ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರುಣ ವಂದಿರೆ ಸಾಕಿನ್ನು ಪ. ಕರುಣ ವಂದಿರೆ ಸಾಕು ಸಿರಿಯರಸನೆ ನಾನಾ ಪರಿಯೊಳನ್ಯರ ಬೇಡಿ ತಿರುಗಲಾರೆನು ಕೃಷ್ಣ ಅ.ಪ. ಪರಮಾಣು ತ್ರುಟಿಲವ ನಿಮಿಷ ಮಾತ್ರ ಯುಗ ಗುರು ಪ್ರಾಣ ಒಳನಾಡಿ ಮುಹೂರ್ತ ಪ್ರಹರ ಮಾಸ ಋತ್ವಯನ ವ- ತ್ಸರಯುಗ ಮಾನವೆಂಬ ಉಪಾದಿಗ ಳಿರಿಸಿ ಭೋಗಗಳನುಂಬ ಮಹಾಕಾಲ ಧುರವಹ ತಾನೆಯೆಂಬಾ ಧೀರತೆಯಿಂದ ಲಿರುವಿ ಲೋಕದಲಿ ತುಂಬಾ ಪಾದ ಪದ್ಮ 1 ತೃಣತರು ಕ್ರಿಮಿಪಕ್ಷಿ ಪಶುನರ ದೇವಕ್ಕ ಳೆಣಿಕಿಯಿಲ್ಲದ ದಿತಿಜಾರಿ ಜೀವರನೆಲ್ಲ ಕುಣಿಸುವ ಬೊಂಬೆಯಂದದಲಾಡಿಸುತ ಲೇಶ ದಣಿವಿಲ್ಲದೆ ಭಕ್ತ ಜನರಿಗೆ ಸುಖಸಾರ ಉಣಿಸಿ ಮದಾಂಧರ ಹಣಿದು ಹಣಿದು ಕುಟ್ಟಿ ಒಣಗಿಸಿ ಬಿಸುಟು ತಿನ್ನುವತ್ತಿದುವಿ ಮೇಲಣ ದುರ್ಗಪತಿಗಳನು ಮನ್ನಣೆಯಿಂದ ತಣಿಸಿ ಕಾಪಾಡುವನು ನೀನಹುದೆಂದು ಮಣಿದು ಬೇಡುವೆ ನಿನ್ನ ಮುರಹರ ಸಲಹಿನ್ನು 2 ಮಾಧವ ಮಂಗಲದಾಯಕ ತವ ಪದ್ಮ ಪಾದ ಸೇವೆಯ ಮಾಡುವಲ್ಲಿಗೆ ಜಾಹ್ನವಿ ಗೋದಾವರಿ ತುಂಗ ಕಾವೇರಿ ಕಲುಷಾವ ನೋದದಿ ಕೃಷ್ಣ ಸರಸ್ವತಿ ಗೋಮತಿ ವೇದವತಿ ಮೊದಲಾದ ನದಿಗಳೆಲ್ಲ ಸಾದರದಲಿ ಸೇರುತ ಬಂದಿಹರೆಂಬ ಗಾಧವಚನ ನಂಬುತ ನಿಂದಿಹೆನು ಕ್ಷೀ ರೋದಧಿ ಗೃಹನಿರತ ಸಾಕಿದೆ ಮುಂದಿ- ನ್ಹಾದಿ ತೋರಿಸು ಸ್ವರತ ಶ್ರೀದ ವೆಂಕಟರಾಜ ಸೇವಕನಾನೆಂದು 3
--------------
ತುಪಾಕಿ ವೆಂಕಟರಮಣಾಚಾರ್ಯ
ಕೃಪೆ ಮಾಡೋ ಕೃಷ್ಣ ಕೃಪೆಮಾಡೋ ತಪ್ಪದೆ ಪ್ರಾತಃ ಸಂಜೆ ನಿನ್ನ ಸ್ತುತಿ ಮಾಡುವಂತೆ ಪ ಚಂದ್ರಹಾಸನಂತೆ ವ್ರತ ಮಾಡಲರಿಯೆ ಅಂದಿನ ಧ್ರುವನಂತೆ ತಪಗೈಯಲಾರೆ ಕಂದ ಪ್ರಹ್ಲಾದನಂತೆ ಬಿಡದೆ ನುತಿಸಲಾರೆ ಸಂದ ನಚಿಕೇತನಂತೆ ಮೃತ್ಯುಗೆಲ್ಲಲರಿಯೆ 1 ಕರಿರಾಜನಂತೆ ಕೂಗಲರಿಯೆನೋ ಗರುಡನಂತೆ ಸದಾ ಹೊತ್ತು ತಿರುಗಲಾರೆ ಮರುತಜನಂತೆ ಭಂಟನಾಗಲರಿಯೆ ಉರಗರಾಜನಂತೆ ಶಯನಕಾಗಲಾರೆ 2 ದ್ರೌಪದಿಯಂತೆ ಅತ್ತು ಮೊರೆಯಿಡಲಾರೆ ರೂಪೆ ಭಾಮೆಯಂತೆ ಬಲು ಮೋಹಿಸಲಾರೆ ಆಪಾಟಿ ಸಖನಾಗರಿಯೆನು ಮಕರಂದನೊಲು ವಿಪ್ರನಾರಾಯಣನಂತೆ ಭಕ್ತಿಯರಿಯೆನೊ ಹರಿಯೆ 3 ಜಾಜಿಪುರೀಶ ನಿನ್ನ ಚರಣ ಸೇವೆಯ ಕೊಡೊ ಸಾಜದಿ ಮಾಡುವೆ ತಿಳಿದಂತೆ ಪಾಮರನು 4
--------------
ನಾರಾಯಣಶರ್ಮರು
ನಾನಾ ಯೋನಿಗಳೊಳು ಹೀನಜನ್ಮದಿ ಬಂದು ನಾನು ತಿರುಗಲಾರೆನೊ ಗೋಪಾಲ ಪ. ಶ್ರೀನಿವಾಸ ನಿನ್ನ ಸೇರಿದ ಬಳಿಕ ಉದಾಸೀನ ಮಾಳ್ಪರೇನೋ ಗೋಪಾಲ ಅ.ಪ. ಇಂದ್ರಿಯದೊಳಿದ್ದೆನೊ ಗೋಪಾಲ ಪಿಂಡವಾದೆನೊ ಗೋಪಾಲ ಮಾಸ ನಾಲ್ಕಯಿದಾಗಲ ವಯವಂಗಳಿಂದ ಬೆಳೆವುತಿದ್ದೆನೊ ಗೋಪಾಲ 1 ನರಳಿ ಕೋಟಲೆಗೊಂಡೆನೊ ಗೋಪಾಲ ಹಿರಿದು ಚಿಂತಿಸಿದೆನೊ ಗೋಪಾಲ ಕಷ್ಟಬಡುತಿದ್ದೆನೊ ಗೋಪಾಲ ಸಂದ ಧರೆಗೆ ಪತನವಾದೆನೊ ಗೋಪಾಲ2 ಘಾಸಿಯೊಳೊರಲುವೆನೊ ಗೋಪಾಲ ಘಾಸಿಸಿ ದುಃಖಿಪೆನೊ ಗೋಪಾಲ ಬ್ಯಾಸತ್ತು ಒರಲುವೆನೊ ಗೋಪಾಲ ಶ್ವಾಸ ಎತ್ತಿದೆನೊ ಗೋಪಾಲ 3 ಬಾಲತನದಿ ಬಹುವಿಧದಾಟವ ತೋರಿ ಮೇಲನರಿಯದಿದ್ದೆನೊ ಗೋಪಾಲ ಮಾರ್ಜಾಲ ಘಾತಕನಾಗಿದ್ದೆನೊ ಗೋಪಾಲ ಕೂಳಿಗೀಡಾಗಿದ್ದೆನೊ ಗೋಪಾಲ ಪಾಳೆಯಕೀಡಾದೆನೊ ಗೋಪಾಲ 4 ಆಗಿ ಬಾಳುತಲಿದ್ದೆನೊ ಗೋಪಾಲ ನೀಗಿ ಬಾಳುತಿದ್ದೆನೊ ಗೋಪಾಲ ಬಾಧೆಗೆ ಬೆಂಡಾದೆನೊ ಗೋಪಾಲ ಆಗಲು ಪುತ್ರ ಬಾಂಧವರಿಗೋಸ್ಕರ ಭವ- ಸಾಗರ ಎತ್ತಿದೆನೊ ಗೋಪಾಲ 5 ಬಾಲ್ಯಯೌವನವಳಿದು ಜರೆ ಒದಗಿ ನಾನು ಮೇಲೇನರಿಯದಿದ್ದೆನೊ ಗೋಪಾಲ ಬೀಳುತೇಳುತಲಿದ್ದೆನೊ ಗೋಪಾಲ ಹೋದಂತಿದ್ದೆನೊ ಗೋಪಾಲ ಗೂಳಿಯಂದದಲಿದ್ದೆನೊ ಗೋಪಾಲ 6 ಬಾಳುತಲಿದ್ದೆನೊ ಗೋಪಾಲ ಗಿಷ್ಟನೆನಿಸಿಕೊಂಡೆನೋ ಮುಟ್ಟರೆನಿಸಿಕೊಂಡೆನೊ ಗೋಪಾಲ ಕೊಟ್ಟು ತಿನಿಸಿದೆನೊ ಗೋಪಾಲ7 ವೇದನೆಗೊಳುತಿದ್ದೆನೊ ಗೋಪಾಲ ಕೊಂಡದಿ ಬಿದ್ದೆನೊ ಗೋಪಾಲ ಗುಹ್ಯ ಯಾತನೆಗೊಳಗಾದೆ ಗೋಪಾಲ ಬಾಧೆಯೊಳು ಒರಲುವೆನೊ ಗೋಪಾಲ 8 ನಿನ್ನ ನೆನೆಯದಿದ್ದೆನೊ ಗೋಪಾಲ ದುಷ್ಟಬುದ್ಧಿಯೊಳಿದ್ದೆನೊ ಗೋಪಾಲ ಶ್ರೇಷ್ಠಜನ್ಮದಿ ಬಂದೆನೊ ಗೋಪಾಲ ಸೃಷ್ಟಿಯೊಳು ತುರುಗೇರಿ ಗುರು ಅಚಲಾನಂದವಿಠಲ ಸಲಹೆಂದೆನೋ ಗೋಪಾಲ 9
--------------
ಅಚಲಾನಂದದಾಸ