ಒಟ್ಟು 4 ಕಡೆಗಳಲ್ಲಿ , 2 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪರಿ ಬಹಳ ನಿಷ್ಠುರದ ವಚನಗಳನಾಡುವರು ಜನರು ಪ ಎಷ್ಟು ತಪವನೆ ಮಾಡಿ ಪಡೆದೆನೊ ನಾನಿನ್ನ ಕಷ್ಟವಾಯಿತು ನಿಂದೆ ನುಡಿಯ ಕೇಳುವುದು ಅ.ಪ ಕೊಂಡು ಪೋಗಲಿ ಬೆಣ್ಣೆ ಪಾಲು ಧದಿ ಭಾಂಡಗಳ ದುಂಡು ನಗುಮೊಗ ಚೆಲುವ ನಿನ್ನ ಮಗನು ಕಂಡರೆಮ್ಮನು ಮೋರೆ ತಿರುಗಲೇಕೆ ಇಂಥಾ ಪುಂಡು ಹುಡುಗನೆ ನಿನ್ನ ಮಗನೆಂದು ದೂರುವರು 1 ಮುರಳಿ ನಾದವ ಕೇಳಿ ಮರೆತು ಮೇವನು ಎಮ್ಮ ತುರುಕರುಗಳೆಲ್ಲ ಬಲು ಕೃಶವಾದವಮ್ಮ ಹರಿವ ಯಮುನಾಜಲದೊಳ್ ಆದ ಅವಿವೇಕವನು ಅರುಹಲೆಮ್ಮಯ ಮನವು ಜರಿವುದೆಂದಾಡುವರು 2 ಸಂಸಾರ ಮೋಹವನು ತೊರೆದು ಎನ್ನಲಿ ಮನದ ಸಂಶಯವ ಬಿಡಿ ಬಿಡಿ ಪ್ರಸನ್ನರಾಗಿರಿ ಎಂದ ಧ್ವಂಸವಾಯಿತು ಎಮ್ಮ ಅಭಿಮಾನ ಇವ ಚಂದ್ರ ವಂಶಕೆಂತಹ ಕೀರ್ತಿ ತಂದನೆಂದಾಡುವರು 3
--------------
ವಿದ್ಯಾಪ್ರಸನ್ನತೀರ್ಥರು
ನಾರಾಯಣ ಎನ್ನಬಾರದೆ - ನಿಮ್ಮ |ನಾಲಿಗೆಯೊಳು ಮುಳ್ಳು ಮುರಿದಿಹುದೇ ? ಪ.ವಾರಣಾಸಿಗೆ ಪೋಗಿ ದೂರ ಬಳಲಲೇಕೆ |ನೀರ ಕಾವಡಿಯನು ಪೊತ್ತು ತಿರುಗಲೇಕೆ ||ಊರುರು ತಪ್ಪದೆ ದೇಶಾಂತರವೇಕೆ |ದಾರಿಗೆ ಸಾಧನವಲ್ಲವೆ ಹರಿನಾಮ ? 1ನಿತ್ಯ ಉಪವಾಸವಿದ್ದು ಹಸಿದು ಬಳಲಲೇಕೆ |ಮತ್ತೆ ಚಳಿಯೊಳು ಗಂಗೆ ಮುಳಗಲೇಕೆ ||ಹಸ್ತವ ಪಿಡಿದು ಮಾಡುವ ಜಪ - ತಪವೇಕೆಮುಕ್ತಿಗೆ ಸಾಧನವಲ್ಲವೇ ಹರಿನಾಮ ? 2ಸತಿ - ಸುತರನು ಬಿಟ್ಟು ಯತಿಗಳಾಶ್ರಮವೇಕೆವ್ರತ - ಕೃಚ್ಛ್ರ ನೇಮ - ನಿಷ್ಟೆಗಳೇತಕೆ ||ಪೃಥಿವಿಯೊಳಗೆ ನಮ್ಮ ಪುರಂದರವಿಠಲನ |ಅತಿ ಭಕುತಿಯಿಂದೊಮ್ಮೆ ನೆನೆದರೆ ಸಾಲದೆ 3
--------------
ಪುರಂದರದಾಸರು
ನಾರಾಯಣ ಎನ್ನಿರೊ - ಶ್ರೀ ನರಹರಿ |ನಾರಾಯಣ ಎನ್ನಿರೊ ಪ.ನಾರಾಯಣನೆಂದು ಅಜಮಿಳಕೈವಲ್ಯ |ಸೂರೆಗೊಂಡನೆಂಬ ಸುದ್ದಿಯನರಿಯಿರಾ ? ಅಪಚೋರರ ಭಯ ಎಲ್ಲವೊ - ಇದಕೆ ನೋಡೈ - |ದಾರರಂಜಿಕೆ ಇಲ್ಲವೊ ||ಊರನಾಳುವ ದೊರೆಯ ಭೀತಿ ಇನಿತಿಲ್ಲವೊ ||ಘೋರ ಪಾತಕವೆಲ್ಲ ಹಾರಬಿಡುವುದಿದು 1ಕಾಶಿಗೆ ಹೋಗಲೇಕೆ - ಕಾವಡಿ ಹೊತ್ತು - |ಬೇಸತ್ತು ತಿರುಗಲೇಕೆ |ವಾಸುದೇವನ ನಾಮ ವರ್ಣಿಸಿದವರಿಗೆ |ಕ್ಲೇಶವೆಂಬುವುದಿದು ಲೇಶಮಾತ್ರವು ಇಲ್ಲ 2ಸ್ನಾನವ ಮಾಡಲೇಕೆ - ಸಂಧ್ಯಾವಂದನೆ - |ಮೌನ ಮಂತ್ರಗಳೇತಕೆ ||ದೀನರಕ್ಷಕ ಬೆಟ್ಟದೊಡೆಯನಾದವನ |ಧ್ಯಾನಕೆ ಸಮವುಂಟೆ ಪುರಂದರವಿಠಲನ 3
--------------
ಪುರಂದರದಾಸರು
ಮರೆಯಬೇಡ ಮನವೆ ನೀನು |ಹರಿಯ ಚರಣವ ಪ.ಯಾಗ - ಯಜÕ ಮಾಡಲೇಕೆಯೋಗಿ - ಯತಿಯು ಆಗಲೇಕೆ |ನಾಗಶಯನ ನಾರದವಂದ್ಯನಕೂಗಿ ಭಜನೆಮಾಡುಮನುಜ1ಸತಿಯು ಸುತರು ಹಿತರು ಎಂದುಮತಿಯು ಕೆಟ್ಟು ತಿರುಗಲೇಕೆ |ಗತಿಯು ತಪ್ಪಿ ಹೋಗುವಾಗಸತಿಸುತರು ಬಾಹೊರೇನೊ ? 2ಹರಿಯ ಸ್ಮರಣೆ ಮಾತ್ರದಿಂದದುರಿತ ಘೋರವೆಲ್ಲ ನಾಶಪರಮಪುರುಷ ಪುರಂದರವಿಠಲಪರದಪದವಿಕೊಡುವನೊ3
--------------
ಪುರಂದರದಾಸರು