ಒಟ್ಟು 4 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಾವಿನಕೆರೆ ಎಲ್ಲಿರುವೆ ಬಾರಂಗ ಬಾ ಮೋಹನಾಂಗ ಎಲ್ಲಿರುವೆ ನೀಲಾಂಗ ಮಾಂಗಿರಿರಂಗ ಪ ಇಲ್ಲಿರುವೆಯಾರಂಗ ಸಲ್ಲಲಿತ ರಂಗ ಮೆಲ್ಲನೇ ರಂಗ ಓ ಮುದ್ದುರಂಗಾ ಅ.ಪ ಅಲ್ಲಿ ನೋಡಿದರಿಲ್ಲ ಇಲ್ಲಿ ಕಾಣಿಸಲಿಲ್ಲ ಬಲ್ಲೆ ನಾನೀ ಚೆಲ್ಲ ವರದಾತನಲ್ಲ ಇಲ್ಲಿ ತಿಳಿಗೊಳವಿಲ್ಲ ಮಲ್ಲಿಗೆಯ ಹೂವಿಲ್ಲ ಇಲ್ಲಿರುವ ಧೃಢವಿಲ್ಲ ನೀ ಬರುವೆ ಅರಿವಿಲ್ಲ 1 ಗಜರಾಜ ಕರೆದನೆ ಅಜಾಮಿಳನು ಕೂಗಿದನೆ ಅಜನು ಬಾರೆಂದನೆ ಲೋಕವಂದಿತನೆ ರಜತಾದ್ರಿ ವಾಸನೆ ಪೂಜಿಸಲು ಕರೆದನೊ ಸುಜನ ವರದಾಯಕನೆ ವಿಜಯ ಪೂರಿತನೇ 2 ವನವನದಿ ಸಂಚರಿಸಿ ದನಿದನಿಯನನುಸರಿಸಿ ಮನದಿ ನೋವನನುಭವಿಸಿ ಕನಸೆಂದು ಭಾವಿಸಿ ಕನವರಿಪ ಯೆನ್ನೊಳಗೆ ಕನಿಕರವ ಸೂಸಿ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಯೋಗಿ ಎಂಬ ಆನೆ ಬಂದಿತಯ್ಯಆನೆ ಬಂದಿತು ಪ್ರಪಂಚ ಪೇಟೆಯತಾನೆ ಕೀಳುತ ತಳಪಟ ಮಾಡುತ ಪ ಪಾಷಗಳೆಂದೆಂಬ ಸರಪಳಿ ಹರಿದುಈಷಣಗಳು ಎಂಬ ಸಂಕೋಲೆ ಮುರಿದುದ್ವೇಷವೆನಿಪ ಗಾಡಿಕಾರರನರೆದುಕ್ಲೇಷವೆನಿಪ ಕಾವಲವರ ಜಡಿದು 1 ದಶವಾಯುಗಳೆಂಬ ದನಗಳನೋಡಿಸಿವ್ಯಸನ ಕುದುರೆಗಳ ಸೀಳಿ ಸೀಳಿಕ್ಕಿಹಸಿವು ತೃಷೆಗಳನು ಕಾಲೊಳಿಕ್ಕಿಕಸೆಕಸೆ ಅಂಗಡಿಗಳನು ತೂರಿಕ್ಕಿ2 ಬಹುಮತಗಳು ಎಂಬ ಮನೆಯನೆ ಕೆಡಹಿಇಹಪರ ವಾಸನೆ ಕೊಟ್ಟಿಗೆ ಕೊಡಹಿಮಹಾ ಅಭಿಮಾನದ ನಾಯಿಗಳ ಮುಡುಹಿಬಹು ಕಲ್ಪನೆಯ ಕುರಿ ಕೋಳಿಗಳ ಉಡುಹಿ3 ಬೋಧ ಲಹರಿಯಲಿ ತೂಗುತಜ್ಞಾನ ಸೊಕ್ಕಿನಲಿ ಕೆಕ್ಕರಿಸಿ ನೋಡುತ ತಾನೆ ತಾನಾಗಿ ತನ್ನ ಮರೆಯುತ 4 ಬೆಳಗುವ ಸುಷುಮ್ನ ಬಾಜಾರವಿಡಿದುಗೆಲುವಿನಲಿ ಭ್ರೂಮಧ್ಯ ಜಾಡಿನಲಿನೆಡೆದುತಿಳಿಗೊಳ ಸಹಸ್ರಾರದ ನೀರ ಕುಡಿದುಬಲು ಚಿದಾನಂದವೆಂಬ ಆನೆಯು ನಡೆದು 5
--------------
ಚಿದಾನಂದ ಅವಧೂತರು
ಹರಿಹರರಿಬ್ಬರು ಒಲಿದು ಮಾತಾಡಲು ಕೊಳವ ಕಂಡಲ್ಲಿ ಎಲೆತೋಟ ಕೊಳವ ಕಂಡಲ್ಲಿ ಎಲೆತೋಟದೊಳಗಾಡುವ ಹೆಣ್ಣಿನ ಕಂಡು ಹರ ಮರುಳಾದ ಪ. ತೆಂಗಿನ ತಿಳಿಗೊಳ ನಿಂಬೆ ಕಿತ್ತಲೆ ಬಾಳೆ ಹೊಂಬಾಳೆ ಅಡಿಕೆ ಬನಗಳು ಹೊಂಬಾಳೆ ಅಡಿಕೆ ಬನದೊಳಗಾಡುವ ರಂಭೆಯ ಕಂಡು ಹರ ಮರುಳಾದ 1 ಅರಿಸಿನ ತಿಳಿಗೊಳ ಹಲಸು ಕಿತ್ತಲೆ ಬಾಳೆ ಬೆರಸಿ ಮಲ್ಲಿಗೆಯ ಬನದೊಳು ಬೆರಸಿ ಮಲ್ಲಿಗೆಯ ಬನದೊಳಗಾಡುವ ಸರಸಿಜಾಕ್ಷಿಯ ಕಂಡು ಹರ ಮರುಳಾದ 2 ಮೊಲ್ಲೆ ಮಲ್ಲಿಗೆ ಜಾಜಿ ಅಲ್ಲೆ ಪಾರಿಜಾತ ನಿಲ್ಲದೆ ನುಡಿವೊ ಗಿಳಿಗಳು ನಿಲ್ಲದೆ ನುಡಿವೊ ಗಿಳಿಗಳು ನುಡಿಗಳ ಚೆಲುವೆಯ ಕಂಡು ಹರ ಮರುಳಾದ 3 ಸೋಗೆ ನವಿಲುಗಳು ಗಿಳಿಹಿಂಡು ತುರುಗಳು [ಕೋಗಿಲೆ ನಲಿಯೊ ಪಂಸೆಗಳು] [ಕೋಗಿಲೆ ನಲಿಯೊ ಪಂಸೆಯೊಳಾಡುವ] ಸೊ- ಬಗಿಯ ಕಂಡು ಹರ ಮರುಳಾದ 4 ಚೆಲುವ ಚರಣಗಳು ಜಂಘೆ ಜಾನೂರು ಕಟಿ ವಳಿಪಂಙÂ್ತ ಜಠರ ವಕ್ಷಸ್ಥಳವು ವಳಿಪಂಙÂ್ತ ಜಠರ ವಕ್ಷಸ್ಥಳಗಳ ಹೆಣ್ಣಿನ ಸ್ತನವ ವರ್ಣಿಸಲಾರಿಗಳವಲ್ಲ 5 ಕಾಲುಂಗುರ ಅಕ್ಕಿ ಪಿಲ್ಯ ಜೋಡುಮೆಂಟಿಕೆಗಳು ವೀರಮುದ್ರಿಕೆಯು ಕಿರುಪಿಲ್ಯ ವೀರಮುದ್ರಿಕೆಯು ಕಿರುಪಿಲ್ಯ ನಿಟ್ಟಿದ್ದ ಬಾಲೆಯ ಕಂಡು ಹರ ಮರುಳಾದ 6 ನಡು ಬಳುಕಿ ಮುಡಿ ಸಡಲಿ ಉಡಿಗಂಟೆ ಹೊಳೆಯುತ ಕೊರಳ ಪದಕ ಹಾರ ಒಲೆಯುತ ಕೊರಳ ಪದಕ ಹಾರ ಒಲೆಯುತ ಹೆಣ್ಣಿನ ಇರವ ವರ್ಣಿಸಲಾರಿಗಳವಲ್ಲ 7 ಹಸಿರು ಕುಪ್ಪಸಗಳು ಮುಂಗೈನಗಗಳು ನಳಿತೋಳುಬಂದಿ ಬಳೆಗಳು ನಳಿತೋಳುಬಂದಿ ಬಳೆಗಳು ಹೆಣ್ಣಿನ ಥಳುಕು ವರ್ಣಿಸಲಾರಿಗಳವಲ್ಲ8 ಹಾರ ಹೀರಾವಳಿ ಕೇಯೂರ ಕಂಕಣ ತೋಳ ಭಾಪುರಿ ಭುಜಕೀರ್ತಿ ತೋಳ ಭಾಪುರಿ ಭುಜಕೀರ್ತಿನಿಟ್ಟಿಹ ಇಂದುಮುಖಿಯ ಕಂಡು ಹರ ಮರುಳಾದ 9 ಅರಳೋಲೆ ಮೂಗುತಿ ಹಣೆಯ ಹಚ್ಚೆಯ ಬೊಟ್ಟು ಕದಪು ಕನ್ನಡಿಯು ಕುಡಿಹುಬ್ಬು ಕದಪು ಕನ್ನಡಿಯು ಕುಡಿಹುಬ್ಬು ಹೆಣ್ಣಿನ ಬೆಳಕÀ ವರ್ಣಿಸೆ ಹರಗಳವಲ್ಲ 10 ನೊಸಲು ಕಸ್ತೂರಿಗಳು ಎಸೆವ ಬೈತಲೆಗಳು ಕುರುಳು ಕೂದಲುಗಳು ಕುಂತಲಗಳು ಕುರುಳು ಕೂದಲುಗಳು ಕುಂತಲಗಳು ಹೆಣ್ಣಿನ ಜಡೆಯ ವರ್ಣಿಸಲಾರಿಗಳವಲ್ಲ 11 ಕುಂಭಕುಚದ ಮೇಲೆ ಗಂಧವ ಪೂಸಿದಳೆ ಅಂದಕೆ ಹಿಡಿದಳೆ ಕಮಲವ ಅಂದಕೆ ಹಿಡಿದಳೆ ಕಮಲವ ಕಡೆಗಣ್ಣ ಚಂದ ಬಂದ್ಹರನ ಕಂಗೆಡಿಸಿತು 12 ತÉೂೀರ ಕುಚದ ಮೇಲೆ ಸಾದು ಗಂಧವ ಪೂಸಿ ಆಯಕೆ ಹಿಡಿದಳೆ ಕಮಲವ ಆಯಕೆ ಹಿಡಿದಳೆ ಕಮಲವ ಕಡೆಗಣ್ಣ ಢಾಳ ಬಂದ್ಹರನ ಕಂಗೆಡಿಸಿತು 13 ಕಕ್ಕಸ ಕುಚದಮೇಲೆ ಅಷ್ಟಹಾರಗಳು ಹೊಳೆಯೆ ಹಸ್ತಕಟ್ಟುಗಳು ಹೊಳೆಯುತ ಹಸ್ತಕಟ್ಟುಗಳು ಹೊಳೆವುತ್ತ ಹೆಣ್ಣಿನ ದೃಷ್ಟಿ ಬಂದ್ಹರನ ಕಂಗೆಡಿಸಿತು 14 ಅಮ್ಮಾಲೆ ಆಡೋಳು ಒಮ್ಮೊಮ್ಮೆ ನೋಡೋಳು ತÀನ್ನೊಳಗೆ ತಾನು ನಗುವೋಳು ತÀನ್ನೊಳಗೆ ತಾನು ನಗುವೋಳು ಬೊಮ್ಮನ ಮಗನ ಮರುಳು ಮಾಡಿ ನಡೆದಳು 15 ನೋಡಳು ನುಡಿಯಳು ಹರನ ಕೂಡೆ ಮಾತಾಡಳು ಓಡುತ್ತ ಚೆಂಡ ಹೊಯ್ವಳು ಓಡುತ್ತ ಚೆಂಡ ಹೊಯ್ವವೇಗವ ಕಂಡು ಮೂರುಕಣ್ಣವನು ಮರುಳಾದ 16 ಕೆದರಿದ ಕೆಂಜೆಡೆ ಕೊರಳ ರುದ್ರಾಕ್ಷಿ ಕರದಿ ತ್ರಿಶೂಲ ಹೊಳೆಯುತ ಕರದಿ ತ್ರಿಶೂಲ ಹೊಳೆಯುತ ಹೆಣ್ಣಿನ ನುಡಿಸುತ್ತ ಹಿಂದೆ ನಡೆದನು 17 ರೂಢಿಗೊಡೆಯನ ಕೂಡೆ ಆಡುವ ವನಿತೆ ನೋಡೆ ನೀ ಎನ್ನ ಕಡೆಗಣ್ಣ ನೋಡೆ ನೀ ಎನ್ನ ಕಡೆಗಣ್ಣ ಹೆಣ್ಣಿನ ಕಾಡುತ ಹಿಂದೆ ನಡೆದನು 18 ಪೀತಾಂಬರದ ಮುಂಜೆರಗನು ಕಾಣುತ್ತ ಸೋತೆ ಬಾರೆಂದು ಕರೆದನು ಸೋತೆ ಬಾರೆಂದು ಕರೆದ ಧ್ವನಿಯ ಕೇಳಿ ಕಾಂತೆ ಬನದೊಳು ಮರೆಯಾದಳು 19 ಮಂಗಳ ಮಹಿಮಗೆ ಅಂಜಿಕೆ ಇಲ್ಲದೆ ಗಂಗೆ ಪೊತ್ತವನ ತಿರುಗಿಸಿದ ಗಂಗೆಪೊತ್ತವನ ತಿರುಗಿಸಿದ ತನ್ನಯ ಮುಂದಣ ಅಂದವೆಲ್ಲ ಇಳುಹಿದ 20 ಸೃಷ್ಟಿಯನೆಲ್ಲ ಹೊಟ್ಟೆಯೊಳಿಂಬಿಟ್ಟು ವಟಪತ್ರ ಶಯನನಾಗಿ ಮಲಗಿದ ವಟಪತ್ರ ಶಯನನಾಗಿ ಮಲಗಿದ ಉಡುಪಿನ ಕೃಷ್ಣನೆಂದ್ಹರನು ತಿಳಿದನು 21 ಭೂಮಿಯನೆಲ್ಲ ಈರಡಿ ಮಾಡಿದ ಆಲದೆಲೆ ಮೇಲೆ ಮಲಗಿದ ಆಲದೆಲೆ ಮೇಲೆ ಮಲಗಿದ ಶ್ರೀಹಯ- ವದನನೆಂದು ಹರ ತಿಳಿದನು 22
--------------
ವಾದಿರಾಜ