ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತಿರುಮಣಿ ಧರಿಸಿದ ತೀರ್ಥರ ಕಂಡರೆ ತಿರುವಡಿಗಳಿಗೇ ಮಣಿಯುವುದು ಪ ಗುರುತರ ಶ್ರೀಪಾದತೀರ್ಥಸೇವನ ದುರಿತ ಹರವು ತಾ ಪಾವನವು ಅ.ಪ ದೇವರ ಕಡೆಯವರಿವರೆಂದೆನ್ನುತ ಕಾವನ ಕತೆಗಳ ಕೇಳುವುದು ಭಾವಿಸಿ ಭಾಗವತರ ಸಹವಾಸವು ಶ್ರೀವರನೊಲಿಯುವ ಕಾರಣವು1 ಇವರ ದರ್ಶನವು ಪುಣ್ಯಪ್ರದವು ಪವಿತ್ರರಿರುವೆಡೆ ವೈಕುಂಠ ಭುವಿಸುರಪೂಜನ ಹರಿಗಾನಂದವು ಸುವಿಮಲ ಚರಿತರು ಶುಭಕರರು 2 ಶಂಖ ಚಕ್ರಗಳ ಭುಜದಲಿ ಧರಿಸಿ ಪಂಕಜ ತುಳಸೀಮಣಿ ಕೊರಳೊಳ್ ವೇಂಕಟ ಶ್ರೀರಂಗ ವರದ ನಾರಾಯಣ ಕಿಂಕರರೈ ಜಾಜೀಶನಿಗೆ 3
--------------
ಶಾಮಶರ್ಮರು
ಮಾವಿನಕೆರೆ 4 ನೀನಿಲ್ಲದೆನಗಾರೋ ಮಾಂಗಿರಿಯ ರಂಗ ಪ ಮಾನಾಪಮಾನಕ್ಕೆ ಹೊಣೆಗಾರ ರಂಗಾ ಅ.ಪ ಗಿರಿಯೊಳಗೆ ವಾಸಿಸುವೆ ನರರ ಗೋಜೆನಗೇಕೆ ನರರ ನೇತ್ರಂಗಳಿಗೆ ಹರನಂತೆ ಕಾಂಬೇ ಧರೆಯೊಳಗೆ ವಾಸಿಸುವರಾರ ಹಂಗೆನಗಿಲ್ಲ ಕೊರತೆಯೇ ಎನಗಿಲ್ಲವೆಂದರಿಯಬೇಡಾ 1 ಗಿಯಾದರೇನಯ್ಯ ಸುರಲೋಕಕದು ಪೂಜ್ಯ ಹರನಾದಡೇನಯ್ಯ ಹರಗೆ ಪಿತನೀನು ನರರ ಹಂಗೇಕಿಲ್ಲ ಗಿರಿಯನೇರುವ ಭಕ್ತ [ಜ] ನರಅಂಜಿಟ್ಟಾ ಹರಕೆಗಳು ಸಾಲವೇ ರಂಗ 2 ಶಾಮಜೋಯಿಸ ನಿನ್ನ ಸೋಮಧರನೆಂಬರಿಗೆ ವಿಭೂತಿ ಅಕ್ಷತೆಯ ನೀಡುವಾ ಸೋಮಸುಂದರ ನಮ್ಮ ಮಾಂಗಿರಿಯ ರಂಗಯ್ಯ ಸ್ತೋಮ ಜನಗಳಿಗದು ತಿರುಮಣಿಯೂ ಜೀಯ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಮುಟ್ಟಬೇಡ ಮುಟ್ಟಬೇಡ ಮುರಹರನ ದಾಸರನು ಪ ಕಟ್ಟು ಮಾಡಿದ ಯಮನು ತನ್ನ ದೂತರಿಗೆಅ ತಿರುಮಣಿ ತಿರುಚೂರ್ಣ ಶೃಂಗಾರ ಧರಿಸುವರಸಿರಿತುಳಸಿ ವನಮಾಲೆಯಿಂದೊಪ್ಪುವವರತಿರುಮಂತ್ರ ತೀರ್ಥಪ್ರಸಾದಕೊಳಗಾದವರತಿರುಪತಿ ಯಾತ್ರೆಯನು ಮಾಡುವ ಮಹಾತ್ಮರ 1 ಬಡವರಾಗಲಿ ಭಾಗ್ಯವಂತರಾಗಲಿ ಅವರುಕಡು ಕರ್ಮಿ ಘೋರಪಾತಕರಾಗಲಿನಡೆನುಡಿಗೆ ಮಾಧವನ ಬಿಡದೆ ಕೊಂಡಾಡುವರಗೊಡವೆ ಬೇಡೆಂದು ಯಮಧರ್ಮ ಸಾರಿದನು 2 ವಾಸುದೇವನ ವಾಸರವನಾಚರಿಸುವವರಬೇಸರಿಸದೆ ಹರಿಪ್ರಸಂಗ ಮಾಳ್ಪವರಶೇಷಶಯನ ಕಾಗಿನೆಲೆಯಾದಿಕೇಶವನದಾಸಾನುದಾಸರಿಗೆ ದಾಸರಾದವರ3
--------------
ಕನಕದಾಸ
ಕಂಡೆ ತಿರುಪತಿ ವೆಂಕಟೇಶನಕಾರಣಾತ್ಮಕಸಾರ್ವಭೌಮನಕಾಮಿತಾರ್ಥವನೀವ ದೇವನ ಕರುಣನಿಧಿಯೆಂದೆನಿಸಿ ಮೆರೆವನ ಪಕೋಟಿ ಸೂರ್ಯ ಪ್ರಕಾಶವೆನಿಪ ಕಿರೀಟವನು ಮಸ್ತಕದಿ ಕಂಡೆನುನೋಟಕ್ಕಚ್ಚರಿಯೆನಿಪ ನಗೆಮೊಗನೊಸಲೊಳಗೆ ತಿರುಮಣಿಯ ಕಂಡೆನುಸಾಟಿಯಿಲ್ಲದ ಶಂಖ-ಚಕ್ರವ ಚತುರ ಹಸ್ತದಲೀಗ ಕಂಡೆನುಬೂಟಕದ ಮಾತಲ್ಲ ಕೇಳಿ-ಭೂರಿದೈವದ ಗಂಡನಂಘ್ರಿಯ 1ತಪ್ಪುಗಾಣಿಕೆ ಕಪ್ಪುಗಳನು ಸಪ್ತಲೋಕಗಳಿಂದ ತರಿಸುವಉಪ್ಪು ವೋಗರವನ್ನು ಮಾರಿಸಿಉಚಿತದಿಂದಲಿ ಹಣವ ಗಳಿಸುವ ||ಇಪ್ಪತ್ತು ದುಡ್ಡಿಗೆ ಸೇರು ತೀರ್ಥವ ಒಪ್ಪದಿಂದಕ್ರಯ ಮಾಡಿ ಕೊಡಿಸುವಸರ್ಪಶಯನನ ಸಾರ್ವಭೌಮನ ಅಪ್ಪವೆಂಕಟರಮಣನಂಘ್ರಿಯ 2ಉರದಿ ಶ್ರೀದೇವಿ ಇರಲು ಕಂಡೆನುಉನ್ನತದ ಕೌಸ್ತುಭವ ಕಂಡೆನುಗರುಡಕಿನ್ನರನಾರದಾದಿಗಳಿರಲು ಎಡಬಲದಲ್ಲಿ ಕಂಡೆನು ||ತರತರದಿ ಭಕ್ತರಿಗೆ ವರಗಳ ಕರೆದುಕೊಡುವುದ ನಾನು ಕಂಡೆನುಶರಧಿಶಯನನ ಶೇಷಗಿರಿವರಸಿರಿಪುರಂದರವಿಠಲನಂಘ್ರಿಯ3
--------------
ಪುರಂದರದಾಸರು