ಒಟ್ಟು 13 ಕಡೆಗಳಲ್ಲಿ , 6 ದಾಸರು , 11 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗಂಡ ಬಂದರೇನೆಲೋ ರಂಗಾ ಯನ್ನ ಗಂಡ ಬಂದರೇನೆಲೋ ರಂಗ ಪ ಒಗೆತನ ಭಂಗಾ ಯನ ಗಂಡ ಅ.ಪ. ಬಾಗಿಲ ತೆಗೆಯೆಂದಾರ್ಭಟದಿಂದಲಿ ಕೂಗುವ ಧ್ವನಿ ಕೇಳೈ ಇದಕೋ ಹ್ಯಾಗೆ ಮಾಡಲಿ ಹಾದಿಯ ಮನೆ ಯೆನ - ಗಾಗದವರು ಬಂದೀಗ ನಗುವರೆನ್ನ1 ನಂದಗೋಕುಲದಿ ನಾನೇ ಗರತಿ - ಯೆಂದು ಮೆರೆಯುತ್ತರಲೀಗ ಬಂಧು ಬಳಗದೊಳು ಬಂಡಳಾಗಿಯೆಂ- ದೆಂದಿಗೂ ತಲೆಯೆತ್ತಿ ತಿರುಗದಂತೆ ಯನ್ನ 2 ದಕ್ಕಲಿಲ್ಲ ಮನದೊಳಗೆ ಮಾಡಿಕೊಂ - ಡಕ್ಕರ ತೀರಲಿಲ್ಲ ಮುನ್ನಾ ಗಕ್ಕನೆ ಗೋವಳ ಬರಬಹುದೆ ಖಳ ಸಿಕ್ಕಿದೇವÀಲ್ಲವೊ ಶ್ರೀದವಿಠಲ ಯನ್ನ 3
--------------
ಶ್ರೀದವಿಠಲರು
ಗೋಪಿ ನಿನ್ನ ಬಾಲನ ಮಾಡುವ ಆಟದ ಪರಿಯನು ಪ ತುಡುಗಿಲಿ ಗೋರಸ ಕುಡಿವಾ | ಅವ | ಘಡಿಸಲು ಕಣ್ಣನೆ ಬಿಡುವಾ | ಹಿಡಿಯಲು ಬರೆ ಬೆನ್ಗೊಡುವ | ಅಡಿ | ಇಡುತಲಿ ತಿರುಗದೆ ಓಡುವನವ್ವಾ 1 ಕೊಡಮಸರಿಗೆ ಬಾಯ್ದೆರೆವಾ | ತಾ | ಬೇಡುವ ಪಸರಿಸಿ ಕರವಾ | ಕೊಡಲಿ ದಣಿಯದೆ ಸುರಿವಾ | ನ | ಟ್ಟಡವಿಲಿ ನಿಂದು ಹೊರೆವನವ್ವಾ 2 ಕೊಳಲನೂದಿ ಹೊಳೆವಾ | ಹೆಂ | ಗಳೆಯರ ಸನ್ಮತಿಗಳೆವಾ | ಅಳುಕದೆ ವಾಜಿಲಿ ನಲಿವಾ | ಇಳೆ | ಯೊಳು ಮಹಿಪತಿ ಸುತ ಪ್ರಭು ಲೀಲೆವ್ವಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ದೃಷ್ಟಿ ಇರಬೇಕಯ್ಯ ಬ್ರಹ್ಮದಿ ದೃಷ್ಟಿಯಿರಬೇಕುದೃಷ್ಟಿಯಿಲ್ಲದಿರಲು ಅನುಭವ ಪಟು ದೊರಕದು ಪ ಆಲಿಯು ನಿಂತೆ ಆಲಿಯ ಗೊಂಬೆಯು ತಿರುಗದಲಿರಬೇಕುಆಲಿಯು ಮುಚ್ಚದೆ ಆಲಿಯ ರೆಪ್ಪೆಯು ಬಡಿಯದಲಿರಬೇಕು 1 ಅನಿಮಿಷ ದೃಷ್ಟಿಯಂದದಿ ಬ್ರಹ್ಮವ ಆಲಿಸುತಿರಬೇಕುಅನಿಮಿಷದಂದದಿ ಕಣ್ಣಿನ ಗುಡ್ಡೆ ತಿರುಗದಲಿರಬೇಕು2 ದೃಷ್ಟಿಯು ಕುಳಿತಾ ದೃಷ್ಟಿಯು ಮುಂದಕೆ ಸಾಗಲಿರಬೇಕುದೃಷ್ಟಿಯು ತಾನೆಡಬಲಕೆ ಸರಿಯದೆ ದೃಷ್ಟಿಯು ಇರಬೇಕು 3 ಕುಳಿತಾ ಸ್ಥಳವು ತಪ್ಪಲು ಮತ್ತೆಯು ಕುಳಿತುಕೊಳ್ಳಬೇಕುಥಳಥಳ ಹೊಳೆಯುವ ಬೆಳಗದ ಪಸರಿಸಿ ತರನಾಗಿರಬೇಕು 4 ಉದಯಾಸ್ತಮಾನವು ದಿವರಾತ್ರಿಯುಡುಗಿ ಇರಬೇಕುಚಿದಾನಂದ ಸದ್ಗುರು ತಾನಾಗಿಯೆ ತಾನೆ ಇರಬೇಕು 5
--------------
ಚಿದಾನಂದ ಅವಧೂತರು
ನೆನೆಯಿರೋ ಪಾಪಿಗಳಿರ ನೆನೆಯಿರೋ ಪಾಪಿಗಳಿರನೆನೆಯಿರೋ ದ್ರೋಹಿಗಳಿರ ನೆನೆಯಿರೋ ಆತ್ಮನನು ಪ ಘಳಿಗೊಂದು ಮರೆಯಾಗಲಾಗಿ ಮೇರು ಕೊಟ್ಟರು ತಿರುಗದುಘಳಿಗೆರಡು ಪೋಗೆ ಕಡೆಯಿಲ್ಲ ಕೇಡುಸುಲಭವೆನಲಿಕ್ಕಿಲ್ಲ ದೇಹ ನಿತ್ಯವದಲ್ಲಕಲಹದ ಮಾತಲ್ಲ ಕಡೆ ಹಾಯ್ವ ಪಥವು 1 ಮಲಗಿದಾಗಲೆ ಏನೋ ಕುಳಿತಾಗಲೇನೋತಿಳಿದು ನೋಡಲು ನಡೆವಾಗ ನುಡಿವಾಗಲೇನೋಬಲವು ಕಾರಣವಲ್ಲ ಆಗೇನೋ ಈಗೇನೋಮಲ ಮೂತ್ರ ಮಾಂಸಗಳ ಮುರಿಕೆ ಮಜ್ಜೆಯಿದು 2 ಭವ ಪಾಲಹ ಪಾಪಿ3
--------------
ಚಿದಾನಂದ ಅವಧೂತರು
ಮರೀಬೇಡೋ ಮರೀಬೇಡೋ ಪಾದ ಮರೀಬೇಡೋ ಮರೀಬೇಡೋ ಪ ಮರೀಬೇಡೆಲೆ ಮನ ಜರಾಮರಣೆಂದೆಂಬ ತಿರುಗದ ಗಣೆ ಮಡುವಿನೋಳ್ಜಾರಿಬಿದ್ದುಅ.ಪ ಒಂದೆ ನಿಮಿಷ ಇಹ್ಯ ಚಂದಕಂಡು ಬಲು ಅಂದಗೆಡುವ ಸುಖ ಮಂದನಾಗಿ ಮೆಚ್ಚಿ 1 ನಿಜವನು ತಿಳಿಸದೆ ಮಜತೋರಿಸಿ ಬಲು ಗಿಜಿಗಿಜಿಮಾಡುವ ಕುಜಮತಿಯೊಳು ಬಿದ್ದು 2 ಅಸಮಸಂಪದಕೆ ಮಸಿಹಚ್ಚಿ ಒಂದುದಿನ ನಶಿಸಿಪೋಗುವ ಮಾಯ ಮುಸುಕಿನೊಳಗೆ ಸಿಕ್ಕು 3 ಸವಿಯದಾನಂದವನು ಭವಕೆ ಕಿಡಿಯನಿಟ್ಟು ಜವನಿಗೀಡೆನಿಸುವ ಭೂಸುಖಕ್ಕೊಳಪಟ್ಟು 4 ಪೊಡವಿಯೊಳಗೆ ತನ್ನ ದೃಢದಿ ಸ್ಮರಿಪರ ಬೇಡಿದ ಮನದಿಷ್ಟ ಕೊಡುವ ಶ್ರೀರಾಮನ 5
--------------
ರಾಮದಾಸರು
ಮುತ್ತಿ ಎನಗೆ ಬಡಿತವ್ವ ಹರಿ ಭಕ್ತರ ಮನಿಯನ ದೆವ್ವ ಪ ಅತ್ತಿತ್ತಮಾಡಿ ಬೆನ್ನ್ಹತ್ತಿ ಬಿಡದೆ ಎನ್ನ ನೆತ್ತಿಕೊಂಡು ಓಡ್ಹೋಯ್ತವ್ವ ಅ.ಪ ಬಿದ್ದರೆ ಬೀಳಗೊಡಲಿಲ್ಲವ್ವ ಸುಮ್ಮ ನಿದ್ದರೆ ಇರಗೊಡಲಿಲ್ಲವ್ವ ಬುದ್ಧಿಭ್ರಮಿಸಿ ಬಲುಗದ್ದಲಮಾಡೆನ್ನ ಮುದ್ದಿಟ್ಟೆಬ್ಬಿಸಿಕೊಂಡ್ಹೋಯ್ತವ್ವ 1 ಉಟ್ಟದಟ್ಟಬಿಡಿಸೊಗಿತವ್ವ ಬಂದ ಎರವು ಮಾಡಿತವ್ವ ವೊಷ್ಟು ಬಿಡಿಸಿ ಎನ್ನ ಗಟ್ಟ್ಯಪ್ಪಿ ತಿರುಗದ ಬೆಟ್ಟಕ್ಕೆ ಎಳಕೊಂಡ್ಹೋಯ್ತವ್ವ 2 ಭೋರಿಟ್ಟತ್ತರು ಎನ್ನ ಬಳಗವ್ವ ಸಮೀ ಪಾರನು ಬರಗೊಡಲಿಲ್ಲವ್ವ ಸಾರಸೌಖ್ಯಕ್ಕಾಧಾರ ಶ್ರೀರಾಮಪಾದ ಸೇರಿಸಾನಂದಪದವೇರಿಸಿತವ್ವ 3
--------------
ರಾಮದಾಸರು
ಆರು ಬಾರರು ಸಂಗಡಲೊಬ್ಬರು |ನಾರಾಯಣನ ದಿವ್ಯನಾಮ ಒಂದಲ್ಲದೆ ಪಹೊತ್ತು ನವಮಾಸಪರಿಯಂತಗರ್ಭದಲಿ |ಅತ್ಯಂತ ನೋವು ಬೇನೆಗಳ ತಿಂದು ||ತುತ್ತು ಬುತ್ತಿಯ ಕೊಟ್ಟು ಸಲಹಿದ ತಾಯಿಯು |ಅತ್ತು ಕಳುಹುವಳಲ್ಲದೆ ಸಂಗಡ ಬಾಹಳೆ 1ನೆರೆದಿದ್ದ ಪುರಜನ ವಿಪ್ರರಗ್ನಿಯ ಸಾಕ್ಷಿ |ಕರವಿಡಿದು ಕೈಧಾರೆ ಎರಸಿಕೊಂಡ ||ತರುಣಿ ತನ್ನಯ ಗಂಡನನು ಮುಟ್ಟಲಮ್ಮದೆ |ನೆರೆಏನುಗತಿತನಗೆ ಹೇಳಲಮ್ಮಳಲ್ಲದೆ2ಮನೆ-ಮಕ್ಕಳಿವರೆನ್ನ ತನುವು ಒಡವೆ ಎರಡು |ಘನವಾಗಿ ನಂಬಿರೆ ನನ್ನವೆಂದು |ಅನುಮಾನವೇತಕೆ ಜೀವ ಹೋದಬಳಿಕ |ಘನಹೊತ್ತು ಮನೆಯಲಿ ಇರಿಸಿಕೊಳ್ಳರೊ ದೇವ 3ಆತ್ಮ ಬಳಲಿದಾಗ ಬಂಧುಗಳು ಬಂದು |ಹೊತ್ತು ಹೊರಗೆ ಹಾಕು ಎಂತೆಂಬರು ||ಹೊತ್ತುಕೊಂಡು ಹೋಗಿ ಅಗ್ನಿಯಲ್ಲಿ ಬಿಸುಟು |ಮತ್ತೆ ಬೆನ್ನನು ತಿರುಗದಲೆ ಬಾಹೋರಲ್ಲದೆ 4ಹರಣಹೋಗದ ಮುನ್ನ ಹರಿಯ ಸೇವೆ ಮಾಡಿ |ಪರಲೋಕಸಾಯುಜ್ಯಪಡೆದುಕೊಂಡು |ಕರುಣಿ ಕೃಪಾಳು ಶ್ರೀ ಪುರಂದರವಿಠಲನ |ನೆರೆನಂಬಿ ಭಜಿಸಿ ನೀ ಸುಖಿಯಾಗೊ ಮನುಜಾ 5
--------------
ಪುರಂದರದಾಸರು
ದೃಷ್ಟಿ ನಿನ್ನ ಪಾದದಲ್ಲಿ ನೆಡುವ ಹಾಗೆ - ಧರೆಯದುಷ್ಟ ಜನರ ಸಂಗಗಳನು ಬಿಡುವ ಹಾಗೆ ಪ.ಕೆಟ್ಟ ಮಾತ ಕಿವಿಯಿಂದ ಕೇಳದ ಹಾಗೆ ಮನವಕಟ್ಟು ಸದಾ ನಿನ್ನ ಧ್ಯಾನ ಬಿಡದ ಹಾಗೆ ಅಪದೃಷ್ಟನಾಗಿ ಕೈಯನೆತ್ತಿ ಕೊಡುವ ಹಾಗೆ ಶ್ರೀಕೃಷ್ಣ ನಿನ್ನ ಪೂಜೆಯನ್ನು ಮಾಡುವ ಹಾಗೆ ||ಭ್ರಷ್ಟನಾಗಿ ನಾಲ್ವರೊಳು ತಿರುಗದ ಹಾಗೆ ಬಲುಶಿಷ್ಟ ಜನರ ಸೇವೆಯನು ಮಾಡುವ ಹಾಗೆ 1ಪುಟ್ಟಿಸಿದ ತಾಯಿ - ತಂದೆಯಲ್ಲವೆ ನೀನು - ಒಂದುಹೊಟ್ಟೆಗಾಗಿ ದೈನ್ಯ ಪಡಬೇಕೇ ನಾನು ||ಪಟ್ಟೆ -ಪಟ್ಟಾವಳಿ ಬೇಡಲಿಲ್ಲ ನಾನು ಎನ್ನಗುಟ್ಟು ಅಭಿಮಾನಗಳ ಕಾಯೋ ನೀನು2ನಟ್ಟನಡು ನೀರೊಳೀಸಲಾರೆ ನಾನು ಎತ್ತಿಕಟ್ಟೆಯ ಸೇರಿಸಬೇಕಯ್ಯ ನೀನು ||ಬೆಟ್ಟದಷ್ಟು ಪಾಪ ಹೊತ್ತಿರುವೆ ನಾನು ಅದನುಸುಟ್ಟು ಬಿಡುಪುರಂದರ ವಿಠಲ ನೀನು3
--------------
ಪುರಂದರದಾಸರು
ಯೋಗಿಗೆ ಸೃಷ್ಟಿ ಬರುವುದೆಂತು ವಿದ್ಯದಲಲ್ಲದೆಯೋಗ ವಿದ್ಯೆದಲ್ಲಿ ಎಂತು ಅನ್ನಬಹುದೆ ಇಂತುಯೋಗಿಯೆ ಈಶ್ವರ ತಾನೀಗೇಕೆಯೋಗಿಯು ಈಶ್ವರ ಬೇರೆ ಎನೆ ನರಕವುಪಆಲಿಯು ನಿಂತೆ ಆಲಿಯ ಗೊಂಬೆಯು ತಿರುಗದಲಿರಬೇಕುಆಲಿಯು ಮುಚ್ಚದೆ ಆಲಿಯು ರೆಪ್ಪೆಯು ಬಡಿಯದಲಿರಬೇಕು1ಆನಿಮಿಷ ದೃಷ್ಟಿಯಂದಲಿ ಬ್ರಹ್ಮವ ಆಲಿಸುತಿರಬೇಕುಅನಿಮಿಷದಂದದಿ ಕಣ್ಣಿನ ಗುಡ್ಡೆ ತಿರುಗದಲಿರಬೇಕು2ದೃಷ್ಟಿಯು ಕುಳಿತಾ ದೃಷ್ಟಿಯು ಮುಂದಕೆ ಸಾಗಲಿರಬೇಕುದೃಷ್ಟಿಯು ತಾನೆಡಬಲಕೆ ನಲಿಯದೆ ದೃಷ್ಟಿಯು ಇರಬೇಕು3ಕುಳಿತಾ ಸ್ಥಳವು ತಪ್ಪಲು ಮೆತ್ತೆಯು ಕುಳಿತುಕೊಳ್ಳಬೇಕುಥಳಥಳ ಹೊಳೆಯುತ ಬೆಳಗದ ಪಸರಿಸಿ ಗೂಢನಿರಲುಬೇಕು4ಉದಯಾಸ್ತಮಾನವು ದಿವರಾತ್ರಿಯುಡಗಿ ಇರಬೇಕುಚಿದಾನಂದ ಸದ್ಗುರು ತಾನಾಗಿಯೆ ತಾನೆ ಇರಬೇಕು5
--------------
ಚಿದಾನಂದ ಅವಧೂತರು
ಶ್ರೀ ವೆಂಕಟೇಶನ ಬಿಡಬೇಡಿ ಪ.ಹಲವು ದೈವಕೆ ಹಲ್ಲು ತೆರೆಯದೆ ಹೊಗಳದೆಛಲದೆ ಮನದಣಿಯೆ ಕೊಂಡಾಡಿ 1ಸುರಭಿಯ ಬಿಟ್ಟು ಕಂಡಾವಿನ ಬೆಂಬತ್ತಿತಿರುಗದೆ ಕಣ್ಣುದಣಿಯೆ ನೋಡಿ 2ಸ್ಥಿರವಲ್ಲ ಮಿಕ್ಕವರ ವರಂಗಳು ಚರಂಗಳುಪರಸನ್ನವೆಂಕಟಪತಿಯ ಬೇಡಿ 3
--------------
ಪ್ರಸನ್ನವೆಂಕಟದಾಸರು
ಸರಿಸರಿದೋಡುತಿವೆಲವತ್ರುಟಿಗಳುತಿರುಗದಲಿಟ್ಟಡಿಯಹರಿಗುರು ಪ್ರೀತಿಯ ದೊರಕಿಸು ಪ್ರಾಣಿಕಿರಿಯರಲ್ಲ್ಲ್ಯಮನವರು ಪ್ರಾಣಿ ಪ.ಪರದಾರ ಪರಸಿರಿ ಪರನಿಂದೆ ನಿರುತದಿಚಿರರತಿ ಬೆರತ್ಯಲ್ಲೊಪರಉಪಕಾರ ದಾರಿಯರಿಯದೆ ಬರಿ ಒಣಗರುವಿನಲಿರುವ್ಯಲ್ಲೊನರಹರಿ ಚರಣವಾದರಿಸದೆ ಸ್ಮರಿಸದೆನರರನುಸರಿಪ್ಯಲ್ಲೊಶರೀರ ಸಿಂಗರಿಸಿ ಸತ್ಕಾರ್ಯಬಾಹಿರನಾಗಿನಿರಯಕೆ ಗುರಿಯಾದ್ಯಲ್ಲೊ ಪ್ರಾಣಿ 1ಸುಖಗಳ ಕಕುಲತೆಗಖಿಳ ಸಾಧಕನಾದೆಭಕುತಿಗಳಿಕೆ ತೊರೆದುಬಕವೃತ್ತಿಯ ಕಲಿತು ಮುಖವ ಮುಸುಕಿದೆ ವಿರಕ್ತಿಸರಕುದೋರೈಲೋಕದ ಮೋಹಕ ಜ್ಞಾನಾಧಿಕನಾದೆ ಅಕಳಂಕಸುಖತೀರ್ಥವಾಕುದೋರೈಸಕಲಕಲೆ ಕಲಿತು ಸ್ತ್ರೀಕದಂಬ ಸಖನಾದೆಮುಕುತಿ ಹೊಂದಿಕೆ ತೋರೈ ಪ್ರಾಣಿ 2ಅಶನದುವ್ರ್ಯಸನಕೆ ನಿಶಿದಿನ ವಶನಾದೆಶ್ರೀಶ ಭೃತ್ಯೆನಿಸಿಕೊಳ್ಳೊಹುಸಿಉಪದೇಶಧ್ಯಾತ್ಮ ವೇಷದೊಳು ಘಾಸಿಯಾದೆದಶವ ವರಿಸಿಕೊಳ್ಳೈವಿಷಯ ಬಯಸಿ ವೃಥ ಮಸಿವರ್ಣೆನಿಸದೆ ನೀನ್ಯಶಸ ಕೂಡಿಸಿಕೊಳ್ಳೈಹಸಿತೃಷೆಗಸಣೆಗೆ ಬೇಸರದೆ ಪ್ರಸನ್ವೆಂಕಟೇಶನ ಒಲಿಸಿಕೊಳ್ಳೈ ಪ್ರಾಣಿ 3
--------------
ಪ್ರಸನ್ನವೆಂಕಟದಾಸರು