ಒಟ್ಟು 3 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತಾಳು ತಾಳೆಲೊ ಕೋಪ ಜಾಲಮಾಡದೆ ಭೂಪ ಕೇಳಿಕೊಂಬೆನು ನಿನ್ನ ಕಾಲಪಿಡಿವೆನೊ ಪ. ಫಾಲಲೋಚನನುತ ಶ್ರೀಲೋಲ ನಿನ್ನನೇ ಕೇಳಿಕೊಂಬೆನು ಮಾತಕೇಳೋ ಕಾಳುಮಾಡದೆ ಮಾತ 1 ದುರುಳತನದಲಿ ನಿನ್ನ ತೆರೆದಕಣ್ಣಳನೆಂದು ಜರಿದು ಪೇಳಿದೆನೋ ತಿರುಗಿ ನಾ ನಿನ್ನ ಗಿರಿಯ ಬೆನ್ನೊಳು ಪೊತ್ತು ಮೆರೆಯುವ ದಡ್ಡನೆಂದೊರೆದ ಕಾರಣದಿಂದ 2 ಕೋರೆಯೊಳ್ ಕೊರೆದು ಕೊನ್ನಾರಿಗೆಡ್ಡೆಯ ತಿಂದು ಳೀರಡಿ ಮಾಡಿದೆ ಘೋರವಿಕ್ರಮನೆಂದು ದೂರಿದೆನದರಿಂದ3 ಹೆತ್ತತಾಯಿಯ ಕೊಂದು ಮತ್ತೆ ಕಪಿಗಳ ಕೂಡಿ ಚಿತ್ತವಸೆರೆಗೈದ ಮತ್ತನೆಂದೆನಲಾಗಿ 4 ಉತ್ತಮಸತಿಯರ ಚಿತ್ತವ ಕಲಕಿದ ಮತ್ತನೆಂದಾಡಿದೆನೋ ಮತ್ತೆ ಕುದುರೆಯನೇರಿ ಕತ್ತಿಯ ಪಿಡಿದೆತ್ತಿ ಸುತ್ತುವನಿವನುನ್ಮತ್ತನೆಂದುದರಿಂದ 5 ಪಿತ್ತವು ತಲೆಗೇರಿ ಮತ್ತೆ ಮತ್ತೆ ನಾನಿನ್ನ ಒತ್ತೊತ್ತಿಜರಿದೆನೊ ಚಿತ್ತಜಪಿತನೆ ಮತ್ತೊಮ್ಮೆ ಬೇಡುವೆ ಗತಿನೀನೆ ನಮಗೆಂದು ಪತಿಕರಿಸೆನ್ನಪರಾಧವ ಮನ್ನಿಸಿ 6 ಕಂದನಿವಗೈದ ಕುಂದುಗಳೆಣಿಸದೆ ತಂದೆ ಸಲಹಯ್ಯ ಶ್ರೀ ಶೇಷಗಿರಿವರ 7
--------------
ನಂಜನಗೂಡು ತಿರುಮಲಾಂಬಾ
ತಾಳು ತಾಳೆಲೊ ರಂಗಯ್ಯ- ನೀ |ತಾಳು ತಾಳೆಲೊ ಕೃಷ್ಣಯ್ಯ ಪನಾಳೆ ನೀನು ನಮ್ಮ ಮನೆಗೆ ಬಂದರೆ |ಕಾಲಕಂಬಕೆಕಟ್ಟಿಪೇಳುವೆ ಗೋಪಿಗೆಅ.ಪದೊರೆಗಳ ಮಗನೆಂಬುದಕೇನೊ-ಬಹು |ಧುರದಿ ಮನೆಯ ಪೊಕ್ಕ ಪರಿಯೇನೊ ||ದುರುಳತನದ ಬುದ್ಧಿ ಸರಿಯೇನೊ-ನೀನು |ತಿರಿದು ಬೇಡುಂಡದ್ದು ಮರೆತೆಯೇನೊ 1ಚಿಕ್ಕಮಕ್ಕಳು ಇಲ್ಲವಂತೇನೊ-ನಿನಗೆ |ಕಕ್ಕೂಲಾತಿಯಿಂದಲಿ ನಿನ್ನ ||ಸಿಕ್ಕಿದ ಶ್ರೀಲೋಲ ಹಿಡಿಹಿಡಿಯೆಂದರೆ |ಬಿಕ್ಕಿ ಬಿಕ್ಕಿ ಅತ್ತರೆ ಬಿಡುವರೇನೊ 2ಕಟ್ಟಿದ ತುರುಗಳ ಮೊಲೆಯುಂಡು-ಕರು |ಬಿಟ್ಟ ಕಾರಣವೇನು ಹೇಳೊ ||ಸೃಷ್ಟೀಶ ಪುರಂದರವಿಠಲರಾಯನೆ |ಇಟ್ಟಿಗೆಯ ಮೇಲೆ ಬಂದು ನಿಂತ ಕಾರಣವೇನೊ? 3
--------------
ಪುರಂದರದಾಸರು