ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಲ ತಪ್ಪಿದರು ಸಾವಕಾಲ ತಪ್ಪದೋ ಯಾವ ಜೀವ ಜಂತುಗಳಿಗೂ ಕಾಯವಿಡಿದು ಬಂದ ಬಳಿಕ ಪ ಜನಿಸಿ ತಂದೆತಾಯ ಕರ ದೊಳಿರಲಿ ಸ್ತನವನುಂಡು ಭರದಿನಿದ್ರೆ ಗೈಯುರ್ತಿಲಿ ನೆರೆದಬಾಲರೊಡನೆ ಆಡಿ ಚರಿಸುತಿರಲಿ ಬಾಲಕತ್ವ ತೆರಳಿ ಜವ್ವನವು ಬಂದು ರಮಣಿಯನ್ನೆ ವರಿಸಿ ಇರಲಿ 1 ಕರಿ ಹತ್ತಿ ಮೆರೆಯುತಿರಲಿ ದೊರೆಗಳೊಡನೆ ಚರಿಸುತಿರಲಿ ಮೇರು ಗಿರಿಯ ಶಿರದೊಳಿರಲಿ ಶರಧಿ ಮಧ್ಯ ಪುರದೊಳಂಲರಣ್ಯದೊಳಗೆ ತಿರುಗುತಿರಲಿ ಅತಳ ಸುತಳ ವಿತಳವನ್ನೆ ಪೊಕ್ಕುಇರಲಿ 2 ಕಾಯವಿದುವೆ ತನ್ನ ಪೆತ್ತ ತಾಯಿತಂದೆಗಳಿಗೋ ಜಾಯೆ ಸುತರ ಗೃಧ್ರ ಭಲ್ಲುಕಾದಿಗಳಿಗೋ ಪುಲಿಗೋ ವಾಯಸಾದಿ ಕ್ರಿಮಿಗೋ ಕೀಟಕಾದಿಗಳಿಗೋ ಲಕ್ಷ್ಮೀರಮಣನೊಬ್ಬ ಬಲ್ಲನಿದನು 3
--------------
ಕವಿ ಪರಮದೇವದಾಸರು
ಧನ್ಯನಾಗೆಲೊ ಮುನ್ನ ಹರಿಯ ಕಾ ರುಣ್ಯವನೆ ಪಡೆದು ಮಾನವನೆ ಪ ಬನ್ನ ಬಿಡಿಸುವ ಪನ್ನಗಾರಿ ಧ್ವಜನನ್ನು ಧ್ಯಾನಿಸುತ ಅ.ಪ ಕಣ್ಣಿನಿಂದಲಿ ನೋಡು ಹರಿಯಲಾವಣ್ಯ ಮೂರ್ತಿಯನು ಕರ್ಣದಿಂದಲಿ ಕೇಳು ಹರಿಯ ಪಾವನ್ನ ಕೀರ್ತಿಯನು ಅನ್ಯವಾರ್ತೆಗಳಾಡದೆ ವದನದಿ ಘನ್ನ ಹರಿಯಗಣಗಳನ್ನೇ ಬಣ್ಣಿಸುತ 1 ಹಸ್ತವೆರಡು ಹರಿಮಂದಿರ ಮಾರ್ಜನಕೃತ್ಯ ಮಾಡುತಿರಲಿ ಮತ್ತೆ ಪಾದಗಳು ಚಿತ್ತಜನಯ್ಯನ ಕ್ಷೇತ್ರ ತಿರುಗುತಿರಲಿ ಭೃತ್ಯನಾಗಿ ಬಲು 2 ಇಂತು ಪಡಿಯೊ ಶಿರಿಕಾಂತನಲ್ಲಿ ಏಕಾಂತ ಭಕ್ತಿಯನು ಭ್ರಾಂತಿಯ ಬಿಡು ನೀನು ಪೇಳುವ ಮಹಂತರ ಸೇವಿಸಿ 3 ಸಾರ್ಥವಿದೆ ತಿಳಿ ಪಾರ್ಥಸಖನು ಸರ್ವತ್ರ ಇಹನೆಂದು ಗಾತ್ರದೊಳು ಪ್ರತ್ಯಗಾತ್ಮನಲ್ಲಿ ಸದ್ಭಕ್ತಿಮಾಡು ತಿಳಿದು ಮತ್ರ್ಯ ಜನ್ಮಕಿದು ಸಾರ್ಥಕವೊ ಸುಖತೀರ್ಥರ ಕರುಣಾ ಪಾತ್ರನಾಗಿ ಬಲು 4 ಈ ತೆರದಿ ಸಂಪ್ರಾರ್ಥಿಪರಿಗಿಷ್ಟಾರ್ಥಗಳ ಕೊಡುವಾ ಭೂತಲದಿ ಪ್ರಖ್ಯಾತ ಕಾರ್ಪರ ಕ್ಷೇತ್ರದಲಿ ಮೆರೆವ ಪಾತಕ ಹರ ಶಿರಿನಾರಶಿಂಹನ ಕೃಪಾತಿಶಯದಿ ನಿ ರ್ಭೀತನಾಗಿ ಬಲು 5
--------------
ಕಾರ್ಪರ ನರಹರಿದಾಸರು
ಶ್ರೀಮನೋಹರ ನಿನ್ನ ನಾಮವೇ ಯೆನ್ನುಸಿರು ಕ್ಷೇಮ ನಾಡಿಗಳಲ್ಲಿ ತಿರುಗುತಿರಲಿ ಪ ಕಾಮಾದಿ ಷಡ್ವರ್ಗವ್ಯಾಪನೆಯನೋಡಿಸುತ ಪ್ರೇಮದಿಂ ಹೃತ್ಪದ್ಮದಲಿ ತೋರು ಸತತ ಅ.ಪ ಪ್ರಾಪಂಚಿಕರ ಮನವು ವಿಷಯಗಳಿಗೆಳೆವಂತೆ ಪಾಪಹರ ನಿನ್ನೊಳಗೆ ಯನ್ನ ಮನವಿರಲಿ ತಾಪತ್ರಯಂಗಳಿಗೆ ತನಯನನು ಸಿಲುಕಿಸದೆ ಕಾಪಾಡಿಕೋ ಸ್ವಾಮಿ ದಾಸಾನುದಾಸನಂ1 ಕನಸು ಎಚ್ಚರ ನಿದ್ದೆ ಎಂಬವಸ್ಥೆಗಳಲ್ಲಿ ದಿನಕರಪ್ರಭು ಮೂರ್ತಿಯವತಾರ ತೋರಿ ಅನುನಯದಿ ಪದಯುಗವ ಶರಣು ಹೊಂದುವ ಪರಿಯ ಕನಿಕರದಿ ಕರುಣಿಸೈ ಕಮಲನಯನ 2 ಕಫವಾತ ಪಿತ್ಥಗಳ ವಿಕೃತಿಗಳು ಬಾರದೆಲೆ ಅಪರಿಮಿತ ಸುಂದರಾನಂದ ನೀಡಿ ಸಫಲಮಂತ್ರವ ನುಡಿಸಿ ಕೃಪೆಯಿಂದ ಕೈಪಿಡಿದು ಸುಪಥದಿಂ ನದಿದಾಟಿ ಸೇರಿಸಿಕೊ ಅಡಿಗೆ 3 ಹರಿಹರೀ ಹರಿಯೆಂಬೆ ತಾಯಿ ತಂದೆಯೆ ಗುರುವೆ ದೊರೆಯೆನೀ ಸೋದರನು ಸಖನು ಬಂಧೂ ಧರಣೀಧರ ಸರ್ವತ್ರ ಬೆಂಬಿಡದೆ ಸಹಕರಿಸಿ ಪೊರೆವುದೈ ಭವನಾಶ ಹೆಜ್ಜಾಜಿ ಶ್ರೀಶಾ 4
--------------
ಶಾಮಶರ್ಮರು