ಒಟ್ಟು 3 ಕಡೆಗಳಲ್ಲಿ , 1 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಚ್ಚರಿಕೆ ಎಚ್ಚರಿಕೆ ಎಲೋ ದೇವ | ಎಚ್ಚರಿಕೆ ಎಚ್ಚರಿಕೆ | ಅಚ್ಚ ಕಲ್ಯಾಣ ಮೂರುತಿ ತಿರುವೆಂಗಳಾ ಪ ಅಜ ದ್ವಿಜಗಜ ಅಜಾಮಿಳ ಪರಿಪಾಲನೆಯಾ | ದ್ವಿಜ ರಾಜಾಂಗಾ ಗಂಗಜ ಭಕ್ತವರದನೆಯಾ | ಗಜ ಕುಜ ದನುಜ ಭೂ ಭುಜರ ಸಂಹಾರನೆಯಾ | ಪಂಕಜ ಹೃದಯಾರ್ಕನೆಯಾ1 ಪರಮೇಷ್ಠಿ ವಂದನೆಯಾ | ಶರಧಿ ತಾರಾ ಕರುಗಳ ಕಾಯಿದನೇಯಾ | ಎರಡೇಳು ಲೋಕ ಪೊರೆವಾ ಭಾರಣ ಹರಿಯಾ | ಶರಣು ಹೊಕ್ಕೆನು ಎನ್ನ ಮೊರೆ ವಿಚಾರಿಸೊಯಾ 2 ಜಯ ಜಯಾ ಚಿತ್ತಾವಾಧಾರು ಪರಾಕ್ರಮಯಾ | ಭಯ ನಿವಾರಣ ನಿಜ ಭಂಟರಿಗೆ ಬಂಟಯಾ | ನಯ ಮೂರುತಿ ನಮ್ಮ ವಿಜಯವಿಠ್ಠಲರೇಯಾ ಯಾ | ತ್ರಿಯಗುಣ ವಿರಹಿತ ಶೇಷಗಿರಿವಾಸಯಾ 3
--------------
ವಿಜಯದಾಸ
ನಿನ್ನ ಅರುಸುತನಕ್ಕೇನೆಂಬೆನೊ ವೆಂಕಟೇಶಾ ಘನ್ನಗಿರಿಯ ವಾಸ ಕಮಲಾಸನ ಜನಕ ತಿರುಮಲೇಶಾ ಪ ಹರುವ ಸರ್ಪಯಿರುವ ಚೋರ ಶರಧಿ ಉರೆವ ಕಿಚ್ಚು ಕರೆವ ಮೃತ್ಯು ಸುರಿವ ಮಳೆ ಬಿರುವನೆಲ್ಲ ಹೊಡೆವ ದೈತ್ಯಾ ತೊರೆವ ಸನ್ನ್ಯಾವ ಮೇರೆ ತಪ್ಪಿ ಭರದಿ ತನಗೆ ಇದಿರು ಬಂದವ ಕಾಣುತತಿ ಹರಿಯ ನಾಮ ಮುಟ್ಟುವ ದೇವ ಶ್ರೀನಿವಾಸಾ1 ಸೃಷ್ಟಿ ಜನರಿಗೊಂದು ಆಳು ಕೊಟ್ಟು ವೇಗದಿಂದ ಕರಿಯ ಲಟ್ಟಿದವರ ಕಾಣೆನಯ್ಯಾ ಎಷ್ಟೆಷ್ಟು ದೂರದಿಂದಲಿ ಕಟ್ಟಿಕೊಂಡು ಹೊನ್ನು ಹಣಗಳ ತಮಗೆ ತಾನೆ ಅಟ್ಟಹಾಸದಿಂದ ಮಂಗಳವ ಪಾಡಿ ಪೊರ ಮಟ್ಟ ಒಪ್ಪ ತಿರುವೆಂಗಳಾ2 ಹದಿನೆಂಟು ಜಾತಿಯವರು ಒದಗಿ ಮುದದಿಂದ ಕುಣಿದು ಪದೋಪದಿಗೆ ಹಾಡಿ ಪಾಡುತ ಹದುಳವಾದ ಪಂಚವಾದ್ಯ ಎದುರುನಿಂದು ಧ್ವನಿಯ ಮಾಡುತಾ ದಾಸರೆಂಬೊ ಅಟ್ಟಹಾಸದ ಮಾತು ನುಡಿಯುತ್ತ ನಿತ್ಯ ನಿನ್ನ ಮದುವೆಯೆಂದು ಸುಖವು ಸುರಿಯುತ್ತಾ 3 ಎಲ್ಲರಿಲ್ಲಿಗೆ ಬಂದರೇನು ಯಿಲ್ಲ ಪು ಣ್ಯಲೇಶ ಮಾತ್ರ ಸಲ್ಲದಯ್ಯಾ ಮುಕ್ತಿಗವರು ಇಲ್ಲೆ ಸುಖವು ಬಟ್ಟು ಕಡಿಗೆ ಎಲ್ಲೆಲ್ಲಿ ಜನಿಸಿ ಬಹು ಭವದ ಪಲ್ಲಡಿಯೊಳಗೆ ಜನಿಸಿ ಜ್ಞಾನ ವಿಲ್ಲದೆ ಸಲ್ಲುವರು ದುರಿತವ ವಹಿಸಿ 4 ಮನುಜರೆಣಿಕೆ ಏನು ಮತ್ತೆ ವನಜ ಸಂಭವ ಈಶ ಮುಖ್ಯ ಅನಿಮಿಷರೆಲ್ಲ ಬಂದು ಭಯದಿ ಮನಸಿನಲಿ ನಿನ್ನ ಅರಸುತನದ ಶೌರ್ಯ ಮಣಿದು ನಮಸ್ಕರಿಸುತಾ ವಾಲ್ಗೈಸುತಾ ಹೊಣಿಯೊ ವಿಜಯವಿಠ್ಠಲ ಎನುತಾ 5
--------------
ವಿಜಯದಾಸ
ವರ್ಣಿಸಲರಿಯೆ ನಿನ್ನ | ವರ್ಣಿಸಲರಿಯೆ ಗು | ಣಾರ್ಣವ ಹರಿಯೆ ಸೂ | ವರ್ಣ ಗಿರೀಶ ಸು | ಗಮನ ರಂಗಾ ಪ ಕುಂಡಲ ಮಿನುಗುವ ಹಸ್ತ ಕಂಕಣ ಬೆರಳುಂಗರ | ಕೌಸ್ತುಭ ಕಂಬು ಸೂದರು | ಶನ ಭುಜಕೀರ್ತಿ ಭೂ | ಷಣವಾದ ಶಿರ ಉರುವ ಒಪ್ಪಲು ಕಿಂ | ಕಿಣಿ ಕನಕಾಂಬರವ ಪೂಸಿದ ಗಂಧ | ಪುನುಗು ಜವ್ವಾದಿಯಿಂದೆಸೆವ ಸುರತರುವೆ 1 ಕಾಂಚಿದಾಮ ಥಳಿ | ಥಳಿಸುವ ಪದಕ ನ್ಯಾ | ತುಂಬಲು ಸೂಸುತಿರೆ ದಂತಾ | ಮಾತಾರಗಿಳಿಯಂತೆ ಶೋಭಿಸಿ | ಕಪೋಲ ಸುತ್ತಲು ಬೆಳಗುವ ಕಂಗಳ ನಾಸಕಾಂತಿ | ಸಿರಿ ತಿರುವೆಂಗಳಾ2 ಕಟಿ ಕರ ಎರಡೇಳು ಲೋಕ ಜಠರದೊಳಡಗಿರೆ | ಕರಿ ಪಲ್ಲಿನಂತೆ ಸುಂದರ ಜಂಘೆ ಗುಲ್ಫ ವಿ | ಪಾದ ನಖ ಪರಿ ಪರಿ ರೇಖೆಗಳ ಕಾಲಿಂದಿಗೆ | ನಿತ್ಯ ಮಂಗಳಾ 3 ನಿರಯ ತ್ತಮ ಜನ ಮನೋರಥ | ಗಮ ಸಿದ್ಧಾಂತನೆ ವಿ | ಕ್ರಮದಾನವ ಹರ | ಕೋಟಿ ಪ್ರಕಾಶಾ | ವೆಂಕಟೇಶಾ | ಅಪ್ರಾಕೃತ | ಪ್ರಮೆಯಭರಿತನಾದ | ಕುರುವಂಶ ವಿನಾಶಾ 4 ಭೂಗೋಳದೊಳಗಿದರಾಗಮ ತಿಳಿ | ದುರಗ ಗಿರಿ ಯಾತ್ರಿಗೆ | ಭೋಗದಾಶೆಯ ಬಿಟ್ಟು | ವೇಗದಿಂದಲಿ ನಿಜ | ಭವ ಸಾಗಿ ಬರಲು ಚನ್ನಾಗಿ ಜ್ಞಾನವ ನೀವುತ್ತ ಸಾಕುವಂಥ | ಶ್ರೀ ಗುರು ವಿಜಯವಿಠ್ಠಲ ಭಕ್ತರ ದಾತಾ5
--------------
ವಿಜಯದಾಸ