ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪರಮಾತ್ಮ ದಿವ್ಯಚರಣಾ ಭಜಿಸುವೆವು ಜ್ಞಾನ ಪೂರ್ಣ ನೀ ತೋರ್ಪುದಯ್ಯ ಕರುಣಾ ತಾಪ ಹರಣಾ ಆನಂದ ರೂಪ ತಾಣಾ ನಾರಾಯಣಾತ್ಮಪೂರ್ಣ ನಿನ್ನಿರವೇ ಜಗವಿದೆಲ್ಲ ನಿನ್ನರಿವೇ ಜೀವರೆಲ್ಲಾ ನಿನ್ನಿಂದೆ ಸುಖವಿದೆಲ್ಲಾ ನೀನೆ ಇದೆಲ್ಲಾ ದೇವಾ ನೀ ಸತ್ಯ ನಿರ್ವಿಕಾರ ನೀನಾತ್ಮರೂಪಸಾರಾ ನೀ ಪರಮ ಮೋಕ್ಷತಾಣಾ ಮರೆತಿರಲು ಜೀವ ನಿನ್ನ ದೊರೆಯುವುದೆ ಶಾಂತಿ ನಿನ್ನ ಪರಿತಾ¥ಬಿಡುತ ಮುನ್ನಾ ತಿರುಗುವನೋ ಜನ್ಮ ಜನ್ಮ ಗುರು ಶಂಕರಾರ್ಯ ನಿನ್ನ ಶರಣುಹುದೆ ಶಾಂತಿತಾಣ ನೀ ಸರ್ವರಾತ್ಮಪೂರ್ಣ
--------------
ಶಂಕರಭಟ್ಟ ಅಗ್ನಿಹೋತ್ರಿ
ಯಾರವನು ಹೊರಗೆನಿಂತ ಬಾರಾನ್ಯಾಕವನು ಪ ನೀರಮುಳುಗಿ ಬಂದು ಘೋರಪರ್ವತ ತಂದು ಧಾರುಣಿಯನು ಕದ್ದ ದನುಜನ ಕೊಂದು ನರಹರಿ ರೂಪದಿ ತರಳಗೊಲಿದುಪುಟ್ಟ ಚರಣದಿಂ ಧರಣಿಯನಳೆದ ಮಹಾತ್ಮನೋ 1 ಕೊಡಲಿಯ ಪಿಡಿದು ತಾ ಬಿಡದೆ ಕ್ಷತ್ರಿಯರನ್ನು ಮಡುಹಿ ಬಂದವನಿವನೇನೋ ಮಡದಿಗಾಗಿ ದೊಡ್ಡಅಡವಿಯೊಳು ಮನೆಕಟ್ಟಿ ಬಿಡದೆ ಗೋಕುಲದಲ್ಲಿ ನೆಲೆಸಿರುವಾತನೋ 2 ಬೆತ್ತಲೆ ನಿಂತ್ಹತ್ತಿ ಮತ್ತೆಕುದುರೆಯ ಚಿತ್ತಬಂದಂತೆ ತಾ ತಿರುಗುವನೋ ಉತ್ತಮನಾದ ಶ್ರೀ ಪ್ರಾಣನಾಥವಿಠಲನು ಎತ್ತನೋಡಿದರು ಸುತ್ತುತ್ತಲಿರುವನು 3
--------------
ಬಾಗೇಪಲ್ಲಿ ಶೇಷದಾಸರು