ಒಟ್ಟು 7 ಕಡೆಗಳಲ್ಲಿ , 6 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನಬೇಡಲಿ ನಿನ್ನ ನಾ ಬಯಸಿ ಸ್ವಾಮಿ ಐಹಿಕ ಸುಖ ನಿಖಿಲ ಪುಸಿಯಾಗಿ ಪ ವನಿತೆಯನು ಬೇಡಲೆ ತನಗೆ ಅಲ್ಲದೆ ಮತ್ತೆ ಮನೆತುಂಬ ಮರಿಮಾಡಿ ತಿನಿಸಿಗ್ಹಾಕೆಂದು ಅನುಗಾಲ ಬೆನ್ನ್ಹತ್ತಿ ತಿನುತಿಹ್ಯಳು ಹರಿದ್ಹರಿದು ಬಿನುಗರಲಿ ಬಿನುಗೆನಿಸಿ ಘನತೆಯನು ಕೆಡಿಸಿ 1 ಘನವೆಂದು ನಂಬಿ ನಾ ಧನವನಾಪೇಕ್ಷಿಸಲೆ ಸನುಮತದಿ ಒತ್ತಟ್ಟಕ್ಷಣ ಕೂಡ್ರಗೊಡದೆ ದಣಿವಿಕಿಲ್ಲದೆ ದುಡಿಸಿ ಅಣುಮಾತ್ರ ಸುಖಕೊಡದೆ ಚಿನುಮಯಾತ್ಮನೆ ನಿನ್ನ ನೆನವೆ ಮರೆಸುವುದು 2 ಭೂಮಿಯನು ಬೇಡಲೆ ಸ್ವಾಮಿಯಂತೆ ಸೇವೆಗೊಂಡು ತಾಮಸದಿ ನೂಕಿ ಬಲು ಪಾಮರೆನಿಸುವುದು ಸ್ವಾಮಿಯೆನ್ನಯ ಸಕಲ ಕಾಮಿತ ಕಡಿದು ನಿಮ್ಮ ನಾಮಬಲ ಕರುಣಿಸು ಶ್ರೀರಾಮ ಪ್ರಭುತಂದೆ3
--------------
ರಾಮದಾಸರು
ಏನಿದು ಬರಿ ಮಾಯೆ ತೋರ್ಪುದಿದೆಲ್ಲವು ಪುಸಿಮಾಯೆ ಮಾನಿನಿ ಮನೆಮನೆ ವಾರ್ತೆ ಮಕ್ಕಳು ತಾನಿದು ಕನಸಿನ ಬಾಳ್ವೆ ನಿದಾನ ಪ ಕೇರೆಯ ನುಂಗಿ ಓತಿ ಕೊಸರುತಿರಲು ತೆರೆಯಿತೆನಗೆ ಕಣ್ಣು ತೆರೆಯಕ್ಷುಧೆಗೇನು ಕಾಣೆನುಗತಿಯ 1 ಯಾವಾವ ತನು ವಿಡಿದು ಬರುವುದೋ ಆವಾವ ಠಾವಿನಲಿ ಜೀವ ಜೀವವ ತಿಂದು ಜೀವಿಸಿಕೊಂಡು ಸಾಯುತ ಜನಿಸುತಲಿರುವುದು ಪ್ರಾಣಿ 2 ತಿಳಿಯಲೊಂದಕೆ ಒಂದು ತಿನಿಸಿಗೆ ಬೆಲೆ ಮಾಡಿದವ ಬೇರೆ ಬಳಗು ಹೊರಗು ತಾನೆ ಬೆಳಗುತಲಿರುವನು ಚಲನ ಭವನ ಕೋಣೆ ಲಕ್ಷ್ಮೀರಮಣ 3
--------------
ಕವಿ ಪರಮದೇವದಾಸರು
ಏನು ಹಾವಳಿ ಮಾಡುತಿಹನಮ್ಮ ಗೋಪಮ್ಮ ಕೇಳೆಏನು ಹಾವಳಿ ಮಾಡುತಿಹನಮ್ಮ ಪ ಏನು ಹಾವಳಿ ಮಾಡುತಿಹಮನೆ ಓಣಿಯಲಿ ಕ್ರೀಡಿಸುವ ಮಕ್ಕಳನುತಾನು ಅಳಿಸುವ ಹಿಡಿಯ ಪೋಗಲುವೇಣುನೂದುತ ಮೋಹಿಸುವನು ಅ.ಪ. ಮನಿಯೊಳು ತಾ ಪೊಕ್ಕು ನೋಡುವನೆ ಪಾಲ್ಮೊಸರ ಕೊಡಗಳಮನಸಿನಂದದಿ ತಿಂದು ಒಡೆಯುವನೆತಿನಿಸಿ ಬೆಕ್ಕಿಗೆ ಕ್ಷಣವು ತಡೆಯದೆ ವನಿತೆರೆಲ್ಲರು ಹಿಡಿಯ ಕೂಸಿನತನುವು ಧರಿಸಿ ನಿಂತ ಕಟಿಯಲಿ ಸ್ತನವ ತಿಂಬುವ ವನರುದೇಕ್ಷಣ1 ತರುಗಳಾಲಯದಲ್ಲಿ ತಾ ಬರುವಕರೆಸದಲೆ ಮುಂಚಿತ ತೊರಿಸಿ ಮೊಲೆಗಳ ಪಾಲ ತಾ ಕುಡಿದಕರಸಿಕೊಳ್ಳದೇ ಸುರಭಿ ತಿರುಗಲು ಸರಣಿಯೊಳು ತಾ ನಿಂತು ನಗುತಲಿ ತರುಣಿಯರ ಹೆರಳ್ಹಿಡಿದುಜಗ್ಗುತ ಕರದಿ ಸಿಗದಲೆ ಭರದಿ ಓಡುವ 2 ಕೂಸಿನಂದದಿ ತೊಡೆಯೊಳಾಡುವನೆ ಕ್ಷಣದೊಳಗೆ ಪತಿಗಳವೇಷಧರಿಸಿ ಮೋಸ ಮಾಡುವನೆತಾಸು ಘಳಿಗೆ ಬಿಡದೆ ನಮ್ಮ ನಿವಾಸ ಮಾಡುತ ಕಾಡುತಿಹಇಂದಿರೇಶವಚ್ಛವ ಸಾಕು ಮಾಡು ಹೇ ಶುಭಾಂಗಿ3
--------------
ಇಂದಿರೇಶರು
ನರಹರಿಯ ಗುಣ ಕೊಂಡಾಡುವುದೇ ಲೇಸು ಮುರಲೀಧರನೊಲಿಸಿ ಪರಗತಿ ಸುಖವ ಬಯಸು ಪ ಸುಳ್ಳುಮಾತಾಡಿ ಧನಗಳಿಸುವುದಕಿಂತಲಿ ಒಳ್ಳೆಯವನೆನಿಸುವ ಬಡತನವೇ ಲೇಸು ಕಳ್ಳತನದಿಂದಲಿ ಕದ್ದು ತಿಂಬುವುದಕಿಂತ ಕೇಳಿ ಸಿಕ್ಕಷ್ಟುಂಡು ಇರುವುದೇ ಲೇಸು 1 ಸಾಲದಿಂದರಮನೆಯ ಕಲ್ಪಿಸಿರುವುದಕಿಂತಾ ಸಾಲಿಲ್ಲದ ಮನೆಯಲ್ಲಿಹುದೇ ಲೇಸು ಕಾಲನ ದೂತರಿಂದೆಳೆಸಿಕೊಳ್ಳದೇ ಲಕ್ಷ್ಮೀ ಲೋಲನಾ ಪಾದದಲ್ಲಿರುವುದೇ ಲೇಸು 2 ಅನ್ಯ ಸ್ತ್ರೀಯರ ಸುಖವ ಬಯಸಿ ಕೆಡುವುದಕಿಂತ ತನ್ನವಳ ಕೂಡ ಬಡಿದಾಡುವುದೇ ಲೇಸು ಹೊನ್ನು ಹೆಣ್ಣು ಮಣ್ಣಿಗಾಸೆ ಮಾಡದೇ ಮನಸನ್ನ ಸಿರಿಪತಿಗೆ ಒಪ್ಪಿಸುವುದೇ ಲೇಸು 3 ತಾನು ಮಾಡಿದೆನೆಂಬುದಕಿಂತ ಹರಿಯ ಆಧೀನವೆಂದರಿಯುವುದು ಪರಮ ಲೇಸು ಶ್ವಾನಗೆ ಮಾಂಸವನು ತಿನಿಸಿ ಸಲಹುವುದಕಿಂತ ಜ್ಞಾನಿಯಾದವನ ಸಲಹುವುದೇ ಲೇಸು 4 ದುಷ್ಟ ಮನುಜನು ಮಾಡುವ ಕೃಪೆಗಿಂತಲೂ ಶ್ರೇಷ್ಠ ನರರಿಂದ ಬೈಸಿಕೊಳ್ಳವುದೇ ಲೇಸು ಕೆಟ್ಟ ಸಂಸಾರ ಸುಖ ಬೇಡುವುದಕಿಂತ ಹನುಮೇಶ ವಿಠಲನ ಧ್ಯಾನದ ಸುಖವೇ ಲೇಸು 5
--------------
ಹನುಮೇಶವಿಠಲ
ನಾನಾ ಯೋನಿಗಳೊಳು ಹೀನಜನ್ಮದಿ ಬಂದು ನಾನು ತಿರುಗಲಾರೆನೊ ಗೋಪಾಲ ಪ. ಶ್ರೀನಿವಾಸ ನಿನ್ನ ಸೇರಿದ ಬಳಿಕ ಉದಾಸೀನ ಮಾಳ್ಪರೇನೋ ಗೋಪಾಲ ಅ.ಪ. ಇಂದ್ರಿಯದೊಳಿದ್ದೆನೊ ಗೋಪಾಲ ಪಿಂಡವಾದೆನೊ ಗೋಪಾಲ ಮಾಸ ನಾಲ್ಕಯಿದಾಗಲ ವಯವಂಗಳಿಂದ ಬೆಳೆವುತಿದ್ದೆನೊ ಗೋಪಾಲ 1 ನರಳಿ ಕೋಟಲೆಗೊಂಡೆನೊ ಗೋಪಾಲ ಹಿರಿದು ಚಿಂತಿಸಿದೆನೊ ಗೋಪಾಲ ಕಷ್ಟಬಡುತಿದ್ದೆನೊ ಗೋಪಾಲ ಸಂದ ಧರೆಗೆ ಪತನವಾದೆನೊ ಗೋಪಾಲ2 ಘಾಸಿಯೊಳೊರಲುವೆನೊ ಗೋಪಾಲ ಘಾಸಿಸಿ ದುಃಖಿಪೆನೊ ಗೋಪಾಲ ಬ್ಯಾಸತ್ತು ಒರಲುವೆನೊ ಗೋಪಾಲ ಶ್ವಾಸ ಎತ್ತಿದೆನೊ ಗೋಪಾಲ 3 ಬಾಲತನದಿ ಬಹುವಿಧದಾಟವ ತೋರಿ ಮೇಲನರಿಯದಿದ್ದೆನೊ ಗೋಪಾಲ ಮಾರ್ಜಾಲ ಘಾತಕನಾಗಿದ್ದೆನೊ ಗೋಪಾಲ ಕೂಳಿಗೀಡಾಗಿದ್ದೆನೊ ಗೋಪಾಲ ಪಾಳೆಯಕೀಡಾದೆನೊ ಗೋಪಾಲ 4 ಆಗಿ ಬಾಳುತಲಿದ್ದೆನೊ ಗೋಪಾಲ ನೀಗಿ ಬಾಳುತಿದ್ದೆನೊ ಗೋಪಾಲ ಬಾಧೆಗೆ ಬೆಂಡಾದೆನೊ ಗೋಪಾಲ ಆಗಲು ಪುತ್ರ ಬಾಂಧವರಿಗೋಸ್ಕರ ಭವ- ಸಾಗರ ಎತ್ತಿದೆನೊ ಗೋಪಾಲ 5 ಬಾಲ್ಯಯೌವನವಳಿದು ಜರೆ ಒದಗಿ ನಾನು ಮೇಲೇನರಿಯದಿದ್ದೆನೊ ಗೋಪಾಲ ಬೀಳುತೇಳುತಲಿದ್ದೆನೊ ಗೋಪಾಲ ಹೋದಂತಿದ್ದೆನೊ ಗೋಪಾಲ ಗೂಳಿಯಂದದಲಿದ್ದೆನೊ ಗೋಪಾಲ 6 ಬಾಳುತಲಿದ್ದೆನೊ ಗೋಪಾಲ ಗಿಷ್ಟನೆನಿಸಿಕೊಂಡೆನೋ ಮುಟ್ಟರೆನಿಸಿಕೊಂಡೆನೊ ಗೋಪಾಲ ಕೊಟ್ಟು ತಿನಿಸಿದೆನೊ ಗೋಪಾಲ7 ವೇದನೆಗೊಳುತಿದ್ದೆನೊ ಗೋಪಾಲ ಕೊಂಡದಿ ಬಿದ್ದೆನೊ ಗೋಪಾಲ ಗುಹ್ಯ ಯಾತನೆಗೊಳಗಾದೆ ಗೋಪಾಲ ಬಾಧೆಯೊಳು ಒರಲುವೆನೊ ಗೋಪಾಲ 8 ನಿನ್ನ ನೆನೆಯದಿದ್ದೆನೊ ಗೋಪಾಲ ದುಷ್ಟಬುದ್ಧಿಯೊಳಿದ್ದೆನೊ ಗೋಪಾಲ ಶ್ರೇಷ್ಠಜನ್ಮದಿ ಬಂದೆನೊ ಗೋಪಾಲ ಸೃಷ್ಟಿಯೊಳು ತುರುಗೇರಿ ಗುರು ಅಚಲಾನಂದವಿಠಲ ಸಲಹೆಂದೆನೋ ಗೋಪಾಲ 9
--------------
ಅಚಲಾನಂದದಾಸ
ಭೀಮ ಭುಜಬಲೋದ್ದಾಮ ಸವರಿದಿ ಕುರುಪನ ಕುಲವ ನಿಸ್ಸೀಮ ಪ ವಿಷದಿ ಕಜ್ಜಾಯ ತಿನಿಸಿ ಮುಸುಕಿನಿಂ ಬಂಧಿಸಿ ಎಸೆಯಲು ನದಿಯೊಳು ಕುಶಲದಿಂ ಬಂದೆಯೊ 1 ಜನನಿ ಗೌರಿಯ ವ್ರತವನು ಮಾಳ್ಪೆನೆಂದೆನಲು ಅಣ್ಣ ನನುಮತಿಯಂತೆ ಘನ ಸುರಲೋಕ ಕೈದ್ಯೊ 2 ನಿರುತದಿಂ ಸುರಧೇನು ವರ ಪರುಷಮೃಗವನ್ನು ಕರೆತಂದು ಗಜಗೌರಿ ವ್ರತವ ಪೂರೈಸಿದಿಯೊ 3 ಬಕನ ಮರ್ದಿಸಿ ಹಿಡಿಂಬಕನ ತರಿದು ಹಿಡಿಂ ಬಿಕಿಯಳ ಕರಗ್ರಹಣ ಕೈಕೊಂಡ್ಯೊ ರಣಶೂರ 4 ಬಲ್ಲಿದತನದಿ ಆ ಖುಲ್ಲಕೀಚಕನೊದೆದು ಪುಲ್ಲನಯನೆಯ ಕಾಯ್ದೊ ಬಲ್ಲಿದ ಶ್ರೀರಾಮನ ದೂತ 5
--------------
ರಾಮದಾಸರು
ಯಾಕೆ ನಿನ್ನ ಮನಕೆ ಬಾರೆನೋ ಹೇ ವೇಂಕಟೇಶ ಪಕಾಕುಬುದ್ಧಿ ಎನಗಿಲ್ಲೋ ಹೇ ವೆಂಕಟೇಶಾಅ.ಪಬೆದರಿ ನಿನ್ನ ನೊದೆಯಲಿಲ್ಲೊ ಹೇ ವೆಂಕಟೇಶಾ 1ತಿನಿಸಿದ ತರ ನಾ ತಿನಿಸಲಿಲ್ಲವೋ ಹೇ ವೆಂಕಟೇಶಾ 2ಭಂಡಿ ಹೊಡಿ ಎಂದು ನಡೆಸಲಿಲ್ಲವೋ ಹೇ ವೆಂಕಟೇಶಾ 3ಕಟ್ಟಿಗೆಯ ಹೊರಿಸಲಿಲ್ಲವೋ ಹೇ ವೆಂಕಟೇಶಾ 4ಕೆಟ್ಟ ಕಾರ್ಯ ಮಾಡಿಲಿಲ್ಲವೊ ಹೇ ವೆಂಕಟೇಶಾ 5ಮುಟ್ಟಿ ನಿನ್ನ ಭಜಿಸಿದ ಫಲವೇನೋ ಹೇ ವೆಂಕಟೇಶಾ 6ದಾತಶ್ರೀ ಗುರುಜಗನ್ನಾಥ ವಿಠಲನೆಂದು ನಾಪ್ರೀತಮನದಿ ಬಂದೆನೋ ವೆಂಕಟೇಶಾ 7
--------------
ಗುರುಜಗನ್ನಾಥದಾಸರು