ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಕ್ಕಿವಾಹನ ದಯಸಿಂದು ನೀ ಎನ್ನ ಚಿಕ್ಕ ಮನತುರಗವನ್ನು ನೀನೆ ತಿದ್ದೊ ಪ ಕತ್ತಲೆಯೊಳು ಬಲು ಕಾಲಕಳದೆಯಾಗಿ ಮತ್ತೆ ಬೆಳಕು ಕಂಡು ಬೆದರುತಿದೆ ಕತ್ತಲಂಜಿಕೆ ತೋರಿ ಬೆಳಕಿನ ರುಚಿಯನು ಇತ್ತು ಕುಶಲಗತಿ ಕಲಿಸಯ್ಯ 1 ಹಿಂದಕ್ಕೆ ತಿರಗದೆ ತಾನಾಗಿ ಬ್ಯಾಗನೆ ಮುಂದಕೆ ನಡೆದು ಪರರ ಬೆಳಸುಗಳ ಒಂದನ್ನ ಬಯಸದೆ ಪದ್ಧತಿ ಬಿಡದಂತೆ ಒಂದಾಗಿ ಗಮ್ಯಸ್ಥಾನವ ಸೇರಿಸಯ್ಯ 2 ವಿಧಿನಿಷೇಧಗಳೆಂಬ ಗಿಲಕಿಯ ದನಿಗೈಸಿ ಹೆದರಿಸೊ ಸನ್ಯಾಯ ಕಶದಿಂದಲೀ ಮುದದಿ ಭಕುತಿ ಗುಣವ ಕೊರಳು ಕಟ್ಟಿ ಬಿಗಿದು ಪದುಮಾಕ್ಷ ನಿನ್ನ ಪಾದವ ಸ್ತುತಿಸಯ್ಯ 3 ಉತ್ತಮ ಗುಣವುಳ್ಳ ವಾಜಿಯಿದನೆ ಮಾಡಿ ವಸ್ತು ಎನ್ನದು ಮಾತ್ರವೆಂದೆನಿಸಿ ಚಿತ್ತಕೆ ಬಂದಂತೆ ಇದಿರಾರು ನೀ ನಿತ್ಯ ಹತ್ತಿ ಹರಿಸುವನು ಸನ್ಮತವೆನಗೆ 4 ಲೇಸಾದಾ ಹಯಗಳೊಳು ನೀನೆವೆ ಜಗದೊಳು ಲೇಸು ಮಾಡಿದೆಯೆಂಬ ವಾರ್ತಿ ಕೇಳಿ ವಾಸುದೇವವಿಠಲ ನಿನಗೆ ಬಿನ್ನೈಸಿದೆ ದಾಸನ ಮಾತು ಲಾಲಿಸೆ ಕಾಯೋ ಸರ್ವೇಶ5
--------------
ವ್ಯಾಸತತ್ವಜ್ಞದಾಸರು
ಹಿಡಿ ಹಿಡಿರಿಂದು ಸಿಕ್ಕಿದ ಕಳ್ಳನಾ ಬಿಡಬ್ಯಾಡಿರೆಂದಿಗೆ ಹಜ್ಜೆನೆಲಿಗೆ ತಾರನಾ | ಮೈಯ್ಯ ದೋರನಾ ಪ ಹೃದಯದೋಳಗಿನಾ ಗಂಟವ ಬಿಡುತಾ ಮುದದಿಕುಳ್ಳಿರಲಲ್ಲಿ ಬಂದು ನೋಡುತಾ ಇದರ ಚಿತ್ತ ಪೇಠಾರಿಗೆ ಕೈಯ್ಯಾನೀಡುತಾ ಒದಗಿಕದ್ದೊಯ್ದತಿರಗದೆ ಧನಿ ಮಾಡುತಾಧನಿ ಮಾಡುತಾ 1 ಖೂನ ತನ್ನಯ ಬಲ್ಲಾಸಾಧುಜನವಾ ಕಾಣುತಾರ್ಜಿತ ಶೆಳೆದು ಕೊಂಡು ಧನವಾ ಏನ ಹೇಳಲಿ ಬಿಡನು ಅವರ ಪ್ರಾಣವಾ ವನವಾಕೊಂಡು ಗೋಧನವಾ 2 ಅಡದಾರಿಯಾ ನಡದು ಹೋಗಿ ಬಿದ್ದನಾ ನಡುವೆ ತೊಳಲಿಸುವನು ವಿರುದ್ಧನಾ ಹಿಡಿ ಗುರು ಮಹಿಪತಿ ಪ್ರಭು ಪ್ರಸಿದ್ಧನಾ ಬಿಡದೆ ಭಂಡಾರಕಾಯಲಿಡುವ ಪ್ರಬುದ್ಧನಾ ವಾಜಿಲಿದ್ದನಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು