ಒಟ್ಟು 4 ಕಡೆಗಳಲ್ಲಿ , 2 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತಿರುದುಂಬುವ ನೀನು ತಿರುಮಲೇಶಾ ಮರುಗಲ್ಯಾತಕೆ ಇನ್ನು ಮನಸಿನೊಳಗೆ ಪ್ರತಿದಿನವು ಪ ಬಲಿರಾಯ ಬಲು ದಾನವನು ಮಾಡುತಿರಲಾಗಿ ಇಳಿಯ ಸುರÀವೇಷವನು ಧರಿಸಿ ಪೋಗಿ ಹಲುಬಿ ಬಾಯಿದೆರದು ತ್ರಿಪಾದ ತಿರಕೆ ಕೊಂಡು ನಿಗಮ ಕುಲದಾತಾರಾ 1 ಗೋಪಳ್ಳಿಯಲಿ ಜನಿಸಿ ಗೋವುಗಳ ಕಾವುತ್ತ ಗೋಪಾಲತತಿ ವಡನೆ ವಡನಾಡುತ ತಾಪಸರು ಯಜ್ಞ ಕರ್ಮಾದಿಗಳು ಮಾಡುತಿರೆ ಶ್ರೀಪತಿ ಅನ್ನ ತಿರಿದುಂಡು ಕ್ಷುದಿಯನ್ನ ಕಳೆದೆ 2 ಅಂದು ಈ ಪರಿಯ ಯಾಚಕ ವೃತ್ತಿಯನು ಮಾಡಿ ಇಂದೆನ್ನ ಹೃತ್ಕಮಲದೊಳಗೆ ಬಂದೂ ನಿಂದು ಮನೆಮನೆ ತಿರದುಂಬುವ ನೀನಲ್ಲವೆ ಸಂದೇಹವೇಕೆ ಎನಗೆ ವಿಜಯವಿಠ್ಠಲರೇಯಾ 3
--------------
ವಿಜಯದಾಸ
ದಯವಿರಲಿ ಎನ್ನಲ್ಲಿ ಧರಣಿಧರನೆ ಭಯಗಳನು ಪೋಗಾಡು ಭಕ್ತಜನ ಪ್ರೀಯಾ ಪ ಎರಗಿಸುವದು ಚರಣದಲಿ ಶಿರಸು ಎರಗಲಿ ನಿನ್ನ ಧ್ಯಾನದಲಿ ಮನಸು ಎರವೆರವು ಮಾಡದಲೆ ನಿನ್ನ ನಾಮಾಮೃತವ ಎರದು ಸಾಕುವದು ಸಂತತ ಎನ್ನ ಬಿಡದೆ 1 ಮತಿಗೆಟ್ಟ ಮಾನವಗೆ ಗತಿ ನೀನೆ ಆವಾವಾ ಶ್ರುತಿಗಳೊಳು ಪೇಳುತಿದೆ ವರದೊರದೂ ಕ್ಷಿತಿಯೊಳಗೆ ರವಿ ಶಶಿಯ ಗತಿ ತಪ್ಪಿದರೇನು ಪತಿತ ಪಾವನ ನಿನ್ನ ಕೃಪೆಗೆ ಎಣೆಗಾಣೆ 2 ಕೊಡುವಲ್ಲಿ ಕೊಳುವಲ್ಲಿ ಯಡಿಯಡಿಗೆ ಭಕುತಿರಸ ಕುಡಿಸುವಲಿ ಕಲಕಾಲ ಸಂತೋಷವ ಬಡಿಸಿ ಪೊರೆವಲ್ಲಿ ನಿನಗಾವಲ್ಲಿ ಸರಿಗಾಣೆ ಸಿರಿ ವಿಜಯವಿಠ್ಠಲ ತಿರುಮಲೇಶಾ 3
--------------
ವಿಜಯದಾಸ
ನಿನ್ನ ಅರುಸುತನಕ್ಕೇನೆಂಬೆನೊ ವೆಂಕಟೇಶಾ ಘನ್ನಗಿರಿಯ ವಾಸ ಕಮಲಾಸನ ಜನಕ ತಿರುಮಲೇಶಾ ಪ ಹರುವ ಸರ್ಪಯಿರುವ ಚೋರ ಶರಧಿ ಉರೆವ ಕಿಚ್ಚು ಕರೆವ ಮೃತ್ಯು ಸುರಿವ ಮಳೆ ಬಿರುವನೆಲ್ಲ ಹೊಡೆವ ದೈತ್ಯಾ ತೊರೆವ ಸನ್ನ್ಯಾವ ಮೇರೆ ತಪ್ಪಿ ಭರದಿ ತನಗೆ ಇದಿರು ಬಂದವ ಕಾಣುತತಿ ಹರಿಯ ನಾಮ ಮುಟ್ಟುವ ದೇವ ಶ್ರೀನಿವಾಸಾ1 ಸೃಷ್ಟಿ ಜನರಿಗೊಂದು ಆಳು ಕೊಟ್ಟು ವೇಗದಿಂದ ಕರಿಯ ಲಟ್ಟಿದವರ ಕಾಣೆನಯ್ಯಾ ಎಷ್ಟೆಷ್ಟು ದೂರದಿಂದಲಿ ಕಟ್ಟಿಕೊಂಡು ಹೊನ್ನು ಹಣಗಳ ತಮಗೆ ತಾನೆ ಅಟ್ಟಹಾಸದಿಂದ ಮಂಗಳವ ಪಾಡಿ ಪೊರ ಮಟ್ಟ ಒಪ್ಪ ತಿರುವೆಂಗಳಾ2 ಹದಿನೆಂಟು ಜಾತಿಯವರು ಒದಗಿ ಮುದದಿಂದ ಕುಣಿದು ಪದೋಪದಿಗೆ ಹಾಡಿ ಪಾಡುತ ಹದುಳವಾದ ಪಂಚವಾದ್ಯ ಎದುರುನಿಂದು ಧ್ವನಿಯ ಮಾಡುತಾ ದಾಸರೆಂಬೊ ಅಟ್ಟಹಾಸದ ಮಾತು ನುಡಿಯುತ್ತ ನಿತ್ಯ ನಿನ್ನ ಮದುವೆಯೆಂದು ಸುಖವು ಸುರಿಯುತ್ತಾ 3 ಎಲ್ಲರಿಲ್ಲಿಗೆ ಬಂದರೇನು ಯಿಲ್ಲ ಪು ಣ್ಯಲೇಶ ಮಾತ್ರ ಸಲ್ಲದಯ್ಯಾ ಮುಕ್ತಿಗವರು ಇಲ್ಲೆ ಸುಖವು ಬಟ್ಟು ಕಡಿಗೆ ಎಲ್ಲೆಲ್ಲಿ ಜನಿಸಿ ಬಹು ಭವದ ಪಲ್ಲಡಿಯೊಳಗೆ ಜನಿಸಿ ಜ್ಞಾನ ವಿಲ್ಲದೆ ಸಲ್ಲುವರು ದುರಿತವ ವಹಿಸಿ 4 ಮನುಜರೆಣಿಕೆ ಏನು ಮತ್ತೆ ವನಜ ಸಂಭವ ಈಶ ಮುಖ್ಯ ಅನಿಮಿಷರೆಲ್ಲ ಬಂದು ಭಯದಿ ಮನಸಿನಲಿ ನಿನ್ನ ಅರಸುತನದ ಶೌರ್ಯ ಮಣಿದು ನಮಸ್ಕರಿಸುತಾ ವಾಲ್ಗೈಸುತಾ ಹೊಣಿಯೊ ವಿಜಯವಿಠ್ಠಲ ಎನುತಾ 5
--------------
ವಿಜಯದಾಸ
ರಂಗನಾಥನ್ನ ಈ ಕಂಗಳಿಂದಲಿ ಕಂಡು ಹಿಂಡು ಪ. ಮಂಗಳಾತ್ಮಕ ದೇವ ಮಮ ಸ್ವಾಮಿ ಸಲಹೆಂದು ಅಂಘ್ರಿಗಳಿಗೆರಗಿ ನುತಿಪೇ ಸ್ತುತಿಪೇ ಅ. ಮಾಂಡವ್ಯರಿಗೆ ವಲಿದು ಶ್ರೀನಿಕೇತನ ದೇವ ಗಂಡಕೀಶಿಲೆ ರೂಪದಲ್ಲಿ ಅಂಡಜವಾಹನನು ಉದ್ಭವಿಸಿ ಸ್ವರ್ಣಾದ್ರಿ ಎಂಬ ಸುಕ್ಷೇತ್ರದಲ್ಲೀ ಹಿಂಡುಭಕ್ತರ ಸೇವೆ ಕೈಯಕೊಳುತ ಬದಿಯಲ್ಲಿ ನಿಂದು ವಿಗ್ರಹ ರೂಪದಲ್ಲೀ ಕಂಡು ಪುಳಕಾಂಕಿತದಿ ಕರುಣ ಮೂರ್ತಿಯ ನುತಿಸಿ ಕೊಂಡಾಡಿ ದಣಿದೆ ನಿಂದೂ ಇಂದೂ 1 ಶಂಖಚಕ್ರಾಂಕಿತದ ಚತುರ್ಭಜವು ಶ್ರೀವತ್ಸ ಪಂಕಜಾಕ್ಷಿಯರುಭಯದಿ ಶಂಕೆಯಿಲ್ಲದ ಭಕ್ತರಿಗೆ ವಲಿವ ಸೌಂದರ್ಯಾ ಲಂಕಾರ ಉಡಿಗೆ ಮುದದಿ ಪಂಕಜಾಸನ ಮುಖ್ಯದಿವಿಜಗಣ ಸೇವಿತನು ಕಿಂಕರರಿಗೊಲಿವ ದಯದೀ ವಂಖಿ ಬಾಪುರಿ ತೋಳು ಕಡಗ ಕಾಲ್ಗೆಜ್ಜೆಗಳು ಕಂಕಣ ಕಿರೀಟ ನಿಟ್ಟಾ ದಿಟ್ಟಾ 2 ಆಗಮವ ಅಜಗಿತ್ತು ಸುರರಿಗಮೃತವಿತ್ತು ಭೂದೇವಿ ಭಯ ಬಿಡಿಸಿದಾ ಬೇಗ ಕಂಬದಿ ಬಂದು ಮಗುವ ರಕ್ಷಿಸಿ ಬಲಿಯ ಯಾಗದಲ್ಲಿ ಭೂ ಬೇಡಿದಾ ನೀಗಿ ಕ್ಷತ್ರಿಯ ಕುಲ ದಶಶಿರಿನ ಸಂಹರಿಸಿ ಮಾಗಧನ ಬಲವ ಮುರಿದಾ ಅಂಬರ ಕಲ್ಕಿ ಗೋಪಾಲಕೃಷ್ಣವಿಠಲಾ ಮಾಗಡಿ ತಿರುಮಲೇಶಾ ಶ್ರೀಶಾ 3
--------------
ಅಂಬಾಬಾಯಿ