ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂದಿಗ್ಹ್ಯೋದೀತಯ್ಯಾ ಹರಿ ಹರೀ ಎಂದು ಮುಳುಗೀತಯ್ಯಾ ಪ ಎಂದಿಗ್ಹೋದೀತು ಸುಖ ಅಂದಗೆಡಿಪ ಮಹ ಮಂದಮತಿಯು ಎನ್ನಿಂದ ಬಿಟ್ಟು ದೂರ ಅ.ಪ ಕತ್ತಲ ಕಾಳಿದು ಎನ್ನನು ಸುತ್ತಿಕೊಂಡು ಸೆಳೆದು ಸತ್ಯಮರೆಸಿ ಸ್ಥಿರಚಿತ್ತ ಕೆಡಿಸಿ ಪಿಡಿ ದೆತ್ತಿ ಹಾಕುತಿದೆ ಮತ್ತೆ ಭವಬಂಧದಿ 1 ಮುಂದರಿಗೊಡದಿದು ನಿರುತದ ಅಂದವ ತಿಳಿಗೊಡದು ಬಂಧಿಸಿ ಬಲುಘೋರಾಂಧಕಾರ ಮುಚ್ಚಿ ಸಂದಿನೊಳ್ನೂಕೆನ್ನ ಕೊಂದು ತಿನ್ನುತಿದೆ 2 ತೆರೆದು ನೋಡಲೀಯದು ಕಣ್ಣಿಗೆ ಪರದೆಯ ಹಾಕುವುದು ನರಹರಿಶರಣರ ಕರುಣಮಂ ತಪ್ಪಿಸಿ ಪರಮ ಶ್ರೀರಾಮ ನಿಮ್ಮ ಚರಣ ದೂರೆನಿಪುದು 3
--------------
ರಾಮದಾಸರು
ಗುಮ್ಮವ ನೋಡಿರೋ ಮೂಲಮಾಯೆ ಗುಮ್ಮವ ನೋಡಿರೋಗುಮ್ಮವು ಹೀಗೆಂದು ಶತಕೋಟಿ ಬ್ರಹ್ಮರು ಆಗಿವೆಗುಮ್ಮವ ಹೀಗೆಂದು ಗುರುತರಿವರಿಲ್ಲಯ್ಯ ಪ ಇಲ್ಲದೆ ತಾನೀಗ ತೋರುವ ಗುಮ್ಮಎಲ್ಲ ಲೋಕತಾನೆ ಆಗಿಹ ಗುಮ್ಮಗೆಲ್ಲುವೆನಗೆ ಗೆಲುವಾಗದ ಗುಮ್ಮಒಳ್ಳೆ ಒಳ್ಳೆಯವರನು ಅಂಜಿಪ ಗುಮ್ಮ1 ಮಾನಿನಿ ಸುತ ಸಂಪತ್ತಾದ ಗುಮ್ಮನಾನಾ ಭವವು ಆಗಿ ತೊಳಲಿದ ಗುಮ್ಮ2 ತಿಳಿವೆ ನೆಂದರೆ ತಿಳಿಗೊಡದು ಗುಮ್ಮತಿಳಿದರೆ ತನ್ನೊಳಗಡವುದು ಗುಮ್ಮಬಲು ಚಿದಾನಂದ ಗುರುವಿನಲಿ ಗುಮ್ಮಹೊಳೆ ಹೊಳೆದು ತೋರಿಪುದು ಗುಮ್ಮ 3
--------------
ಚಿದಾನಂದ ಅವಧೂತರು