ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನಾದರೇನಲ್ಲಿ ಇರಕೂಡದು ಹೋಗಿ ಆನಂದ ಕಾನನದೊಳಿರೆ ಸುಖವದು ಪ ನರಮನುಜರೊಳಗಿಲ್ಲಿ ಜನಿಸಿಭೂತಳಕೆಲ್ಲ ದೊರೆಯೆನಿಸಿ ಭೋಗ ಪಡಿಸುವುದರಿಂದಲು ಮಣಿ ಕರ್ಣಿಕೆಯ ಸರಸಿಯೊಳು ಚರಿಸಿ ಮಡಿದರೆ ಮುಕ್ತಿಯಹುದು 1 ಕೊಕ್ಕದಲಿ ವನಿತೆ ಮನೆಮಕ್ಕಳಲಿ ಪಶುಗಳಲಿ ಹೆಕ್ಕಳದೊಳಿಲ್ಲಿ ಸಾವುದರಿಂದಲು ಹೊಕ್ಕು ಮನೆ ಮನೆ ಬಿಡದೆ ಕಾಶಿಯಲಿ ತಿರಿದುಂಡು ಡೊಕ್ಕೆಯನು ಬಿಡೆ ಮೋಕ್ಷ ಪದವಿಯಹುದು 2 ಹರಿ ಸುತನ ಕೋಣೆ ಲಕ್ಷ್ಮೀಪತಿಯ ಪಾದ ಸರಸಿರುಹದಲಿ ಜನಿಸಿರ್ದ ಜಾಹ್ನವಿಯಲಿ ನರ ಮುಳುಗಿ ಕಾಶಿ ವಿಶ್ವೇಶ್ವರನ ಸನ್ನಿಧಿಯೊಳೊರಗಿದರೆ ಮರಳೆ ಜನ್ಮಕೆ ಬಾರೆನೋ 3
--------------
ಕವಿ ಪರಮದೇವದಾಸರು
ತಿರುದುಂಬುವ ನೀನು ತಿರುಮಲೇಶಾ ಮರುಗಲ್ಯಾತಕೆ ಇನ್ನು ಮನಸಿನೊಳಗೆ ಪ್ರತಿದಿನವು ಪ ಬಲಿರಾಯ ಬಲು ದಾನವನು ಮಾಡುತಿರಲಾಗಿ ಇಳಿಯ ಸುರÀವೇಷವನು ಧರಿಸಿ ಪೋಗಿ ಹಲುಬಿ ಬಾಯಿದೆರದು ತ್ರಿಪಾದ ತಿರಕೆ ಕೊಂಡು ನಿಗಮ ಕುಲದಾತಾರಾ 1 ಗೋಪಳ್ಳಿಯಲಿ ಜನಿಸಿ ಗೋವುಗಳ ಕಾವುತ್ತ ಗೋಪಾಲತತಿ ವಡನೆ ವಡನಾಡುತ ತಾಪಸರು ಯಜ್ಞ ಕರ್ಮಾದಿಗಳು ಮಾಡುತಿರೆ ಶ್ರೀಪತಿ ಅನ್ನ ತಿರಿದುಂಡು ಕ್ಷುದಿಯನ್ನ ಕಳೆದೆ 2 ಅಂದು ಈ ಪರಿಯ ಯಾಚಕ ವೃತ್ತಿಯನು ಮಾಡಿ ಇಂದೆನ್ನ ಹೃತ್ಕಮಲದೊಳಗೆ ಬಂದೂ ನಿಂದು ಮನೆಮನೆ ತಿರದುಂಬುವ ನೀನಲ್ಲವೆ ಸಂದೇಹವೇಕೆ ಎನಗೆ ವಿಜಯವಿಠ್ಠಲರೇಯಾ 3
--------------
ವಿಜಯದಾಸ
ಪಾರ್ವತಿದೇವಿ ಗಿರಿಜೆ ನೀ ಒಲಿಯುವರೇ ಪರಶಿವನು ತಕ್ಕ ವರನೆಂದು ಮೆರೆಯುವರೆ ಪ ಪರಮ ವೈಷ್ಣವ ಭಕ್ತಾಗ್ರಣಿಯಾದ ಶಿವನಿಗೆ ಇರುತಿಹ ಕೊರತೆಗಳರಿಯದೆ ಗರುವದಲಿ ಅ.ಪ ಮನ್ಮಥನ ವೈರಿಗೆ ವಾಸಕೆ ಯೋಗ್ಯ ಮನೆಯಿಲ್ಲದಿರುವಾತಗೆ ಮನೆಯು ಮಶಾಣವೆನ್ನುತ ಪೇಳುತಿಹರಿನ್ನು ಸುಮನಸರೊಡಯನೆ ಸಖನಂತೆ ಇದು ಕೇಳು ಮನಸಿನ ಅಭಿಮಾನಿ ಶಿವನು ಘನತರದ ವಿಷಪಾನಗೈದನು ಮನದಿ ಶ್ರೀ ರಘುವರನ ಸ್ಮರಿಸುತ ವೃಷಭ ವಾಹನವೇರಿ ಚರಿಪಗೆ 1 ರುಂಡಮಾಲೆಯ ಧರಿಸಿದ ಕೊರಳೊಳಗೆ ಸರ್ಪ ದಂಡೆ ಅಲಂಕರಿಸಿರುವ ಮಂಡೆಯೊಳಗೆ ಚಲುವ ಗಂಗೆಯ ಧರಿಸಿಹ ಚಂದ್ರಶೇಖರ ಶಿವನೆಂದು ಕರೆಸಿಕೊಂಬ ಕೆಂಡಗಣ್ಣಿನ ಕ್ರೂರರೂಪನ ಕಂಡು ಹರುಷದಿ ಹಿಗ್ಗಿ ನಲಿಯುವಿ ಮಂಡೆಯಲಿ ಕೆಂಜಡೆಯ ಸುತ್ತಿಹ ಹಿಂಡು ವಿಷ ಸರ್ಪಗಳಲಂಕೃತನಿಗೆ 2 ಕರಿಚರ್ಮಾಂಬರನುಡುವ ಕೈಯಲ್ಲಿ ಕಪಾಲ ತಿರಿದುಂಡು ಹರುಷಿಸುವ ಪರಿ ದೈತ್ಯ ಪಿಶಾಚಯಕ್ಷರ ಕೂಡಿ ಚರಿಸುತ್ತ ಕುಣಿಯುತ್ತ ಗೊರವನಂತಿರುತಿಹ ಪರಮ ವೈರಾಗ್ಯವನು ಧರಿಸಿ ಫಣೆಯ ಗಣ್ಣನು ಬಳಿದು ಭಸುಮವ ಚರಿಸುವನು ರುಷಿವರರ ತೆರದಲಿ ಎಣಿಸಿ ಮಣಿಗಳ ಒಲಿಸಿ ಹರಿಯನು 3 ರಾಮಮಂತ್ರವ ಜಪಿಸಿ ರಮಣಿಗೆ ದಿವ್ಯ ರಾಮಚರಿತೆಯ ಬೋಧಿಸಿ ಕಾಮಹರನು ಕೈಲಾಸಪತಿಯು ಮತ್ತೆ ಕಾಮದೇವನು ಎಂಬ ನಾಮಸ್ಮರಿಸುವ ಆ ಮಹಾಗಣಪತಿಯು ಪುತ್ರನು ವೀರಭಕ್ತನು ಸುತನು ಶಿವನಿಗೆ ಪ್ರೇಮದಲಿ ಷಣ್ಮುಖನು ಸುತನೆಂ- ದೀ ಮಹಾಮಹಿಮೆಗಳು ತಿಳಿಯದೆ4 ಸುಂದರಾಂಗಿ ನಿನ್ನಯ ಚಲುವಿಕೆಗೆ ತಕ್ಕ ಚಂದದ ವರನೇ ಕೇಳು ಮಂದರೋದ್ಧರ ಶ್ರೀ ಮುಕುಂದನ ಭಜಿಸಲು ಚಂದದ ವರಗಳ ಕುಂದದೆ ಕರುಣಿಪ ಕಂದುಗೊರಳನು ಶಿವನು ಕಮಲ ನಾಭ ವಿಠ್ಠಲನ ಭಜಿಪ ಸಂತತ ಮಂದಗಮನೆಯ ಇಂದುಧರನಿಗೆ ಚಂದದಲಿ ವನಮಾಲೆ ಹಾಕುತ 5
--------------
ನಿಡಗುರುಕಿ ಜೀವೂಬಾಯಿ
ಬಲ್ಲೆ ಬಲ್ಲೆನು ನಿನ್ನ ಬಾಳ ಪ್ರತಾಪವಎಲ್ಲಾ ಲೋಕ ಲೋಕದಿ ಪ ಭಂಗ ಪಡಿಸಿದೆ ನಿನಗೆಣೆ-ಯಿಲ್ಲ ಶನೈಶ್ಚರನೆ ಅ ಹರಿಹರ ಬ್ರಹ್ಮಾದಿಗಳ ಭಂಗಪಡಿಸಿದೆ ಕರುಣವಿಲ್ಲವೆ ನಿನಗೆ ಹರಿಶ್ಚಂದ್ರ ನಳಚಕ್ರವರ್ತಿ ಷೋಡಶ ಮಹಾರಾಯ ಪಾಂಡ್ಯರ ದಣಿಸಿ ತೋರಿಸಿದೆ ಮನೆ ಮನೆ ವಾರ್ತೆಗಳೆಲ್ಲವ ತಿರಿದುಂಡು ಮರುಳುಗೊಂಡು ಪರರ ಪೀಡಿಸಿ ಭ್ರಮೆಪಟ್ಟು ಲಜ್ಜೆಗೆಟ್ಟು ತಿರುಗುವಂದದಿ ಮಾಡಿದೆ 1 ಕಟ್ಟಿದ ಪಶು ಕರೆಯದು ತಾನಾಡಿದ ಮಾತು ಕಟ್ಟದು ಸಭೆಯೊಳಗೆ ಮೆಟ್ಟಿದ ನೆಲ ಮುನಿವುದು ಹೊನ್ನ ಹಿಡಿದರೆ ಬಕ್ಕಟ್ಟೆ ಬಯಲಹುದು ಉಟ್ಟದ್ದು ಹಾವಾಗಿ ಹರಿವುದು ಸಾಲಿ-ಗರಟ್ಟುಳಿ ಘನವಹುದು ಮುಟ್ಟ ಹೇಸುವರು ಕುರುಹ ನಾರಿಯರು ನೆಂಟರಿಷ್ಟರೆ ಕಾಣರು 2 ಸತಿ ಬದ್ಧದ್ವೇಷದಿ ಬೈವಳು ಇದ್ದ ಮನುಜರ ಪಾಡೇನು ನೀ ಬಂದು ಹೊದ್ದಿದ ಮಾತ್ರದಲಿ ನಿದ್ದೆ ಹಸಿವು ಬಳಲಿಕೆ ದಟ್ಟ-ದಾರಿದ್ರ್ಯವು ಕೈಗೊಂಬುದು 3 ಒಳ್ಳೆದಾಗಿದ್ದ ಸಂಗಾತಿಯ ಸ್ನೇಹವೆಲ್ಲವನು ಬಿಡಿಸಿ ಅಲ್ಲಲ್ಲಿ ಕೊಡುವ ದಾನಿಗಳ ಮನದಿ ಪೊಕ್ಕು ಇಲ್ಲಿಲ್ಲ ಹೋಗೆನಿಸಿ ಇಲ್ಲದ ಅಪವಾದ ಭಾಳ ಕಂಟಕ-ರೋಗದಲ್ಲಿ ನೋಯಿಸಿ ಒಲ್ಲೆನೀ ಜನ್ಮವೆಂದೆನಿಸಿ ಸಾಧಿಸಿ ಕಡೆಯಲ್ಲಿ ಗುಣ ತೋರಿಸಿ4 ದೇಶದೇಶದ ರಾಯರ್ಗಳನೆಲ್ಲರನು ಪರದೇಶಿಗಳನು ಮಾಡಿದೆ ವಾಸವನೆ ಬಿಡಿಸಿ ತಿರುಗಿಸಿ ಗಾಸಿ-ಯಿಂದಲೆ ನೋಯಿಸಿ ಶೇಷಶಯನ ಸರ್ವೇಶ ದೇವೇಶನೆ ಲೇಸು ಪಾಲಿಸೊ ಎನಗೆ ದೇಶದಂತರ್ಯಾಮಿ ನೆಲೆಯಾದಿಕೇಶವತೋಷದಿ ಸಲಹೊ ಎನ್ನ 5
--------------
ಕನಕದಾಸ
ಎತ್ತಾರೆ ಹಿಂದಿನ ಮಾತು |ಭಾರತೀಶನಿನ್ನಭೃತ್ಯರು ತಮ್ಮನುವರಿತು | ನೀ ಸಲಹದಿದ್ದರೆ ಹೀಗೆಂದು ಪಮೂಗು ಹಿಡಕೊಂಡು ಕುಳಿತಿದ್ದಿ ನೂರತೊಂಭತ್ತೆಂಟು ಕಲ್ಪ |ಆಗಲೊಬ್ಬರೂ ನಿನ್ನನಾರೆಂದು ಕೇಳಾರೋ ||ಈಗ ದೇವರ ದಯೆಯಿಂದ ಹದಿನಾಲ್ಕು ಲೋಕಕ್ಕೆ ಮಂತ್ರಿ |ಯಾಗಿ ಸಂತೋಷದಿಂದ ಮೇಲು ಮೆರೆವುದಕ್ಕೀ ಗರ್ವವೆಂದು 1ಊರ ಸೇರದಲೆ ಕಂಡ ಗಿಡದ ತೊಪ್ಪಲುಗಳ ತಿಂದು |ಅರಣ್ಯದೊಳು ಬಹುಕಾಲ ಬದುಕಿದ್ದು ಮತ್ತೂ ||ಶ್ರೀರಾಮನಾಳಾಗಿ ಶಿಲೆಯ ಪೊತ್ತುದು ಜಗವೆಲ್ಲಾ ಬಲ್ಲದು ಮುಂದೆ |ವಾರಿಜಾಸನ ಪದವಿಯಾಳೆಂದುಹರಿನುಡಿದುದಕೀಗರ್ವವೆಂದು 2ತಿರಿದುಂಡು ಹನ್ನೆರಡಬ್ದ ವನವಾಸ ಅಜ್ಞಾತವೊಂದು |ವರುಷ ಮತ್ಸ್ಯಾಧಿಪನಾಗಾರದಲಿ ಪಾಕ ಮಾಡಿ ||ತರುಣೀ ಮಾನಭಂಗವ ನೋಡಿ ಸುಮ್ಮನಿದ್ದೆಯಾಗ ಕೃಷ್ಣ |ತರಿದು ದುರ್ಯೋಧನರ ರಾಜ್ಯ ನಿಮಗಿತ್ತುದಕೀ ಗರ್ವವೆಂದು 3ಎಲ್ಲರೂ ಕಂಡದ್ದು ಹುರಳಿ ಗುಗ್ಗರಿ ತಿಂದು ಭಿಕ್ಷಾರ್ಥಿಯಾಗಿ |ಮುಳ್ಳು ಮರದಡಿಯಲ್ಲಿ ಕುಳಿತದ್ದು ಹಿರಿಬದರಿಯಲ್ಲಿ ||ಸುಳ್ಳಲ್ಲ ವೇದವ್ಯಾಸಾನಂತ ವೇದಾರ್ಥ ತಿಳಿಸಿ ಸಕಲ |ಬಲ್ಲವನೆಂದು ಪೆಸರೂ ಕೊಟ್ಟದೆವೇ ಈ ಗರ್ವವೆಂದು 4ಏನೆಂಬುವ ಸರ್ವರಲ್ಲಿ ಹೊಕ್ಕು ಬಳಕೆ ಮಾಡುತಿದ್ದಿ |ಹೀನರು ನಿನಗೀಸು ನೀರ ಹಾಕಂದುಕೇಳಿ||ಪ್ರಾಣೇಶ ವಿಠಲನ್ನ ಭಜಿಸಿ ಪೂರ್ಣ ದಯಕೆ ಪಾತ್ರನಾಗಿ |ಮೀನಾಂಕಾರಿ ಮುಖರಿಂದರ್ಚನೆಗೊಂಬಕ್ಕೀ ಗರ್ವವೆಂದು 5
--------------
ಪ್ರಾಣೇಶದಾಸರು