ಒಟ್ಟು 7 ಕಡೆಗಳಲ್ಲಿ , 6 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಂದ ಮಾಡುವುದೇನು ಕಂಡಿರೆ ಗೋ- ವಿಂದನ್ನ ದೂರ್ಹೇಳ ಬಂದಿರಾ ಪ ಏನುಮಾಡಿದನೀಗ ನಮರಂಗ ಜೋಡೇನೆ ನಿಮಗೆ ಕೋಮಲಾಂಗ ಭಂಗ 1 ಅತ್ತೆ ಮಾವಂದಿರಂಜಿಕೆಯೇನೆ ಪರ ನೀಯೆಂಬೋದನು ಕಾಣೆ ಕೃಷ್ಣ ಕೊಳಲನೂದೊ ವನಕಿನ್ನು ಕತ್ತಲೊಳಗೆ ಬರುವ ಬುದ್ಧಿ ತರವೇನೆ 2 ಪುರುಷ ಮಕ್ಕಳನ್ನೆಲ್ಲ ತೊರೆದಿರೆ ನಮ್ಮ ಸರಸಿಜಾಕ್ಷನ ಹಿಂದೆ ತಿರುಗುವಿರÉ ಸರಿಬಂದ ಕ್ರೀಡ್ಯವಗರುಹಿರೆ ಅರಗಳಿಗೆ ಎನ್ನರಮನ್ಯಾಗಿರಗೊಡಿರೆ 3 ಕದ್ದುಬೆಣ್ಣೆಯ ಮೆಲ್ಲುವನೇನೆ ಮುದ್ದು ಕೂಸಿಗೀಪರಿ ಅಂಬುವರೇನೆ ಪದ್ಮಪಾದದ ಪರಮಾತ್ಮನೆ ಬಂ- ದಿದ್ದಲ್ಲೆ ನಿಮಗೆ ದಯಮಾಡುವನೆ 4 ಮಾನವಿಲ್ಲದೆ ಮಾರನಯ್ಯನ ಕೂಡಿ ವೃಂದಾ- ವನದೊಳಾಡುವುದೇನೆ ದೂರಿಕೊಂಬುವುದೇನು ಕಾರಣ ಭೀ- ಮೇಶ ಕೃಷ್ಣನು ನಿಮ್ಮನ್ಸಲಹುವನೆ 5
--------------
ಹರಪನಹಳ್ಳಿಭೀಮವ್ವ
ನಂಬಬೇಕು ಹರಿಯ ನಾಮಾ ಪ ನಾಮವೇ ಸ್ನಾನವು ನಾಮವೇ ಸಂಧ್ಯಾನವು| ನಾಮವೇ ಜಪ ತಪ ನಾಮವೇ ಖೂನವು| ನಾಮವೇ ಜ್ಞಾನಾ ನಾಮವೇ ಧ್ಯಾನಾ| ನಾಮವೇ ಧಾರಣ ನಾಮ ನಿಧಾನಾ 1 ಕಾನನ ಮಾರ್ಗದಿ| ಗುಣದ ಪಶುಪರಿ ಕಾಣದೇ ತಿರುಗುವಿ| ಏನು ಪಲವೋ ಮತಿ ಹೀನ ಗುರು| ಜ್ಞಾನದ ಮನಿ ನಿಧಾನದಿ ಕೇಳು2 ಪೋಡವಿಲಿ ಗಂಗೆಯ ತಡಿಯೋಳು ಕುಳಿತಿರೆ| ಕುಡಿಯಲು ಜಲವನು ಹುಡುಕುವ ಭಾವಿಯ| ನಡತಿದು ಛಂದವೆ ಬಿಡು ಬಿಡು ಸಂಶಯ| ಹಿಡಿಗುರು ಮಹಿಪತಿ ಒಡಿಯನ ಬೋಧಾ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಬೆಳಗುವಿರಿ ನೋಡೆ ದೇವಕುವರರಂತಿಹಿರಿ ಧೀರ ಗಂಭೀರತರ ಭಾವ ತೋರ್ಪುದು ಮುಖದಿ ನಾರು ವಸ್ತ್ರವ ಧರಿಸಿ ತಿರುಗುವಿರಿ ವನದಿ 1 ಕಂದರ್ಪನನು ಪೋಲ್ವ ಕಮನೀಯ ವಿಗ್ರಹರು ವೈರಿ ನಿಗ್ರಹರು | ಪುಟಕ್ಕಿಟ್ಟ ಚಿನ್ನದಂತೆ ಕಾಂತಿರಂಜಿತರು ಪಟುತರಂಗರು ಗಹನವಿಟದಿ ಪರಿವ್ರಾಜಕರು 2 ಆಜಾನುಬಾಹುಗಳು ಆಜಾನು ಜಂಘಗಳು ಆ ಜಟ ಮಂಡಲವು ರಾಜಿಸುತಲಿಹವು ದೃಢವಾದ ನಿಮ್ಮಡಿಗಳಿಡುವ ಧ್ವನಿಗಳ ಕೇಳಿ ಅಡವಿಯೊಡತನ ಪಡೆದ ಸಿಂಹಗಳು ನಡುಗುವುವು 3 ಧರೆಗಿಳಿದು ಬಂದಿರ್ಪ ರವಿ ಚಂದ್ರರಂದದಲಿ ನೆರೆ ಪ್ರಕಾಶಿಕರಾಗಿ ಕಂಗೊಳಿಸುತಿಹಿರಿ ಗುರುತರದ ಕಾರ್ಯತತ್ಪರರಾಗಿ ಬಂದಿರುವ ನರೆÉಭಾವ ತೋರುವುದು ಕರಿಗಿರೀಶನ ದಯದಿ 4
--------------
ವರಾವಾಣಿರಾಮರಾಯದಾಸರು
ಯಾಕೆಂದು ದಣುಕೊಂಡಿರಿ ಸುಮ್ಮನೆ ವೃಥಾ ನಾಮವೊಂದಿದ್ದಮೇಲೆ ಪ ಕಣ್ಣಾಣದವರವೋಲು ತಿರುಗುವಿರಿ ಚರಿಸುತಿದ್ದಾಮೇಲೆ 1 ಘಾಸಿ ಮಾಡುವುದೇಕೆ ದೇಹವನು ನೆಲೆಯನು ತಿಳಿಯದೆ 2 ತನ್ನಯ ಮಂದಿರವು ತನುವಿದುಸ್ಥಿರವಲ್ಲ ತೃಣವಿತ್ತು ಸಾರಿದೆ 3 ಸುಟ್ಟು ಹುಡಿಹುಡಿಗೊಂಬ ಶರೀರವನ್ನು ಬಡಿವಾರ ತರವಲ್ಲ 4 ಮತಿಗೆಟ್ಟು ಸುಮ್ಮನೆ ತೊಳಲದಿರು ಜ್ಯೋತಿಯ ಕೂಡುಕಂಡ್ಯಾ 5
--------------
ಕವಿ ಪರಮದೇವದಾಸರು
ಎಲ್ಲವನು ಬಲ್ಲೆನೆನ್ನುವಿರಲ್ಲಸಲ್ಲದಗುಣಬಿಡಲಿಲ್ಲಪ.ಸೊಲ್ಲಿಗೆ ಶರಣರ ಕಥೆಗಳ ಪೇಳುತಅಲ್ಲದನುಡಿಗಳ ನುಡಿಯುವಿರಲ್ಲಅಪಕಾವಿಯನುಟ್ಟು ತಿರುಗುವಿರಲ್ಲಕಾಮವ ಬಿಡಲಿಲ್ಲನೇಮ - ನಿಷ್ಠೆಗಳ ಮಾಡವಿರಲ್ಲತಾಮಸ ಬಿಡಲಿಲ್ಲತಾವೊಂದರಿಯದೆ ಪರರಲಿ ತಿಳಿಯದೆಕೀವದ ಕುಳಿಯಲಿ ಬೀಳುವಿರಲ್ಲ 1ಗುರುಗಳ ಸೇವೆಯ ಮಾಡಿದಿರಲ್ಲಗುರುತಾಗಲೆ ಇಲ್ಲಪರಿಪರಿ ದೇಶವ ತಿರಿಗಿದಿರಲ್ಲಪೊರೆಯುವರಿನ್ನಿಲ್ಲಅರಿವೊಂದರಿಯದೆಆಗಮ ತಿಳಿಯದೆನರಕಕೂಪದಲಿ ಬೀಳುವಿರಲ್ಲ 2ಬ್ರಹ್ಮಜ್ಞಾನಿಗಳೆನಿಸುವಿರಲ್ಲಹಮ್ಮನು ಬಿಡಲಿಲ್ಲಸುಮ್ಮನೆ ಯಾಗವ ಮಾಡುವಿರಲ್ಲಹೆಮ್ಮೆಯ ಬಿಡಲಿಲ್ಲಗಮ್ಮನೆ ಪುರಂದರವಿಠಲನ ಪಾದಕೆಒಮ್ಮೆಯಾದರು ನೀವೆರಗಲೆ ಇಲ್ಲ 3
--------------
ಪುರಂದರದಾಸರು
ಡೊಂಕುಬಾಲದ ನಾಯಕರೆನೀವೇನೂಟವ ಮಾಡಿದಿರಿ || ಪ.ಕಣಕ ಕುಟ್ಟುವಲ್ಲಿಗೆ ಹೋಗಿ |ಹಣಿಕಿ ಹಣಿಕಿ ನೋಡುವಿರಿ ||ಕಣಕ ಕುಟ್ಟೋ ಒನಕಿಲಿಬಡಿದರೆ |ಕುಂಯ್ ಕುಂಯ್ ರಾಗವ ಮಾಡುವಿರಿ 1ಹುಗ್ಗಿ ಮಾಡುವಲ್ಲಿಗೆ ಹೋಗಿ |ತಗ್ಗಿ ಬಗ್ಗಿ ನೋಡುವಿರಿ ||ಹುಗ್ಗಿ ಮಾಡುವ ಸವಟಿಲಿ ಬಡಿದರೆ |ಕುಂಯ್ ಕುಂಯ್ ರಾಗವ ಮಾಡುವಿರಿ 2ಹಿರಿಯ ಬೀದಿಯಲಿ ಓಡುವಿರಿ |ಕರಿಯ ಬೂದಿಯಲಿ ಹೊರಳುವಿರಿ ||ಪುರಂದರವಿಠಲರಾಯನ ಈಪರಿಮರೆತು ಸದಾ ನೀವು ತಿರುಗುವಿರಿ 3
--------------
ಪುರಂದರದಾಸರು
ನರಕುರಿ,ಗುರುನರನೆಂಬಾಪಾತಕಿನರಕಾಲಯ ಪಡಕೊಂಬಾ |ಹರ ಹರ ಪಶು ಪ್ರಾಣಿ ಪಶು ಪ್ರಾಣಿ |ಮಾಡಿದಿ ನರತನು ಹಾನಿಪxmಟ veಡಿsioಟಿ='1.0' eಟಿಛಿoಜiಟಿg='%SಔUP-ಇಓಅಔಆIಓಉ%'ಹಾನಿಯರಿಯದೆ ಅಜ್ಞಾನಿ ತಿರುಗುವಿ |ನಾನಾಪರಿಪರಿಯೋನಿ1ಪರಿಪರಿಯೋನಿಗೆ ಬರುವಾ ಗುರುಗಳ |ಪರಿಚರ್ಯವ ಮರೆದಿರುವಾ2ಮರವೆ ತನ್ನಿಂದಾಯಿತೇನೊತಿರುಳು ತೆರೆ ಅನಂತಪಘಾತವನೂ3ಅಪಘಾತಕ ಮನದವಗೆಶಂಕರ ಕೃಪೆಯೆಂತಾಗುವದವಗೆ4
--------------
ಜಕ್ಕಪ್ಪಯ್ಯನವರು