ಒಟ್ಟು 3 ಕಡೆಗಳಲ್ಲಿ , 1 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಾರ್ಯೆಂಬ ಮಾರಿಯನು ಆರು ನಿರ್ಮಿಸಿದರೋ ಸೂರೆಗೊಂಡು ಮೂಲೋಕ ಘೋರಿಸುವುದುದಕಟ ಪ ಹರಿಯ ಧರೆಗಿಳಿಸಿತು ಹರನಕಾಡಿಗೆಳೆಸಿತು ಶಿರವೊಂದನೆಗರಿತುವರಬ್ರಹ್ಮನಕಟ1 ರಂಧ್ರಗೊಳಿಸಿತು ದೇವೇಂದ್ರನಂಗಾಂಗವನು ಚಂದ್ರನ ಮುಖಪ್ರಭೆಗೆ ಕುಂದಿಟ್ಟಿತಕಟ 2 ಅಸಮ ವಾಲಿಯ ಬಲಕೆ ಮಸಿ ಮಣ್ಣು ಹಾಕಿಸಿತು ದಶಶಿರನ ವರವಖಿಲ ಪುಸಿಯೆನಿಸಿತಕಟ 3 ಹಾರಿಸಿತು ಕೀಚಕನ ಕೌರವನ ಮನೆಮುರಿಯಿತು ಧೀರಪಾಂಡವರನು ತಿರಿದುಣಿಸಿತಕಟ 4 ನರಕಕ್ಕೆ ತವರಿದನು ಸ್ಮರಿಸಲಳವಲ್ಲೆನೆಗೆ ಹರಿದರಭಯ ತ್ವರಿತ ವರದ ಶ್ರೀರಾಮ 5
--------------
ರಾಮದಾಸರು
ಬೇಡುವೆನು ಉಡಿಯೊಡ್ಡಿ ನಾ ನಿನ್ನ ಭಜಿಸಿ ಮಾಡುದಯ ನಿನ್ನವರ ಒಡನಾಡ ಹರಿಯೆ ಪ ಇಡುವ್ಯೋ ಸಂಸಾರದಿ ಕೊಡು ಬಿಡದೆ ನಿರ್ಮೋಹ ನಡೆಸುವೆಯೊ ಹಿರೇತನದಿ ನುಡಿಸದಿರು ಪಕ್ಷ ಬಡತನದಿ ಇಡುವೆಯೋ ಕಡುಧೈರ್ಯ ಕೃಪೆಮಾಡು ಸಡಗರದ ಸಿರಿಕೊಡುವ್ಯೋ ಕಡುಶಾಂತಿ ನೀಡು 1 ಬೇನೆಯೊಳು ನೂಕುವೆಯೋ ತ್ರಾಣಕೊಡು ತಡೆವ ಬಹು ಮಾನ ಕೊಡುವೆಯೋ ಮೊದಲು ನಾನೆಂಬುದ್ಹರಿಸು ಕಾನನದಿ ತಿರುಗಿಸುವಿಯೋ ಜ್ಞಾನಪಾಲಿಸು ಅಪ ಮಾನವಿತ್ತರೆ ನಿನ್ನ ಧ್ಯಾನದೊಳಗಿರಿಸು 2 ತಿರಿದುಣಿಸಿ ಬದುಕಿಸುವ್ಯೋ ತೋರಿಸು ಜಗದಭಿಮಾನ ಪರಿಪಕ್ವಾನ್ನುಣಿಸುವೆಯೋ ಪರಪಂಕ್ತಿ ಬಿಡಿಸು ದೊರೆತನವ ಕರುಣಿಸುವ್ಯೋ ಕರುಣಗುಣ ವರ ನೀಡು ನರರೊಳಗೆ ಆಡಿಸುವ್ಯೋ ಮರೆಸು ಅನೃತವ 3 ಶರಣರ್ವರ್ತನದೆನ್ನ ನಿರಿಸುವೆಯೊ ಅನುಗಾಲ ನಿರುತು ಧರ್ಮಗಲದ ಸ್ಥಿರಬುದ್ಧಿ ನೀಡು ಮರೆವೆ ಮಾಯವ ತರಿದು ಅರಿವಿನೊಳಿರಿಸುವೆಯೊ ಹರಿಶರಣರಹುದೆನುವ ವರ್ತನವ ನೀಡು 4 ಹರಣಪೋದರು ನಿಮ್ಮ ಚರಣಕ್ಕೆರಗಿದ ಶಿರವ ಪರರಿಗೆರಗಿಸದಿರು ಶರಣಾಗತಪ್ರೇಮಿ ಜರಾಮರಣ ಪರಿಹರಿಸಿ ವರಮುಕ್ತಿ ಪಾಲಿಸಿ ವರದ ಶ್ರೀರಾಮ ನಿಮ್ಮ ಚರಣದಾಸೆನಿಸು 5
--------------
ರಾಮದಾಸರು
ಭಳಿಭಳಿರೆ ಶನಿರಾಜ ನೀನೆ ಬಲ್ಲಿದನೊ ಇಳೆ ಮೂರರಲಿ ನಿನಗಿಂ ಬಲ್ಲಿದರ ಕಾಣೆ ಪ ಧರೆಗೆಲ್ಲ ಒರ್ವನೆ ದೊರೆಯಾದ ನಳನನ್ನು ಪರರಾಯನಾಳೆನಿಸಿ ತಿರುವಿಸಿದಿ ಅಶ್ವ ವರ ಸತ್ಯ ಹರಿಶ್ಚಂದ್ರನ್ಹೊಲೆಯನಾಳೆನಿಸವನಿಂ ನಿರುತದಿಂ ಕಾಯ್ಸಿದೆಯೊ ಸುಡುಗಾಡವ 1 ಭೂಪತಿ ವಿಕ್ರಮಗೆ ಕಳ್ಳನೆಂದೆನಿಸವನ ತಾಪಬಡಿಸೆದೆಯೊ ಕೈಕಾಲುಗಳ ಕಡಿಸಿ ರೂಪಗೆಡಿಸಿದಿಂದ್ರಿನ ಮೈಯಲ್ಲಿ ತೂತ್ಹಾಕಿ ಶಾಪಕೊಡಿಸಿಂದುವಿನ ಕಳೆಯುಗುಂದಿಸಿದಿ 2 ಕುರುರಾಯನೊಂಶವಂ ನಿರ್ಮೂಲ ಮಾಡಿದೆಯೊ ತಿರಿದುಣಿಸಿದಿ ಆ ಮಹ ಪಾಂಡುನಂದನರ ಪರಮ ಸುಖಿಗಳ ಸುಖಕೆ ಕಿಡಿಯಿಟ್ಟು ನೋಡಿದಿ ವರ ತಪಸ್ವಿಗಳ ತಪಸ್ಸು ಭಂಗಪಡಿಸಿದೆಯೊ 3 ಒದಗಿ ಯಮದೇವನನ್ವಧೆ ಮಾಡಿಸಿದೆಯೊ ನೀ ಪದುಮಪೀಠನದೊಂದು ಮಸ್ತಕವ ಕಳೆದಿ ಮುದ ಕೃಷ್ಣ ಗಿಡದಡಿಯಸುವ ಬಿಟ್ಟನೆನಿಸಿದಿ 4 ಇಂತಿಂಥ ಮಹಿಮರನು ಈ ಪಾಡ ಪಡಿಸಿದಿ ನ ಮ್ಮಂಥ ನರಜನರ ಪಾಡೇನು ನಿನಗೆ ಕಂತುಪಿತ ಶ್ರೀರಾಮನನುಮತಿಯ ಪಡೆದು ಬಲ ವಂತನಿನಿಸಿದೆಯೋ ನೀ ಮೂಲೋಕದೊಳಗೆ 5
--------------
ರಾಮದಾಸರು