ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಡವನಿಗೆ ನಂಟರುಂಟೆ ಪೊಡವಿಯಲಿ ಬಲಿದನಿಗೆ ತಂಟೆಯುಂಟೆ ಪ ಬಡವನನು ಕಂಡರೆ ಮಡದಿಯರು ಜರಿವರು ಬಲಿದನನು ಕಂಡರೆ ಹಲ್ಲುಗಳ ಕಿರಿವರು ಅ.ಪ ಸಿರಿಯ ಪೊಂದಿದ ಮನುಜ ಜಗದಲಿ ಸರಿಯೆಂದು ಎನಿಸುವನು ಮರುಕವಿಲ್ಲದೆ ನರರು ಪರಿಪರಿ ಜರಿವರು 1 ಕಾಸು ಪೊಂದಿದ ನರನ ಪರಿ ಹಾಸವೆ ಬಲು ಸೊಗಸು ಕಾಸಿನ ಮದದಿಂದ ಲೇಸವೂ ಇಲ್ಲದೆ ಕ್ಲೇಶ ಪಡುವನ ಕಂಡು ಮೀಸೆಯ ತಿರುವುವರು2 ಕ್ರೂರನಾದರು ಧನಿಕ ಇವನನು ಸೇರಲು ಬಯಸುವರು ಭಾರಿ ನಡತೆ ಇದ್ದು ಸೇರದಿರಲು ಧನ ಯಾರು ಕಂಡರು ಇವನ ಮೋರೆ ತಿರುಗುವರು 3 ಧನವಿದ್ದರೆ ಜೋಕು ಜಗದೊಳು ಘನತೆ ಏತಕೆ ಬೇಕು ಕನಸಿನಲ್ಲಿಯು ಧನ ಕಾಣದ ಮನುಜನ ಘನತೆಯು ಜನಗಳ ಮನಕೆಂತು ತೋರುವುದು 4 ಮದನ ಜಗದಲಿ ಕಾಸಿಲ್ಲದವನು ದನ ಕೋಶ ಪೊಂದಿದವನು ಕೀಶನಾದರು ಪ್ರೇಮ ಪಾಶಕ್ಕೆ ಬೀಳಲು ಆಸೆಯಪಡುವರು 5 ಹಣವಿದ್ದ ಪುರುಷನನ್ನು ಧರಣಿಯೊಳ್ ಕೆಣಕಿ ಬದುಕಬಹುದೆ ಗುಣಶಾಲಿಯಾದರು ಋಣಗಾರ ನರನನು ಕುಣಿಸುತ್ತ ಕ್ಲೇಶಕೆ ಹೊಣೆಯ ಮಾಡುವರು 6 ಝಣಿಝಣಿಸುವ ಧನವ ಪೊಂದಿರೆ ತೃಣವಂತೆ ಜಗವೆಲ್ಲ ಪಣಿಯಲಿ ಬೊಮ್ಮನು ಹಣವ ಬರೆಯದಿರೆ ಅಣಿಯಾದ ಜ್ಞಾನಿಯು ಹೆಣದಂತಾಗುವನು 7 ಶುಂಠನಾದರು ಧನಿಕ ಇವನಿಗೆ ಉಂಟೆ ಜಗದಿ ಎದುರು ಗಂಟು ಇಲ್ಲದವನ ನೆಂಟರು ಜರಿವರು ಕುಂಟು ಎತ್ತಿನಂತೆ ಒಂಟಿಯಾಗುವನು 8 ಹೊನ್ನು ಜರಠ ನರಗೆ ಸುಲಭದಿ ಹೆಣ್ಣು ಒದಗಿಸುವುದು ಸೊನ್ನೆಯಾದರೆ ಧನ ಚಿನ್ನದಂತಿರುವಗೆ ಇನ್ನಾರು ಕಾಣೆ ಪ್ರಸನ್ನ ಹರಿಯೇ ಗತಿ9
--------------
ವಿದ್ಯಾಪ್ರಸನ್ನತೀರ್ಥರು
ಪರಾನ್ನವೇತಕೆ ಬಂತಯ್ಯ - ಎನಗೆಇಂದು |<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಪರಾನ್ನವೇತಕೆ ಬಂತಯ್ಯ ? ಪ.ಪರಾನ್ನವೇತಕೆ ಬಂತು ಪರಮೇಷ್ಟಿಜನಕನ |ಪರನೆಂದು ತಿಳಿಸದೆ ಪರಗತಿ ಕೆಡಿಸುವ ಅಪಸ್ನಾನ ಮಾಡಿಕೊಂಡು - ಕುಳಿತು ಬಹು |ಮೌನದಿಂದಿರಲೀಸದು ||ಶ್ರೀನಿವಾಸನ ಧ್ಯಾನಮಾಡದೆ ಮವಿದು |ತಾನೆ ಓಡುವದು ಶ್ವಾನನೋಪಾದಿಯಲಿ 1ಜಪವ ಮಾಡುವ ಕಾಲದಿ - ಕರೆಯ ಬರೆ |ವಿಪರೀತವಾಗುವುದು ||ಸ್ವಪನದಂತೆ ಪೊಳೆದು ನನ್ನ ಮನಕೆ ಬಲು |ಸುಪಥವ ತಪ್ಪಿಸಿ ಅಪಗತಿ ಕೊಡುವಂಥ 2ಪ್ರಸ್ಥದ ಮನೆಯೊಳಗೆ - ಕರೆಯದೆ ಪೋಗಿ |ಸ್ವಸ್ಥದಿ ಕುಳಿತುಕೊಂಡು ||ವಿಸ್ತಾರವಾಗಿ ಹರಟೆಯನೆ ಬಡಿದು ಪ್ರ |ಶಸ್ತವಾಯಿತು ಎಂದು ಮುಸ್ತಕ ತಿರುವುವ 3ಯಜಮಾನನು ಮಾಡದ - ಪಾಪಂಗಳ |ವ್ರಜವು ಅನ್ನದೊಳಿರಲು ||ದ್ವಿಜರು ಭುಂಜಿಸಲಾಗಿಅವರ ಉದರದೊಳು ||ನಿಜವಾಗಿ ಸೇರುವುದು ಸುಜನರು ಲಾಲಿಸಿ 4ಮಾಡಿದ ಮಹಾಪುಣ್ಯವು - ಓದನಕಾಗಿ - |ಕಾಡಿಗೊಪ್ಪಿಸಿ ಕೊಡುತ |ರೂಢಿಗಧಿಕನಾದ ಪುರಂದರವಿಠಲನ |ಪಾಡಿ ಪೊಗಳಿ ಕೊಂಡಾಡಿಕೊಂಡಿರದಂತೆ 5
--------------
ಪುರಂದರದಾಸರು