ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಾದತೋರೋ ಪದ್ಮಾಕ್ಷ ಬಾರೋ ಪ. ಪಾದಪದ್ಮವ ತೋರೋ ಪದ್ಮಾಕ್ಷ ಬಾರೋ ಆದಿಮಧ್ಯಾಂತ ಸ್ವರೂಪ ಮೈದೋರೋ ಅ.ಪ. ಬಲಿಯನ್ನು ತುಳಿದಂಥ, ಭೂಮಿಯನಳೆದಂಥ ಶಿಲೆಯಾಗಿದ್ದವಳ ಕಲುಷವ ಕಳೆದಂಥ 1 ಶಿಶುರೂಪದಿಂದಲೆ ಶಕಟನ ಒದ್ದಂಥ ಶಶಿಮುಖಿಯಶೋದೆಗೆ ಶಿಶುವೆನಿಸಿ ಮೆರೆದಂಥ 2 ಗೊಲ್ಲರ ಮನೆಮನೆಗೆ ಕಳ್ಳನಂದದಿಪೊಕ್ಕು ನಲ್ಲೆಯರ ಕೈಪಿಡಿಗೆ ನಿಲ್ಲದೋಡುವ ಮುದ್ದು 3 ಕಾಳಿಂಗನ ಫಣೆಯೊಳ್ ಕೋಲಾಹಲದಿ ಕುಣಿದ ಕಾಳಿಂಗನರಸಿಯರಿಗೆ ತಾಲೀ ಭಾಗ್ಯವನಿತ್ತ4 ಕರುತುರುಗಳ ಮರೆಸಿ ದೊರೆ ನಿನ್ನರಸಿದ ಪರಮೇಷ್ಠಿಯೆ ತನ್ನ ಕರದಿಂ ಪೂಜಿಸಿದಂಥ 5 ಮಾವ ಕಂಸನ ಕೊಂದು ತಾಯಿ ದೇವಕಿ ವಸುದೇವಸುತ ವಾಸುದೇವನೆಂದೆನಿಸಿದ 6 ಸಿರಿದೇವಿಯೇ ನಿಜಕರಗಳಿಂದೊತ್ತುವ ಪರಮಪಾವನ ಪದಸರಸೀರುಹ 7 ವರಶೇಷಗಿರಿದೊರೆ ಶರಣರ ಮರೆವರೆ ಶಿರಬಾಗಿ ಬೇಡುವೆ ಭರಿಸೆನ್ನನೆನುವೆ 8
--------------
ನಂಜನಗೂಡು ತಿರುಮಲಾಂಬಾ
ಶ್ರೀ ರಾಘವೇಂದ್ರ ಗುರುವೇ ಪರಮ ದಯಾಳು ಪ್ರಭುವೇ ಪ ನಿರುತಾದಿ ಸೇವಿಸುವರಾ ಕಾಮಿತ ಕಲ್ಪತರುವೇಅ.ಪ ತುಂಗಾ ತೀರದೊಳ್ ಬಂದೂ ಮಂಗಾಳ ಮಹಿಮರು ನಿಂದೂ ಮಂಗಳಾ ಮೂರುತಿ ಶ್ರೀ ರಾಮಚಂದ್ರನ್ನ ಪೂಜೀಪರಿಂದೂ 1 ಕಾವೀಶಾಠಿಯನುಟ್ಟೂ ಗಂಧಾಕ್ಷತೆಗಳಿಟ್ಟೂ | ತಿರ್ದಿ ಹಚ್ಚಿರುವಾನಾಮಾ ಫಣಿಯಲ್ಲಿ ಹೊಳೆÉಯುತಾಲೀ 2 ವೀಣಾವಾದನದಿಂದಾ ಗಾನವ ಮಾಡುತಲೀ ವೇಣುಗೋಪಾಲ ಕೃಷ್ಣನ್ನ ಕುಣಿಸಿ ಕೊಂಡಾಡುತಿಹರು3 ಭಕ್ತಿಯಿಂದಲಿಸ್ತುತಿಪ ಜನರಾ ಆಪತ್ತುಗಳೆಲ್ಲವ ಕಳೆವಾ ಸಂಪತ್ತು ಸೌಭಾಗ್ಯವೀವಾ ಶರಣೇಂದವರ ಪೊರೆವಾ 4 ಸರಿಯಾರು ನಿಮಗೆ ದೇವಾ ಈ ಧರುಣಿಯೊಳರಸೆ ಕಾವಾ ದೊರಗಳ ನಾ ಕಾಣೆನಯ್ಯ ಶ್ರೀ ರಾಘವೇಂದ್ರ ಜೀಯಾ 5
--------------
ರಾಧಾಬಾಯಿ