ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದೇಹಿಯೆಂಬವನೊಡನೆ ನಾಸ್ತಿಯೆನಬೇಡ ಕಾಯೊ ವೆಂಕಟಪತಿಯೆ ಕಾರುಣ್ಯವಾರಿಧಿಯೆ ಪ ಮಾಡಿದಪರಾಧಗಳ ನೋಡಿ ಕ್ಷಮಿಸಿಯೆ ಯೆನಗೆ ರೂಢಿಯೊಳು ಬೆಳೆಸಿರಿಯ ಕೈಗೂಡಿಸಿ ಆಡಿ ತಪ್ಪಿದ ನುಡಿಯ ಕೂಡಿ ನಡೆಸುತ ಮುಂದೆ ಬೇಡಿದಿಷ್ಟವನಿತ್ತು ಮಾತಾಡಬೇಕೆನುತ 1 ನರನಾದ ಕುರಿಯಿದನು ಸಲಹಬೇಕೆಂದೆನುತ ಮೊರೆಯಿಟ್ಟು ನಿನ್ನಡಿಗೆ ಶರಣಾದೆನು ಕರುಣವಾರಿಧಿ ನಿನ್ನ ಚರಣದಾಭರಣನಿಗೆ ಹರಣವನು ಮರೆವಾಗೆ ಸ್ಮರಣೆ ನೀಡೆನುತ 2 ಗುಣವಾದ ಪತ್ರಿಕೆಯ ಕ್ಷಣದೊಳಗೆ ಹರಿದೆನ್ನ ಕಣುಮನಕೆ ದೃಢವಾದ ಗುಣವ ತೋರೆನುತ ಫಣಿಶಯನ ನಿನ್ನಡಿಗೆ ಮಣಿದು ಬೇಡುವೆ ನಾನು ಉಣಲಾಗದೋಗರವ ಉಣಿಸಬೇಡೆನುತ 3 ಕೆಟ್ಟ ಕೆಲಸವನಿದಿರು ದೃಷ್ಟಿಗಿಕ್ಕದೆÀಯೆನ್ನ ಬಿಟ್ಟು ಕಳೆಯಲು ಬೇಡ ಸೃಷ್ಟಿಪಾಲಕನೆ ಇಟ್ಟಡಿಯ ಕಮಲವನು ಮುಟ್ಟಿ ಭಜಿಸುವೆ ನಾನು ಹುಟ್ಟಿದೀ ಬವರದೊಳು ಕಷ್ಟ ಬೇಡೆನುತ 4 ಶುದ್ಧ ಸ್ನಾನವ ತೊರೆದು ಇದ್ದ ಜಪಗಳ ಮರೆದು ಕರ್ಮ ಒದ್ದು ಕಳೆದು ಉದ್ದಂಡವಾಗಿ ನಡೆದಿರ್ದ ಪಾಪಂಗಳನು ತಿದ್ದಿಟ್ಟು ಎನ್ನನುರೆ ಉದ್ಧರಿಸಬೇಕಯ್ಯ 5 ಪೊಡೆವಿಯೊಳಗೆನ್ನಂಥ ಕಡುಮೂರ್ಖರನು ಕಾಣೆ ಮಡದಿಯೆಂಬಡವಿಯೊಳು ಕೈದುಡುಕಿದು ಪಡೆದ ಮಕ್ಕಳ ಮುಂದೆ ಕಡೆ ಹಾಯುವವರಿಲ್ಲ ಒಡೆಯನಾಗಿಯೆ ಯೆನ್ನ ಬಿಡದೆ ಸಲಹೆನುತ 6 ನಾರಿ ಮಕ್ಕಳಿಗೆಲ್ಲ ಮೀರಿದಾಪತ್ತಿನಲಿ ತೋರಿಸುವೆ ನಿನ್ನ ಚರಣಂಗಳೆನುತ ಹಾರೈಸಿದ್ಹರಕೆಯಿದು ಭಾರವಾಗಿಯೆ ಶಿರದಿ ಏರಿದುದನಿಳುಹುವರೆ ದಾರಿ ತೋರೆನುತ 7 ತ್ರಾಹಿ ವೆಂಕಟರಾಯ ಕಾಯೊ ನಿನ್ನಯ ಮಾಯೆ ಮೋಹಿಸುತ ಜಗವೆಲ್ಲ ಬಾಯ ಬಿಡುತಿಹುದು ದೇಹಿಯೆನುತಿಹ ಜನಸಹಾಯನಲ್ಲವೆ ನೀನು ಮಾಯವಾಗದೆ ಮುಂದೆ ಆಯತನ ತೋರೆನುತ 8 ಸುರವಂದ್ಯ ಮುರಮಥನ ಗುರುದೈವ ಪರಮಾತ್ಮ ವರಲಕ್ಷ್ಮಿಕರವೆನಿಪ ಹರಿವೆಂಕಟೇಶ ಮರೆವಾಗದಿರು ಯೆನ್ನ ಕರೆದು ನೆರೆ ಸೌಖ್ಯವನು ಸ್ಥಿರವಾಗು ಎನ್ನೊಡನೆ ವರಾಹತಿಮ್ಮಪ್ಪ 9
--------------
ವರಹತಿಮ್ಮಪ್ಪ
ಒಲಿಯಯ್ಯಾ ರಂಗ ಒಲಿಯಯ್ಯಾನೆಲೆಗಾಣದಭವಜಲದೊಳು ಮುಳುಗುವೆಪ.ಮಾಯದ ಕೈಯಲಿ ಮೇಲೆ ಮೇಲೆ ಸುತ್ತಿಆಯಾಸಬಡುತಿದೆ ಪ್ರಾಣದಾತಬಾಯೆತ್ತಿ ಗೋವಿಂದ ಹರಿಯೆನ್ನಲೀಸದುಕಾಯೊ ದಯಾಳು ಕರಿವರದ ಕೃಷ್ಣ 1ಮನ ನೀರಾನೆಯ ಕಟ್ಟಿನೊಳಗೆ ಸಿಕ್ಕಿಕ್ಷಣ ಕ್ಷಣ ದೈನ್ಯದಿ ಒರಲುತಿದೆತನತನಗೆಳೆದು ದಣಿಸುವ ಇಂದ್ರಿಯ ಜಂತುಮುನಿಸೇವ್ಯ ನಿನ್ನೂಳಿಗಕ್ಕೆ ದೂರಾದೆ ಕೃಷ್ಣ 2ಬುದ್ಧಿ ತಪ್ಪಿದವಗೆ ಅಬದ್ಧ ನಡೆವವಗೆಶುದ್ಧ ಕಾರಣ ದಿವ್ಯನಾಮವಲ್ಲವೆಉದ್ಧರಿಸು ಬೇಗ ಪ್ರಸನ್ವ್ವೆಂಕಟ ಕೃಷ್ಣತಿದ್ದಿಟ್ಟುಕೊಳ್ಳೊ ನಿನ್ನವಗೆ ನಿರ್ಣಯ ನೀನೆ 3
--------------
ಪ್ರಸನ್ನವೆಂಕಟದಾಸರು
ಕೆಟ್ಟೆನಲ್ಲೊ ಹರಿಯೆ |ಸಿಟ್ಟು ಮಾಡಿ ಎನ್ನ ಬಿಟ್ಟು ಕಳೆಯ ಬೇಡ ಪಬಂದೆನು ನಾ-ತಂದೆ-ತಾಯಿಗಳುದರದಿ |ಒಂದನೂ ಅರಿಯದೆ ಬಾಲಕತನದೊಳು ||ಮುಂದುವರಿದ ಯೌವನದೊಳು ಸತಿ-ಸುತ-|ರಂದವ ನೋಡುತ ನಿನ್ನ ನಾ ಮರೆತೆನೊ 1ಸ್ನಾನ-ಸಂಧ್ಯಾನವು ಹೀನವಾಯಿತು ಬಹು-|ಮಾನವಿಲ್ಲದೆ ಕುಲಹೀನರಾಶ್ರಯದಿಂದ ||ಙ್ಞÕನಿಗಳೊಡನಾಟವಿಲ್ಲದೆ ಮನದೊಳು |ದಾನ-ಧರ್ಮದ ಬಟ್ಟೆಯಂತೆಂದು ಮರೆತನು 2ಮೊದಲೆ ಬುದ್ದಿಯು ಹೀನ ಅದರೊಳು ವೃದ್ಧಾಪ್ಯ |ಕದನವು ದಶದಿಕ್ಕಿನುದಯದ ರಾಯರ ||ಎದೆನೀರು ಬತ್ತಿತು ಅದರಿಂದ ನಿನ್ನಯ |ಪದಪದ್ಮಯುಗಳದ ತುದಿಯ ನಾ ಮರೆತೆನು 3ಮೂಢನಾದೆನು ನಿನ್ನ ಬೇಡಿಕೊಳ್ಳದೆ ನಾನು |ಕಾಡೊಳಗಾಡುವ ಮೃಗದಂತೆ ಜೀವಿಸಿ ||ಗೂಡೊಳಗಿರುತಿಹ ಗೂಬೆಯ ತೆರನಂತೆ |ಮಾಡದೆ ನಿನ್ನಯ ಸ್ಮರಣೆಯ ಮರೆತೆನು 4ಬುದ್ದಿಹೀನನು ನಾನು ಉದ್ದರಿಸೆಲೊ ದೇವಮುದ್ದು ಶ್ರೀಪುರಂದರವಿಠಲನೆನ್ನ ||ಬುದ್ದಿಯೊಳಡಗಿಯೆ ತಿದ್ದಿಟ್ಟು ನಡೆಸಯ್ಯ |ಪೊದ್ದುವೆ ನಿನ್ನಯ ಚರಣಾರವಿಂದವ 5
--------------
ಪುರಂದರದಾಸರು