ಒಟ್ಟು 7 ಕಡೆಗಳಲ್ಲಿ , 3 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಲಿಯುಗದೊಳು ಕಂಡೆನು ನಿನ್ನೊಬ್ಬನ | ಕಲಿವಾಳದನಿಂಗಪ್ಪ || ಕಲಿತ ಬುದ್ಧಿಯು ಕಡೆಯಲಿ ನಿನ್ನ |ಕೆಲಸಕೆ ಏನೂ ಬಾರದಪ್ಪ ಪ ಎತ್ತು ಎಮ್ಮಿ ಆಕಳ ಹೋರಿ | ಜತನ ಮಾಡೀದೆಪ್ಪ || ಮೃತ್ಯು ದೇವತೆಗೆ ತುತ್ತು ಇದರೊಳು | ಮುಕ್ತಿ ನಿನಗಿಲ್ಲಪ್ಪಾ 1 ಹೊಲಮನಿಯೆಂದು ನಲಿನಲಿದಾಡುತ | ಒಲಒಲ ಗುಟ್ಟುವಿಯಪ್ಪಾ || ಹೊಲಮನಿ ಸಾಧಿಸಿ ಸಂಗಡ |ಒಯ್ದಿಲ್ಲಾ ನಿಮ್ಮಪ್ಪಾ 2 ಶುದ್ಧವಾಗಿ ನೀ ಕೋಶವ ಕಲಿತು | ಬದ್ಧವ ತಿಳಕೋಳಪ್ಪಾ || ಬುದ್ಧಿವಂತನು ನೀ ಸ್ವರ್ಗದ ಸುದ್ದಿಯು | ಸ್ವಲ್ಪವು ನಿನಗಿಲ್ಲಪ್ಪಾ 3 ರೋಗವ ನೀಗಿಸಿ ಜನರಿಗೆ ಭೋಜನ | ಭೋಗವನ್ನು ನೀ ಪಡೆದೆಪ್ಪಾ || ಹೋಗದು ಕರ್ಮವು ಇದರಲಿ ಮುಂದಿನ | ಆಗಮ ಮಹಿಮೆಯ ತಿಳಕೋಳಪ್ಪಾ 4 ಅಪರೂಪದ ನರದೇಹಕೆ ಬಂದು | ವಿಪರೀತ ವಿದ್ಯಾಕಪ್ಪ || ಗುಪಿತದಿ ಭವತಾರಕನ ಭಕ್ತರ |ಕೃಪೆಯನು ನೀ ಸಂಪಾದಿಸಪ್ಪಾ 5
--------------
ಭಾವತರಕರು
ಗುರುಜ್ಞಾನದ ಕೀಲು ಬ್ಯಾರ್ಯಾದ ನೋಡಿ ಬಲು ಮೇಲು ಧ್ರುವ ಮೇಲಾಗಿ ಸ್ವಸುಖ ಸಾಧನ ಚಾಲ್ವರುತದ್ಯಾತಕ ತಾ ಜನ ತಿಳಕೋಬಾರದ ಈ ನಿಜಖೂನ ಸುಲಲಿತ ನಿಜಧನ 1 ಮೂಲೊಕದಲ್ಯವ ಪೂರ್ಣಪವಿತ್ರ ನೆಲೆಗೊಂಡಿ ಹ್ಯ ಘನ ಚರಿತ್ರ ಬಲದಿಹ್ಯ ಬಾಹ್ಯಾಂತ್ರ 2 ದೀನಮಹಿಪತಿ ಗುರುದೇವದೇವೇಶ ಖೂನವಿಡವದು ಬಲುಸಾಯಾಸ ಮುನಿಜನರುಲ್ಹಾಸ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನಂಬು ನಂಬೆಲೆ ಮನ ಗಿರಿಧರನ ನಿನ ಗಿಂಬುಗೊಡುವ ಭಕ್ತ ಸಂಜೀವನ ಪ ಕತ್ತೆಯಂತೆ ಕೂಗಿ ಕೆಡಬೇಡ ಪರ ಮಾರ್ಥತತ್ತ್ವದ ಹಾದಿ ತಿಳಿ ಮೂಢ ಸತ್ಯರ ಪಾದದಿ ಮನನೀಡೋ ನಿತ್ಯ ಉತ್ತಮರೊಳಗಾಡಿ ನಿಜ ನೋಡೋ 1 ಕೋತಿಯಂತೆ ಕುಣಿಯಲುಬೇಡೋ ಮಹ ನೀತಿವಚನ ಮೀರಿ ನಡಿಬೇಡೋ ಮಾತುಮಾತಿನ ಸಂಶಯಬೇಡೋ ಮುಂದೆ ಪಾತಕದೊಳು ಬಿದ್ದು ಕೆಡಬೇಡೋ 2 ಸಾರಸಂಸಾರ ಮಿಥ್ಯವೆಂದು ತಿಳಕೋ ನೀನು ಧೀರ ಶ್ರೀರಾಮನ ಅಡಿಗ್ಹೊಂದಿಕೋ ಗಂ ಭೀರ ಮೋಕ್ಷಪದವನೆ ಪಡಕೋ 3
--------------
ರಾಮದಾಸರು
ಯಾಕೆ ಜೀವನೆ ಒಣ ಉಸಾಬರಿ ನಿನ ಗ್ಯಾಕೆ ಲೋಕದ ಸುಳ್ಳೆ ಕಿರಿ ಕಿರಿ ಪ ಪಾದ ಬಿದ್ದು ಮೊರಿ ಪರ ಲೋಕ ಪದವಿ ಸಂಪಾದಿಸಿ ಮೆರಿ ಅ.ಪ ಇಷ್ಟಬಂಧು ಸತಿಸುತರೆಲ್ಲ ನೀನು ಬಿಟ್ಟು ಹೋಗ್ವಾಗ್ಯಾರು ದಿಕ್ಕಿಲ್ಲ ಎಷ್ಟು ಸಂಪಾದಿಸಿದ ಗಳಿಕೆಲ್ಲ ನೀನು ಕಟ್ಟಿಕೊಂಡು ಸಂಗಡೊಯ್ಯೋಣಿಲ್ಲ ಕುಟ್ಟಿ ಯಮದೂತರು ಕಟ್ಟಿ ಎಳೆಯುವಾಗ ನೀ ಗಟ್ಟಿ ಮಾಡಿದ್ದು ಎಲ್ಲ ಬಟ್ಟಬೈಲೆ 1 ಯಾರು ಮೆಚ್ಚಿದರು ಫಲವಿಲ್ಲ ನಿನ ಗ್ಯಾರು ಮುನಿದರೇನು ಕೆಡುಕಿಲ್ಲ ನೀರಮೇಲಿನ ಲಿಪಿಯಂತೆಲ್ಲಜಗ ಸಾರ ಸುಳ್ಳು ಖರೆವೊಂದಿಲ್ಲ ತೋರುವ ಬಿಸಿಲಿನ ವಾರಿಯಂತೆ ಮಾಯಾ ಕಾರ ತಿಳಕೋ ತೋರುವುದೆಲ್ಲ 2 ಬಂದಿ ಇಲ್ಲಿಗೆ ಬಹಳ ಲಗುಮಾಡಿ ಮತ್ತೆ ಮುಂದೆ ಹೋಗುವುದೆಲ್ಲಿ ತಿಳಿ ಮಂದನಾಗದೆ ಚಾಚಿ ಜ್ಞಾನಕುಡಿ ಅಲ್ಲಿ ನಿಂದು ನೋಡು ನಿಜ ಹುಡುಕಾಡಿ ಇಂದಿನ ಸಮಯವು ಮುಂದೆ ಸಿಗುವುದೇನೋ ತಂದೆ ಶ್ರೀರಾಮಪಾದಕ್ಹೊಂದಿ ಮುಕ್ತಿಯ ಪಡಿ3
--------------
ರಾಮದಾಸರು
ಸಮಜೊ ಭಾಯಿ ಸಕುನಾ ಚಾರೊ ಖುದಾಕಾ ತೆಲಗು ಕನ್ನಡ ತುರಕಾರೆ ವಂದೇ ಸುಖ ಧ್ರುವ ನಜರೋಮೆ ನಜರೋಮೆ ತನ್ನೊಳಗದೆ ಅತಿಸೂಕ್ಷ್ಮವಾಗಿ ತಿಳಕೋಮೆ ತಿಳಕೋಮೆ ಸದ್ಗುರು ವಚನ ಶೋಧುನಿ ಪಾಹಾ ಸಪ್ರೇಮ ಸಪ್ರೇಮ ಚುಡುವಯ್ಯ ಉನ್ನದಿ ಪೂರ್ಣ ಘನ ಮಹಿಮೆ 1 ಫ್ಯಾರೆ ವಳಖೂನಿ ಸಾರಾಸಾರಾ ನಿವಡೂನಿ ನಿವಡೂನಿ ನಜರ ಹುಜರ ದೇಖೋ ಯಾರಾ ಹೈಗನೀ ಹೈಗನಿ ಜನ್ಮಕ ಬಂದು ಮಾಡುವದೆ ಸಾಧನೀ ಸಾಧನೀ ಮಂಚಿ ಉನ್ನದಿ ನಕಳೆ ಸದ್ಗುರು ಪಾವುನಿ 2 ಚೆಪ್ಪೆವೈಯ್ಯ ಎಂದರ ಹೇಳುವ ಗುರು ನೀಠಾ ಗುರುನೀಠಾ ಆನಂದ ಆಹೆ ತುಜ ಮಹಿಪತಿ ಸುಖ ಮೋಠಾ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು