂಥ ಪವಿತ್ರರೊಲಿಮಿಲ್ಲ 2 ಹಮ್ಮು ದೂರಾಗಿಲ್ಲ ಹೆಮ್ಮೆಯನು ತುಳಿದಿಲ್ಲ ಬ್ರಹ್ಮತ್ವ ತಿಳಿದಿಲ್ಲ ಚುಮ್ಮನದಳಿಕಿಲ್ಲ ಕರ್ಮ ತುಸು ತೊಳೆದಿಲ್ಲ ಧರ್ಮಗುಣ ಹೊಳಪಿಲ್ಲ ನಿರ್ಮಲಾನಂದ ಪದವಿ ಮರ್ಮ ಗುರುತಿಲ್ಲ 3 ಸತ್ಯಸನ್ಮಾರ್ಗವಿಲ್ಲ ಭೃತ್ಯನಾಗಿ ನಡೆದಿಲ್ಲ ಉತ್ತಮರೊಳಾಡಿಲ್ಲ ಮತ್ರ್ಯಗುಣ ತೊಡೆದಿಲ್ಲ ನಿತ್ಯಸುಖ ದೊರೆವಂಥ ಸತ್ಸೇವೆಯಿಲ್ಲ4 ಮೂರಾರು ಕೆಡಿಸಿಲ್ಲ ಈರೈದು ತರಿಸಿಲ್ಲ ಆರೆರಡು ಮುರಿದಿಲ್ಲ ತಾರತಮ್ಯವಿಲ್ಲ ಸಾರಮೋಕ್ಷದೀಪ ಧೀರ ಶ್ರೀರಾಮನಡಿ ಗಂ ಭೀರ ದಾಸತ್ವ ಸವಿಸಾರ ಕಂಡಿಲ್ಲ 5
--------------
ರಾಮದಾಸರು
ಪೇಳಲಳವಲ್ಲ ನಮ್ಮಯ್ಯನಾಟ ತಿಳಿವರಾರಿಲ್ಲ ಪ ಪೇಳೇನೆಂದರೆ ನಿಲುಕೊ ಮಾತಲ್ಲ ಹೇಳಿಕೆ ಕೇಳಿಕೆಗೆ ಮೀರಿದ ಮೇಲುಮಹಿಮನ ಲೀಲಾಜಾಲವ ಅ.ಪ ಸಾಧ್ಯ ಮಾತಲ್ಲ ಜಗಸೂತ್ರನಾಟಕೆ ಆದಿ ಅಂತಿಲ್ಲ ಜಗಮೂರರೊಳಗೆ ಸಾಧನಿಕರೆಲ್ಲ ನಿಜಭೇದ ತಿಳಿದಿಲ್ಲ ಸಾಧನಿಟ್ಟು ಆವಕಾಲದಿಂ ನಾದ ತಡೆಯದೆ ವೇದಗಳ ಬಿಡ ದೋದಿ ದಣಿದು ಇನ್ನು ಆದಿಮಹಿಮನ ಪಾದಕಾಣವು 1 ಬಾಗಿ ಅನುಗಾಲ ನಿಜತತ್ವಭೇದಿಸಿ ನೀಗಿ ಭವಮಾಲ ಜಡವಾದ ದುರ್ಭವ ರೋಗಗಳುಯೆಲ್ಲ ಪಾರಾಗಿ ನಿರ್ಮಲ ರಾಗಿ ಪರಮಯೋಗ ಒಲಿಸಿ ಯೋಗಿಗಳು ಮಹ ಉಗ್ರತಪದಿಂ ಯೋಗಬೆಳಗಿನೊಳಗೆ ನೋಡಲು ನಾಗಶಯನ ಮಹಿಮೆ ತಿಳಿಯದು 2 ಸಾನಂದಾದಿಗಳು ಮಹ ಭೃಗು ಗಾರ್ಗೇಯ ಮನು ಮುನ್ಯಾದಿಗಳು ದೇವರ್ಷಿ ನಾರದ ಶೌನಕಾದಿಗಳು ಘನ ಸಪ್ತಋಷಿಗಳು ಅನಂತಾನಂತ ಪ್ರಳಯದಿಂದ ಜ್ಞಾನ ಬೆಳಗಿನೋಳ್ನಿಂತು ನೋಡಿ ಕಾಣದೆ ಶ್ರೀರಾಮಪಾದ ಮೌನದೋಳ್ಮುಳುಗೇಳುತಿಹರು 3
--------------
ರಾಮದಾಸರು
ಪಾಲಿಸೋ ವೆಂಕಟಗಿರಿ ರಾಯಾ ಲಕ್ಷ್ಮೀ |ಲೋಲನೀಲಾಂಬುದ ಸಮ ಕಾಯಾ ಪಮಾಕಮಲಾಸನವಾಸವ- ಸುರ |ನೀಶ ಕರಾಧ್ಯ ಕೇಶವ ||ಲೋಕೇಶ ಯನ್ನಲ್ಲಿ ವಾಸವ-ಮಾಡಿನೂಕು ತುಚ್ಛತರ ಕ್ಲೇಶವ 1ಹಿಂದಿನ ಜನುಮಗಳೆಣಿಕಿಲ್ಲ - ದಯಾ |ಸಿಂಧುಸಾಧನವೀಗಲಿನಿತೆಲ್ಲಾ ||ಮುಂದಿನ ಗತಿಯೇನೋ ತಿಳಿದಿಲ್ಲ - ಇದ |ರಿಂದಲಂಜುವೆ ಜಾಂಬವತೀ ನಲ್ಲ 2ಬಾಲಕನಾದೆ ಕೆಲವು ದಿನ - ಪ್ರಾಯ |ಕಾಲವೊದಗಲು ಪರಾಂಗನಾ ||ಮೇಲೆ ಅಭಕ್ಷಣೆಯಲಿ ಮನವಿಟ್ಟೆ - ಹೇ |ಳಲೊಂದೆರಡೇ ಯನ್ನವಗುಣ 3ಉದಯ ಸ್ನಾನವು ಸಂಧ್ಯಾವಂದನೆ - ಅಘ್ರ್ಯ |ವಿಧಿಗುರುಹಿರಿಯರ ವಂದನೆ |ಮೊದಲಾಗಿ ಪಿತರಾರಾಧನೆ ಬಿಟ್ಟೆ |ಮದದಿಂದ ಹೀನನೆಂಬುವ ನಾನೇ4ಅನ್ಯರ ಮನೆ ದ್ವಾರ ಕಾಯ್ವೆನೋ - ಸ್ವಾಮಿ |ನಿನ್ನ ಸ್ಮರಣೆಯ ಕ್ಷಣ ಮಾಡೆನೋ ||ಅನ್ನಕ್ಕೆ ಬಹುದೂರ ಪೋಪೆನೋ - ಸಾರೆ |ಪುಣ್ಯಕ್ಷೇತ್ರಗಳಿರೆ ನೋಡೆನೋ 5ಧನಹೀನನಾದ ಕಾರಣದಿಂದ -ಸತಿ|ಮನೆ ಹೊಂದಿಸಳೋ ಪರಮಾನಂದ ||ತನುಜರಶನ ವಸನಗಳಿಂದ ಕಾಡು |ವಣು ಮಾತ್ರ ಸುಖವಿಲ್ಲ ಇದರಿಂದ6ಏಸುಹೇಳಲಿ ಮಾತ ಲಾಲಿಸೋ - ಶ್ರೀ ಪ್ರಾ- |ಣೇಶ ವಿಠ್ಠಲ ನೀನೇ ತಾರಿಸೋ ||ಆ ಸತ್ಕರ್ಮದಿ ಮನ ಪ್ರೇರಿಸೋ - ನಿನ್ನ |ದಾಸವರ್ಗದೊಳೆನ್ನ ಕೂಡಿಸೋ 7
--------------
ಪ್ರಾಣೇಶದಾಸರು
ವೃಂದಾವನವೇ ಮಂದಿರವಾಗಿಹಇಂದಿರೆಶ್ರೀ ತುಳಸಿ ||ನಂದನಂದನ ಮುಕುಂದಗೆ ಪ್ರಿಯಳಾದ |ಚೆಂದದ ಶ್ರೀ ತುಳಸಿ ಪತುಳಸಿಯ ವನದಲಿ ಹರಿಯಿಹನೆಂಬುದ |ಶ್ರುತಿಸಾರುತಲಿದೆಕೇಳಿ|ತುಳಸೀದರ್ಶನದಿಂದ ದುರಿತಗಳೆಲ್ಲವುದೂರವಾಗುವುವುಕೇಳಿ||ತುಳಸೀ ಸ್ಪರ್ಶವ ಮಾಡೆ ದೇಹ ಪಾವನವೆಂದುತಿಳಿದಿಲ್ಲವೇನು ಪೇಳಿ |ತುಳಸೀಸ್ಮರಣೆ ಮಾಡಿ ಸಕಲೇಷ್ಟಗಳ ಪಡೆದುಸುಖದಿಂದ ನೀವು ಬಾಳಿ 1ಮೂಲಮೃತ್ತಿಕೆಯನು ಮುಖದಲಿ ಧರಿಸಲುಮೂಲೋಕ ವಶವಹುದು |ಮಾಲೆ ಕೊರಳಲಿಟ್ಟ ಮನುಜಗೆ ಮುಕ್ತಿಯಮಾರ್ಗವು ತೋರುವುದು ||ಕಾಲಕಾಲಗಳಲಿ ಮಾಡುವ ದುಷ್ಕರ್ಮಕಳೆದು ಬೀಸಾಡುವುದು |ಕಾಲನ ದೂತರ ಕಳಚಿ ಕೈವಲ್ಯದಲೀಲೆಯ ತೋರುವುದು 2ಧರೆಯೊಳು ಸುಜನರ ಮರೆಯದೆ ಸಲಹುವವರಲಕ್ಷ್ಮಿ ಶ್ರೀ ತುಳಸಿ |ಪರಮಭಕ್ತರ ಪಾಪಗಳನೆಲ್ಲ ತರಿದು ಪಾ-ವನಮಾಡುವಳು ತುಳಸಿ ||ಸಿರಿಆಯು ಪುತ್ರಾದಿ ಸಂಪದಗಳನಿತ್ತುಹರುಷವೀವಳು ತುಳಸಿ |ಪುರಂದರವಿಠಲನಚರಣಕಮಲಗಳಸ್ಮರಣೆಯೀವಳು ತುಳಸಿ 3
--------------
ಪುರಂದರದಾಸರು