ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಾಮ ಧರಿಸಿಹೆಯಾ ಮೂರು ನಾಮ ಧರಿಸಿಹೆಯಾ ಶ್ರೀನಿವಾಸ ಪ. ನೀನೆ ಕರ್ತನೆಂದಾ ಮನುಜರಿಗೆಲ್ಲಾ ನಾನೆ ಸಲಹುವೆನೆಂಬ ಬಿರುದಿನ ಮೂರು ಅ.ಪ. ಅಂಬೆಯ ವಕ್ಷದಿ ಇಂಬಿನೊಳಿಟ್ಟು ಸಂಭ್ರಮದೊಳು ಕುಡಿ ನೋಟದಿಂದಾ ಅಂಬುಜಾಕ್ಷ ಬಡವರ ಧನ ಸೆಳೆಯುತ್ತವರ ಬೆಂಬಿಡದೆ ಕಾವೆನೆಂಬ ಬಿರುದ 1 ಸಿರಿ ಅರಸಾನೆಂಬೊ ಬಿರುದು ಥರವೇ ನಿನಗೆ ಹೊರವೊಳಗಿದ್ದು ಜನವ ನಂಬಿಸಿ ಥರಥರದಾಭರಣ ಸುಲಿಗೆಯಗೊಂಬ ತಿರುಪತಿ ತಿರುಮಲರಾಯ ದೊರೆ 2 ನಿನ್ನ ಧ್ಯಾನ ಮಾಳ್ಪ ಭಕ್ತರು ಬಲೆಗೆ ಸಿಕ್ಕುವರೇನೊ ನಿನ್ನ ಪಾದಧ್ಯಾನವನ್ನೆ ಬಯಸುತ್ತ ನಿನ್ನನೆ ಭಕ್ತಪಾಶದಿ ಕಟ್ಟಿ 3 ಚಾರು ಮುಖನೆ ವಂದ್ಯ ನಿನ್ನ ಹಾರೈಸುವ ಭಕ್ತರ ವೃಂದ ಹಾರ ಹಾಕಿ ಮನ ಸೂರೆ ಕೊಟ್ಟ 4 ಭಕ್ತರ ಕಟ್ಟಿಗೆ ಸಿಕ್ಕಬೇಕಲ್ಲದೆ ಭಕ್ತವತ್ಸಲನೆಂಬೊ ಬಿರುದಿಟ್ಟ ಕಾರಣವೇಕೊ ಯುಕ್ತಿಲಿ ನಿನ್ನ ನೆನೆದು ಸಿಕ್ಕಿಸೀ ಭವ ಕಷ್ಟಕಳೆವರೊ ಶ್ರೀ ಶ್ರೀನಿವಾಸ ನಿನ್ನ ಭಕ್ತರಿಷ್ಟಾ 5
--------------
ಸರಸ್ವತಿ ಬಾಯಿ
ನಾರಾಯಣಾದ್ರಿ ಕೃತವಾಸ ಶರಣು ತೋರಯ್ಯ ತವರೂಪ ರವಿಕೋಟಿಭಾಸ ಪ ಆನತಜನಾಪ್ತ ನೀನೆಂಬೋ ನುಡಿಕೇಳಿ ಮಿಗೆ ಸಾನುರಾಗದಲಿ ನಡೆತಂದೆ ನಿನ್ನ ಬಳಿಗೆ ಮಿನಾಂಕಜನಕ ತವಪದಯುಗಾರ್ಚನೆ ಹೀಗೆ ಜ್ಞಾನ ಪೂರ್ವಕದಿಂದಲೆನಗೆ ದಯದಿ ಪಾನೀಯಜಾಂಬಕನೆ ಪೊರೆಯೆಂದೆ ನಿನಗೆ 1 ವಾಸುಕೀ ತಪಕೆ ಸಲೆಮೆಚ್ಚಿ ಗಿರಿಯಲಿ ನಿಂದೆ ಆ ಸಲಿಲದೊಳು ಮಿಂದು ಕರಿವರ ಕರೆಯೆ ಬಂದೆ ಸ್ವಾಮಿ ವಾಸವಾತ್ಮಜನು ಬಿನ್ನೈಸೆ ನಿನ್ನಯ ಮುಂದೆ ಆ ಸಮರದೊಳಗೊಲಿವನೆಂದೆ ನಿನಗೆ ಪಾಸಟಿ ಯಾರು ನೀರಜಭವನ ತಂದೆ 2 ಸುರರು ನಿನ್ನ ಮಹಿಮಾತಿಶಯ ಬಗೆಯನರಿಯಳು ಲಕುಮಿ ಬದರ ಸನ್ನಿಭಕಾಯ ಮಾನವ ತಿಳಿವನೆನೋ ತಿರುಮಲರಾಯ ಖಗÀರಾಜಗಮನ ಕಮನೀಯ ಪಾಹಿ ಜಗನ್ನಾಥವಿಠಲ ವಿಗತಾಘ ಕವಿಗೇಯ 3
--------------
ಜಗನ್ನಾಥದಾಸರು
ನಿನ್ನ ದರುಶನಕೆ ಬಂದವನಲ್ಲವೊ ಪುಣ್ಯವಂತರ ದಿವ್ಯ ಚರಣ ನೋಡಲಿ ಬಂದೆ ಪ ಎಲ್ಲೆಲ್ಲಿ ನಿನ್ನ ವ್ಯಾಪ್ತತನವಿರಲಿಕ್ಕೆ ಇಲ್ಲಿಗೆ ಬರುವ ಕಾರಣವಾವುದೊ ಸೊಲ್ಲಿಗೆ ಕಂಭದಲಿ ತೋರಿದ ಮಹಾಮಹಿಮ ಅಲ್ಲಿ ಇಲ್ಲೇನಯ್ಯ ಬಲ್ಲ ಭಜಕರಿಗೆ1 ಕರೆದಾಗಲೆ ಓಡಿ ಬಂದೊದಗುವ ಸ್ವಾಮಿ ಮರಳಿ ಗಾವುದ ಎಣಿಸಿ ಬರಲ್ಯಾತಕೊ ನೆರೆ ನಂಬಿದವರಿಗೆ ಆವಲ್ಲಾದರೇನು ಅರಿದವರ ಮನದೊಳಗೆ ನಿಂದಾಡುವ ಚಂದವಾ 2 ಕಠಿನವೊ ನಿನ್ನ ಭಕುತರನ ನೋಡುವ ಲಾಭ ಸಟೆಯಲ್ಲಾ ವೇದಗಳು ಸಾರುತಿವಕೊ ವಟು ಮೊದಲಾದ ವೈಷ್ಣವಾಗ್ರೇಸರಂಘ್ರಿ ತ್ರಿಟಿಯಾದರೂ ಎನಗೆ ಸೋಕಲು ಗತಿಗೆ ದಾರಿ3 ಧ್ಯಾನಕ್ಕೆ ಸಿಲುಕುವನೆ ನಿನ್ನ ಕಾಣಲಿಬಹುದು ಜ್ಞಾನಿಗಳು ಎಂತು ಬರುವರೊ ಅಲ್ಲಿಗೆ ಅನಂತ ಜನುಮದಲ್ಲಿ ಜಪ ತಪ ಹೋಮ ವ್ರತ ಏನೇನು ಮಾಡಿದರು ಇಷ್ಟು ಜನ ಕೂಡುವದೇ4 ನೀನಿದ್ದ ಸ್ಥಾನದಲಿ ಸಕಲ ಪುಣ್ಯಕ್ಷೇತ್ರ ನೀನಿದ್ದ ಸ್ಥಾನದಲಿ ಸರ್ವತೀರ್ಥ ನೀನಿದ್ದ ಸ್ಥಾನದಲಿ ಸಮಸ್ತ ತಾತ್ವಿಕರು ನಾನಿತ್ತ ಬರುವುದು ನಿನಗೆ ತಿಳಿಯದೆ ಸ್ವಾಮಿ5 ಇದನೆ ಲಾಲಿಸು ಜೀಯಾ ನಿನ್ನದೊಂದೇ ಮೂರ್ತಿ ನಿದರುಶನವಲ್ಲದೆ ಮಿಗಿಲಾವುದೊ ಪದೋಪದಿಗೆ ಮಧ್ವಮತ ಹೊಂದಿದ ಸುಜನರ ಹೃದಯದೊಳಗಾನಂತಪರಿ ನಿನ್ನ ರೂಪಗಳು 6 ಭಳಿರೆ ತಿರುಮಲರಾಯ ನಿನ್ನ ಕರುಣಾ ರಸಕೆ ವೊಲಿದು ಭಕುತರಿಗಾಗಿ ಮದುವೆ ಹಮ್ಮಿಕೊಂಡೆ ಸುಲಭ ದೇವರದೇವ ವಿಜಯವಿಠ್ಠಲ ವೆಂಕಟಾ7
--------------
ವಿಜಯದಾಸ
ಏನೆಂದರೇನು ನೀನೆನ್ನ ಕಾಯೊ-|ನೀನೆ ನನಗೆಂದೆಂದು ತಂದೆ-ತಾಯೊ....................... ಪಆಪತ್ತು ಕಾಲಕ್ಕೆ ಅನಂತ ನೀ ಕಾಯೊ |ತಾಪಜ್ವರಕೆ ತ್ರಿವಿಕ್ರಮನೆ ಕಾಯೋ ||ಭೂಪತಿಯು ಮುನಿದರೆ ಶ್ರೀಪತಿಯೆ ನೀ ಕಾಯೊ |ವ್ಯಾಪಾರ ಧರ್ಮವನು ಯದುಪತಿಯೆ ನೀ ಕಾಯೊ.............. 1ಸರುಪ ಸುತ್ತಿದರೆ ಸರ್ವೋತ್ತಮನೆ ನೀ ಕಾಯೊ |ಪರಿಪರಿಯ ದೋಷಗಳಪದ್ಮನಾಭಕಾಯೊ ||ಹರಕು ಸಂಸಾರವನುಹರಿಬಂದು ನೀ ಕಾಯೊ |ದೊರಕದೀ ವೇಳೆಯಲಿ ದೊರೆ ನೀನೆ ಕಾಯೊ....................... 2ನರರು ಮುನಿದಿರಲು ನಾರಾಯಣನೆ ನೀ ಕಾಯೊ |ಪುರಬೆನ್ನುಗೊಳಲು ಪುರುಷೋತ್ತಮನೆ ನೀ ಕಾಯೊ |ಅರಿಯು ಅಡ್ಡಾದರೆ ಅಚ್ಯುತನೆ ನೀ ಕಾಯೊ ||ಕರಕರೆಯ ಸಂಸಾರ ಕೃಷ್ಣ ನೀ ಕಾಯೊ....................... 3ಮದಮತ್ಸರವನು ಮಧುಸೂದನನೆ ನೀ ಕಾಯೊ |ಮದಬಂದ ವೇಳೆಯಲಿ ಮಾಧವನೆ ಕಾಯೊ ||ಹೃದಯದಾ ಕಪಟವ ಹೃಷಿಕೇಶ ನೀ ಕಾಯೊ |ಒದಗಿದ ಕಲ್ಮಷವ ವಾಸದೇವ ಕಾಯೊ....................... 4ಕಾರ್ಪಣ್ಯ ದೋಷವ ಸರ್ಪಶಯನನೆ ಕಾಯೊ |ಒಪ್ಪುವ ಪ್ರಕಾಶವ ಕೇಶವನೆ ಕಾಯೊ |ಅಪ್ಪ ತಿರುಮಲರಾಯ ಪುರಂದರವಿಠಲನೆ |ಒಪ್ಪಿಅನವರತನಿಶ್ಚಿಂತೆಯನು ಕಾಯೊ.......................*5
--------------
ಪುರಂದರದಾಸರು