ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಲ್ಲೇ ನಿಲ್ಲೇನು | ಯೋಗಿಗೆ | ಅಲ್ಲೇ ನಿಲ್ಲೇನು ಪ ಎಲ್ಲಿ ನೋಡಿದರಲ್ಲಿ ಘುಲ್ಲನಾಭನೇ ಇಹ | ಅಲ್ಲೇ ನೀಲ್ಲೇನು | ನಿಲ್ಲದ ಮನಸಿನ ಕಾಲಾಟ ಒದಗಿತು | ಅಲ್ಲೇ ನಿಲ್ಲೇನು 1 ನೀರೊಳಗಾನಂದಲ್ಯಾಡುವ ಮೀನಕ | ಅಲ್ಲೇ ನಿಲ್ಲೇನು | ಕಾನನ ತಿರುಗವ ಎರಳೆಗೆ | ಅಲ್ಲೇ ನಿಲ್ಲೇನು 2 ತಳಿತಿಹ ಬನದೊಳು ತಿರುಗುವ ಪಕ್ಷಿಗೆ | ಅಲ್ಲೇ ನಿಲ್ಲೇನು | ನೆನೆನುಡಿ ಸಾರಿದ ಮಹಿಪತಿ ನಂದನ | ಅಲ್ಲೇ ನಿಲ್ಲೇನು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಿನ್ನವರ ಸಂಗ ಎಂತಹದಯ್ಯಾ ಅನಂತ ಜನ್ಮದ ಪಾಪ ಪುಂಜರ ನಾನು ಪ ಬಾರೆ ಸುಜನರ ಮನಕೆ ತಾರೆ ಗಂಗೋದಕವ ಸೇರೆ ನಿನ್ನಡಿಗಳಲಿ ಸಾರೆ ಉತ್ತಮರ ಕೀರ್ತಿ ಬೀರೆ ನಿನ್ನಯ ಮಹಿಮೆ ಕೋರೆ ನಿರ್ಮಳ ದಾರಿಯಾ ನೀರೆಯರ ಶಶಿಬಿಂಬ ಮೋರೆ ಬಣ್ಣಕೆ ಮೆಚ್ಚಿ ಕಾರ್ಯ ಕಾರಣ ಜರಿದು ಭಾರಿ ತಿರುಗವನಿಗೆ1 ಏಕಾದಶಿ ದಿನ ಬೇಕೆಂದು ಮನವಿಟ್ಟು ಪಾಕನ್ನ ಮಾಡಿಸುವನೊ ನೇಕಪರಿ ಮಾಡಿಸುವನೊ ಪೋಕತನದಲ್ಲಿ ವಿವೇಕ ರÀಹಿತನಾಗಿ ಗೋಕುಲವ ಹಳಿದು ಕೋ ವಾರೆವಿದ್ದವನಿಗೆ2 ಪರರ ವಡವೆಯ ನೋಡಿ ಧರಿಸಲಾರದೆ ಮನ ಮರಗಿ ನಿಷ್ಠುರನಾಡಿ ಇರಳು ಹಗಲೂತ್ತ- ಮರ ಬೈದು ಪಾಪಕ್ಕೆ ಗುರಿಯಾಗಿ ನಸುನಗುತ ಪಿರಿದು ದುರ್ವಿಷಯದೊಳು ಹೊರಳಿ ಹಕ್ಕಲನಾಗಿ ಮರಳಿ ಜನಗಳಲ್ಲಿ ಜನಮವಾಗುವನಿಗೆ 3 ಅತಿಥಿ ಅಭ್ಯಾಗತರ ಕಂಡು ಸ್ಮರಿಸದೆ ಮತಿಹೀನವಾಗಿ ಭ- ಕುತಿ ಲೇಸ ತಾ ತಾ ಕೊಂಬೆನಯ್ಯಾ ಆರನಾರನಾದರು ಕರಿಯೆ ಚತುರೋಕ್ತಿಯಲಿ ನೆನೆಸಿ ಪ್ರತಿ ಯಾರು ನಿನಗೆಂದು ಗರ್ವದಲ್ಲಿದ್ದವನಿಗೆ 4 ಆದಿಯಲಿ ಬಂದದ್ದು ಅಂತ್ಯದಲಿ ಪೋಗುವ ಹಾದಿಯನು ತಿಳಿತಿಳಿದು ಕ್ರೋಧವನು ಬಿಡದೆ ಕಾದುವೆನು ಹಲ್ಲು ಕಡಿದು ಸಾಧುಗಳ ನೋಡದಲೆ ವೇದಾರ್ಥಗಳ ಓದಿ ಶೋಧಿಸಿ ಕೇಳಿ ವಾದವನು ಮಾಡಿ ಸಂಪಾದಿಸುವ ದುರ್ಧರನಿಗೆ5 ದುರ್ಧನಕೆ ಕೈಕೊಡುವೆ | ಮೊದಲೆ ಕನಸಿನೊಳಗಾದರೂ ಗುಣಿಸುವೆ ಪರರ ಹಿಂಸೆಯನು ಬಿಡೆ ಕ್ಷಣವಾದರು ತನುವಿನ ಕ್ಲೇಶದಲಿ ದಿನವ ಹಾಕಿದೆ ವ್ಯರ್ಥ ದಣಿದಣಿದು ಈ ಪರಿಯನು ಮಾಡಿದವನಿಗೆ 6 ಹುಟ್ಟಿದಾರಭ್ಯವಾಗಿ ಶಿಷ್ಟಾಚಾರವ ತೊರೆದು ಕೆಟ್ಟ ಬಾಳಿದೆ ಧರಣೀಲೀ ಸುಟ್ಟ ಸಂಸಾರದೊಳು ಸಟಿಯಾಡಿ ಗುಟ್ಟಗುಂದಿದೆ ವಿಜಯವಿಠ್ಠಲ ನಿನ್ನ ನೆರೆ ಮರೆದು ಕೆಟ್ಟು ನರಕಕ್ಕೆ ಮನಮುಟ್ಟಿ ಬೀಳುವವನಿಗೆ 7
--------------
ವಿಜಯದಾಸ
ಹರಿಯಾ ಪಾದಕ ಶರಣೆನ್ನಿ | ಸ್ಮರಣೆಗೆ ಹರಿಯನು ಕರೆತನ್ನಿ ಪ ಅವನ ನಾಮವನೆನಿಯಲು ಭಕುತಿಲಿ | ಭವಭಯ ಮೂಲದಿ ನೀಗುವದು | ಆವಾಗ ಕಂಗಳ ಸಿರಿಸುಖ ದೋರುತ | ಜೀವನ ಗತಿನೆಲೆ ಹೊಂದುವದು 1 ಸಿಕ್ಕಿತ್ತು ನರದೇಹ ದೊರಿಯಲು ಪುಣ್ಯದಿ | ಸರ್ಕನೆ ಸಂತರ ಮೊರೆಹೊಕ್ಕು | ದಕ್ಕಿಸಿಕೊಳ್ಳದೇ ಬೋಧಾಮೃತವನು | ಪುಕ್ಕಟೆ ದಿನವನು ಗಳೆವರೇ 2 ತನುವಿದು ನೋಡಲು ನೆಚ್ಚಿಕೆ ಇಲ್ಲದ | ಮನಿಗಂಧರ್ವದ ಪುರದಂತೆ | ತನುವಿಗೆ ಹತ್ತಿದ ಸಂಸಾರ ಸುಖ | ಕನಸಿನ ಭಾಗ್ಯವ ತೆರೆದಂತೆ 3 ಇದರೋಳು ನಾ ನನ್ನದು ಎಂದೆನುತಲಿ | ಮದಮತ್ಸರವಾ ಬಗೆಯಲಿ | ಕುದಿಕುದಿದೇಳು ತಜ್ಞಾವಿಹೀನದಿ | ಉದರವ ಹೊರವುತ ತಿರುಗವರೇ 4 ಈಗಾಗಯನ್ನದೇ ಹರಿನಾಮವ | ನಾ | ಲಿಗೆ ಕೊನಿಯಲಿ ತಂದಿರಿಸೀ | ಭವ | ಸಾಗರ ಸುಳಿಯಿಂದಲಿ ತರಸೀ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಏನು ಬೇಡಲಿ ನಿನ್ನ ಹರಿಯೆ ಪಏನ ಬೇಡಲಿ ನಿನ್ನ ಚಂಚಲ ಕಠಿಣನ |ಮಾನದಿಂದ ಮೋರೆ ಓರೆಮಾಡುವನ ಅ.ಪಕರುಳಹರಕನ - ಏನ ಬೇಡಲಿ |ತಿರಿದು ತಿಂಬುವನ ||ಕೊರಳಗೊಯ್ಕ ಅರಣ್ಯ ತಿರುಗವನ ಮೊ - |ಸರು ಬೆಣ್ಣೆ ಕದ್ದು ತಿಂಬವನ 1ವಾಸಶೂನ್ಯನ - ಬೇಡಲೇನು ಕತ್ತಿ - |ಬೀಸಿ ಸವರುವನ ||ಕಾಸುವೀಸವನೆಲ್ಲ ಮೀಸಲು ಮಾಡಿಟ್ಟು |ಕೇಸಕ್ಕಿ ಉಂಡುಂಡು ವಾಸಿಸುವನ2ಬೇಡಿದರೆ ಕೊಡನ - ಮೋರೆನೋಡಿ |ಭಿಡೆಯ ಹಿಡಿಯದವನ |ಬಡವರ ಕರೆತಂದು ಅಡಿಗೆ ಸೇರಿಸಿಕೊಂಡ |ಒಡೆಯ ಪುರಂದರವಿಠಲದೊರೆಯ 3
--------------
ಪುರಂದರದಾಸರು