ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಂದಕುಮಾರ ಸಕಲಾಧಾರಾ ಪ ಇಂದೀವರಯುಗಚರಣ ಮನೋಹರ ಕುಂದವದನ ನಿಗಮಾಂತ ಸಂಚಾರಾ ಅ.ಪ ಉಡಿಗೆ ತೊಡಿಗೆಗಳ ಉಡಿಸುವೆ ತೊಡಿಸುವೆ ಮುಡಿಗೆ ಮಲ್ಲಿಗೆ ಮಲ್ಲೆಯಳವಡಿಪೆ | ರಂಗ ಉಡುಪತಿ ಫಾಲಕೆ ತಿಲಕವನಿಡುವೆ ಅಡಿಗಂದುಗೆ ಗೆಜ್ಜೆ ಪಾಡಗವಿಡುವೆ | ರಂಗ 1 ಕಿವಿಗಳಿಗೆ ಮುತ್ತು ಹವಳದಾಭರಣವ ಹವಣಿಸಿ ಸಿಂಗಾರಗೈವೆನೋ | ರಂಗ ನವಮಣಿಮಾಲೆಯ ಕೊರಳಿಗೆ ಧರಿಸುವೆ ದಿವಿಯ ಪೀತಾಂಬರವಳವಡಿಪೇ | ರಂಗಾ 2 ಬೆರಳಿಗುಂಗುರಗಳ ಹರುಷದೊಳಿಡುವೆ ಕರದೊಳಿಡುವೆ ನಿನ್ನ ಮುರಳಿಯನು | ರಂಗ ಚರಣಯುಗಕೆ ನಿನ್ನ ಸಕಲವನರ್ಪಿಪೆ ಕರುಣದಿ ಬಾರೊ ಮಾಂಗಿರಿಯೊಡೆಯಾ | ರಂಗ3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಇಷ್ಟು ದಯವುಳ್ಳವನ ಯಾಕೆ ಬರಬೇಡೆಂದಿಇಷ್ಟು ನಿರ್ದಯಳೆ ನೀನು ಪ. ಇನ್ನೆಲ್ಲಿ ಪೋಗಲೆ ರತಿಯಿಲ್ಲದಿದ್ದರೆ ನಿನಗೆ ಪೂಮಾಲೆ ತಾ ಎನೆಸಣ್ಣ ಕಮಲದೆಲೆಯ ಬಣ್ಣದ ಗಿಣಿ ಬರೆದುವ ಸಣ್ಣ ಸೀರೆಯ ಕೊಡುವೆನೆಕಣ್ಣಿಗೆ ಪ್ರಿಯವಾದ ಕಮಲಮಯ ಕುಪ್ಪಸವ ಕರೆದು ಕೈಯಲಿ ಕೊಡುವೆÀನೆಬಿನ್ನಣದಿಂದಲಿ ಬಗೆಬಗೆಯಲಿ ನಿನಗೆ ಬಾಯಮುದ್ದನುವ ಕೊಡುವೆನೆ ಸಖಿಯೆ1 ತಳಿರು ಸುಳಿಗರೆವÀ ರುಮಾಲೆತÀಲೆಯಲ್ಲಿ ಸುತ್ತಿ ಬಾಹನ ಥಳಥಳಿಪ ನ-ವಿಲುಗರಿ ಮುತ್ತಿನ ತುರಾಯವ ಸಿಕ್ಕಿ ತರುಣಿ ನಿಲ್ಲಲಿ ಬಾಹೆನೆ ಸಖಿಯೆ 2 ಉರುಟಾಣೆ ಮುತ್ತುಗಳುಚಿತವಾಗಿವೆ ನಿನ್ನ ಉರುಟು ಕುಚಗಳ ಪಿಡಿವೆನೆಮುದದಿಂದ ನಿನ್ನ ಮುಖ ಕಿರುಬೆವರನೆಒರೆÀಸಿ ಕಸ್ತೂರಿತಿಲಕವನಿಡುವೆನೆಸಿರಿಯರಸ ಹಯವದನ ರಂಗನ ಚರಣವನು ನೆರೆನಂಬಿ ಭಜಿಸು ಸಖಿಯೆ ಸಖಿಯೆ3
--------------
ವಾದಿರಾಜ
ಮನೆಯೊಳಗಾಡೊ ಗೋವಿಂದ-ನೆರೆ-|ಮನೆಗಳಿಗೇಕೆ ಪೋಗುವೆಯೊ ಮುಕುಂದ ಪನೊಸಲಿಗೆ ತಿಲಕವನಿಡುವೆ-ಅಚ್ಚ-|ಹೊಸಬೆಣೆಯಿಕ್ಕಿ ಕಜ್ಜಾಯವ ಕೊಡುವೆ ||ಹಸನಾಧಾಭರಣಗಳಿಡುವೆ-ಚಿಕ್ಕ-|ಹಸುಳೆ ನಿನ್ನನು ನೋಡಿ ಸಂತೋಷಪಡುವೆ 1ಅಣ್ಣಯ್ಯ ಬಲರಾಮಸಹಿತ-ನೀ-|ನಿನ್ನೆಲ್ಲಿಯಾದರೂ ಆಡುವುದು ವಿಹಿತ ||ಹೆಣ್ಣುಗಳೇಕೋ ಸಂಗಾತ-ರಂಗ |ಬಿನ್ನಪಪರಿಪಾಲಿಸೊ ಜಗನ್ನಾಥ2ಜಾರನೆನಿಸಿಕೊಳಲೇಕೆ-ರಂಗ-|ಚೋರನೆನಿಸಿಕೊಂಬ ದೂರು ನಿನಗೇಕೆ ||ವಾರಿಜಾಕ್ಷಿಯರ ಕೂಡಲೇಕೆ-ನಮ್ಮ-|ಪುರಂದರವಿಠಲರಾಯ ಎಚ್ಚರಿಕೆ 3
--------------
ಪುರಂದರದಾಸರು