ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂದು ನೀ ನೀಡುವಿಯೊ ಮನಶಾಂತಿ ಗೋವಿಂದನೆ ಎನಗೆ ಒಂದೂ ತೋರದೆ ಕವಿದಿಹುದೊ ಭ್ರಾಂತಿ ಪ ಒಂದು ಘಳಿಗೆ ನಿನ್ನ ಪೊಗಳುವೆನೆಂದರೆ ಬಂದೊದಗುವುದೊ ಕುಂದು ಸಹಸ್ರವು ಅ.ಪ ಅನುದಿನ ಗಣನೆಗೆ ಬಾರದ ನುಡಿಗೆ ಕೊನೆಮೊದಲುಗಳಿಲ್ಲದೆ ದಿನಗಳು ಕಳೆದುವು ದುರ್ವಿಷಯದಲಿ ಎಣೆಯಿಲ್ಲದೆ ಎನ್ನ ಮನದಲಿ ಬೇಸರ ಜನಿಸಿ ಕೊರೆಯುತಿದೆ ಅನವರತದಿ ನಿನ್ನ ಮನನದಿ ನಲಿಯಲು 1 ಮರುಳು ಮೋಸಗಳಲಿ ಚತುರತೆಯುಳ್ಳ ದುರುಳರು ಸಂತತ ಮುಖ ವರಳುವ ತೆರದಲಿ ಸಡಗರದಿಂದ ಒರಲುವ ವಚನಗಳ ತಿರುಳುಗಳೆಲ್ಲವನರಿತು ಮನ ತೆರಳದೆ ಸಹಿಸುತ ನರಳುತಿರುವೆನೊ2 ಬಗೆ ಬಗೆ ಮಾಡುತಲಿರುವ ದುರಾಶೆಯಗಲಿದೆ ಮನವನ್ನು ಹಗರಣ ಮಾಡಿದೆನೋ ಜೀವನವ ನಗೆಗೀಡಾದೆನು ನಾ ಹಗೆ ಪಡ್ವರ್ಗವನೊಗೆದು ತವಚರಣ ಯುಗಳದಲಿ ಮನವು ಪ್ರಸನ್ನವಾಗುವಂತೆ 3
--------------
ವಿದ್ಯಾಪ್ರಸನ್ನತೀರ್ಥರು
ಪಂಕಜಾಸನ ವಂದ್ಯ | ವೆಂಕಟಾದ್ರಿ ವಿಠಲ ತವಕಿಂಕತನ ವಿತ್ತವಗೆ | ಸಂಕಟವ ಕಳೆಯೊ ಪ ಮಂಕುಹರಿಸುಜ್ಞಾನ | ದಂಕುರಕೆ ಮನಮಾಡಿಬಿಂಕದಿಂ ಪೊರೆಇವನ | ಅಕಳಂಕ ಮಹಿಮಾ ಅ.ಪ. ಸತ್ಯಶೌಚಾಚಾರ | ಕೃತ್ಯದಲಿ ಮನವಿರಿಸುನಿತ್ಯತವ ಮಹಿಮಗಳ | ಸುತ್ತಿಇರಲಿ ಇವಗೇನಿತ್ಯನೂತನ ಮಹಿಮ | ತತ್ವಗಳ ತಿಳಿಸುತ್ತಭೃತ್ಯವತ್ಸಲ ಕಾಯೋ | ಮೃತ್ಯುಹರದೇವಾ 1 ತತ್ವಾರ್ಥ ತಿರುಳುಗಳೆ | ಚಿತ್ರಿಸುವ ಕಲೆವೃದ್ಧಿವಿಸ್ತರೀಸಿವನಲ್ಲಿ | ನಿಸ್ತುಲಾತ್ಮಕನೇ |ಅರ್ಥಕಾಮಸುರೂಪ | ಪೊತ್ತುಪೊರೆಯುವ ದೇವಾಪ್ರತ್ಯೇಕ ಪ್ರಾರ್ಥನೆಯ | ಕೃತ್ಯವೇಕಿನ್ನು 2 ನಾನು ನನ್ನದು ಎಂಬ | ಹೀನಮತಿಕಳೆದಿನ್ನುನೀನು ನೀನೇ ಎಂಬ | ಜ್ಞಾನಮಹಬರಲೀ |ಪ್ರಾಣ ಪ್ರಾಣನೆ ಜಗ | ತ್ರಾಣನಹುದೆಂಬ ಸುಜ್ಞಾನ ಪಾಲಿಸಿ ಪೊರೆಯೋ | ಮನಿಮಧ್ವ ವರದಾ 3 ಮೀನಾಂಕ ಜನಕಾಮಾನಮೇಯಾನುಭವ | ಸಾನು ಕೂಲಿಸುವಕೋನೇರಿವಾಸ ಕಾರುಣ್ಯ | ತೋರಿವಗೇ4 ಗೋವತ್ಸದನಿ ಕೇಳಿ | ಆವುಧಾನಿಸುವಂತೆನೀವೊಲಿದು ಕಾಪಾಡು | ಬಾವುಕರ ಪಾಲಾ |ಪೂವಿಲ್ಲನಯ್ಯಗುರು | ಗೋವಿಂದ ವಿಠಲತವಪಾವನವ ಪದ ತೋರೆ | ಓವಿ ಪ್ರಾರ್ಥಿಸುವೆ 5
--------------
ಗುರುಗೋವಿಂದವಿಠಲರು