ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವನರುಹಾಕ್ಷೀ ವನಮಾಲಿಂಗೇ ಏನು ಮರುಳಾದೆ ನೀ | ಅನುದಿನ ತನ್ನ ತನುಮನ ವಚನದಿ ನೆನೆವನ ಪುನರಪಿ ಜನುಮಕ ತಾರ್ದವನಾ ಪ ಬಿಡದೇ ವಿಷದಾ ಭರಿತಾದಾಕಾ | ಲೊಡಲಂಗಾ ಮ್ಯಾಲಿಪ್ಪನಾ ವಡಗೋಡಲುಗೊಗ್ಗು ಮೈಯ್ಯವೆ ಗೂಡದು | ಒಡನೋಡ ನುಡುಗಿಪಾ ಒಡಲೋಳು ಚರಣಾ | ವಡಮೂಡಿ ಬಂದ | ಕೋಡಗಲ್ಲೋಲ್ಪಲ್ಲವು | ಘುಡು ಘುಟಿಸುವ ಮಹಾ ಘೋರರೂಪನವ 1 ಸೃಷ್ಟಿಲಿ ಮಾವನುದರೋಳು | ತ್ಕುಂಠವಗ್ನಿಯ ನಿಟ್ಟನು | ಲುಟುಲುಟು ನಡೆದಾಡುತಲಿಹ ಗುಜ್ಜನು | ಥಟನೆಟ ನಿಳಹಿದ ಕಪಿ ಸಂಗತಿರುಗಿದಾ ಮಟಮಟ ಬೆಣ್ಣಿಯ ಕದ್ದುಮೆಲ್ಲುವನಾ2 ದೆಶೆಗಳ್ಗೆ ಪಾರ್ವಕ್ಕಿಯ ಹರುಷಲೇರಿ ಮೆರೆವನಾ | ಸುದತಿ ವೃತವಳಿದನು ಹಿಸದಸುಯವನರ | ತರಿದಿ ನಿರ್ದಯದೀ | ಪಸರಿಸುತಿಹ ಕಾರ್ಮುಗಿಲ ಬಣ್ಣದ| ಲೆಶೆವನು ಮಹೀಪತಿ ನಂದ - ನೊಡಯನು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
* ಪಶ್ಚಿಮಕೆ ತಿರುಗಿದಾ ಪರಿಯದೇನೋ ಅಚ್ಯುತಾನಂತ ಗೋವಿಂದ ಗೋಪಾಲ ಪ. ಪರಿ ಪರೀ ಸ್ತುತಿಗೈದು ಪೂರ್ವಾಭಿಮುಖವಾಗಿ ಸ್ಥಾಪಿಸಿರಲೂ ಆವಕಾಲಕು ಪವನ ಮತದಂತೆ ನಟನೆಯವ ಈ ವಿಧದಿ ಅವರ ಮನಮೀರಿ ತಿರುಗಿಹುದೂ 1 ಕ್ಷೀರ ಸಾಗರ ಜಾತೆ ನೋಡುವಳೆಂದು ನಾರಿ ಹಂಬಲನೆನಸಿ ಕಡಲ ಕಡೆಗೇ ಸೇರಬೇಕೆಂದು ವೈಕುಂಠವನು ತಿರುಗಿದ್ಯಾ ಕಾರಣವದೇನೈಯ್ಯ ನಾರದ ಸ್ತುತನೇ 2 ಕ್ಷೀರಸಾಗರ ಮಧ್ಯೆ ತೋರುವೋ ದಿವ್ಯಪುರ ಸೇರಿದಾ ಮುಕ್ತ ಸ್ತುತಿಯನಾಲೈಸಿ ಹಾರಿಹೋಗಲು ಮನಸು ಹಾರಿತೇ ಮಮತೆಯಲಿ ದ್ವಾರಕಿಯ ನೆನಪಾಯಿತೇನೋ ಕೃಷ್ಣಯ್ಯ 3 ದುರ್ಜನಕೆ ದುರ್ಮನಸು ಮರುಕಲಿ ಪುಟ್ಟಲೂ ಸರ್ಜನಕೆ ಸರ್ವೇಶ ನೀನೇನಿಸಲೂ ಮೂರ್ಜಗದಿ ನಿನ್ನ ಮೀರಿದರಿಲ್ಲವೆನಿಸಲೂ ಅಬ್ಜಭವಪದರಲ್ಲಿ ಸಲುಗೆ ಬಹಳಿರಲೂ 4 ಎಲ್ಲ ಕಾರಣವಿರಲಿ ಬಲ್ಲ ಕನಕನು ಬರಲು ಗುಲ್ಲು ಮಾಡುತ ಕುರುಬನೆಂದೊಳಗೆ ಬಿಡದೇ ನಿಲ್ಲಿಸಲು ಕಲ್ಲೊಡೆದು ಪಶ್ಚಿಮಕೆ ತಿರುಗಿ ನೀ ಅಲ್ಲೆ ಕನಕಗೆ ದಿವ್ಯ ದರುಶನ ಕೊಡಲೂ 5 ಸಿರಿಬೊಮ್ಮ ಸುರರ ಲೆಕ್ಕಿಸದೆ ಸದ್ಭಕ್ತರಾ ಗರುವ ರಹಿತರ ಸ್ತುತಿಗೆ ಮೈದೋರುವಾ ಪರಿಯ ತೋರಲು ಇತ್ತ ತಿರುಗಿದ್ಯಾ ಪೇಳಿನ್ನು ಪರಿ ತಿಳಿವರಾರೈ6 ಆನಂದ ಗುಣಪೂರ್ಣ ಆನಂದ ಮುನಿವರದ ಆನಂದ ಕಂದ ಪಶ್ಚಿಮ ತಡಿಯವಾಸಾ ಆನಂದ ಗೋಕುಲದಿ ಆನಂದ ತೋರಿದಾ ಆನಂದ ಗೋಪಾಲಕೃಷ್ಣವಿಠಲೈಯ್ಯಾ 7
--------------
ಅಂಬಾಬಾಯಿ