ಒಟ್ಟು 6 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಪ್ಪನ ನೋಡಿರೊ ವರಗಳ ತಪ್ಪದೆ ಬೇಡಿರೋ ಸರ್ಪನಮೇಲೆ ಉಪ್ಪವಡಿಸಿ ಮುಪ್ಪು ಇಲ್ಲದೆ ಭಕ್ತರನ ಪೊರೆವಾ ಪ ಬಲುವಾ ನಂದಗಡಲ ಸುಖವೊ ತೂಗುವ ಸುಳಿಗುರುಳ ಚುಂಚೊ ಸುಂದರದವತಾರ ಮಂದರಧರನೋ 1 ಅರಳಿದ ಸಂಪಿಗೆ ತೆನೆಯು ನಾಸಾ ಕೊನೆಯಲ್ಲಿ ಮಣಿಯು ತರುಳ ಹಾರವೋ ಮುಂದಲೆಯಲ್ಲಿ ಅರಳೆಲೆ ವೈಯಾರವೋ ತಿಲಕಾಂಬರದ ಬಿದಿಗೆ ತಿಂಗಳೊ ಮಕರ ಕುಂಡಲವೊ 2 ಕುಸುಮ ವನದ ಹಬ್ಬೊ ಗಲ್ಲದ ಚಿಬವೊ ಕಮಠದ ಬೆನ್ನೊ ಹೋಲಿಕೆ ಅಧರಾಮೃತದ ಸುರಿಯು ಅಲ್ಲಲ್ಲಿಗೆ ಕಿರಿಬೆವರಿಡೆ ನಿಲ್ಲದೆ ವೀಳ್ಯದ ಜೊಲ್ಲಿನ ಧಾರೆಯು 3 ಬಾಳಿದಿಂಡಿನ ತೋಳು ಕಟ್ಟಿದ ತಾಯಿತಗಳೇಳು ಕೀಲು ಕಡಗ ಝಣವೊ ದ್ವಾರೆ ಘಟ್ಟಿ ಕಂಕಣವೋ ನೀಲದುಂಗುರ ಹರಳೊ ಮುಂಗೈ ಸರಪಳಿಯ ಬೆರಳೊ ಬಾಲಲೋಲ ಗೋಪಾಲನೊ 4 ಪನ್ನಲಗ ಮುರಿಗ್ಯೂರಕ್ಷಿಯ ಮಣಿಯು ಥೋರ ದಾಸರಿಗೆ ಕೌಸ್ತುಭ ಶೃಂಗಾರವೊ ರನ್ನದ ಮಾಲೆ ತುಲಸಿ ಪದಕ ಹಾಕಿದ ಎಣ್ಣಿನುಲೊ ಗೋಪಿ ಮನ್ನಿಸುತಲಿ 5 ಹುಲಿಯುಗುರೂಮುತ್ತಿನಮಾಲಿಕಿಯುಪೂಸಿದಗಂಧಗರೊ ವೀಳೆಯರುಣನೊ ಅಂಗೈಯ ಗೆರೆಯು ವಿಸವ ಲಕ್ಷಣನೊ ವೈಜಯಂತಿ ಸುಳ್ಳುವೊ ಒಲಿಸಿದಳೊ ಮಗನ ಯಶೋದೆ 6 ಕಂಬು ಕೊರಳೊ ಮೂರೇಖಿಯು ಅಂಗೈಯಿವರಿಗೆ ಮರುಳೊ ತುಂಬಿ ಸೂಸುವ ಹೊಳೆಯು ಜಠರದ ನಾಭಿ ತ್ರಿವಳಿಯು ಬಿಸಲಿನ ಘನ ಹರಿಯು ಭೊಂ ಭೊಂ ಭೊಮೆಂದು ಕೊಂಬಿನ ಊದು ಎಂಬೊ ನುಡಿಯಲಿ ರಂಬಿಸಿ ಕೃಷ್ಣನ 7 ಕಮಲದ ಮಗ್ಗ್ಯೊ ಉಂಗುರ ನಡುವಿದು ಅಲಂಕಾರದ ಸುಗ್ಗ್ಯೊ ಅಮಮ ಧೊರೆಯು ನಾದದ ಘಂಟ್ಯೊ ಮಣಿಶಿಂಗನ ಮರಿಯು ಜಾನು ಕನ್ನಡಿ ಕ್ರಮವೊ ಧಿಮಿ ಧಿಮಿ ಎಂದು ರಂಗನ ಕುಣಿಯೆಂದು ನಿಮನಿಮಗೆಲ್ಲ 8 ಕಾಲಲಿಯಿಟ್ಯ ಗೆಜ್ಜ್ಯೋ ಅಂದಿಗೆ ತಪ್ಪು ತಪ್ಪು ಹೆಜ್ಜ್ಯೊ ನೀಳದ ದಂತೊ ಜಂಘ ಸರಪಳಿಯ ಗಗ್ಗರಿಯ ಯಿಂತೊ ನಖ ಕೇದಿಗೆ ಮುಳೆಯು ಲಾಲಿ ಲಾಲಿ ಕಂದ ಎನುತಲಿ ಶ್ರೀ ಲಕುಮಿ ಲೋಲನ ಎಬ್ಬಿಸಿ 9 ನೆರೆದವರಿಗೆ ತರುಳರನೆಲ್ಲಾ ಕರೆದು ಸುತ್ತಲು ನಿಲಿಸಿ ಹರಿಹರಿ ಎಂದು ಹರದಾಡುತಲಿ ಪರಮ ಸಂಭ್ರಮದಿಂದ ಕರೆಕರೆದು ವಿಜಯವಿಠ್ಠಲನ ತರಕಿಸಿ ಸಂತತ ಉಡಿಯಲಿ ಎತ್ತಿ 10
--------------
ವಿಜಯದಾಸ
ಮಾವನ ಮನೆಯೊಳಗೆ ಇರಬಹುದೆ ಕೋವಿದರು ಪ ಹರಣ ನೀಡಲು ಬಹುದುಬೇವ ಕಿಚ್ಚನು ಹಿಡಿದು ನುಂಗಬಹುದುಭಾವೆಯಳ ತಂದೆ ಮನೆಯಲಿ ಜೀವಿಪುದಕಿಂತಸಾವುದೇ ಲೇಸು ಅಭಿಮಾನಿಗಳಿಗೆ1 ಪರರ ಸೇರಲು ಬಹುದು ಪತಿತರಲ್ಲಿರಬಹುದುಕೊರಳ ಘಾತಕಂಗೆ ಶಿರ ಒಪ್ಪಿಸಬಹುದುತರುಣಿಯಳ ತೌರು ಮನೆಯಲಿ ಇರುವುದಕಿಂತತರುಗಿರಿ ಗುಹೆಯಲ್ಲಿ ಇದ್ದು ಜೀವಿಸಬಹುದು 2 ಮಾವ ಅತ್ತೆಯು ನೊಂದು ಅತ್ತಿಗೆಯು ತಾ ಜರಿದುಹೇವವನಿಕ್ಕಿ ಚೂರ್ಣವ ಮಾಡಲುಆವಾಗ ನೋಡಿದರು ಎನಗೆ ಹಿತರಿಲ್ಲೆಂದುಮಾವ ಹೊರಗಾಡುವನು ಚಿಕ್ಕ ನುಡಿಗಳನು 3 ಬಂದೊಂದು ತಿಂಗಳೊಳು ಬಹುಮಾನ ನಡತೆಗಳುಬಂದೆರಡು ತಿಂಗಳೊಳಗೆ ಹಿತವಾದವುಒಂದೊಂದಭದ್ರ ನುಡಿ ಒಳಗೊಳಗೆ ಹುಟ್ಟುವುವುಸಂದೇಹವೇಕೆ ಸಂಸಾರಿಗಳಿಗೆ4 ಈ ಪರಿಯಲುಂಬಂಥ ಅಳಿಯ ಭೋಜನಕಿಂತಗೋಪಾಳ ಲೇಸು ಅಭಿಮಾನಿಗಳಿಗೆಶ್ರೀಪತಿ ನೆಲೆಯಾದಿಕೇಶವನ ಚರಣ ಸ-ಮೀಪದಲಿ ವಾಸಿಪುದೆ ವಾಸಿ ಮನವೆ 5 * ಈ ಕೀರ್ತನೆ ಪುರಂದರದಾಸರ ಅಂಕಿತದಲ್ಲೂ ದೊರೆತಿದೆ.
--------------
ಕನಕದಾಸ
ಮೂರ್ತಿ ರಕ್ಷಿಸೋ ನೀನು |ನಿನ್ನ ಪಾದವ ನಂಬಿದೆ ನಾನು ಪ ಪೂರ್ವಾರ್ಜಿತ ಪ್ರಾರಬ್ಧದಿಂದೆ |ತಾಯಿ ಉದರದಲಿ ನಾ ಬಂದೆ ||ಮಲಮೂತ್ರ ಜಠರಾಗ್ನಿಯಲಿ ನೊಂದೆ |ಒಂಬತ್ತು ತಿಂಗಳೊಳಗೆ ಬೆಂದೆ 1 ಬಾಲತ್ವದಲಿ ದುರ್ಬಲನಾದೆ |ಯೌವನ ಕಾಲಕೆ ಅಹಂಮತನಾದೆ ||ಮುಪ್ಪು ಬರಲು ಚಿಂತೆಯೊಳಗಾದೆ |ಸ್ವಾಮಿ ಭಜನೆಗೆ ಅಂತರನಾದೆ 2 ಧರೆಯೊಳಗೆ ದೊಡ್ಡವನೆಂದು |ಭವಭಯಕಂಜಿ ಬೆನ್ನನೆ ಬಿದ್ದೆ ||ದೀನೋದ್ಧಾರಕನೆಂದು ಶರಣು ಬಂದೆ |ಭೀಮಾಶಂಕರನ ಧ್ಯಾನಕೆ ತಂದೆ 3
--------------
ಭೀಮಾಶಂಕರ
ಮಂಗಳ ತ್ರಿವೆಂಗಳಪ್ಪ ಮಂಗಳಾಂಗ ರಂಗಗೆ ಶ್ರೀಮಂಗಳೆಯ ಸಂಗಗೆ ಜಗಂಗಳಾಂತರಂಗಗೆ ಪ.ಕಂಗಳಿಕ್ಕದಂಗೆ ನಿಖಿಳಾಂಗ ಕಪಟಂ ಕಮಠಂ? ಗೆ ಭೂವೆಂಗಳರಸಂಗೆ ನರಸಿಂಗದೇವನಿಗೆ 1ತಿಂಗಳೊಲಿದ್ದಗೆ ಖಳರ ಜಂಗುಳಿ ನಾದ್ದಂಗೆ ಕಲ್ಲವೆಂಗಳ ಮಾಳ್ಪಂಗೆ ಚೆಲ್ವ ಪೊಂಗೊಳಲೂದುವಂಗೆ 2ತುಂಗಮೋಹನಗೆ ಸತುರಂಗವಾಹನಂಗೆ ವಿಹಂಗಗೆ ಭುಜಂಗಶಯನ ಪ್ರಸನ್ನವೆಂಕಟಂಗೆ 3
--------------
ಪ್ರಸನ್ನವೆಂಕಟದಾಸರು
ಮಾವನ ಮನೆಯೊಳಗೆ ಕೋವಿದರಿರಬಹುದೆ ? ಪ.ಹಾವ ಹಿಡಿಯಲು ಬಹುದುಹರಣ ನೀಡಲು ಬಹುದು |<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಬೇವ ಕಿಚ್ಚನು ಹಿಡಿದು ನುಂಗಬಹುದು ||ಭಾವೆಯ ತಂದ ಮನೆಯಲಿ ಜೀವಿಪುದಕಿಂತಸಾವುದೇ ಲೇಸು ಅಭಿಮಾನಿಗಳಿಗೆ 1ಪರರ ಸೇರಲುಬಹುದು ಪತಿತರಲ್ಲಿರಬಹುದು |ಕೊರಳ ಘಾತಕರಲ್ಲಿ ಸೆರಗೊಡ್ಡಬಹುದು ||ತರುಣಿಯ ತಂದೆಯ ಮನೆಯವಾಸಕ್ಕಿಂತ |ತರುಗಿರಿಗುಹೆಗಳಲಿ ಇದ್ದು ಜೀವಿಸಬಹುದು 2ಮಾವ - ಅತ್ತೆಯ ನೊಂದು ಅತ್ತಿಗೆಯು ತಾ ಜರೆದು |ಹೇವವನಿಕ್ಕಿ ಚೂರ್ಣವ ಮಾಡಲು ||ಆವಾಗ ನೋಡಿದರೂ ಎನಗೆ ಹಿತರಿಲ್ಲೆಂದುಮಾವ ಹೊರಗಾಡುವನು ಚಿಕ್ಕ ನುಡಿಗಳನು 3ಒಂದೊಂದು ತೆಂಗಳೂಳು ಬಹುಮಾನ ನಡತೆಗಳು |ಒಂದೆರಡು ತಿಂಗಳೊಳಗೆ ಹಿತವಾದವು ||ಒಂದೊಂದಭದ್ರ ನುಡಿ ಒಳಗೊಳಗೆ ಹುಟ್ಟಿದುವು |ಸಂದೇಹವೇಕೆ ಸಂಸಾರಿಗೂ 4ಈ ಪರಿಯಲುಂಬಂಥ ಅಳಿಯ ಭೋಜನದಿಂದ |ಗೋಪಾಳ ಲೇಸು ಅಭಿಮಾನಿಗಳಿಗೆ ||ಶ್ರೀಪತಿ ನಮ್ಮ ಪುರಂದರವಿಠಲನಈಪರಿಭಜಿಸಿ ಸುಖಿಯಾಗೊ ಮನವೆ* 5
--------------
ಪುರಂದರದಾಸರು