ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆವ ಜನುಮದ ಪಾಪ ವೊದಗಿತೋ ಎನಗಿಂದು | ದೇವ ಗಂಗೆಯ ನೋಡಿದೆ ಪ ದೇವಕೀಸುತ ಒಲಿದು ಕರೆತಂದು ಎನ್ನನು | ಪಾವನ್ನ ಮಾಡಿದನು ಇನ್ನೂ-ಮುನ್ನೂ ಅ.ಪ ಗುರುಗಳನು ವಹಿಸಿ ಭೂಸುರರಿಗೆ ಕಠಿಣ | ಉ- ತ್ತರ ಪೇಳಿಸಾಗಿದ್ದನೊ | ವರ ಬ್ರಾಹ್ಮಣರ ತಪ್ಪು ಬಲು ಇರಲು ಇಲ್ಲದೇ | ಸರಿಯೆಂದು ಸ್ಥಾಪಿಸಿದೆನೊ | ಮುರಿವ ಲಗ್ನಕೆ ಪೋಗಿ ಪುಸಿ ದ್ರವ್ಯವನೆ ಪೇಳಿ | ಮರಳಿ ಪೂರ್ತಿಸಿ ಇದ್ದೆನೊ | ವರ ವಿಪ್ರರಿಗೆ ವಧೆಯು ಬರಲು ಸಾಕ್ಷಿಯಾಗಿ | ಪರಿಹರಿಸಿ ಬಂದಿದ್ದನೋ ಏನೋ 1 ಘನ ತೀರ್ಥಯಾತ್ರೆಗೆ ಪೋಗುವಾಗ-ಲು | ವಂ ಕರ್ಮ ಮಾಡಿದ್ದೆನೊ | ಜನಪತಿಗಳ ಮಾತು ಕೇಳದೆ ಧರ್ಮಕ್ಕೆ | ಅನುಕೂಲನಾಗಿದ್ದೆನೊ | ಮನೆಗೆ ಬಂದತಿಥಿಗಳು ಜರಿದು ಪಿತ್ರಾದ್ಯರಿಗೆ | ಉಣಿಸಿ ಸುಖಪಡಿಸಿದ್ದೆನೊ | ವನಗಳನು ಕಡಿದು ದೇವಾಲಯವ ಕಟ್ಟಿಸಿ | ಕ್ಷಣ ಕ್ಷಣಕೆ ಅರ್ಚಿಸೆದೆನೋ ಏನೊ 2 ಉತ್ತಮನು ಮನೆಗೆ ಬಂದಾಗ ಮಾಡುವಂಥ | ಸತ್ಕರ್ಮ ತೊರೆದಿದ್ದೆನೋ | ಹೆತ್ತವರ ಬಾಂದವರ ಧನದಿಂದ ಕೆರೆ ಭಾವಿ | ಹತ್ತೆಂಟು ಕಟ್ಟಿಸಿದೆನೊ | ದತ್ತಾಪಹಾರವನು ಮಾಡಿ ಅದರಿಂದನಗ್ನಿ- ಹೋತ್ರವನು ಸಾಧಿಸೆದೆನೊ | ಇತ್ತ್ಯಧಿಕ ನಿರ್ಬೀಜ ಪಾಪಗಳನೆಸಗಿ | ಕೃ- ತಾರ್ಥನಾದೆನೊ ವಿಜಯವಿಠ್ಠಲನ್ನ ಕರುಣದಲಿ3
--------------
ವಿಜಯದಾಸ
ವಿಶ್ವ ಜ್ಞಾನರೂಪವಿಶ್ವದೊಳ ಹೊರಗು ನೀನಲ್ಲದೆ ಬೇರೆವಿಶ್ವನಾಟಕ ಸೂತ್ರಧಾರರುಂಟೆ ಹರಿಯೆ ಪ ಮುಕುಟ ಮಂಡೆಯಲಿ ಧ್ರುವಲೋಕ ಭುವನಾವಳಿಯುನಿಖಿಲ ಶ್ರುತಿ ನವರತುನ ನಿಟಿಲದಲ್ಲಿಮುಖದಲಿಂದ್ರರು ಅಗ್ನಿ ಸಪ್ತ ಋಷಿಗಳು ದ್ವಿಜರುಮುಖದ್ವಾರದುಸುರಿನಲಿ ಶ್ರುತಿ ಮರುತರುದೃಕುಯುಗದಿ ರವಿ ಶಶಿಯು ಎವೆಯಲ್ಲಿ ನಕ್ಷತ್ರಪ್ರಕಟ ಜಿಹ್ವೆಯ ವಾಣಿ ಕರ್ಣದ್ವಯದಿವಿಕಟ ಕಿವಿಯಲಿ ಅಶ್ವಿನಿದೇವತೆಗಳೆಲ್ಲಸಕಲ ಧರ್ಮವ ಪಡೆದೆಯೆಲೊ ಹರಿಯೆ 1 ಸ್ಕಂಧದಲಿ ಅತಿಥಿಗಳು ವಿದ್ಯಾತತಿಗಳು ಮಹಾಚಂದದರಸುಗಳು ಭುಜ ತೋಳಿನಲ್ಲಿಮುಂದುರದಿ ವಿಷ್ಣು ಹರ ಬ್ರಹ್ಮ ಸಹಿತುದರದಲಿಹಿಂದಿನ ಮಗ್ಗುಲಲಿ ಮನುಮುನಿಗಳುಮುಂದಿನ ಮಗ್ಗುಲಲಿ ಗಿರಿನಿಚಯಂಗಳುಸಂಧಿಯಲಿ ಮಕರಂದ ದೇವತೆಗಳುಮುಂದೊರೆದಿಹ ರೋಮಕೂಪದಗ್ರದಳತೆಯುವೃಂದಗಳ ಶೋಭಿಪ ರೀತಿಯ ಪಡೆದೆಯೆಲೊ ಹರಿಯೆ2 ಬೆನ್ನಿನಲಿ ವಸುನಿಕರ ಸ್ಮರನು ಲಿಂಗದಲಿ ಈ ಭು-ವನವೆಲ್ಲವು ಚೆಲುವ ನಾಭಿಯಲ್ಲಿಮುನ್ನ ಕೈಯಲಿ ವಿಶ್ವದೇವತೆಗಳು ವೈಶ್ಯಉನ್ನತ ಜಾನುವಿನ ಸಕ್ತಿಯಲಿಭಿನ್ನ ನದಿಗಳು ಸನ್ಮೋಹನ ಶಕ್ತಿ ಪ್ರ-ಸನ್ನ ಪಾದಾಬ್ಜದಿಂ ಶೂದ್ರರುನಿನ್ನ ಅವಯವದಲ್ಲಿ ಸಕಲವಂ ಪಡೆದ ಪ್ರ-ಸನ್ನ ಕಾಗಿನೆಲೆಯಾದಿಕೇಶವರಾಯ 3
--------------
ಕನಕದಾಸ
ಸಿಕ್ಕಿದೆಯೋ ಎಲೆ ಜೀವ-ನಿನ್ನ-ಕುಕ್ಕಿ ಕೊಲ್ಲದೆ ಬಿಡರು ಪಸೊಕ್ಕಿದ ಹೆಣ್ಣಿಗೆ ನೀ ಮರುಳಾದೆ |ಉಕ್ಕಿನ ಕಂಬಕೆ ನೀ ಗುರಿಯಾದೆ ಅ.ಪಹಾಳೂರ ಕೋಳಕೆ-ಕಾಲು ಚಾಚಿದ ಹಾಗೆ |ಮೂಳ ಸಂಸಾರಕೆ ನೀ ಗುರಿಯಾಗಿ ||ತೇಲುತ ಮುಳುಗುತ ಇಲ್ಲಿಗೆ ಬಂದೆ 1ಸತಿ-ಸುತರೆಂಬುವರೆ - ಹಿತರೆಂದು ನಂಬಿದೆಯೊ |ಯತಿಗಳ ತಿಥಿಗಳು ಬಂದರೆ ಮನೆಗೆ-||ಗತಿಯಿಲ್ಲವೆಂದು ಖತಿಗೊಂಡೆಯಲ್ಲೊ 2ಶುನಕನಂದದಿ ನೀನು ಮನೆಮನೆಯನು ತಿರುಗಿ |ಘನಘನವಾದ ಕೂಳನೆ ತಿಂದು ||ತನುವ ತಗ್ಗಿಸಿ ಇಲ್ಲಿಗೆ ಬಂದೆ 3ಕಂಡವರ ಒಡವೆಯ-ಖಂಡುಗ ಧನವನು |ಮಿಂಡೆಯರ ಒಡವೆಯ ಭಂಡತನದಲಿ ||ಕಂಡುಕಾಣದೆ ನೀ ತಿಂದೆಯಲ್ಲೊ 4ಗೋಪಾಲಕೃಷ್ಣಯ್ಯ-ತಾಪತ್ರಯವ ಕಳೆವ |ಆಪತ್ತೆಲ್ಲ ಪರಿಹಾರ ಮಾಡುವ ||ಶ್ರೀಪತಿ ಪುರಂದರವಿಠಲನ ನೆನೆಯದೆ 5
--------------
ಪುರಂದರದಾಸರು