ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದಿಮ್ಮಾಕ ನಿನಗ್ಯಾಕೆ ಎಲೆ ಎಲೆ ಜಮ್ಮಾಸಿ ಜರ ತಿಳಿಕೊ ಪ ದಿಮ್ಮಾಕ ನಿನಗ್ಯಾಕೆ ಛೀಮಾರಿ ನಿನ್ನ ದಿಮ್ಮಾಕ ಮುರಿಲಿಕ್ಕೆ ಗುಮ್ಮವ್ವ ನಿಂತಾಳೆ ಅ.ಪ ಸೊಕ್ಕಿನಿಂದ ನಡೆವಿ ಮುಂದಿಂದು ಲೆಕ್ಕಕ್ಕೆ ತರದಿರುವಿ ಫಕ್ಕನೊಯ್ದೆಮನವರು ಉಕ್ಕಿನ ಪ್ರತಿಮೆಯ ತೆಕ್ಕೆಯೊಳಾನಿಸಿ ನಿನ್ನ ಒಕ್ಕಲಿಕ್ಕುವರವ್ವ 1 ತಾರತಿಗಡಿ ತುಸು ವಿ ಚಾರಮಾಡಿನೋಡು ಘೋರ ಯಮದೂತರು ಹಾರೆ ಕಾಸಿ ಯೋನಿ ದ್ವಾರದಿ ಸೇರಿಸಿ ಘೋರ ಬಡಿವರವ್ವ 2 ಪಾಮರಳಾದಲ್ಲೆ ಮುಂದಿನ ಕ್ಷೇಮವ ಮರೆತಲ್ಲೇ ಭೂಮಿಸುಖಕೆ ಮೆಚ್ಚಿ ತಾಮಸದಲಿ ಬಿದ್ದು ಸ್ವಾಮಿ ಶ್ರೀರಾಮನ ಪ್ರೇಮಕ್ಕೆ ದೂರಾದಿ 3
--------------
ರಾಮದಾಸರು
ನಗೆಗೇಡವ್ವಾ ತಂಗಿ ನಗೆಗೇಡು ಹಗರಣ ಸಂಸಾರ ತಿಗಡಿ ಬುಗಡಿ ಬಲು ¥ ಕಾಲನಾಗಿ ದ್ರವ್ಯಕೂಡಿಸಿದ ಮಹ ಮೇಲು ಮಾಳೀಗೆ ಮನೆ ಕಟ್ಟಿಸಿದ ಕೀಳುಸತಿಸುತರೆಂದು ನಂಬಿದ ಮತ್ತು ಮಾಲಿನೊಳಗೆ ಇಟ್ಟು ಆಳಿದ ಕಾಲವೊದಗಿ ಬಂದು ದಾಳಿಟ್ಟೊಯ್ಯಲು ತನ್ನ ಆಳಿಗಿಟ್ಟುಣುತಾರ ಹೋಳಿಗೆ 1 ಕುಂದಿಪೋಗುವಕಾಯ ಖರೆಯೆಂದ ಇದ ರಂದ ತಿಳಿಯದೆ ಬಲುಮೋಹಿಸಿದ ಬಂದಕಾರ್ಯದ ಬಗೆ ಮರೆದ ಸುಳ್ಳೆ ದಂದುಗದೊಳು ಬಿದ್ದು ನಿಗರ್ಯಾಡಿದ ಒಂದೂಕಾಣದೆ ಬಂದದಾರಿಹಿಡಿದ 2 ಪರಮ ಸನ್ಮಾರ್ಗವನು ತೊರೆದ ಬರಿ ಬರಿದೆ ದು:ಖದೊಳಗುರುಳಿದ ಹರಿಯ ಶರಣರನು ನಿಂದಿಸಿದ ಸದಾ ದುರುಳರಾವಾಸದೊಳಗಾಡಿದ ಪರಮ ಕರುಣಾಕರ ವರದ ಶ್ರೀರಾಮನ ಚರಣ ಪಿಡಿಯದೆ ಘೋರನರಕಕ್ಕೀಡಾದ 3
--------------
ರಾಮದಾಸರು