ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತತ್ವಚಿಂತನೆ ಅರಿಯಲಳವೇ ಜ್ಞಾನಿಯ ಹೊರಗಿನ ಬಡರೂಪದಿ ಪ ಧರೆಯು ಉದರದಿ ನೆಲಸಿಹ ಪರಿಪರಿ ವಿಧ ಸಿರಿಯನು ಅರಿವುದು ಬಲುಸುಲಭವೆ ಅ.ಪ ಹುಚ್ಚರಂದಿ ಕಾಂಬೋರು ಜನ ಮೆಚ್ಚಿಗೆಯನು ಬಯಸರು ಅಚ್ಚರಿಯಲಿ ನಡೆವರು ಎಚ್ಚರಿಕೆಯ ಪೊಂದದಂತೆ 1 ಒಡವೆ ವಸನಗಳೆಲ್ಲವ ಸಡಗರವನು ಅರಿಯರು ಕಡು ಬಡತನ ಕ್ಲೇಶಕೆ ನಡುಗಲರಿಯರು ಸುಲಭದಿ 2 ಮೇದಿನಿಯಲಿ ದಿನಗಳ ಮೋದದಿಂದಲಿ ಕಳೆವರು ಮಾಧವನಲಿ ಭಕುತರು ಬೂದಿ ಮುಚ್ಚಿದ ಕೆಂಡದಂತೆ 3 ಮರುಳು ಮೋಸವನರಿಯರು ಸರಳಮನದಲಿ ಇರುವರು ಕೆರಳಿದ ಸುಮದಂದದಿ ತಿರುಳುಗಳನು ಸುಲಭದಿ 4 ಭಕ್ತ ಪ್ರಸನ್ನನೊಳು ಆಸಕ್ತ ಸನ್ಮನ ಯುಕ್ತರು ಯುಕ್ತಿ ಚತುರತೆಯರಿಯರು ಹುತ್ತದೊಳಿಹ ಸರ್ಪದಂತೆ 5
--------------
ವಿದ್ಯಾಪ್ರಸನ್ನತೀರ್ಥರು
ಬಲ್ಲೆನೋ ಚಲ್ಲಾಟವ ಪ ಸಲ್ಲದೋ ಎನ್ನಲಿದೆಲ್ಲವು ಅ.ಪ ದುರುಳ ಕಂಸನಿಗಂಜಿ ಇರುಳು ಸಮಯದಲಿ ತೆರಳಿದ ನಿನ್ನಯ ತಿರುಳುಗಳನು 1 ಸಾಧು ಸುಧಾಮನ ಹಿಡಿಯವಲಕ್ಕಿಗೆ ಮೋದವ ಪೊಂದಿದ ಮಾದರಿಯನು 2 ಗಂಧದ ಲೋಭಕೆ ನಂದದಿ ಕುಬುಜೆಯ ಸುಂದರಿ ಮಾಡಿದ ಅಂದಗಳನು 3 ಕೋರಿಕೆ ಪೊಂದಿದ ಜಾರತನವ 4 ಹಟದಲೆ ಪಾರ್ಥಗೆ ಅನುಜೆ ಸುಭದ್ರೆಯ ಘಟಿಸಿದ ನಿನ್ನಯ ಕಪಟತನವ 5 ನಿನ್ನ ಭಕುತರೊಳು ಎನ್ನನು ಸೇರಿಸಿ ಮನ್ಮನವರಿತು ಪ್ರಸನ್ನ ನೀನಾಗೆಲೋ 6
--------------
ವಿದ್ಯಾಪ್ರಸನ್ನತೀರ್ಥರು