ಒಟ್ಟು 7 ಕಡೆಗಳಲ್ಲಿ , 7 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರುಭಜಕರಿಗೆ ದುರಿತ ಕರ್ಮ ಉಂಟೆ || ಆಗಮದಿ ನಡೆವವಗೆ ಅನ್ಯ ಮಾರ್ಗವುಂಟೆ | ರೋಗವಿಲ್ಲದವನಿಗೆ ಪಥ್ಯ ಉಂಟೆ 1 ವೇದಾಂತ ತಿಳಿದವಗೆ ಭೇದಬುದ್ಧಿಗಳುಂಟೆ | ಸಾಧು ಸಂಗದಲಿ ದುರ್ವಾದವುಂಟೆ | ಬೋಧ ನೆಲೆಗೊಂಡವಗೆ ಕ್ರೋಧ ಜನಿಸುವದುಂಟೆ | ನಾದ ಬಿಂದು ಕಳಾತೀತಗೆಣೆಯುಂಟೆ 2 ತಂದೆ ಭವತಾರಕನ ಹೊಂದಿರಲು ಭಯವುಂಟೆ | ಇಂದುಧರನಲ್ಲಿ ಸಂದೇಹವುಂಟೆ | ಕುಂದು ಹೆಚ್ಚೆಂಬೋದು ಅಲ್ಲಿ ಜನಿಸುವದುಂಟೆ | ಒಂದೆ ಬ್ರಹ್ಮವ ಕಂಡ ಮಹಿಮಗೆರಡುಂಟೆ ? 3
--------------
ಭಾವತರಕರು
ಅಧ್ಯಾಯ ನಾಲ್ಕು ವಚನ ಮುಂದೆ ಬ್ರಹ್ಮಾದಿಗಳು ಇಂದಿರಾದೇ ವಿಗ್ಹೀಗೆಂದು ಮಾತಾ ಇಂದು ಕುಳಿತಿರುವ ನೀ ಮುಂದ್ಹೋ ಮಂದ ಗಮನೆಯು ತಾನು ಕಾರ್ಯ ನನ್ನಿಂದ ಆಗದು ಕಳುಹಿಸಲವನು ಹರಿಚರಣಾರವಿಂದಲಿ ಸಾಷ್ಟಾಂಗ ತಲೆಯ ಮೇಲೆ ಚಂದಾಗಿ ಕೈಯಿ ಪ್ರಹ್ಲಾದ ಹೀಗೆಂದು ಪ್ರಾರ್ಥಿಸಿದಾ 1 ರಾಗ ದಯಮಾಡೊ ಹರಿಯೆ ದಯಮಾಡೊ ಪ ದಯಮಾಡ್ಹರಿಯೆ ಅಭಯಕೊಟ್ಟು ನೋಡೋ ಅ.ಪ ನಿನ್ನ ಕೋರೆಗಂಜುವ ಪಾರುಮಾಡೋ 1 ಭಯಾಂಕಿತನಲ್ಲವೋ ಭಯಾಂಕಿತನಾದೆನು ಶಂಕಿಸಬೇಡೋ 2 ಬೀಳದೆ ಕದನ ನಡುಗವೆ ಒದಗಿ ಬೇಗನೆ ಬಂದು ಬದಿಯಲಿ ಕೂಡೋ 3 ಮಾಳ್ಪ ಪರಮಪರಾಧವ ನಾನಿನ್ನ ಮರೆತರು ನೀನೆನ್ನ ಮರೆಯಲು ಬೇಡವೋ 4 ನಿನ್ನಡಿಗಳ ಮರಗುವೆ ಮರೆಯದಂಥ ವರತ್ವರದಲಿ ನೀಡೋ 5 ವಚನ ವ್ಯಾಪಿಸಿರುವಂಥ ಆಕೋಪ ಕೋಪವದು ಆಜಗದ್ವ್ಯಾಪ ಶ್ರೀಪತಿಯ ಸೇವೆಯಲಿ ವ್ಯಾಪರಕ್ಹಿಗ್ಗುತ ನಿಶಾಪತಿ ಪ್ರಸನ್ನನಾಗುತಲೆ ಈ ಪರಿಯ ನುಡಿದಾ 1 ರಾಗ ಹಿಡಿ ನೀ ವರವಾ ಹಿಡಿ ನೀ ವರವಾ ದೃಢವಾಗಿರುವಾÀ ಪ ಕಡು ಪ್ರಹ್ಲಾದನೆ ಬಿಡುಸಂಶಯವಾಅ.ಪ ನೇಮಿಸಿ ಕೊಡುವೆ 1 ಮಾನ್ಯರಾಗುವರು 2 ಬಿಟ್ಟು ಬಂದಿರುವೆ3 ವಚನ ಅಚ್ಚಸ್ನೇಹವ ಮಾಡಿ ಇಚ್ಛಿಸದೆ ಮನ ಭಕುತಿಯನು ಅಚ್ಯುತನ ವತ್ಸರೊಳು ಗಣನಿಲ್ಲ ಜ್ಞಾನದಲಿ ಹೆಚ್ಚಿನವ ತಾನು ಬೇರಿಚ್ಛೆ ಯವನಲ್ಲ ತನ್ನಿಚ್ಛೆಯಿಂದಲಿ ನುಡಿದ ಸ್ವಚ್ಛ ನರಹರಿಗೆ 1 ರಾಗ ನಾವೆಲ್ಲನು ವರಗಳ ಹರಿಯೆ ನಾವಲ್ಲೆನು ಪ ವಲ್ಲೆನು ವರ ಲಕ್ಷ್ಮೀವಲ್ಲಭನೆ ಅ.ಪ ಕೊಟ್ಟೆನ್ನ ವಂಚಿಸಬೇಡಾ 1 ಮುಕ್ತಿಯಾದರು 2 ಬಡುವೆ ಅನಂತಾದ್ರೀಶನೆ 3 ರಾಗ ಹೀಗೆಂದು ನುಡಿದನು ನೃಪಗೆ ನರಸಿಂಹಾ ಪ ಇಂಥಾ ಬಲ್ಲಿದ ಆಗ್ರಹವೇಕೋ ನರಸಿಂಹಾ1 ಭಕ್ತನೋ ನಾನು ನರಸಿಂಹಾ 2 ಭಕ್ತನೆಂದು ತಿಳಿದುಕೊಡುವೆ ನೃಪಸಿಂಹಾ ಸ್ವಚ್ಛ ಭಕ್ತಿಯೊಂದೆ ಸಾಕೊ ಎನಗೆ ನರಸಿಂಹ3 ಐಶ್ವರ್ಯವ ಭೋಗಿಸು ನೀನು ನೃಪಸಿಂಹಾ ಅಷ್ಟು ಐಶ್ವರ್ಯ ಸಲ್ಲೋದು ನಿನಗೆ ನರಸಿಂಹಾ 4 ರಾಜ್ಯದಿಂದ ಫಲವೇನೊ ನರಸಿಂಹಾ 5 ಕೊಂಡಾಡುವೆ ನರಸಿಂಹಾ 6 ನಿಷ್ಕಾಮುಕನೆಂಬುದರಿಯಾ ನರಸಿಂಹಾ 7 ಮುಕ್ತಿಯನ್ನು ತಂದೆಗೆ ಕೊಡು ನೀ ನರಸಿಂಹಾ 8 ಅನಂತಾದ್ರೀಶ ನರಸಿಂಹಾ 9 ವಚನ ಕೊಟ್ಟವರ ಬಿಡಬೇಡ ಬಿಟ್ಟು ನನ್ನಲಿ ಚಿತ್ತ ಬಿಟ್ಟುಸಂಶಯ ಮುಂದೆ ಇಷ್ಟುಮಾತುಗಳಾಡಿ ತಟ್ಟನವನೊ ಮೇಲಭಯವನು ಸೃಷ್ಟಿಕರ್ತನೆ ಕರಕೊಂಡು ಪಟ್ಟಗಟ್ಟಿದವಗೆ ಆ ಪಟ್ಟದಾಸನದಲ್ಲಿ ಕುಳಿತಾ 1 ಕೊಟ್ಟರಾಕಾಲದಲಿ ಪಟ್ಟಿಯನು ನಡುವಿನಲಿ ಇಟ್ಟು ಸಕಲಾಭರಣ ಅಷ್ಟು ಆಭರಣದಲೆ ದಿಟ್ಟಾಗಿ ಕಸ್ತೂರಿ ಬಟ್ಟಿಟ್ಟ ಕೈಯಲ್ಲಿ ಪಟ್ಟದಾನೆಯ ಭಯಪಟ್ಟು ಬಳಕುತ ಪ್ರಹ್ಲಾದನ್ನ ದೃಷ್ಟಿಯಿಂದಲಿ ಬೆಳಗಿದರು ದಿಟ್ಟನಾರಿಯರು 2 ರಾಗ ಮಂಗಲಂ ಜಯ ಮಂಗಲಂ ತಿಳಿದವಗೆ ಹಿರಣ್ಯ ಪತ್ನಿಯ ಗರ್ಭದಲಿರುತಲಿ ಗುರುನಾರದನಿಂದರಿತವಗೆ 1 ವೃದ್ಧನಾದವಗೆ ಶೋಧಿಸಿ ಪುತ್ರ ಪ್ರಹ್ಲಾದನಿಗೆ 2 ಪೇಳ್ದವಗೆ ಭೂಲೋಕ ಮುಖ್ಯದಿ ಮೂಲನಿಗೆ 3 ಇರುವವಗೆ ಸಿರಿಯು ಸಿಟ್ಟು ಬಿಡಿಸಿರುವವಗೆ 4 ಸಂತತ ನಿಸ್ಪøಹನಾದವಗೆ ಸಂತೋಷದಿ ಕುಳಿತಿರುವ ಸತತ ಶ್ರೀ ಮದನಾಂತಾದ್ರೀಶನ ಚಿಂತನದಿಂದಿರುವಂಥವಗೆ 5 ವಚನ ಮುಂದೆ ಪ್ರಹ್ಲಾದ ತಾನಿಂದಿರೇಶನ ಆಜ್ಞೆ ಯಿಂದ ಇದು ಹರಿಸೇವೆಯೆಂದು ರಾಜ್ಯವ ಮಾಡಿ ಬಂದ ಬಂದವರಿಗೆ ಮುಂದಕ್ಕೆ ಕರೆದು ಆ ನಂದದಿಂದತಿ ಮನಕೆ ಬಂದದ್ದು ಕೊಟ್ಟುತ್ವರ ದಿಂದ ಮಾಡಿದ ಪುಣ್ಯ ಅಂದಿಗರ್ಪಿಸಿ ಹರಿಗೆ ಚಂದಾಗಿ ನಿರ್ಲಿಪ್ತನೆಂದೆನಿಸಿಕೊಂಡಾ ಮುಂದೆ ಈ ಕಾಲದಲಿ ಹಿಂದೆ ಮಾಡಿದ ಪುಣ್ಯ ಮುಂದೆ ಮೋಕ್ಷಕ್ಕೆ ಒಂದು ಉಪಯುಕ್ತವಲ್ಲ ಬಂದ ಬಂದವರಿಗೊಂದೊಂದು ನಾ ಕೊಡುವೆನು ಎಂದು ಪ್ರಹ್ಲಾದ ರಾಜೇಂದ್ರನೆ ಶ್ರೀರಾಘ ವೇಂದ್ರ ರಾಯರು ಎನಿಸಿ ಬಂದು ಮಂತ್ರಾಲಯಕೆ 1 ಮುಂದೆ ಅಲ್ಲಿರುವ ಬಹುಚಂದದಿಂದ ಲೋಕದಲಿ ಪ್ರಹ್ಲಾದನೀ ಕಥೆಯ ಕೇಳ್ವವರು ಲೋಕÀಮಾನಿತರವರು ಬೇಕಂತ ಭಕ್ತಿಯಲಿ ಸ್ವೀಕರಿಸಿ ಪಠಿಸಿದರೆ ವಾಕ್ಚಪಲರಾಗುವರು ತೂಕ ಇಲ್ಲವರಿಗೆ ಬೇಕಾದ ಸ್ಥಳದಲಿ ಬೇಕಾದ್ದು ಬರುವದು ತೋಕರುಗಳಾಗುವರು ತಾ ಕರೆದು ಕೊಡುವ
--------------
ಅನಂತಾದ್ರೀಶ - ಕಥನಕಾವ್ಯಗಳು
ಖಾದಿ ಧರಿಸುವ ಜನಕೆ ಕ್ರೋಧವುಂಟೇ ಪ ಕ್ರೋಧ ಜೈಸಿದ ನರಗೆ ಕಲಹಗಳುಂಟೇ ಪಥ್ಯದಿಂದಿರುವವಗೆ ವ್ಯಾಧಿ ಭಯವೇ ನಿತ್ಯ ಉಪವಾಸಿಗೆ ಭತ್ತದಾ ವ್ಯಥೆಯುಂಟೇ ಚಿತ್ತ ಶುದ್ಧಿದ್ದವಗೆ ಮೈಲಿಗೆಯ ಪರವೇ 1 ಆಶೆ ಬಿಟ್ಟವನಿಗೆ ಅರಸರಾಭಯವುಂಟೆ ದಾಸನಾದವನಿಗೆ ದೋಷವುಂಟೆ | ದೇಶ ಉದ್ಧಾರಕಗೆ ಸೆರೆಮನೆಯ ಭಯವುಂಡೆ ಪೂಶರನ ಗೆದ್ದವಗೆ ಕಾಮಿನಿಯ ಭಯವೇ 2 ಗೀತಾರ್ಥ ತಿಳಿದವಗೆ ಪಾತಕದ ಭಯವುಂಟೆ ಶೀತೋಷ್ಣ ಸಹಿಸುವವಗೆ ಛಳಿ ಬಿಸಿಲು ಭಯವೆ | ನೀತಿ ಕೋವಿದರಿಗೆ ಜಾತಿ ಪಕ್ಷಗಳುಂಟೆÉ ದಾತನಿಗೆ ದುರ್ಭಿಕ್ಷು ಭೀತಿ ತಾವುಂಟೆ 3 ವಿದ್ಯಾಭಿಲಾಶೆಗೆ ತೇರ್ಗಡೆಯ ಭಯವುಂಡೆ ಉದ್ಯೋಗವಿದ್ದವಗೆ ಉದರ ಭಯವೇ ಯುದ್ಧ ಶೂರರಿಗೆಲ್ಲ ಮದ್ದುಗುಂಡಿನ ಭಯವೇ ಬುದ್ಧಿವಂತರಿಗೆಂದಿಗಪಮಾನ ಭಯವೇ 4 ನೇಮದಿಂದಲಿ ನಡೆವವಗೆ ಸೋಮಾರಿತನವುಂಟೆ ಭೂಮಾತೆ ಮಕ್ಕಳಿಗೆ ಕ್ಷಾಮವುಂಟೆ ಸಾಮಗಾನವಿಲೋಲ ಶಾಮಸುಂದರವಿಠಲ ನಾಮ ನೆನವವಗೆ ಯಮಧಾಮದಂಜಿಕೆಯೇ 5
--------------
ಶಾಮಸುಂದರ ವಿಠಲ
ಜಯ ಜಯ ವೈಷ್ಣವ ಪಯನಿಧಿ ಚಂದ್ರಗೆ ಜಯ ಜಯ ವ್ಯಾಸಯತೀಂದ್ರರಿಗೆ ಪ ಜಯ ಜಯ ವರ ಕರ್ಣಾಟಕ ಪತಿಗೆ ಜಯ ಸಿಂಹಾಸನವೇರಿದಗೆ ಅ.ಪ ನಾಕು ಶಾಸ್ತ್ರಗಳ ಪಾರಂಗತರಿಗೆ ಕಾಕುಮತಗಳನು ತುಳಿದವಗೆ ಆ ಕಮಲಾಪತಿ ಭಕುತವರೇಣ್ಯಗೆ ಶ್ರೀಕರ ಚಂದ್ರಿಕಾಚಾರ್ಯರಿಗೆ 1 ಹನುಮನ ಭಾಷ್ಯವ ಅಣಿಮಾಡಿದಗೆ ಹನುಮಗೆ ಭವನಗಳನು ಕಟ್ಟಿದಗೆ ಹನುಮನ ಯಂತ್ರದಿ ಬಿಗಿದಪ್ಪಿದಗೆ ಮುನಿತ್ರಯದಲಿ ಸೇರಿದ ದೊರೆಗೆ 2 ಮಾಯಾವಾದಗಳನು ಗೆಲಿದವಗೆ ನ್ಯಾಯಾಮೃತಧಾರೆಯ ಅಭಿಷೇಕದಿ ಆ ಯದುಪತಿಯನು ಕುಣಿಸಿದಗೆ 3 ಚಕ್ರಧರನ ಸುಳುಗಳ ತಿಳಿದವಗೆ ಮಿಕ್ಕಮತಗಳನು ಅಳಿದವಗೆ ವಕ್ರಯುಕುತಿಗಳನು ತುಕ್ಕುಡಗೈಯ್ಯವ ತರ್ಕ ತಾಂಡವದಿ ನಲಿದವಗೆ 4 ಕೃಷ್ಣದೇವರಾಯನ ಕುಲಪತಿಗೆ ಕಷ್ಟದ ಕುಹಯೋಗವ ಕೊಂದವಗೆ ಶಿಷ್ಟಜನಗಳಿಗೆ ಇಷ್ಟಾರ್ಥಗಳನು ವೃಷ್ಟಿಯಗೈವ ಪ್ರಸನ್ನರಿಗೆ 5
--------------
ವಿದ್ಯಾಪ್ರಸನ್ನತೀರ್ಥರು
ನಿತ್ಯ ನಿತ್ಯದಲಿ ಧೂಪ ಪ ನಾನದಾರಿಹೆನೆಂದು ತಿಳಿದವಗೆ ಧೂಪನಾನು ಆತ್ಮವು ಎಂದು ಕಂಡವಗೆ ಧೂಪನಾನಾ ಜೀವ ಭ್ರಾಂತಿಯಳಿದವಗೆ ಧೂಪತಾನೆ ತಾನಾಗಿಹೆನೆಂದವಗೆ ಧೂಪ 1 ಸಂಸಾರದೊಳು ಇದ್ದು ಇಲ್ಲದವನಿಗೆ ಧೂಪಸಂಸಾರ ಸಂತೆಂದು ಕಂಡವಗೆ ಧೂಪಸಂಸಾರ ಲೇಪ ಅಂಟದವನಿಗೆ ಧೂಪಸಂಸಾರದೊಳು ಮುಕ್ತನಾದವಗೆ ಧೂಪ2 ಸೂರ್ಯ ಚಂದ್ರ ಸ್ವರದಿ ನಡೆದವಗೆ ಧೂಪಆರು ಚಕ್ರದಿ ನಡೆದವಗೆ ಧೂಪಭೋರೆನಿಪ ಓಂಕಾರ ಕೇಳ್ದವಗೆ ಧೂಪಧೀರ ಚಿದಾನಂದ ಗುರುವಾದವಗೆ ಧೂಪ 3
--------------
ಚಿದಾನಂದ ಅವಧೂತರು
ಮಂಗಳಂ ಜಯ ಜಯ ಮಂಗಳಂ ಪ ಪರಮಾಸನದಲಿ ಕುಳಿತವಗೆ ಪರತತ್ವವ ತಾ ತಿಳಿದವಗೆ ಕರುಣದಿಂದ ದುರಿತಾವಳಿಗಳನು ಸ್ಮರಿಸಿದ ಮಾತ್ರದಿ ಪರಿಹರಿಸುವಗೆ 1 ಪೊಡವಿಯಲಿ ಶೋಭಿಸುವವಗೆ ಕಡಲಶಯನನ ಭಕ್ತನಿಗೆ ಅಡಿಗಳ ಬಿಡದೆ ಭಜಿಪ ಸುಜನರಿಗೆಲ್ಲ ಕಡುತರ ಜ್ಞಾನವ ನೀಡುವಗೆ 2 ಸತ್ಯಧೀರರ ಕುವರನಿಗೆ ಸತ್ಯಜ್ಞಾನನೆಂದೆನಿಸುವಗೆ ಅತ್ಯಾದರದಿಂದ ರಾಮನ ಧ್ಯಾನಿಸಿ ಪ್ರತ್ಯಕ್ಷವ ಕರೆಸಿರುವವಗೆ 3 ಕಾಮಕ್ರೋಧವ ಬಿಟ್ಟವಗೆ ಪ್ರೇಮ ಆಶೆಗಳ ಸುಟ್ಟವಗೆ ಧೂಮಕೇತು ಸಖ ಸೂನುವಾಹನನ ನೇಮದಿಂದ ಆರಾಧಿಪಗೆ 4 ದಂಡ ಕಮಂಡಲ ಪಿಡಿದವಗೆ ಪಂಡಿತರಿಂದತಿ ಪೂಜಿತಗೆ ಕೊಂಡಾಡಿದರ್ಯಮ ದಂಡನೆ ತಪ್ಪಿಸಿ ಶೊಂಡನಾದ ನರಹರಿ ತೋರ್ಪಗೆ 5
--------------
ಪ್ರದ್ಯುಮ್ನತೀರ್ಥರು
ಮರ್ಮವ ತಿಳಿದವಗೆ ಈ ಕಾಯದ ಕರ್ಮದ ಗೊಡವೆಯುಂಟೇ ನಿರ್ಮಲಾತ್ಮಕಗೆ ಸಮರ್ಪಣೆಯೆಂಬ ಸ್ವ ಧರ್ಮ ಮೂಲ ಮಂತ್ರ ಸೋಹಂವೆಂದೆಂಬ ಪ ಜ್ಯೋತಿ ಹಸ್ತದೊಳಿರಲು ಕತ್ತಲೆಗೆ ಬ ದ್ಯೋತವ ಬಯಸುವರೇ ಪಾತಕ ಪುಣ್ಯ ಶುಭಾಶುಭವೆಂಬ ವಿ ಘಾತಿಯಾಗುವ ಅವಧೂತ ಮಂತ್ರವೆಂಬ 1 ಶರೀರಾತ್ಮಗ್ರಹವು ಪೂಜೆಗೆ ಸಹಜ ಪರಿಪರಿ ವಿಷಯ ಭೋಗಾ ನಿದ್ರೆ ಸಮಾಧಿ ಸಂಚಾರ ಪ್ರದಕ್ಷÀಣೆ ನಿರುತ ಆಡುವ ವಾಣಿ ಸ್ತೋತ್ರಗಳೆಂದೆಂಬ 2 ಬರಿದೆ ಕಾಯದ ಸುಖವು ಕರ್ಮಾ ಕರ್ಮ ಪರಿಪೂರ್ಣಾತ್ಮಕಗರ್ಪಿಸಿ ಗುರು ವಿಮಲಾನಂದಭರಿತನಾಗಿಹ ಮಂತ್ರೋ ಚ್ಚರಣೆಯೊಳಿರುವುದು ದೊರಕೊಂಡನೆಂದೆಂಬ 3
--------------
ಭಟಕಳ ಅಪ್ಪಯ್ಯ