ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನೆಂದು ಕರೆದರೆ ಬರುವಿ ನಿನ್ನ ಧ್ಯಾನಿಸಿ ಕರೆದರೆ ಬಾರದೆ ಇರುವಿ ಪ ದೀನದಯಾಳು ಶ್ರೀ ಅನಂತ ಮಹಿಮೆಂದು ಗಾನದಿಂ ಪಾಡಲು ಕೇಳದೆ ಇರುವಿಅ.ಪ ಸೊಪ್ಪಮೆದ್ದವನೆಂದೆನಲೆ ನಿನ್ನ ತಿಪ್ಪೆತಿರುಕನೆಂದು ಗೌಪ್ಯದಿಂ ಕರಿಲೇ ಕಪ್ಪುಮೈಯವನೆನ್ನಲೊಪ್ಪಿಕೊಂಡು ಬಂದು ಅಪ್ಪಿಕೊಂಡ್ವರವೀವ್ಯೋ ಮುಪ್ಪುರಾಂತಕನೆ 1 ಏಸುಕಾಲದ ಮುದುಕನೆನಲೇ ನಿನ್ನ ಆಸೆಕಾರನೆಂದು ಆಶಿಸಿ ಕರಿಲೇ ಹಾಸಿಕೆ ಕಾಣದೆ ಶೇಷನಮೇಲೇರಿ ವಾಸಿಸುವಿಯೆನಲು ಪೋಷಿಸುವೆಯೋ ಬಂದು 2 ಬಲುಬಲು ಕಪಟಿಯೆಂದೆನಲೇ ನೀ ಕಳವಿನೋಳ್ ಪ್ರವೀಣನೆಂದು ಕೂಗಲೇ ಕುಲಗೆಟ್ಟು ಭಕ್ತರ ಕಲೆಸಿ ಗುಪ್ತದಿಂದ ಕುಲದಿ ಬಿದ್ದವನೆನಲು ಒಲಿದು ಕಾಯುವೆಯೋ 3 ಆಲಯ ಕಾಣದೆ ಹೋಗಿ ನೀನು ಪಾಲಸಾಗರವಾಸನೆಂದು ಕರಿಲೇ ಬಾಲೆಯರುಡವ ದುಕೂಲ ಚೋರನೆಂದು ಮೇಲಾಕೂಗಲು ಪಾಲಿಸುವೆಯೋ ಒದಗಿ 4 ಅರಣ್ಯವಾಸಿಯೆಂದೆನಲೇ ನೀನು ನಾರಿಯಳ ಕಳಕೊಂಡನೆಂದು ಸಾರಲ್ಯೋ ಕೋರಿದವರ ಮನಸಾರ ವರನ ನೀಡ್ವ ಧೀರ ಶ್ರೀರಾಮನೆಂದ್ಹಾರೈಸಿ ಕರೆಯುವೆ 5
--------------
ರಾಮದಾಸರು
ಪೊರೆಯಬೇಕೋ ಎನ್ನ ಶ್ರೀ ನರ ಹರಿಯೆ ಕೇಳೋ ಮುನ್ನಾ ಪ ನೀ ಪೊರೆಯದಿರಲು ಈ ಪೊಡವಿಯೊಳಗೆ ಕಾಪಾಡುವರನು ಕಾಣೆ ನಿನ್ನಾಣೆ ಮನ್ನಣೆಯಲಿ ಅ.ಪ ನೀರ ಪೊಕ್ಕರು ಬಿಡೆನೋ ಬೆನ್ನಲಿ ಭಾರ ಪೊತ್ತರು ಬಿಡೆನೋ ಕೋರೆಯ ಬೆಳೆಸಿ ನೀ ಘೋರ ರೂಪನಾಗಿ ತಿರುಕನೆಂದು ಪೇಳಲು ಬಿಡೆನೋ 1 ಕೊಡಲಿ ಪಿಡಿಯೆ ಬಿಡೆನೋ ನೀ ಘನ ಅಡವಿ ಸೇರಲು ಬಿಡೆನೋ ತುಡುಗನಂದದಿ ಪಾಲ್ಗಡಿಗೆ ಒಡೆದು ಸಲೆ ಉಡುಗಿ ಜರಿದು ತುರುಗೇರಲು ಬಿಡೆನೋ 2 ಪಾಪಿ ಎಂದು ಎನ್ನ ಜರಿಯದೆ ಕಾಪಾಡೆಲೊ ಘನ್ನ ಶ್ರೀ ನರಹರಿಯ ನಾಮಕೆ ಪೋಪದ ಪಾಪಗಳುಂಟೆ ಜಾಲವ ಮಾಡದೆ 3
--------------
ಪ್ರದ್ಯುಮ್ನತೀರ್ಥರು