ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತಾಳಬೇಕು ಭಕ್ತಿಯೇಳಬೇಕು ಪ ತಾಳಬೇಕಾದವನು ಮೇಳದಲಿ ಬಾಳಬೇಕು ಅ.ಪ ಹಾಡಲು ತಾಳಬೇಕು ಬೇಡಲು ತಾಳಬೇಕು ಓಡಾಡಿ ಕುಳಿತು ಮಾತಾಡಲು ತಾಳಬೇಕು ನೋಡಬೇಕಾದವನು ನೋಡಲು ತಾಳಬೇಕು ಮಾಡಿ ಮುಳುಗುವ ಜನ್ಮಬೇಡೆಂದು ತಾಳಬೇಕು 1 ತಾಳರಿತಮೇಲಂತರಾಳವನು ಕಾಣಬೇಕು ತಾಳದವ ಬಾಳುವನೇ ಮೇಳದೊಳಗೇ ತಾಳ ನೋಡುವರೆಲ್ಲ ಹೂಳನೋಡಲಿಬೇಕು ತಾಳಿ ಮಾಂಗಿರಿರಂಗನೂಳಿಗಕ್ಕೆ ನುಗ್ಗಬೇಕು 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಮರುಳಾಟವೇಕೊ - ಮನುಜಾ |ಮರುಳಾಟವೇಕೊ? ಪ.ಊಧ್ರ್ವ ಪುಂಢ್ರವಿಲ್ಲದ ಮುಖವ ತಿದ್ದಿ ನೋಡಲೇಕೊ |ಶುದ್ದ ಸಾತ್ತ್ವಿಕವಿಲ್ಲದನ ಬುಧ್ಧಿ ಏತಕೊ ||ಕದ್ದು ಹೊಟ್ಟೆಹೊರಕೊಂಬುವಗೆ ಶುದ್ಧ ಶೀಲವೇಕೊ |ಮಧ್ವಶಾಸ್ತ್ರ ಓದದವನವಿದ್ಯೆಏತಕೊ - ಮನುಜಾ1ಮೃತ್ತಿಕೆ ಶೌಚವಿಲ್ಲದವಗೆ ಮತ್ತೆ ಸ್ನಾನ - ಜಪವೇಕೊ |ಹಸ್ತಕಟ್ಟಲರಿಯದವಗೆ ಅಗ್ನಿಹೋತ್ರವೇತಕೊ ||ತೊತ್ತು ಹೋಗುವವಗೆ ಪರತತ್ತ್ವವಿಚಾರವೇಕೋ |ಕರ್ತೃ ಕೃಷ್ಣನ ನೆನೆಯದವನ ಉತ್ತಮತನವೇಕೊ 2ಹಸಿವೆ ತೃಷೆಯ ತಾಳದವನ ಹುಸಿಯ ವೈರಾಗ್ಯವೇಕೊ |ವಿಷಯ ಮೆಚ್ಚಿದವಗೆ ಪರದ ಕುಶಲವೇತಕೊ ||ಹುಸಿಜಪಗಳ ಮಾಡುವವಗೆ ಮುಸುಕಿನ ಡಂಬಕವೇಕೊ |ಕುಸುಮನಾಭಗರ್ಪಿಸದ ಅಶನವೇತಕೊ - ಮನುಜಾ 3ಸೂಳೆಗಾರನಿಗೆ ತುಳಸಿ ಮಾಲೆಯ ಶೃಂಗಾರವೇಕೊ ||ಶ್ರೀಲೋಲನ ನೆನೆಯದವನ ಬಾಳುವೆಯೇತಕೊ |ಮೂಲಮಂತ್ರವರಿಯದವಗೆ ಮೇಲೆ ದೇವತಾರ್ಚನೆ ಏಕೊ |ಸಾಲಗ್ರಾಮದಭಿಷೇಕವಿಲ್ಲದ ತೀರ್ಥವೇತಕೊ ಮನುಜಾ 4ಕಂಡ ನಾರಿಯೀಕ್ಷಿಸುವ ಲಂಡಗೆ ಪುರಾಣವೇತಕೋ |ಭಂಡ ಮಾತನಾಡುವನ ಪಾಂಡಿತ್ಯವೇತಕೊ |ಪುಂಡರೀಕವರದ ಶ್ರೀ ಪುರಂದರವಿಠಲನ |ಕಂಡು ಭಜಿಸಲರಿಯದವನವಿತಂಡಬುಧ್ಧಿಯೇತಕೋ5
--------------
ಪುರಂದರದಾಸರು
ಮರುಳಾಟವ್ಯಾಕೆ ಮನುಜಗೆ ಮರುಳಾಟವ್ಯಾಕೆಹರಿಭಕ್ತನಲ್ಲದವಗೆ ಹಲವಂಗವ್ಯಾಕೆ ಪ.ಮೃತ್ತಿಕಾಶೌಚವಿಲ್ಲದೆ ಮತ್ತೆ ಸ್ನಾನ ಜಪವ್ಯಾಕೆಹತ್ತು ಕಟ್ಟದವಗೆ ಅಗ್ನಿಹೋತ್ರವ್ಯಾತಕೆತೊತ್ತುಬಡಕಗೆ ಬಹು ತತ್ವವಿಚಾರವ್ಯಾಕೆಕರ್ತಕೃಷ್ಣನ್ನೊಪ್ಪದ ವಿದ್ವತ್ತವ್ಯಾತಕೆ1ಹಸಿವೆತೃಷೆತಾಳದವಗೆಹುಸಿವೈರಾಗ್ಯವ್ಯಾತಕೆವಿಷಮ ಚಿತ್ತಗೆ ಪರರ ಕುಶಲ ಬಯಕ್ಯಾಕೆದಶ ಜಪ ಮಾಡಲಾರ ಮುಸುಕಿನ ಡಂಬವ್ಯಾಕೆಕುಶಶಾಯಿಗರ್ಪಿಸದ ಅಶನವ್ಯಾತಕೆ 2ಮೂಲಮಂತ್ರವರಿಯದ ಮೇಲೆ ದೇವಾರ್ಚನೆ ಯಾಕೆಸಾಲಿಗ್ರಾಮವಿಲ್ಲದ ತೀರ್ಥವ್ಯಾತಕೆಸೂಳೆಗಾರಗೆ ತುಳಸಿಮಾಲೆ ಶೃಂಗಾರವ್ಯಾಕೆಮೇಲೆ ಮೇಲೆ ಹರಿಯೆನ್ನದ ನಾಲಿಗ್ಯಾತಕೆ 3ಊಧ್ರ್ವಪುಂಡ್ರಿಲ್ಲದಾಸ್ಯ ತಿದ್ದಿನೋಡಬೇಕ್ಯಾಕೆಶುದ್ಧ ಸಾತ್ವಿಕವಲ್ಲದ ಬುದ್ಧಿ ಯಾತಕೆಕದ್ದು ಹೊಟ್ಟೆ ಹೊರೆವವಗೆ ಸಿದ್ಧ ಶೀಲವೃತ್ತಿಯಾತಕೆಮಧ್ವ ಮತವÀ ಬಿಟ್ಟಿತರ ಪದ್ಧತ್ಯಾತಕೆ 4ಕಂಡ ನಾರೇರಿಚ್ಛೈಸುವ ಲೆಂಡಗೆ ಪುರಾಣವ್ಯಾಕೆಭಂಡು ಮಾತಿನ ಕವಿತ್ವ ಪಾಂಡಿತ್ಯಾತಕೆಕುಂಡಲಿಪ್ರಸನ್ವೆಂಕಟ ಮಂಡಲೇಶನ ಶ್ರೀಪಾದಪುಂಡರೀಕಬಿಟ್ಟವನ ವಿತಂಡವ್ಯಾತಕೆ5
--------------
ಪ್ರಸನ್ನವೆಂಕಟದಾಸರು