ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಷ್ಟು ಪೊಗಳಲಿ ನಾನು ಎನ್ನೊಡೆಯ ನಿನ್ನ ವಿ- ಶಿಷ್ಟ ಮಹಿಮೆಗಳನು ಭಕ್ತರಿಗೆ ಬಂದಾ ಕಷ್ಟ ಕಳೆಯುವೆಯೋ ನೀನು ಸುರಕಾಮಧೇನು ವಿಷ್ಣುವೇ ಪರದೈವವೆಂದು ದುಷ್ಟರಾಕ್ಷಸರನ್ನೆ ಕೊಂದು ಸೃಷ್ಟಿಪಾಲಿಪ ಶ್ರೀ ರಮೇಶನೇ ಇಷ್ಟ ಭಕುತರೊಳು ಶ್ರೇಷ್ಠನೆನಿಶಿದಿ ಪ ತಾಯಿಯೂ ಬಂದು ಸೇವೆಗೆ ರಘುಪತಿ ರಾಯನಲೆ ನಿಂದು ಬಯಸಲಿಲ್ಲಾ ಒಂದು ಶ್ರೀಹರಿಗೆ ಬಂದು ಕಾಯಬೇಕು ಸುಗ್ರೀವನೆನುತಲಿ ತೋಯಜಾಕ್ಷಗೆ ಪೇಳಿ ವಾಲಿಯ ಉ- ಪಾಯದಿಂದಲಿ ಕೊಲಿಸಿ ರವಿಜಗೆ ಸ- ಹಾಯ ಮಾಡಿದಿ ವಾಯುತನಯನೆ 1 ಕಡಲ ಬೇಗನೆ ಹಾರೀ ಶ್ರೀರಾಮನ ಮಡದಿಗುಂಗುರ ತೋರಿ ಅಲ್ಲಿದ್ದ ಅಸುರರ ಜಡಿದೆ ಬಲು ಹೊಂತಕಾರಿ ಮಾಡಿಯೊ ಸೂರಿ ಒಡೆಯಗ್ವಾರ್ತೆಯ ಪೇಳಿ ಶೀಘ್ರದಿ ನಡೆಸಿ ಸೈನ್ಯವ ದಶಮುಖನ ಶಿರ ಹೊಡೆಸಿದಾಕ್ಷಣ ಲೋಕಮಾತೆಯ ಒಡಗೂಡಿಸಿದೆಯೋ ಶ್ರೀರಾಮಚಂದ್ರಗೆ 2 ಮೂರು ರೂಪವ ತಾಳ್ದಿ ಮಹಯೋಗ್ಯ ಜನರಿಗೆ ಸಾರ ತತ್ವವ ಪೇಳ್ದಿ ಶರಣ್ಹೊಕ್ಕ ಜನರಪಾರ ದುಃಖವ ಶೀಳ್ದಿ ಮೊರೆಯ ಕೇಳ್ದಿ ಧೀರ ಕದರುಂಡಲಗಿ ಹನುಮಯ್ಯ ಸೇರಿದೆನೊ ನಿನ್ನಂಘ್ರಿ ಕಮಲವ ಗಾರು ಮಾಡದೆ ಸಲಹೊ ಕರುಣವಾರಿಧಿ ನೀಯೆನ್ನನೀಗಲೆ 3
--------------
ಕದರುಂಡಲಗಿ ಹನುಮಯ್ಯ
ಕರಿರಾಜ ವರದ ಗುರುರಾಜ ವರದ ಸುರಾಜ ನಿನ್ನ ನಾಮ ಕೇಳು ಪೇಳುವೆ ಗುಣಮಿತಿ ಮೀರಿ ದನುಜರ ವೈರಿ ಗುಣಿಜ£ಕಾಧಾರಿ ನಿನ್ನ ನಾಮ ಕೇಳು ಪೇಳುವೆ ಪ ಶಣಸೀದ ಸೋಮ ಕನ್ನರಿದಿ ಮೀನನಾಗಿ ವೇದವಾ ತಂದಿ ಗುಣತಪ್ಪಿದ ಚಲವನು ಬಿಡದೆ ಮುಣಿಗ್ಯೊಳಗೆ ಕೂರ್ಮನಾಪಿಡಿದಿ ನೊಣಶಣತಾಕ್ಷನ ಬಿಡದಳಿದಿ ಗುಣಿವರಹನಾ ಗಿಳಿಯ ತಂದಿ ಪ್ರಲ್ಹಾದನ ಪೊರೀದಿ 1 ವಟುರೂಪಿಲಿ ಬಲಯನು ತುಳಿದಿ ನಟಿಸುವ ವಾಮನನಾದಿ ಕಟಹಾರದಿ ಕ್ಷತ್ರಿಯರಳಿದಿ ಹಟದಿಂದ ಪರಶುರಾಮಾದಿ ಭಟ ರಾವಣನಸುವಾನಳಿದಿ ದಿಟರಾಮನೆಂದು ಪೆಸರಾದಿ ಜಟಿಯ ಪಿಡಿದು ಭೂತಹಟಕೆ ಘಟ್ಟಿಸಿ ಕೃಷ್ಣನೆನಿಸಿದಿ 2 ಯುವತೀಯರ ವ್ರತವನ್ನಳಿದಿ ಭುವನದಿ ಬೌದ್ಧನಾಗಿ ನಿಂದಿ ದಿವ್ಯ ಹಯವನೇರಿ ನೀ ಬಂದಿ ಭುವಿ ದುಷ್ಟರಾಂತಕ ಕಲ್ಕ್ಯನೀಡಿ ತವ ಶರಣರ ಪೊರೆಯುವ ನೆವದಿ ವಿಧವಿಧ ರೂಪ ನೀ ತಾಳ್ದಿ ಭವದಿಂದೆನ್ನನು ಉದ್ಧರಿಸೊ 3
--------------
ನರಸಿಂಹವಿಠಲರು
ನಿನ್ನ ಮಹಿಮೆ ತಿಳಿಯುವುದೊಂದಗಾಧ ದೇವ ಉನ್ನತೋನ್ನತಚರಿತ ನುತಸಹಜಭಾವ ಪ ಯೋಗಿ ನೀನಾದಯ್ಯ ಜೋಗಿಯೆಂದೆನಿಸಿದಿ ಆಗಾಧ ದೇಹ ತಾಳ್ದಿ ಬಾಗಿಲವ ಕಾಯ್ದಿ ಮಿಗಿಲಾದ ರೂಪಾದಿ ಜಗವ ಪಾಲಿಸಿದಿ 1 ಕರುಣದಿಂದಾಳಿದಿ ವರವಿತ್ತು ಕಳುಹಿದಿ ಧರೆಗೆ ಭಾರೆನಿಸಿದಿ ತಿರುಗಿ ನೀ ಮುನಿದಿ ಘಟ ನೀಡ್ದಿ ಪರಮಭಟನೆನಿಸಿದಿ ಶರಗಳನು ಪೋಣಿಸಿದಿ ಧುರದೊಳಗೆ ಕೊಂದಿ 2 ತಮ್ಮನ ಪಕ್ಷ್ಹಿಡಿದಿ ತಮ್ಮನಣ್ಣನಕೊಂದಿ ತಮ್ಮಗಧಿಕಾರ ಗೈದಿ ಸಮ್ಮತದಿ ಕಾಯ್ದಿ ತಮ್ಮನಿಗೆ ಭಾವನಾದಿ ತಮ್ಮನಿಗೆ ಬೋವನಾದಿ ತಮ್ಮನಿಂ ಕೊಲ್ಲಿಸಿದಿ ಸಮ್ಮತವ ಗೈದಿ 3 ಮಾವಗಳಿಯನಾದಿ ಮಾವಗೆ ವೈರ್ಯಾದಿ ಮಾವನ ಕುಲವಳಿದಿ ತಾಯನ್ನ ಕಾಯ್ದಿ ಗೋವು ಪಾಲಕನಾದಿ ಗೋವಿಗೆ ಮಗನಾದಿ ಗೋವುಗಳನಾಳಿದಿ ಗೋವುಕುಲ ಪೊರೆದಿ 4 ಮೀನಾದಿ ಕೂರ್ಮಾದಿ ದಾನ ಬೇಡುವನಾದಿ ಕಾನನ ಮೃಗನಾಗಿ ಧ್ಯಾನಿಪರಕಾಯ್ದಿ ದೀನಪಾಲನೆ ನಿನ್ನ ಜಾಣಮಹಿಮಂಗಳನ್ನು ಹೀನರರಿವರೆ ಮಮಪ್ರಾಣ ಶ್ರೀರಾಮ 5
--------------
ರಾಮದಾಸರು
ಸ್ಮರಿಸಿ ಸುಖಿಸೆಲೋ ಮಾನವಾ ಪ ಸರಸಿಜಾಸನ ಸತತ ನೆನೆವ ಹರಿನಾಮವನು ಅ.ಪ ಜವರಾಯ ಕಿಂಕರರ ಹಿಮ್ಮೆಟ್ಟಸಿದ ನಾಮ ಧ್ರುವರಾಯಗೊಲಿದ ಘನವು ಈ ನಾಮ ನವನೀತರೂಪದಿಂದ ಘನವ ತಾಳ್ದಿಹ ನಾಮ ಸುವಿಲಾಸದಿಂ ಪಾರ್ಥಗೊಲಿದಿರ್ಪನಾಮವನು 1 ಸನಕಾದಿ ಮುನಿಗಳು ಸತತ ಭಜಿಸುವ ನಾಮ ಅನಿಲಜಾತನಿಗೊಲಿದ ಪರಮನಾಮ ವನಚಾರಿಯಾಗಿದ್ದ ಶಬರಿಗೊಲಿದ ನಾಮ ವನಚರರ ಗರುವವನು ಮುರಿಯುವ ನಾಮ 2 ಪಾಂಚಾಲಿಗಕ್ಷಯದ ವರವನಿತ್ತಾ ನಾಮ ಪಾಂಚಜನ್ಯವ ಸಿರಿಯೊಳೆಸೆಯುತಿಹ ನಾಮ ವಂಚಕರ ಹೃದಯಗಳ ಭೇದಿಸುತ್ತಿಹನಾಮ ಚಂಚಲೆಯರುತ್ಸಾಹದಿಂ ಭಜಿಪ ನಾಮವನು 3 ದುರುಳದೈತ್ಯರ ಮನವ ಕದಡಿ ಕಲಕುವ ನಾಮ ಶರಣಾಗತಾವಳಿಯ ಪೊರೆಯುತಿಹನಾಮ ತರಳಪ್ರಹ್ಲಾದ ತಾ ಪಿತಗೊರೆವ ನಾಮವನು 4 ಮಾಂಗಿರೀ ವರಾಗ್ರದೊಳು ಮರೆಯುತಿಹ ಸಿರಿನಾಮ ಶೃಂಗಾರ ಶ್ರೀ ಪಾಂಡುರಂಗ ನಾಮ ಗಂಗಾಧರಾನುತ ಸುಖದಾತ ಶ್ರೀನಾಮ ಮಂಗಳಕರ ರಾಮದಾಸನುತ ನಾಮವನು 5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಬಗಳೆ ತಾನಾದವಗೆ ಏನು ಚಿಂತೆನಿಗಳಬಂಧನದ ಮತ್ತಗಜದಂತೆಪನಿದ್ರೆಯೊಳಗಣ ನಿದ್ರೆ ನಿತ್ಯದಿ ತಾಳ್ದಿಳಿದುನಿದ್ರೆ ದೃಷ್ಟಿಯೊಳಗೆ ದೃಷ್ಟಿಯಿಟ್ಟುನಿದ್ರೆಯನು ಸೋಂಕದಲೆನಿಂದುನಿದ್ರೆಯ ಸುಖವನಿದ್ರೆಯೊಳಗನುಭವಿಸಿನಿತ್ಯತಾನಾದ1ಕುಣಿಯುತಿಹ ಚಿತ್ಕಳೆಯ ಮನಕೆ ತಾ ತೋರುತಲಿಘಣ ಘಣಿಪ ಘಂಟೆ ನಾದವನಾಲಿಸಿಎಣಿಕೆಯಿಲ್ಲದಸೂರ್ಯಚಂದ್ರ ಬೆಳಗನೆ ಬೆಳಗಿಮನ ಸುಖಿಸಿ ಮನವಳಿದು ಮಹಿಮ ತಾನಾದ2ನಿಂದ ನಿಜದಲಿ ಬೆರತು ಬಾಹ್ಯಾಂತರವ ಮರೆತುಹೊಂದದಲೆ ದುರ್ಗುಣದ ವಾಸನೆಗಳಾಬಂಧನಂಗಳ ಕಳೆದು ಬವಣೆಗಳ ತಾನೀಗಿಸುಂದರಾತ್ಮನೆ ಆಗಿಶೂನ್ಯತಾನಾದ3ಎಲ್ಲೆಲ್ಲಿ ತಾನುಂಡು ಎಲ್ಲೆಲ್ಲಿ ತಾ ಮಲಗಿಎಲ್ಲ ಸ್ಥಳದೊಳು ತಾನು ಚರಿಸಿಎಲ್ಲ ಜನ ಬೆರಗಾಗೆ ತನ್ನ ದರುಶನ ನೀಡಿಸೊಲ್ಲುಡುಗಿ ಸಾಕ್ಷಾತ್ತು ಸಹಜ ತಾನಾದ4ತೂಗಾಡುತ ಕಣ್ಣ ಮುಚ್ಚಿ ತೆರೆಯುತ್ತಆಗಜರೆಜನನ ಮರಣಂಗಳಳಿದುಯೋಗಿಚಿದಾನಂದಗುರುತಾನಾದಬಗಳಾಂಬ ತಾನಾಗಿ ಪೂರ್ಣಬ್ರಹ್ಮ ತಾನಾದ5
--------------
ಚಿದಾನಂದ ಅವಧೂತರು