ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತಾಳು ತಾಳೆಲೆ ಮನವೆ ತಾಳ್ಮೆಯ ತಾಳು ತಾಳೆಲೆ ಮನವೆ ಪ. ತಾಳು ತಾಳು ನಿನ್ನಾಳುವ ದೊರೆಯಿಹ ಅವ ಗಾಳಾಗಿ ನೀ ಬಾಳಲು ಕಾಳು ಮಾಡನು ಹರಿ ಅ.ಪ. ದುರ್ಜನರಾಡಿದ ನುಡಿ ಮನಕದ ಸಜ್ಜುಗೊಳಿಸಬೇಡ ಅರ್ಜುನ ಸಖನೇ ನಿನ್ನ ಪರೀಕ್ಷಿಸೆ ನಿರ್ಜರೇಶನೀಪರಿ ಮಾಡಿಹನೆಂದ 1 ಅಳಕು ಮನವ ಬಿಡು ನಿ ನ್ನಳದು ನೋಡುವ ಹರಿಯು ಅಳವಲ್ಲವನ ಲೀಲೆ ಕಂಡ್ಯ ಝಳ ಝಳ ಮನದಲಿ ಕಳೆ ಕಲೆ ಹರಿರೂಪ ಪೊಳೆದು ನಿನ್ನ ಮನದಳಕನೆ ದೂಡುವ 2 ಅಂಜದಿರಭಯವ ಅಂಜನಾಸುತ ಸೇವ್ಯ ಶ್ರೀ ಶ್ರೀನಿವಾಸ ಶ್ರೀರಾಮ ನಿ ನ್ನಂಜಿಸುವರನು ಅಂಜಿಸೆ ಕಾದಿಹ ಸಂಜಯ ಪ್ರಿಯ ಕಂಜನಾಭ ಹರಿ 3
--------------
ಸರಸ್ವತಿ ಬಾಯಿ
ಮನವು ನೆಮ್ಮದಿಯಾಗಲಿ ಪ ಅನುದಿನವು ನಿನ್ನ ಮನಸಾರೆ ಪೂಜಿಸುವಂತೆ ಅ.ಪ ಬೆಟ್ಟ ಬಿಸಿಲಿನಲಿ ಬೇಯುವುದ ನೋಡುತ ಮನವು ಕೆಟ್ಟು ಹೋಗದೆ ಸತತ ಶುದ್ಧವಿರಲಿ ಹೊಟ್ಟೆ ಪಾಡಿಗೆ ಕೊರತೆ ಪಡುತಿರುವ ಜನರಲ್ಲಿ ಸಿಟ್ಟುಬಾರದೆ ಮನಕೆ ತಾಳ್ಮೆಯಿರಲಿ 1 ನೀರು ಕಡೆದರೆ ಬೆಣ್ಣೆ ಬಾರದೆನ್ನುವ ಕ್ಲೇಶ ದೂರವಾಗಲಿ ತಿರುಗಿ ಬಾರದಿರಲಿ ವೀರ ಹನುಮನು ತನ್ನ ಸಾರಸೇವೆಗೆ ಫಲವ ಕೋರಿದನೆ ಧನಕನಕ ವೈಭವಗಳ 2 ಗೋಪುರವ ತಾಂಗಿರುವೆನೆಂಬ ಗೊಂಬೆಯ ಹೆಮ್ಮೆ ಈ ಪರಿಯೆ ಮನದ ಕ್ಲೇಶವ ತಂದಿತು ಶ್ರೀ ಪತಿಯು ಮಾಡಿ ಮಾಡಿಸುವೆನೆಂಬುವಜ್ಞಾನ ಲೋಪಪೊಂದದೆ ಮನ ಪ್ರಸನ್ನವಾಗಲಿ ದೇವ 3
--------------
ವಿದ್ಯಾಪ್ರಸನ್ನತೀರ್ಥರು