ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗೋವಿಂದೋ ನಾರಾಯಣ ಗೋವಿಂದೋ ನಾರಾಯಣ ಪ ವೇದಗಳು ಕದ್ದೊಯ್ದು ದೈತ್ಯ ಪಯೋಧಿಯೊಳಗಿಡಲು ಮತ್ಸ್ಯ ರೂಪದೊಳಂದು ವೇದಗಳ ತಂದನಮ್ಮ 1 ಬೆಟ್ಟವು ಮುಳುಗು ಸಮಯದಿ ನಮ್ಮರಂಗ ಹುಡಿಗಟ್ಟಿ ಸುರರರಕ್ಷಿಸಿದನಮ್ಮ 2 ಮಡಿದೊಯ್ಯಲು ಕ್ರೋಡತನ ತಾಳ್ದವನ ಛೇದಿಸಿ ದವಡೆಯೊಳ- ವನಿಯನೆತ್ತಿದನಮ್ಮ 3 ಕಶ್ಯಪನ ಸಿಗಿದನಮ್ಮ ಕೀರ್ತಿಯ ಪಡೆದನಮ್ಮ 4 ದಾನವ ಬೇಡಿದನು ಬಲಿಯಕೊಂದ ನಮ್ಮ 5 ನಿತ್ಯಾತ್ಮಕನಾಗಿ ಮೆರೆದ ನಮ್ಮ 6 ವಾರಿಧಿಯನು ಬಂಧಿಸಿದನಮ್ಮ ಮೀರಿದ ರಕ್ಕಸನಗಳ ನಿಳುಹಿ ನಾರಿ ಸೀತೆಯ ತಂದನಮ್ಮ 7 ಕಂಸನನು ಕೊಂದನಮ್ಮ ಗೋವುಗಳನು ಕಾಯ್ದನಮ್ಮ 8 ಬೌದ್ಧರೂಸವತಾಳ್ದನಮ್ಮ ಕೀರ್ತಿಯ ಪಡೆದ ನಮ್ಮ 9 ತುರುಗವ ನೇರುತ ಬಂದನಮ್ಮ ಕರುಣದಿಂದಲಿ ಕಾಯ್ದನಮ್ಮ 10 ಶ್ರೀ ಕೃಷ್ಣ ಮುಕುಂದನಮ್ಮ 11
--------------
ಕವಿ ಪರಮದೇವದಾಸರು
ಶ್ರೀರಾಮ ಎನ್ನಿರೊ ಮೂಜಗದವರೆಲ್ಲಈರೇಳು ಭುವನ ತನ್ನುದರದೊಳಿಟ್ಟನ ಪ ಅನಿಮಿಷರಂದದಿ ವನವಾಸಕೆ ಹೋದವನ _ ಶ್ರೀರಾಮ ಎನ್ನಿರೊಮನಸಿಜ ನಾರಿಯ ಪಿತನ ಕೊಂದನ ಪಿತನ ಪೊತ್ತವನ _ ಶ್ರೀರಾಮ ಎನ್ನಿರೊಘನ ಕೋಡ ಕೊನೆಯಿಂದ ಧರಣಿಯ ತಾಳ್ದವನ _ ಶ್ರೀರಾಮ ಎನ್ನಿರೊದಿನಕರನಳಿವಿನಲಿ ಪಗೆಯ ಗೆದ್ದಾತನ _ ಶ್ರೀರಾಮ ಎನ್ನಿರೊ1 ಗಜವನೇರಿದವನ ತಂದೆಯ ತಾಯನಳೆದವನ _ ಶ್ರೀರಾಮ ಎನ್ನಿರೊಭುಜಬಲದಿಂದ ಭೂಪಾಲರ ಗೆದ್ದವನ _ ಶ್ರೀರಾಮ ಎನ್ನಿರೊನಿಜಮುನಿಗಳ ವನದಿಂದ ತನಯರ ತಂದವನ _ ಶ್ರೀರಾಮ ಎನ್ನಿರೊಭುಜಗಧರನ ಕೈಯ ಆಯುಧವನು ತಂದವನ _ ಶ್ರೀರಾಮ ಎನ್ನಿರೊ 2 ವಾಸವ ಹೊಕ್ಕವನ _ ಶ್ರೀರಾಮ ಎನ್ನಿರೊತೃಣಕೆ ಬಾಯಿತ್ತನ ಮೇಲೇರಿ ಬಪ್ಪನ _ ಶ್ರೀರಾಮ ಎನ್ನಿರೊ ಅಣುರೇಣು ತೃಣದೊಳು ಪರಿಪೂರ್ಣನಾದನ _ ಶ್ರೀರಾಮ ಎನ್ನಿರೊಪ್ರಣವಗೋಚರ ಕಾಗಿನೆಲೆಯಾದಿಕೇಶವನ _ ಶ್ರೀರಾಮ ಎನ್ನಿರೊ 3
--------------
ಕನಕದಾಸ
ಮರೆಯದಿರು ಶ್ರೀ ಹರಿಯನು ಪ.ಮರೆಯದಿರು ಶ್ರೀ ಹರಿಯ ಮರಣಾತುರದಿ ಮಗನಕರೆದವಗೆ ಸಾಯುಜ್ಯವಿತ್ತ ನಾರಾಯಣನಸ್ಮರಣೆಯನು ಮಾಡುವರಚರಣ ಸೇವಕರಿಂಗೆಪರಮಪದವೀವ ಹರಿಯಅಪದೇವಕಿಯ ಬಂಧುವನು ಪರಿದವನ ಪೂತನಿಯಜೀವರಸವೀಂಟಿದನ ಮಾವನನು ಮಡುಹಿದನಪಾವನ ತರಂಗಿಣಿಯ ಪದನಖದಿ ಪಡೆದವನಗೋವರ್ಧನೋದ್ಧಾರನ ||ದಾವಾನಲನ ಪಿಡಿದು ನುಂಗಿದನ ಲೀಲೆಯಲಿಗೋವತ್ಸ ಗೋಪಾಲ ರೂಪವನು ತಾಳ್ದವನದೇವಮುನಿ ಮುಖ್ಯ ಸುರರಾರಾಧಿಸುವನ ಶ್ರೀ ಪಾದವನುಭಜಿಸು ಮನವೆ 1ಕಂಜಸಂಭವಪಿತನ ಕರುಣಾಪಯೋನಿಧಿಯಕುಂಜರನ ನುಡಿಕೇಳಿ ಒದಗಿದನ ರಣದೊಳು ಧ-ನಂಜಯನ ಜೀವವಂ ಕೃಪೆಯಿಂದ ಕಾಯ್ದವನಆಂಜನೇಯನ ನಾಳ್ದನ ||ರಂಜಿಸುವ ಕೌಸ್ತುಭವಿಭೂಷಣನ ಜಲಧಿಯಲಿನಂಜಿನೊಡೆಯನ ಮೇಲೆ ಮಲಗಿದನ ತಮದೊಳಗೆ ಪ -ರಂಜ್ಯೋತಿಮಯನಾಗಿ ಬೆಳಗುವನಶ್ರೀ ಚರಣಕಂಜವಂ ಭಜಿಸು ಮನವೆ 2ವಾರಿಧಿಯೊಳಾಡಿದನ ವರಗಿರಿಯ ತಾಳಿದನಧಾರಿಣಿಯ ತಂದವನ ದೈತ್ಯನನು ಕೊಂದವನಮೂರಡಿಯಲಳೆದವನ ಮೊನೆಗೊಡಲಿ ಪಿಡಿದವನ ನೀರಧಿಯಬಂಧಿಸಿದನ||ದ್ವಾರಕೆಯನಾಳ್ದವನ ತ್ರಿಪುರಗಳ ಜಗುಳ್ದವನಚಾರುಹಯವೇರಿದನ ಸಕಲ ಸುಜನರ ಪೊರೆವಧೀರ ಪುರಂದರವಿಠಲನ ಚರಣಕಮಲವನುನಂಬಿ ನೀ ಭಜಿಸು ಮನವೇ 3
--------------
ಪುರಂದರದಾಸರು