ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಛೀ ಯಾತರ ಜನ್ಮಾ | ನಾಯಿಗಿಂದತ್ತಾಧಮ ಪ ಛೀ ಯಾತರ ಜನ್ಮಾ ನಾಯಿ ಹಿಂದತ್ತಾಧಮ ಬಾಯಿ ಬಡಕನಾಗಿ ಮಯ್ಯ ಮರೆವರೇ ನಿಮ್ಮಾ ಅ.ಪ ಸಾಧುರಾನುಸರಿಸಿ | ಬೋಧನಾಮೃತ ಸೇವಿಸಿ | ಹಾದಿವಿಡಿದು ಗತಿ ಸಾಧಿಸಿ | ಘಾಸಿ 1 ಬುದ್ಧಿ ತನಗ ಇಲ್ಲಾ | ತಿದ್ದಿದರ ಕೇಳಲಿಲ್ಲಾ | ಇದ್ದೆರಡಾದಿನದೊಳು | ಸದ್ಯ ಸೌಖ್ಯ ಕಳೆದೆಲ್ಲಾ | 2 ಕಲ್ಲು ಕಟೆಯ ಬಹುದು | ಬಿಲ್ಲು ಮಣಿಸಬಹುದು | ನಿಲ್ಲದೇ ವನಕಿ ತುಂಡಾ | ಸಲ್ಲದಂತೆ ನೀನಾಗುದು 3 ಮರಹುಟ್ಟಿ ಮರ ಬಿದ್ದಾ | ತೆರನಾದೋ ಅಪ್ರಬುದ್ಧಾ | ತಿರುಗಿ ನೋಡಿನ್ನಾರೆ | ಚ್ಚರಿತು ನೀ ಮದದಿಂದ 4 ಗುರು ಮಹೀಪತಿಜನಾ ಧರಿಸಿರೋ ಸದ್ವಚನಾ ಸರಿಕರ ಕಂಡು ಹ್ಯಾವಾ ವರಿಸದೆ ಇಹುದೇನಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನನ್ನ ಮಗನೆಂಬರು ನಾಯಿ ಮಕ್ಕಳುತನ್ನ ತಾನೆ ಬ್ರಹ್ಮವದು ತಾನೆ ವೇಷ ಹಾಕಿ ಬರೆ ಪ ಸತಿಪತಿ ತಾವು ಆಗ ಸಂಯೋಗದ ಕಾಲದಲ್ಲಿಸುತನ ಕಿವಿ ಮೂಗ ಏನ ತಿದ್ದಿದರೇನೋಅತಿ ಆಶ್ಚರ್ಯವಲ್ಲದೆ ಅವಯವ ತಾಳಿಕೊಂಡುಕ್ಷಿತಿಗೆ ಮೈದೋರುತ ತಾನೆ ಬಂದರೆ 1 ಗಂಧ ಕಸ್ತೂರಿಯ ಪೂವು ಗಮಕದಲಿ ಧರಿಸುವಾಗಒಂದನ್ನ ಸುತೆಗೆ ಗುರುತು ಮಾಡಿದರೇನೋಇಂದು ಇದೆನೆವವೆಂದು ಇಳಿದು ಸಪ್ತಧಾತು ತಾಳಿಛಂದದಿ ವಿನೋದಕಾಗಿ ತಾನೆ ಬಂದರೆ 2 ಮಂಚವೇನು ಸಂಪತ್ತಿಗೆ ಮಡಿಹಾಸಿಗೆಯೊಳಿರ್ದುಮಂಚದಲಿರುತ ಸುತಗೆ ಚೇತನ ತುಂಬಿದರೇನೋಹೊಂಚಿನೋಡಿ ಚಿದಾನಂದ ಹೊರೆಯೇರಿ ಹರುಷದಿಪಂಚವಿಂಶತಿ ತತ್ವ ಕೊಡಿ ತಾನೆ ಬಂದರೆ 3
--------------
ಚಿದಾನಂದ ಅವಧೂತರು
ನೀನೆ ಗುರುವಾಗೆನಗೆ ಕೋನೇರಿವಾಸ ಙÁ್ಞನವಿಲ್ಲದ ಮನುಜ ತಾನಿದ್ದು ಫಲವೇನು ಪ ನಾಳವಿಲ್ಲದ ಘಂಟೆ ಭಾರವಾಗಿದ್ದರೇನು ತೋಳ ಬಲಹಿಲ್ಲದವ ದೊರೆಯಾದರೇನು ಹಾಳು ಭೂಮಿಯು ತನ್ನ ಮೂಲವಾದರೆಯೇನು ಬಾಳಲೀಸದ ಮನೆಯ ಬಲವಂತವೇನು 1 ತಿದ್ದಬಾರದ ತೇಜಿ ಉದ್ದವಾಗಿದ್ದರೇನು ಮೂರ್ತಿ ಮುದ್ದಾದರೇನು ಕದ್ದ ಕಳ್ಳನ ಮಾತು ಬದ್ಧವಾದರೆಯೇನು ಮದ್ದನರಿಯದೆ ಧಾತು ತಿಳಿದಿದ್ದರೇನು 2 ಗೊಡ್ಡು ದನವಿನ ಕ್ರಯವು ಅಡ್ಡವಾದರೆಯೇನು ಬಡ್ಡು ಅರಸಿನ ಬಂಟನೊಡ್ಡೊಕ್ಕರೇನು ಹೆಡ್ಡನಾದವ ಬಹಳ ಗಡ್ಡವಿರಿಸಿದರೇನು ಕಡ್ಡಾಯದಂಗಡಿಯಲಿದ್ದು ಫಲವೇನು3 ಒಕ್ಕಲಿಲ್ಲದ ಊರು ಮಕ್ಕಳಿಲ್ಲದ ಮನೆಯು ಅಕ್ಕರಿಲ್ಲದ ತವರು ಇದ್ದು ಫಲವೇನು ಚೊಕ್ಕ ಹೆಂಡತಿಯವಳ್ಗೆ ತಕ್ಕ ವರನಿಲ್ಲದಿರೆ ಕುಕ್ಕೆ ತುಂಬಿದ ರೊಕ್ಕವಿದ್ದು ಫಲವೇನು 4 ಬಡಿಗೆಯಿಲ್ಲದೆ ಚಿನ್ನ ಕಡಗವಾಗುವುದೇನೊ ಪೊಡವಿ ಕಡಿಯದೆ ಬೆಳೆಯ ನೆಡುವುದೇನೊ ಕಡಗೋಲು ಹೊರತಾಗಿ ಬೆಣ್ಣೆ ತೋರುವುದೇನೊ ತುಡುಬು ಬಡಿಯದೆ ಧ್ವನಿಯ ಕೊಡುವುದೇನೊ 5 ಅಡವಿಯೊಳಗಿಹ ವೇಣು ತಿದ್ದಿದರೆ ಮೈಗೊಟ್ಟು ಕಡುಹುಳ್ಳ ದೊರೆಗಳನು ಹೊರವುತಿಹುದು ಶುಕ ಪಕ್ಷಿಯನು ಅಡಗಿಸಿಯೆ ಹಾಲೆರೆದು ಒಡನೆ ಹೇಳಿದ ನುಡಿಯ ತಾ ನುಡಿವುದು 6 ಬಂಟ ಬಿಡದೆ ಸೇವೆಯ ಮಾಳ್ಪ ಮಡದಿ ತಾ ಚೆಲುವಾಗಿ ಅಡಿಗೆ ಮಾಡುವಳು ಕಡೆಯ ಕಾಲಕೆ ತನ್ನ ದೃಢ ಬುದ್ಧಿ ಹಿಂಗುವುದು ಒಡೆಯನನು ಭಜಿಸಲಿಕೆ ಮನವಿಲ್ಲವು 7 ಗುರುವಾಗು ಇಹಪರಕೆ ಸ್ಥಿರವಾದ ಸೌಖ್ಯವನು ಒರೆದು ಮಾರ್ಗವ ತೋರು ಉರಗಗಿರಿವಾಸ ಗುರುವೆಂದು ಭಾವಿಸಿಯೆ ಕರಮುಗಿದು ಶಿರಬಾಗಿ ಸರಸಿಜಾಂಘ್ರಿಯ ನೆನೆವೆ ವರಾಹತಿಮ್ಮಪ್ಪ 8
--------------
ವರಹತಿಮ್ಮಪ್ಪ
ಭಂಡನಾದೆ ಸಂಸಾರಕೊಂಡದೊಳಗೆ ಬಿದ್ದು ಕಂಡುಕಾಣದಂತಿರುವರೇ ಪುಂಡರೀಕನಯನ ಪ ಅಶÀನ ವಸನಕ್ಕಾಗಿ ದೆಸೆಗೆಟ್ಟು ಬಾಯ್ಬಿಡುತ ಅಸುವ ಕರದೊಳ್ಪಿಡಿದು ವಸುಧೆಯ ಜನರ ಬಸವಳಿದು ಬೇಡಲು ಕಣ್ಣೆಸಿದು ಬೈಯಲು ತಲೆಬಾ ಗಿಸಿಕೊಂಡು ನಿಂದೆ ಹರಿ ಉಸುರಲಳವಲ್ಲ 1 ರೊಕ್ಕದ ಆಸೆಗಾಗಿಕ್ಕೆಲದ ಜನರನ್ನು ತರ್ಕಿಸದೆ ದೈನ್ಯದಿಂ ಚಿಕ್ಕಮಗ ನಾ ಎನುತ ಫಕ್ಕನೆ ಕೈತಾಳನಿಕ್ಕುವರು ನಗಲು ಮಹ ದು:ಖದಿಂ ತಿರುಗಿದೆನು ಬಿಕ್ಕಿಬಿಕ್ಕಳುತ 2 ಯರ ಮೋಹಿಸಿ ದಂಡಿಸಿದೆ ಮನೆಸತಿಯ ಕಂಡವರು ತಿದ್ದಿದರು ಚಂಡಿತನವಿಡದೆ ಕಂಡವರ ಅರ್ಥವನು ಮನೆಸೇರಿಸಿ ಬಂಡೆದ್ದು ಜನರೊಳಗೆ ಮಂಡೆಯೆತ್ತದೆಹೋದೆ 3 ತಪದಿಂದ ಹರಿಪಾದ ಜಪಿಸುವುದ ಮರೆದು ನಾ ಕೃಪಣತ್ವಜನಸೇವೆ ಅಪರೂಪಗೈದೆ ಚಪಲತ್ವತನದಿಂದ ಅಪಹರಿಸಿ ಪರರರ್ಥ ಸುಪಥಕ್ಕೆ ದೂರಾಗಿ ಅಪರಾಧಿಯಾದೆ4 ಕದ್ದು ತಿಂದೆ ನೆರಹೊರೆಯ ಬಿದ್ದೆ ದುರ್ಬವಣೆಯೊಳು ಬದ್ಧನಾಗಿ ಧರೆಮೇಲೆ ಹದ್ದಿನಂತೆ ಬಾಳ್ದೆ ತಿದ್ದಿ ನೀ ಎನ್ನ ತಪ್ಪುಬುದ್ಧಿಯನು ಕಲಿಸೆನ್ನೊ ಳಿದ್ದು ಪೊರೆ ದಯದಿಂದ ಮುದ್ದು ಶ್ರೀರಾಮ 5
--------------
ರಾಮದಾಸರು
ರಂಗ ಕುಣಿದ ಮುದ್ದು ರಂಗ ಕುಣಿದ ಪ.ರಂಗ ಕುಣಿದ ಗೋಪಿಕಂಗಳ ಮುಂದೆಪೊಂಗೆಜ್ಜೆ ರವದೊಳು ಅಂಗಳದೊಳು 1ಗೆಳೆಯರೆಂದೆನಿಸುವ ಎಳೆಮಕ್ಕಳೊಡಗೂಡಿಬಳುಕುತ ಬಾಗುತ ನಲಿನಲಿದಾಡಿ 2ಮೊಳೆವಲ್ಲು ಬಾಯಿಜೊಲ್ಲು ಗಿಳಿಸೊಲ್ಲಿನಿಂದಲಿಕಳಕಳಿಸಿ ನಕ್ಕು ನಗಿಸಿ ಬಿದ್ದೆದ್ದು 3ಸುಳಿಗುರುಳು ಪಣೆಯಲಿ ಒಲಿದಾಡಲುಬಲರಾಮ ತಿದ್ದಿದರಳುತ ಅಳುಕುತ 4ಅರಳೆಲೆ ಮಾಗಾಯಿ ಬೆರಳ ರನ್ನುಂಗುರಕಿರುಗೆಜ್ಜೆ ಭಾರೆಂದು ತರಳರಿಗಿತ್ತು 5ಮಕ್ಕಳ ರತುನ ಶ್ರೀ ಚಿಕ್ಕಕೃಷ್ಣಯ್ಯನುಬೆಕ್ಕಿಗೆ ಬೆದರ್ಯೆವೆ ಇಕ್ಕದೆ ನೋಡಿ 6ನಗುತತಿ ಮುದ್ದಿಸಿ ಬಿಗಿದಪ್ಪಲೆಶೋದೆಯಮಗ ಪ್ರಸನ್ವೆಂಕಟೇಶ ಚಿಗಿದುಡಿಯಲ್ಲಿ 7
--------------
ಪ್ರಸನ್ನವೆಂಕಟದಾಸರು