ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬೆಳಗುವಿರಿ ನೋಡೆ ದೇವಕುವರರಂತಿಹಿರಿ ಧೀರ ಗಂಭೀರತರ ಭಾವ ತೋರ್ಪುದು ಮುಖದಿ ನಾರು ವಸ್ತ್ರವ ಧರಿಸಿ ತಿರುಗುವಿರಿ ವನದಿ 1 ಕಂದರ್ಪನನು ಪೋಲ್ವ ಕಮನೀಯ ವಿಗ್ರಹರು ವೈರಿ ನಿಗ್ರಹರು | ಪುಟಕ್ಕಿಟ್ಟ ಚಿನ್ನದಂತೆ ಕಾಂತಿರಂಜಿತರು ಪಟುತರಂಗರು ಗಹನವಿಟದಿ ಪರಿವ್ರಾಜಕರು 2 ಆಜಾನುಬಾಹುಗಳು ಆಜಾನು ಜಂಘಗಳು ಆ ಜಟ ಮಂಡಲವು ರಾಜಿಸುತಲಿಹವು ದೃಢವಾದ ನಿಮ್ಮಡಿಗಳಿಡುವ ಧ್ವನಿಗಳ ಕೇಳಿ ಅಡವಿಯೊಡತನ ಪಡೆದ ಸಿಂಹಗಳು ನಡುಗುವುವು 3 ಧರೆಗಿಳಿದು ಬಂದಿರ್ಪ ರವಿ ಚಂದ್ರರಂದದಲಿ ನೆರೆ ಪ್ರಕಾಶಿಕರಾಗಿ ಕಂಗೊಳಿಸುತಿಹಿರಿ ಗುರುತರದ ಕಾರ್ಯತತ್ಪರರಾಗಿ ಬಂದಿರುವ ನರೆÉಭಾವ ತೋರುವುದು ಕರಿಗಿರೀಶನ ದಯದಿ 4
--------------
ವರಾವಾಣಿರಾಮರಾಯದಾಸರು
ಯಾಕೆಂದು ದಣುಕೊಂಡಿರಿ ಸುಮ್ಮನೆ ವೃಥಾ ನಾಮವೊಂದಿದ್ದಮೇಲೆ ಪ ಕಣ್ಣಾಣದವರವೋಲು ತಿರುಗುವಿರಿ ಚರಿಸುತಿದ್ದಾಮೇಲೆ 1 ಘಾಸಿ ಮಾಡುವುದೇಕೆ ದೇಹವನು ನೆಲೆಯನು ತಿಳಿಯದೆ 2 ತನ್ನಯ ಮಂದಿರವು ತನುವಿದುಸ್ಥಿರವಲ್ಲ ತೃಣವಿತ್ತು ಸಾರಿದೆ 3 ಸುಟ್ಟು ಹುಡಿಹುಡಿಗೊಂಬ ಶರೀರವನ್ನು ಬಡಿವಾರ ತರವಲ್ಲ 4 ಮತಿಗೆಟ್ಟು ಸುಮ್ಮನೆ ತೊಳಲದಿರು ಜ್ಯೋತಿಯ ಕೂಡುಕಂಡ್ಯಾ 5
--------------
ಕವಿ ಪರಮದೇವದಾಸರು
ಡೊಂಕುಬಾಲದ ನಾಯಕರೆನೀವೇನೂಟವ ಮಾಡಿದಿರಿ || ಪ.ಕಣಕ ಕುಟ್ಟುವಲ್ಲಿಗೆ ಹೋಗಿ |ಹಣಿಕಿ ಹಣಿಕಿ ನೋಡುವಿರಿ ||ಕಣಕ ಕುಟ್ಟೋ ಒನಕಿಲಿಬಡಿದರೆ |ಕುಂಯ್ ಕುಂಯ್ ರಾಗವ ಮಾಡುವಿರಿ 1ಹುಗ್ಗಿ ಮಾಡುವಲ್ಲಿಗೆ ಹೋಗಿ |ತಗ್ಗಿ ಬಗ್ಗಿ ನೋಡುವಿರಿ ||ಹುಗ್ಗಿ ಮಾಡುವ ಸವಟಿಲಿ ಬಡಿದರೆ |ಕುಂಯ್ ಕುಂಯ್ ರಾಗವ ಮಾಡುವಿರಿ 2ಹಿರಿಯ ಬೀದಿಯಲಿ ಓಡುವಿರಿ |ಕರಿಯ ಬೂದಿಯಲಿ ಹೊರಳುವಿರಿ ||ಪುರಂದರವಿಠಲರಾಯನ ಈಪರಿಮರೆತು ಸದಾ ನೀವು ತಿರುಗುವಿರಿ 3
--------------
ಪುರಂದರದಾಸರು