ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿನ್ನ ಮಹಿಮೆ ಇದೇನೊ ಕನ್ನಗಾರರ ಗುರುವೆ ಅಳಗಿರಿ ತಿಮ್ಮರಾಯಾ ಪ ಕ್ಷೋಣಿಯೊಳಗುಳ್ಳವರು ಕ್ಷಿಪ್ರದಲ್ಲಿ ನಿನ್ನ ಕಾಣಿವೇನೆಂಬ ತವಕದಲಿ ಬರಲು ಮಾಣದಲೆ ಅವರ ವಸನ ಸುಲಿಸಿ ತಡೆಯದೆ ಮಾನವನು ಕೊಂಬ ಅಭಿಮಾನಗೇಡಿ 1 ಬ್ರಹ್ಮಾದಿಗಳು ಇಲ್ಲಿ ಸುಲಿಸಿಕೊಳಬೇಕೆಂದು ಹೆಮ್ಮೆಯಿಂದಲಿ ನೋಡಿ ಹಿಗ್ಗುವರೋ ಹಮ್ಮಿನದೇವ ನಿನ್ನ ಸೋಜಿಗವೆ ತಿಳಿಯದು ಈ ಮ್ಮಹಿಯೊಳಗೆ ಇಂಥ ಸುಮ್ಮಾನವೇನೊ2 ಹಲವು ಕೇಳಿದರೇನು ನೀಚೋಚ್ಚ ಎಣಿಸಲೆ ಒಲಿಸಿದವರಿಗೆ ನೀನು ಒಲಿದು ಎಲ್ಲಾ ಸುಲಿಗೆಯನು ಯಿತ್ತು ಸಂತತಲವರ ಪಾಲಿಪ ಬಲು ದೈವ ವಿಜಯವಿಠ್ಠಲ ಅಳಗಿರಿ ತಿಮ್ಮಾ3
--------------
ವಿಜಯದಾಸ
ಸೌಂದರ್ಯ ಪುರುಷನ ಕಣ್ದೆರದು ನೋಡಿದೆನು | ಇಂದೆನ್ನ ಜನುಮ ಸಫಲ | ಹಿಂದೆ ಅನಂತೇಶನೆಂದೆಂಬ ನಾಮದಲಿ | ಕಂಬು | ಕಂದರದ | ತಿಮ್ಮನ ಪ ಮಕರ ಕುಂಡಲಧಾರ | ಮಕ್ಕಳಾ ಮಣಿಸು ಕಾಮದಾ | ಅಕಳಂಕ ತುಲಸಿ ಸರ | ಕಮಲ ಅಕುಟಿಲ ಹೃದಯಮಂದಿರ | ಸಕಲಕಾಲದಲಿ ನಿಜ | ಭಕುತರಿಗೆ ಒಲಿದಿಪ್ಪ | ಅಖಿಳ ಲೋಕಾಧೀಶ ಮುಕುತಾರ್ಥ ಮುರವೈರಿ1 ಕರ ಮುಂಗೈಯ ಕಡಗ ಕಂಕಣ ಬಾಹು ಭುಜಕೀರ್ತಿ | ಮುಂಗೈಯ ಫಣಿಯ ತಿಲಕಾ | ಬಂಗಾರದಂಬರ ಭವದೂರಾ ಪದದಲ್ಲಿ | ಪೊಂಗೆಜ್ಜೆ ಸರ್ವಾಭರಣದಿಂದ ಒಪ್ಪುವಾ 2 ಪಾಂಡೆ ದೇಶವಾಸಾ ಪಾಂಡವರ ಸಂರಕ್ಷಕ | ಚಂಡ ಪ್ರಚಂಡ ಮಹಿಮಾ | ಗಂಡುಗಲಿಗಳ ಗಂಡಾ | ಕೊಂಡಾಡಿದವರಿಗೆ ತಂಡ | ತಂಡದ ವರವೀವಾ | ಉದ್ದಂಡ ವಿಜಯವಿಠ್ಠಲ| ಅಂಡಜಗಮನ ಕೃಷ್ಣಾ ತಿಮ್ಮಾ3
--------------
ವಿಜಯದಾಸ