ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಧ್ರುವ ತಾಳ ದಾಸ ನಿನಗೆ ನಾನು ಲೇಸಿನವನೆಂದು ಆಶೆಯಿಂದಲಿ ಗತಿ ಬೇಡಲಿಲ್ಲ ದಾಸತನ ಎನಗೆಲ್ಲಿಹುದು ಶ್ರೀನಿ- ವಾಸನೆ ಅನಂತ ಕಲ್ಪದಲ್ಲಿ ನಾಶನ ಮಾಡಿಕೊಂಬ ದಾಸ ನಾನು ದಾಸನೆನಿಸಿಕೊಂಡು ತಿರುಗುವ ಜನಕ್ಕೆ ಲೇಸಾಗಿ ದಂಡಿಸಿ ಮೆದಿಯ ಬೇಕು ಕೇಶವ ವಿಜಯವಿಠ್ಠಲನೆ ನಿನ್ನ ಮರೆದು ಗ್ರಾಸಕ್ಕೆ ತಿರುಗುವ ಭಾಸಮಾನ ದಾಸ 1 ಮಟ್ಟತಾಳ ತಿರಕದಾಸ ನಾನು ಹರಕ ದಾಸ ನಾನು ಕರಕರಿಯನು ಮಾಡಿ ಪರರ ಪೀಡಿಸಿ, ಉ- ದರ ಪೊರೆವ ದಾಸನು ನಾನು, ಬರಿಯ ದಾಸ ನಾನು ಅರಿಮರ್ದನ ಹರಿ ವಿಜಯವಿಠ್ಠಲ ನಿನ್ನ ಪರಮ ಭಕ್ತನೆಂದು ತಿರಿದುಣ್ಣ ಮೆಚ್ಚಿದೆನು 2 ತ್ರಿವಿಡಿ ತಾಳ ಕೊಟ್ಟರೆ ಹರಸುವೆನು, ಕೊಡದಿದ್ದರೆ, ಬೆರ ಳಿಟ್ಟು ಬಗಳುವಂಥ ಭ್ರಷ್ಟ ದಾಸನು ನಾನು ಸೃಷ್ಟಿಯೊಳಗೆ ಬಹು ಧನವಂತರ ಮನೆಯ ಮೆಟ್ಟು ಕಂಡರೆ ಬಿಡದಿಪ್ಪ ದಾಸ ನಾನು ನಷ್ಟ ವಾಗಿದ್ದ ಉಚ್ಛಿಷ್ಟ ದಾಸನು ನಾನು ದೃಷ್ಟಿಯಿಂದಲಿ ನೋಡೊ, ವಿಜಯವಿಠ್ಠಲ ಕೇಳೊ ಎಷ್ಟೊ ಕಾಲದ ಪಾಪಿಷ್ಠ ದಾಸನು ನಾನು 3 ಅಟ್ಟತಾಳ ಕುರುಡ ದಾಸನು ನಾನು ಕುಂಟ ದಾಸನು ನಾನು ಹುರಡಿಗೆ ಮಾಡುವ ಹುರಳಿಲ್ಲದ ದಾಸ ಸರಿಯವರನು ಕಂಡು ಮರಗುವ ದಾಸನು ಎರಡು ಕಡೆ ಕೆಟ್ಟ ಭರಡಿ ದಾಸನು ನಾನು ಗರಕೆ ಕರದಾರೆ ಹಿಗ್ಗುವ ದಾಸನು ನಾನು 4 ಆದಿತಾಳ ಹೀನ ದಾಸನು ನಾನು, ನೀಚ ದಾಸನು ನಾನು ಹಾನಿವೃದ್ಧಿಗಳೆಲ್ಲ ತಿಳಿಯದ ದಾಸನು ನಾನಾ ದುಷ್ಕರ್ಮ ಮಾಳ್ಪ ದಾಸನೊ ನಾನು ಮಾನವಿಲ್ಲದೆ ಅಪಮಾನ ದಾಸ ನಾನು ದಾನ ಧರ್ಮವಿಲ್ಲದ ಹೀನ ದಾಸನು ನಾನು ಅನಂತ ಜನನಕ್ಕೆ ಹೊಲೆದಾಸನು ನಾನು ಶ್ರೀನಿವಾಸ ತಿರುಮಲೇಶ ವಿಜಯವಿಠ್ಠಲ ಬ್ಯಾನೆ ಇದ್ದಲ್ಲಿ ಬಿಡುವ ಬಕ್ಕದಾಸನು ನಾನು 5 ಜತೆ ಹೊಟ್ಟೆಕಿಚ್ಚಿನ ದಾಸ-ಹಲುಬಿ ಪೋಗುವ ದಾಸ ದಟ್ಟದಾರಿದ್ರ ದಾಸನು ವಿಜಯವಿಠ್ಠಲರೇಯ 6
--------------
ವಿಜಯದಾಸ
ಗೋಪಿ : ವೇಣುಗೋಪಾಲ ನಿನ್ನ ಜಾಣತನವ ಬಿಡು ಬಿಡು ಮಾಡುವೇಜಾಣ ಪ ಕೃಷ್ಣ : ನೀರೆ ಗೋಪಿಯೆ ನಿನ್ನ ದ್ವಾರದೊಳಿರುವೆ ತೋರದೆನ್ನನು ನೀನು ಭಾರಿ ಬಳಲಿರುವೆ ನೀರೆ 1 ಗೋಪಿ : ಹತ್ತಿರದಲ್ಲಿದ್ದು ನೀನು ಇತ್ತೆನಗೆ ತೋರದಂತೆ ನಿನ್ನನು ``ವೇಣು 2 ಕೃಷ್ಣ : ಅಕ್ಷಿಯೊಳಗೆ ನಿನ್ನ ಸಾಕ್ಷಿಯಾಗಿರುವೆ ಕುಕ್ಷಿ ತುಂಬಿರುನೆ | ನೀರೆ 3 ಗೋಪಿ : ಆರು ಬಾಗಿಲು ನೀಗಿ ಜೋರಗಂಡಿಯೊಳ್ ಪೋಗಿ ಮಾಡುವೆ ||ವೇಣು|| 4 ಕೃಷ್ಣ : ಮನುಮುನಿ ಜನರೆಲ್ಲಾ ವಿನಯದಿಂ ಪಿಡಿದು ಘನಸುಖ ಪಡುವರು ಮನದೊಳಗರಿದು ||ನೀರೆ|| 5 ಗೋಪಿ : ಆಗಮ ಸಂಚಿತ್ತ ಭೋಗ ಸಂಸಾರವನ್ನೆಲ್ಲಾ ಜರೆನಿಸಿದೆಲ್ಲಾ ||ವೇಣು || 6 ಕೃಷ್ಣ : ನಿಮಿಷ ಮಾತ್ರದಿ ಸುಖವ ಮನದೇಸ್ಮರಿಸಿ ಅಮಮ ಘನಾನಂದ ರಮಿಸು ಸ್ವಸುಖವಿ ||ನೀರೆ|| 7 ಗೋಪಿ : ಕಣ್ಣ ಸನ್ನೆಯ ಮಾಡಿ ಅನ್ಯರ್ಮನ್ಮನೆಗಳಲ್ಯೋಡಿ ಮಾತುಗಳಾಡುವೆ ||ವೇಣು || 8 ಕೃಷ್ಣ : ಧೊರೆಯಾಗಿರುವೆ ನಾನು ತಿರಿದುಣ್ಣಲರಿಯೆ ಅರಿವಿನಿಂದರಿಯೆ || ನೀರೆ|| 9 ಕಂತು ಪಿತನೆ ನಿನ್ನ ಭ್ರಾಂತಿ ಹತ್ತಿತು ಎನಗೆ ಗುರುವರ ||ವೇಣು || 10
--------------
ಶಾಂತಿಬಾಯಿ