ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎದ್ದಳೀಗಿದಕೋ ಶ್ರೀರಮಣಿ || ಎದ್ದಳೀಗಿದಕೋ ಪ ಮುದ್ದು ಶ್ರೀ ಹರಿಯಾ ತೋಳ ತೆಕ್ಕೆಯಾನುಸಳಿ ಶುದ್ಧ ರಾತ್ರಿಲಿ ಹರಿ ರತಿಯೊಳು ಮಲಗಿ ಅ.ಪ. ಸರಸಿಜ ಸಖನ ಮುಂಬೆಳಗವ ಹರಿಯಲು | ಭರದಲಿ ಹಕ್ಕಿಯು ಕಲಕಲವೆನಲು 1 ನಾರದ ತುಂಬುರ ಮಾಡುವ ಪ್ರಾತ:| ಸ್ಮರಣೆಯ ಗಾಯನ ಧ್ವನಿಯನು ಕೇಳಿ 2 ಕರತಳದಲಿಯವಿಗಳನು - ವರೆಸುತಲಿ | ತೆರೆವುತ ಮುಚ್ಚುತ ಅರೆಗಣ್ಣ ನೋಟದಿ 3 ಬಾಯೊಳಗಿನ ತಂಬುಲವ ನುಗುಳುತ | ಅಧರ ವಕೆಂಪವ ನಡಗಿಸುತ 4 ಕಿರಿಬೆಮರವ ಕೊನೆ ಯುಗುರದಿ ಹಾರಿಸಿ | ಕುರುಳು ಗೂದಲು ಬೈತಲು ನೀಟಾಮಾಡುವ5 ಸಡಲಿದ ಅಲರ ಮುಡಿಯಾತಿದ್ದಿ ಬಿಗಿವುತಾ | ಒಡನೆ ಕೊರಳಾ ಭರಣವ ತಿರುಹುತಲಿ 6 ಎಡಬಲ ಕೊಲದ ವಡ್ಯಾಣ ಸರಿಸಿ ಉಟ್ಟಾ | ಉಡಿಗಿಯಾ ನಿರಯಾ ಮುಂದಕ sಸಾಂವರಿಸುತ7 ಪ್ರಕಟದಿದೋರ್ವ ಕುಚದ ನಖಕ್ಷತಗಳ | ಯುಕುತಿಲಿ ಅಡಗಿಸಿ ಪುಟವನು ಬಿಗಿವುತ 8 ತನ್ನನಂಬಿದ ಬಾಲರ ಹೊರಿಯಲುದಯ | ಕಮಠ ನ್ಯಾಯದಲಿ9 ಈರೇಳು ಜಗದ ಜೀವನ ಪಡೆದ ಜನನಿ | ಗುರುಮಹಿ ಪತಿಸುತ ಪ್ರಭುವಿನ ಅರಸಿ10
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಪತಿಭಕುತಿಯಿಲ್ಲದಿಹ ಸತಿಯ ಸಂಗವ್ರತಗೆಟ್ಟು ಸುಖ ಪಡೆಯಲಿಲ್ಲವೊ ರಂಗ ಪ.ಗಂಡ ಬಂದರೆ ಎದ್ದುನಿಲ್ಲದೆ ಆ ಕ್ಷಣದಿಕಂಡಾಡಿ ಏಕವಚನಂಗಳನಾಗಅಂಡಲೆದು ಮಾರ್ಮಲೆಂದು ಕಾಡಿಬೇಡುವ - ಇಂಥಭಂಡುದೊತ್ತಿನ ಕೂಟ ಏಳುನಾಗರ ಕಾಟ 1ಒಂದು ತಂದರೆ ಮನೆಗೆ ಹತ್ತಾಗಿ ಭಾವಿಸದೆತಂದರೆ ಹತ್ತು ಮನೆಯೊಳಗೊಂದ ಮಾಡಿಇಂದಿಗೆ ಇಲ್ಲವೆಂದು ಮುಖವ ತಿರುಹುತಲಿ ಮದದಿಂದ ಹೋಹಳು ನಾರಿ ಬಹು ದೊಡ್ಡಮಾರಿ2ಮಕ್ಕಳಿಗೆ ಇಡಲಿಲ್ಲ ಮರಿಗಳಿಗೆ ತುಡಲಿಲ್ಲಇಕ್ಕುವಡೆ ಬೆಳ್ಳಿ - ಬಂಗಾರವಿಲ್ಲಚಿಕ್ಕವಳು ನಾ ನಿನ್ನ ಕೈಪಿಡಿದು ಕೆಟ್ಟೆನೆಂಬಮೂರ್ಖ ತೊತ್ತಿನ ಸಂಗ ಕುಲಕೆಲ್ಲಭಂಗ3ತಾಯನು ಹೊರಡಿಸು ತಂದೆಯನು ತೆರಳಿಸುದಾಯಾದಿಯನು ಮನೆಯಲಿರಿಸಬೇಡಬಾಯಿನ್ನುಮನೆ ಕಟ್ಟಿ ಬೇರಿರುವ ನಾವೆಂಬಮಾಯಾಕಾತಿಯ ಸಂಗ ಅಭಿಮಾನಭಂಗ4ಇಷ್ಟನೆಲ್ಲವ ಬಿಟ್ಟು ಕೆಟ್ಟೆನೈ ನಾನಿಂದುಕಷ್ಟ ಸೆರೆಯೆನುವೆನೆ ಈ ಪರಿಯಲಿಸ್ಪಷ್ಟಿಗಾಧಿಕನಾದ ದಿಟ್ಟ ಶ್ರೀಪುರಂದರವಿಠಲ ಪಶ್ಚಿಮದ ರಂಗಧಾಮ 5
--------------
ಪುರಂದರದಾಸರು