ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಶ್ರೀ ವೇದವ್ಯಾಸರನ್ನು ನೆನೆದು) ವ್ಯಾಸರೂಪಿಯಾದ ಶ್ರೀನಿವಾಸನ ನಂಬಿ ಪ. ದ್ವಾಪರಾಂತದಿ ದೈತ್ಯಜನರ ಪ್ರತಾಪದಿಂದಲಿ ಜ್ಞಾನತತ್ವ ಪ್ರ- ದೀಪ ಮಾಲಿನ್ಯವನು ಪೊಂದಿರಲು ಕ್ಷೀರಾಬ್ಧಿ ತಡಿಯಲಿ ಅಜ ಬಂದು ಸ್ತುತಿಸಲು ತಾಪ ಶಮಿಸುವೆನೆಂಬಭಯವಿತ್ತಾಪರಾಶಗೊಲಿದು ಕರುಣಿಸಿ ಕೃಪಾಪಯೋನಿಧಿರೂಪ ತೋರಿದ 1 ಮಹಾಭಾರತಾಮೃತ ಸಹಿತ ವಿರಚಿಸಿ ತೋರ್ಪಂತೆ ಬಹು ಗಂ- ಭೀರ ಸಾರವನಿಟ್ಟು ಪರಿಜನವಾ ತತ್ವೋಕ್ತಿಯಿಂದ ಪ- ರೋರು ಭಾವವ ತಿಳಿಸಿ ದೈತ್ಯರ ಗಾರಗೊಳಿಸುತ ಅನವರತ ಸಂ- ಸಾರ ಚಕ್ರದಿ ತಿರುಗುವವರ ವಿಚಾರ ಭ್ರಮೆಗೊಂಬಂತೆ ತಿಳಿಸಿದ 2 ಶುದ್ಧ ಸಾತ್ವಿಕರಾದ ಜೀವರನುದ್ಧರಿಸಬೇಕೆಂದು ಶ್ರುತಿಗಣ ಬದ್ಧ ಸೂತ್ರವ ನಿರ್ಮಿಸುತ್ತದನು ಸಿದ್ಧಾಂತ ಮಾಡಲು ಮಧ್ವಮುನಿವರಗಿತ್ತು ನಿಯಮವನು ನಿರ್ನೈಸಿ ತಿಳಿಸುತ ಪಾತಾಳಕೆ ಸುರೋತ್ತಮ ಸಿದ್ಧ ಸೇವಿತ ಶೇಷಗಿರಿಯೊಳಗಿದ್ದು ಭಜಕರನುದ್ಧರಿಸುತಿಹ 3
--------------
ತುಪಾಕಿ ವೆಂಕಟರಮಣಾಚಾರ್ಯ
ಎಲ್ಲರೂ ದಾಸರಹರೇ ಪ ಪುಲ್ಲನಾಭನ ದಯವಿಲ್ಲದೆ ಅ.ಪ. ಜ್ಞಾನವಿಲ್ಲ ಭಕುತಿಯಿಲ್ಲ ಧ್ಯಾನ ವೈರಾಗ್ಯ ಮೊದಲೆ ಇಲ್ಲ ಹೀನ ಕರ್ಮಗಳನು ಮಾಡಿ ಶ್ರೀನಿವಾಸನ ಮರೆತವರು 1 ಪರವಧುವಿನ ರೂಪ ಮನದಿ ಸ್ಮರಣೆ ಮಾಡುತ ಬಾಯಿಯೊಳು ಹರಿಯ ಧ್ಯಾನ ಮಾಡುತಿರುವ ಪರಮ ನೀಚರಾದ ಜನರು 2 ಪಟ್ಟೆನಾಮ ಹಚ್ಚಿ ಕಾವಿ ಬಟ್ಟೆಯನ್ನು ಹೊದ್ದುಕೊಂಡು ಅಟ್ಟಹಾಸ ತೋರಿಕೊಳುತ ಗುಟ್ಟು ತಿಳಿಯದಿರುವ ಜನರು 3 ದೊಡ್ಡ ತಂಬೂರಿಯ ಪಿಡಿದು ಅಡ್ಡ ಉದ್ದ ರಾಗ ಪಾಡಿ ದುಡ್ಡುಕಾಸಿಗಾಗಿ ಭ್ರಮಿಸಿ ಹೆಡ್ಡರಾಗಿ ತಿರುಗುವವರು 4 ನೋವು ಬಾರದಂತೆ ಸದಾ ಓವಿಕೊಂಡು ಬರುತಲಿರುವ ದೇವ ರಂಗೇಶವಿಠಲನ ಸೇವೆಯನ್ನು ಮಾಡದಿರುವ 5
--------------
ರಂಗೇಶವಿಠಲದಾಸರು
ಬ್ರಹ್ಮಜ್ಞಾನಿಗಳ ನೋಡಿರೊ ಇಹ್ಹಿಹ್ಹಿಬ್ರಹ್ಮಜ್ಞಾನಿಗಳ ನೋಡಿರೋ ಪ ಜ್ಞಾನಿಗಳು ತಾವು ಅಂತೆ ತಾವೇ ಪರಬ್ರಹ್ಮರಂತೆಏನೋನೋ ಹುಚ್ಚುಮಾತು ಕೇಳಿರಯ್ಯ ಅಹ್ಹಹ್ಹ 1 ಜೊಂಡು ಹುಲ್ಲಿನಂತೆ ಮಂಡೆಗಳ ಬೆಳೆಸಿಕೊಂಡುಕಂಡ ಕಂಡಂತೆ ತಿರುಗುವವರ ನೋಡಿರಯ್ಯ ಅಹ್ಹಹ್ಹ 2 ಸಂಧ್ಯವಿಲ್ಲ ಸ್ನಾನವಿಲ್ಲ ಮುಂದೆ ಹೋಮ ತರ್ಪಣವಿಲ್ಲಅಂದು ತಾವೇ ಬ್ರಹ್ಮವಂತೆ ಕಂಡಿರೇನೋ ಅಹ್ಹಹ್ಹ3 ಕಾವಿ ಕೌಪವುಟ್ಟುಕೊಂಡು ಕಮಂಡಲು ಹಿಡಿದುಕೊಂಡುದೈವ ತಾನೇ ಎಂಬ ದೈವಗಳ ನೋಡಿರೋ ಅಹ್ಹಹ್ಹ4 ಇಂತು ಚಿದಾನಂದ ಗುರು ಭಕ್ತರಗಳ ನಿಂದ್ಯಮಾಡಿಅಂತು ಕಾಲನ ಅರಮನೆಯ ಕುರಿಗಳಾದರಹ್ಹಹ್ಹ 5
--------------
ಚಿದಾನಂದ ಅವಧೂತರು