ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂಥಾ ಮೋಹನನೇ ನೋಡಮ್ಮಯ್ಯಾ| ಸಂತತ ತೃಪ್ತನು ಬಾಲಕನಾದಾ|ಅ- ನಂತ ಚರಿತೆಯಾ ದೋರುವ ಕೃಷ್ಣ ಪ ಮೂಡಣ ದೇಶಕೆ ಪಡರಲು ಗೋಪಿಯು| ತಡೆಯದೆ ದುಮುಧುಮು ಧುಮುಕೆನುತ| ಕಡೆಯಲು ಧುಡು ಧುಡು ಧುಡುನಡೆಯುತ ಬಂದು| ಪಿಡಿದೆನ್ನ ಸೆರಗ ಬೆಣ್ಣೆ ಬೇಡುವಾ ಕೃಷ್ಣ 1 ಸಮಗೆಳೆಯರ ಸಂಗಡ ಧ್ವನಿವೇಣಿಯ| ಉಮಟೆಸುತಲಿ ಧಿಗಿಧಿಗಿಲೆನುತಾ| ಧಿಮಿಕಿಟ ಧಿರಕಿಟ ತಿರುಕಿಟವೆಂಬೋ| ಕ್ರಮದಿ ವಾದ್ಯವ ಬಾರಿಸುವಾ ಕೃಷ್ಣ 2 ಗುರು ಮಹೀಪತಿ ಪ್ರಭುವಿನ ಪದರಜ| ದೊರಕದು ಅಜಭವ ಮುಖ್ಯರಿಗೆ! ಹರುಷದಿ ತೋಳ್‍ದೊಡೆ ಮೇಲೆ ಓಡಾಡುವಾ| ಧರೆಯೊಳು ಯಶೋಧೆ ಸುಕೃತವೆಂತೋ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸ್ವಾಮಿತ್ವದವರಿಗೆ ಅಯುಕ್ತವೇ ಯುಕ್ತ |ಶ್ರೀಮನೋರಮನೆ ಪೇಳುವೆ ಕೇಳು ಶಕ್ತ ಪಮಾವನಿಗೇ ಮಾವನಾದೆಯಲೊ ಜನ್ಮಾರಭ್ಯ |ನೀವೊಡಲ ಹೊರದೆ ಚೋರತನ ಮಾಡಿ ||ಕೋವಿದಂಗತಿ ಮೆಚ್ಚು ಜಾರತನ ಮಾಡಿದುದು |ಆ ವನಿತೆ ಮೆದ್ದ ಫಲ ಮೆದ್ದಿ ನಿರ್ದೋಷಿ 1ನರಸೇವೆಯ ಮಾಡಿ ಪೆಸರಾದಿ ಮಾತೆಯ ಕೊಂದೆ |ಧರೆಯೊಳಗೆ ಮಾತುಲನ ಕೊಲ್ಲಬಹುದೇ ||ತಿರುಕಿ ಬೇಡಿಸುವಳರಸರನ ನಿನ್ನಯ ರಾಣಿ |ಪರಿಮಿತಿಯಿಲ್ಲದ ದುರಾಚಾರಿ ನಿನ್ನಯ ಮಗನು 2ಮೈದುನನು ಗುರುದ್ರೋಹಿ ಮೊಮ್ಮಗನು ಬಹು ಚಾಡಿ |ಮೇದಿನಿಯೊಳಗೆ ಹೇಳುತಲೆ ತಿರುಗುವ ||ಶ್ರೀದ ಪ್ರಾಣೇಶ ವಿಠ್ಠಲನೇ ನೀನೇ ದೊರೆ |ಯಾದ ಕಾರಣ ದಕ್ಕಿತಿದು ಇಲ್ಲದರೆ ಸಲ್ಲ 3
--------------
ಪ್ರಾಣೇಶದಾಸರು