ಒಟ್ಟು 5 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಡೆಗೋಲ ತಾರೆನ್ನ ಚಿನ್ನವೆ ಮೊಸ ರೊಡೆದರೆ ಬೆಣ್ಣೆ ಬಾರದೊ ಮುದ್ದು ಕೃಷ್ಣಯ್ಯ ಪ. ಅಣ್ಣ ಬಲರಾಮನು ಚಿಣ್ಣರ ಸಹಿತಾಗಿ ಬೆಣ್ಣೆ ಹಣ್ಣನು ಮೆಲುವಿಯಂತೆ ಯನ್ನಣ್ಣನೆ ಸಣ್ಣವನಾಗಿ ಎನ್ನೊಡನಾಟವೆ ಕಣ್ಣಿಗೆ ಕಾಡಿಗೆ ಇಡುವೆ ಬಾ ರಂಗಯ್ಯ 1 ಹಸುರಂಗಿ ಕೊಡಿಸುವೆ ಹಸುಳೆ ಬಾ ಕಂದನೆ ಹೊಸಪರಿಯಾಭರಣಗಳನಿಡುವೆ ಹಸನಾದ ಹಸುವಿನ ತುಪ್ಪದ ದೋಸೆಯ ಹಸುಳೆ ನಿನಗಾರೋಗಣೆಗೆ ಹೊತ್ತಾಯಿತೊ 2 ಪಡೆದ ಜನನಿಯಲ್ಲೆ ಎನ್ನೊಡೆಯ ಶ್ರೀ ಶ್ರೀನಿವಾಸ ನಿನ್ನ ಕಡೆಹಾಯಿಸೊ ಕಡೆಗೋಲನಿತ್ತು ಎನ್ನ ಗೋಪಿ ಕಡುಮುದ್ದು ರಂಗನ ಬಿಡದೆತ್ತಿ ಮುದ್ದಿಸಿ ಸಡಗರದಿಂದಲಿ 3
--------------
ಸರಸ್ವತಿ ಬಾಯಿ
ಕಡೆಗೋಲ ತಾರೆನ್ನ ಚಿನ್ನವೆ- ಮೊಸರೊಡೆದರೆ ಬೆಣ್ಣೆಬಾರದು, ಮುದ್ದುರಂಗ (ಮಗುವೆ ಪಾ) ಅಣ್ಣನ ಒಡಗೊಂಡು ಬಾರೈಯ-ಸವಿಬೆಣ್ಣೆಯ ಮುದ್ದೆಯ ಮೆಲುವಿರಂತೆಬಣ್ಣದ ಸರವನ್ನು ಕೊರಳಲ್ಲಿ ಹಾಕುವೆಚಿಣ್ಣರೊಡನೆ ಆಡಕಳುಹುವೆ ರಂಗ 1 ಪುಟ್ಟ ಬಚ್ಚಿಯ ತಂದು ನಿನ್ನಯ ಚಿನ್ನದತೊಟ್ಟಿಲ ಕಾಲಿಗೆ ಕಟ್ಟಿಸುವೆಬಟ್ಟಲು ತುಂಬಿದ ಸಕ್ಕರೆ ನಿನಗೀವೆಕಟ್ಟಾಣಿ ಮುತ್ತಿನ ಸರವನೀವೆ 2 ಬಡವರ ಭಾಗ್ಯದ ನಿಧಿಯೆ ಗೋಕುಲ-ದೊಡೆಯನೆ ಮಾಣಿಕ್ಯದ ಹರಳೆಕಡುಮುದ್ದು ಉಡುಪಿನ ಬಾಲಕೃಷ್ಣಯ್ಯದÀುಡುಕು ಮಾಡುವರೇನೊ ಪೆಂಗಳೊಳುರಂಗ3
--------------
ವ್ಯಾಸರಾಯರು
ತಾರೆನ್ನ ಹುಂಡಿ ರಂಗ ತಾರೆನ್ನ ಹುಂಡಿ ಪ ಅತ್ತರೇನು ಕಂಗಳಿಂದ ಮುತ್ತುದುರುವುದಿಲ್ಲ ಮತ್ತೆ ನಮ್ಮ ಮೇಲೆ ಹುಂಡಿ ಹೊತ್ತರೆ ನೀ ಬಿಟ್ಟೆಯೇನೊ 1 ವಾರಿಜಾಕ್ಷ ನಿನ್ನ ಬಿಡು - ವರೆಯೇನೋ ಬೆನ್ನ ಮೇಲೆ ಹಾರಿ ಹೊತ್ತು ಕೊಂಡು ಭಾರ ಹೇರದೆ ನೀ ಬಿಟ್ಟೆಯೇನೊ 2 ತೊಟ್ಟಿಲ ಹೋಗೆಂದರೆ ಸಿಟ್ಟು ಮಾಡುವಿಯೋ ಶ್ರೀದ- ವಿಠಲನ್ನ ಕೂಡಾಡದೆ ನೀ ಬಿಟ್ಟರೆ ನಾವು ಬಿಡುವರಲ್ಲ 3
--------------
ಶ್ರೀದವಿಠಲರು
ವಾರಿಜ ಮುಖಿ ವಾರಿಜಾಕ್ಷಿ ವಾರಿಜ ಗಂಧಿ ವಾರಿಸನಳಿಯನನುಓರಂತೆ ನೀ ಪೋಗಿ ಕರೆತಾರೆನ್ನಯ ಪ್ರಾಣಾಧಾರ ಕೇಶವ ಮೂರ್ತಿಯ ಪ ನಗ ವೈರಿಯಣುಗನಣ್ಣನಯ್ಯನಾಪ್ತಗೆ ಮಿಗೆ ಹುಟ್ಟಿದನ ತಮ್ಮನಸೊಗಸು ವಸ್ತ್ರಕೆ ಸೋತನ ಸುರಪುತ್ರನ ವಾಜಿಯನಿವ ವೈರಿಯ ಪಗೆಯಜಗದೊಳಗೆ ಹಾಟಿದೊಳೇರಾಟದ ವನವ... ನವನಿಂದ ನಗೆತೋರಿನಾವುನಿನಗೆಅಗಣಿತಾಭರಣವೀವೆನು ಅಂಗಜಾಗ್ನಿಯ ತಗಹ ಬಿಡಿಸೆ ತರುಣಿ 1 ಮಿಹಿರ ನಂದನನ ತಂದೆಯ ಪಗೆಯವನ ಮಾವನ ಹಿತನ ಮನೆವೆಸರಮಹಿ ವನ ಕೃತಿಗೊಡೆಯನ ಬಂಟನನುಜನ ಸಹಿಸಿ ತಮ್ಮನ ಮಿತ್ರನ ಕುಹಕದಿ ಶಾಪವಡೆದಳು ಪ್ರಸ್ತರವಾಗಿ ಗಗನ ಮಧ್ಯದೊಳಿರಲು...ಸಿ ಶಾಪವ ದನುಜ... ಕ್ಷಿತಿಯೊಳು ವಿವರಿಸುವವನ ಕರೆತಾರೆ 2 ಸುರಭೇದ ಪ್ರಥಮ ದಾಸಿಯ ಪೆಸರನ ವಾಜಿಯರಸನ ನಖವೈರಿಯಮರೆಯ ಮಾರ್ಗದಿ ಗಮಿಸುವನಾಪ್ತನ ತಾಯ ಧರಿಸಿದಾತನ ಮಿತ್ರನಪೊರೆಯ ದೆಸೆಯ ದಿಕ್ಕರಿಯ ಕೋಪದಿ ಸೀಳ್ದನರಸಿಯಣ್ಣನನೀಕ್ಷಣಕರೆತಂದೆನಗೆ ಕೂಡಿಸು ಕಾಗಿನೆಲೆಯಾದಿಕೇಶವನ 3
--------------
ಕನಕದಾಸ